AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಮೊಗ್ಗ ದಸರಾ ಜಂಬೂಸವಾರಿ ವೇಳೆ ಅಚಾತುರ್ಯ: ದಿಕ್ಕಾಪಾಲಾಗಿ ಓಡಿದ ಅಂಬಾರಿ ಹೊತ್ತಿದ್ದ ಆನೆ

ಶಿವಮೊಗ್ಗ ದಸರಾ ಜಂಬೂಸವಾರಿ ವೇಳೆ ಅಚಾತುರ್ಯ ಒಂದು ನಡೆದಿದೆ. ಅಂಬಾರಿ ಹೊತ್ತಿದ್ದ ಆನೆ ಸೋಮಣ್ಣ ದಿಕ್ಕಾಪಾಲಾಗಿ ಓಡಿ ಹೋಗಿದೆ. ಇದೇ ಮೊದಲ ಬಾರಿಗೆ ಅಂಬಾರಿ ಹೊತ್ತ ಸೋಮಣ್ಣ ಏಕಾಏಕಿ ಹೆದರಿ ಓಡಿ ಹೋಗಿದೆ. ಘಟನೆಯಿಂದಾಗಿ ಜನರು ಕೂಡ ಆತಂಕಕ್ಕೆ ಒಳಗಾದರು. ಅಷ್ಟಕ್ಕೂ ನಡೆದಿದ್ದು ಏನು ಎಂಬ ಮಾಹಿತಿ ಇಲ್ಲಿದೆ.

ಶಿವಮೊಗ್ಗ ದಸರಾ ಜಂಬೂಸವಾರಿ ವೇಳೆ ಅಚಾತುರ್ಯ: ದಿಕ್ಕಾಪಾಲಾಗಿ ಓಡಿದ ಅಂಬಾರಿ ಹೊತ್ತಿದ್ದ ಆನೆ
ಜಂಬೂಸವಾರಿ ವೇಳೆ ಓಡಿಹೋದ ದಸರಾ ಆನೆ
Basavaraj Yaraganavi
| Edited By: |

Updated on:Oct 21, 2026 | 5:47 PM

Share

ಮುಖ್ಯಾಂಶಗಳು

  • ಶಿವಮೊಗ್ಗದಲ್ಲಿ ಜಂಬೂಸವಾರಿ ವೇಳೆ ಓಡಿಹೋದ ದಸರಾ ಆನೆ
  • ದಸರಾ ಆನೆ ದಿಕ್ಕಾಪಾಲಾಗಿ ಓಡುತ್ತಿದ್ದಂತೆ ಗಾಬರಿಯಾದ ಜನರು
  • ಅರ್ಧಕ್ಕೆ ಮೊಟಕುಗೊಂಡ ಶಿವಮೊಗ್ಗ ದಸರಾ ಜಂಬೂಸವಾರಿ

ಶಿವಮೊಗ್ಗ, ಅಕ್ಟೋಬರ್​​ 21: ಮೈಸೂರು ದಸರಾ ಬಳಿಕ ರಾಜ್ಯದಲ್ಲಿ ಶಿವಮೊಗ್ಗ ದಸರಾ ಅತೀ ಹೆಚ್ಚು ಖ್ಯಾತಿ ಪಡೆದುಕೊಂಡಿದೆ. ಶಿವಮೊಗ್ಗ ದಸರಾ ಜಂಬೂಸವಾರಿ ಕಣ್ತುಂಬಿಕೊಳ್ಳಲು ಜನರು ಕಾತರರಾಗಿದ್ದರು. ಆದರೆ ಇದೇ ದಸರಾ ಜಂಬೂಸವಾರಿ ವೇಳೆ ಅಚಾತುರ್ಯವೊಂದು ನಡೆದಿದೆ. ಇದೇ ಮೊದಲ ಬಾರಿ ಬೆಳ್ಳಿ ಅಂಬಾರಿ ಹೊತ್ತು ಸಾಗುತ್ತಿದ್ದ ಸೋಮಣ್ಣ ಎಂಬ ಆನೆ ಏಕಾಏಕಿ ಹೆದರಿ ದಿಕ್ಕಾಪಾಲಾಗಿ ಓಡಿ ಹೋದ ಘಟನೆ ನಡೆದಿದೆ. ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ದಸರಾ ಜಂಬೂಸವಾರಿಯನ್ನ ಅರ್ಧಕ್ಕೆ ಮೊಟಕುಗೊಳಿಸಲಾಗಿದೆ.

ನಡೆದಿದ್ದೇನು?

ಇಂದು ಮಧ್ಯಾಹ್ನ ಕೋಟೆ ಶಿವಪ್ಪನಾಯಕ ಅರಮನೆ ಮುಂಭಾಗದಿಂದ ಅಲ್ಲಮಪ್ರಭು ಮೈದಾನದವರೆಗೆ ಜಂಬೂಸವಾರಿ ಆರಂಭಗೊಂಡಿತ್ತು. ಜನರು ಕೂಡ ಸಾಕಷ್ಟು ಕಾತರದಿಂದ ಜಂಬೂಸವಾರಿ ಕಣ್ತುಂಬಿಕೊಳ್ಳುತ್ತಿದ್ದರು. ಹೀಗಿರುವಾಗ ಬೆಳ್ಳಿ ಅಂಬಾರಿ ಹೊತ್ತು ಸಾಗುತ್ತಿದ್ದ ಸೋಮಣ್ಣ ಎಂಬ ಆನೆ ಹೆದರಿ ಏಕಾಏಕಿ ದಿಕ್ಕಾಪಾಲಾಗಿ ಓಡಿ ಹೋಗಿದೆ.

ಇದನ್ನೂ ಓದಿ: ಪ್ರಶಾಂತನ ಮೇಲೆ ವಿರಾಜಮಾನಾಳಗಿ ಬಂದ ಚಾಮುಂಡೇಶ್ವರಿಗೆ ಡಿಕೆಶಿ ಪುಷ್ಪಾರ್ಚನೆ: ಜಂಬೂಸವಾರಿಗೆ ಅಧಿಕೃತ ಚಾಲನೆ

ಆನೆ ದಿಕ್ಕಾಪಾಲಾಗಿ ಓಡುತ್ತಿದ್ದಂತೆ ನೆರೆದಿದ್ದ ಜನರು ಭಯಭೀತಗೊಂಡರು. ಸದ್ಯ ಶಿವಮೊಗ್ಗ ದಸರಾ ಜಂಬೂಸವಾರಿಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿದ್ದು, ಘಟನಾ ಸ್ಥಳಕ್ಕೆ ದೌಡಾಯಿಸಿದ ಶಿವಮೊಗ್ಗ ಡಿಸಿ ಮತ್ತು ಎಸ್​ಪಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

LIVE TV

ಒಂದು ಕಾರು ಸೇರಿದಂತೆ 2-3 ಬೈಕ್​​ಗಳಿಗೆ ಹಾನಿ ಮಾಡಿದ ಆನೆ

ಬೆಳ್ಳಿ ಅಂಬಾರಿ ಹೊತ್ತು ಸೋಮಣ್ಣ ಆನೆ ದಿಕ್ಕಾಪಾಲಾಗಿ ಓಡಿದ ಭರಸಕ್ಕೆ ಒಂದು ಕಾರು ಸೇರಿದಂತೆ 2 ರಿಂದ 3 ಬೈಕ್​​ಗಳಿಗೆ ಆನೆ ಹಾನಿ ಮಾಡಿದ್ದು, ಆನೆ ಮೇಲಿದ್ದ ಚಾಮುಂಡೇಶ್ವರಿ ಅಂಬಾರಿ ಕೆಳಗೆ ಬಿದ್ದು ಸಂಪೂರ್ಣ ಹಾನಿಗೊಂಡಿದೆ. ಅಂಬಾರಿ ಆನೆ ನಿಯಂತ್ರಿಸಲು ಅರಣ್ಯ ಸಿಬ್ಬಂದಿ ಹರಸಾಹಸ ಪಟ್ಟಿದ್ದು, ಸದ್ಯ ಅರವಳಿಕೆ ನೀಡಿ ನಿಯಂತ್ರಿಸಿದ್ದಾರೆ. ಸ್ವಲ್ಪ ದೂರ ಹೋದ ಸೋಮಣ್ಣ ಆನೆ ಮತ್ತೆ ವಾಪಸ್ಸಾಗಿದೆ.

ಮೊದಲ ಬಾರಿಗೆ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ 

ಇನ್ನು ಈ ಬಾರಿಯ ದಸರಾ ಜಂಬೂಸವಾರಿ ಮಹತ್ವದ ಬದಲಾವಣೆ ಮಾಡಲಾಗಿತ್ತು. ಹಲವು ವರ್ಷಗಳಿಂದ ಅಂಬಾರಿ ಹೊರತಿದ್ದ ಸಾಗರ ಎಂಬ ಆನೆ ಬದಲಾಗಿ ಸೋಮಣ್ಣ ಎಂಬ ಆನೆಗೆ ಜವಾಬ್ದಾರಿ ವಹಿಸಲಾಗಿತ್ತು. ಆ ಮೂಲಕ ಇದೇ ಮೊದಲ ಬಾರಿಗೆ ಸೋಮಣ್ಣ ಬೆಳ್ಳಿ ಅಂಬಾರಿ ಹೊತ್ತಿದ್ದ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 4:45 pm, Wed, 21 October 26

Follow Us
Basavaraj Yaraganavi
Basavaraj Yaraganavi
ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಗೆ ಮೆರುಗು ನೀಡಿದ ಸ್ತಬ್ಧ ಚಿತ್ರಗಳು
ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಗೆ ಮೆರುಗು ನೀಡಿದ ಸ್ತಬ್ಧ ಚಿತ್ರಗಳು
ದಸರಾ ಹಾಗೂ ಮೈಸೂರಿನ ಬಗ್ಗೆ ರಮೇಶ್ ಮಾತು: ವಿಡಿಯೋ ನೋಡಿ
ದಸರಾ ಹಾಗೂ ಮೈಸೂರಿನ ಬಗ್ಗೆ ರಮೇಶ್ ಮಾತು: ವಿಡಿಯೋ ನೋಡಿ
ನನ್ನ ಬದುಕಿನಲ್ಲಿ ಇವತ್ತು ಮರೆಯಲಾಗದ ದಿನ: ಜನತೆಗೆ ಡಿಕೆಶಿ ಧನ್ಯವಾದ
ನನ್ನ ಬದುಕಿನಲ್ಲಿ ಇವತ್ತು ಮರೆಯಲಾಗದ ದಿನ: ಜನತೆಗೆ ಡಿಕೆಶಿ ಧನ್ಯವಾದ
ಅಗ್ನಿ ಅವಘಡ: 8ನೇ ಮಹಡಿಯಲ್ಲಿ ಹೊತ್ತಿಕೊಂಡ ದಸರಾ ಪೂಜೆ ವೇಳೆ ಹಚ್ಚಿದ್ದ ದೀಪ
ಅಗ್ನಿ ಅವಘಡ: 8ನೇ ಮಹಡಿಯಲ್ಲಿ ಹೊತ್ತಿಕೊಂಡ ದಸರಾ ಪೂಜೆ ವೇಳೆ ಹಚ್ಚಿದ್ದ ದೀಪ
ದಸರಾ ಸಂಭ್ರಮದಲ್ಲಿ ಭಾಗಿಯಾದ ರುಕ್ಮಿಣಿ ವಸಂತ್, ತಪಸ್ವಿನಿ ಪೂಣಚ್ಚ, ಸಪ್ತಮಿ
ದಸರಾ ಸಂಭ್ರಮದಲ್ಲಿ ಭಾಗಿಯಾದ ರುಕ್ಮಿಣಿ ವಸಂತ್, ತಪಸ್ವಿನಿ ಪೂಣಚ್ಚ, ಸಪ್ತಮಿ
ನಂದಿ ಧ್ವಜಕ್ಕೆ ಡಿಕೆಶಿ ಪೂಜೆ ಸಲ್ಲಿಕೆ:ಮೈಸೂರಿನಲ್ಲಿ ಮರುಕಳಿಸಿದ ಗತ ವೈಭವ
ನಂದಿ ಧ್ವಜಕ್ಕೆ ಡಿಕೆಶಿ ಪೂಜೆ ಸಲ್ಲಿಕೆ:ಮೈಸೂರಿನಲ್ಲಿ ಮರುಕಳಿಸಿದ ಗತ ವೈಭವ
ಮೊದಲ ಬಾರಿ ವಜ್ರಮುಷ್ಠಿ ಕಾಳಗ ರದ್ದು, ಮೈಸೂರಿನ ಜಟ್ಟಿ ಮಹೇಶ್ ರಿಯಾಕ್ಷನ್
ಮೊದಲ ಬಾರಿ ವಜ್ರಮುಷ್ಠಿ ಕಾಳಗ ರದ್ದು, ಮೈಸೂರಿನ ಜಟ್ಟಿ ಮಹೇಶ್ ರಿಯಾಕ್ಷನ್
ಸೌಜನ್ಯ ಪ್ರಕರಣ: ಇನ್ನೆರಡು ದಿನದಲ್ಲಿ ಅಪರಾಧ ಸ್ಥಳಕ್ಕೆ ಎಸ್​ಐಟಿ ಭೇಟಿ
ಸೌಜನ್ಯ ಪ್ರಕರಣ: ಇನ್ನೆರಡು ದಿನದಲ್ಲಿ ಅಪರಾಧ ಸ್ಥಳಕ್ಕೆ ಎಸ್​ಐಟಿ ಭೇಟಿ
Live: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ನೇರಪ್ರಸಾರ
Live: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿ ನೇರಪ್ರಸಾರ
ಮೈಸೂರಿನ ಸುತ್ತೂರು ಶಾಖಾ ಮಠಕ್ಕೆ ಡಿಕೆಶಿ ಭೇಟಿ!
ಮೈಸೂರಿನ ಸುತ್ತೂರು ಶಾಖಾ ಮಠಕ್ಕೆ ಡಿಕೆಶಿ ಭೇಟಿ!