ಸಿಎಂ ಸಿದ್ದರಾಮಯ್ಯಗೆ ಬಂಡೆಯಿಂದಲೇ ಡೇಂಜರ್: ಪರೋಕ್ಷವಾಗಿ ಡಿಕೆಶಿ ವಿರುದ್ಧ ಕುಮಾರಸ್ವಾಮಿ ಕಿಡಿ
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ, ಸಿಎಂ ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಡೇಂಜರ್ ಎಂದು ಪರೋಕ್ಷವಾಗಿ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆ ಕೊಡಲಿ ಅಂತಾ ಕೇಳಲ್ಲ. ಅವರು ರಾಜೀನಾಮೆ ಕೊಡುವುದೂ ಇಲ್ಲ ಎಂದು ಹೇಳಿದ್ದಾರೆ.
ಬೆಂಗಳೂರು, ಆಗಸ್ಟ್ 18: ಮುಖ್ಯಮಂತ್ರಿ ಸಿದ್ದರಾಮಯ್ಯಗೆ (Siddaramaiah) ಬಂಡೆಯಿಂದಲೇ ಡೇಂಜರ್ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೆಸರೇಳದೇ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H. D. Kumaraswamy) ವಾಗ್ದಾಳಿ ಮಾಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೊನ್ನೆ ಕೇರಳದಲ್ಲಿ ಮಳೆ ಬಂದು ಭೂಕುಸಿತ ಆಗಿದೆಯಲ್ಲಾ, ಆವಾಗ ಬಂಡೆಗಳಿಂದ ಡೇಂಜರ್ ಆಗಿದ್ದು ಎಂದು ಟಾಂಗ್ ಕೊಟ್ಟಿದ್ದಾರೆ.
ನಿಮ್ಮ ಹಾಗೆ ನಮ್ಮ ಕಾರ್ಯಕರ್ತರು ಬೀದಿಯಲ್ಲಿ ಬೆಂಕಿ ಹಾಕಿ ಎನ್ನಲಿಲ್ಲ. ಜಂತಕಲ್ ಮೈನಿಂಗ್ ಪ್ರಕರಣದ ಬಗ್ಗೆ ಹೈಕೋರ್ಟ್ ಆದೇಶ ನೀಡಿದೆ. ಸಾಯಿ ವೆಂಕಟೇಶ್ವರ ಹಗರಣದ ಬಗ್ಗೆಯೂ ತನಿಖೆಮಾಡಿ ಅಂದ್ರು. ಬೇಕಾದರೆ ಸುಪ್ರೀಂಕೋರ್ಟ್ಗೆ ಹೋಗಬಹುದು, ಯಾರೂ ಬೇಡ ಅಂದ್ರು. ನನ್ನನ್ನು ಹೆದರಿಸಲು ಮಾತನಾಡುತ್ತಿದ್ದೀರಿ, ಯಾಕೆ ಈ ಡ್ರಾಮಾಗಳು ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಸಿಎಂ ವಿರುದ್ಧ ಪ್ರಾಸಿಕ್ಯೂಸಷನ್ಗೆ ಅನುಮತಿ: ಪ್ರತಿಭಟನೆ ಕಾವು, ನಗರದಾದ್ಯಂತ ಪೊಲೀಸ್ ಕಟ್ಟೆಚ್ಚರ
ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದಕ್ಕೆ ಪ್ರತಿಭಟನೆ ನಡೆಸುತ್ತಿದ್ದೀರಿ. ನಿನ್ನೆಯಿಂದ ಸಂವಿಧಾನ ಬಿಕ್ಕಟ್ಟು ಅಂತಾ ಪ್ರತಿಭಟನೆ ಮಾಡಿದ್ದೀರಿ. ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಅಂತ ಪ್ರತಿಭಟನೆ ಮಾಡುತ್ತಿದ್ದೀರಿ. ಬಿಜೆಪಿನವರು ಸರ್ವನಾಶ ಮಾಡಲು ಹೊರಟಿದ್ದಾರೆಂದು ಹೇಳಿದ್ದಾರೆ. ಪಾರ್ಲಿಮೆಂಟ್ಗೆ ಸಂವಿಧಾನ ಪುಸ್ತಕ ಹಿಡಿದು ಬಂದರಲ್ಲಪ್ಪ. ಪ್ರಮಾಣ ವಚನ ಸ್ವೀಕರಿಸಲು ಇದೇನಾ ಸಂವಿಧಾನ ರಕ್ಷಣೆ. ನಿನ್ನೆಯಿಂದ ಪ್ರಾರಂಭ ಮಾಡಿದ್ದೀರಲ್ಲಾ. ಸಿದ್ದರಾಮಯ್ಯನವರೇ ಇದೇ ನನಗೂ ನಿಮಗೂ ಇರೋ ವ್ಯತ್ಯಾಸ ಎಂದಿದ್ದಾರೆ.
ಇದನ್ನೂ ಓದಿ: ಆಗಸ್ಟ್ 23 ಸಿದ್ದರಾಮಯ್ಯ ದೆಹಲಿಗೆ, ಕುತೂಹಲ ಮೂಡಿಸಿದ ಸಿಎಂ ರಾಜಕೀಯ ನಡೆ!
ಸಿದ್ದರಾಮಯ್ಯ ಮಂತ್ರಿಮಂಡಲದ ಎಲ್ಲಾ ಸದಸ್ಯರಿಗೂ ಹೇಳುತ್ತೀನಿ. ನಿನ್ನೆಯಿಂದ ಎಲ್ಲರಿಗೂ ಕುಮಾರಸ್ವಾಮಿ ಅಂತ ಧ್ಯಾನ ಮಾಡುತ್ತಿದ್ದಾರೆ. ಸಿದ್ದರಾಮಯ್ಯ, ಎಲ್ಲಾ ಮಂತ್ರಿಗಳು ನನ್ನ ಧ್ಯಾನ ಮಾಡಿದ್ದಾರೆ ಎಂದು ಹೇಳಿದ್ದಾರೆ.
ನಮ್ಮ ಪಾದಯಾತ್ರೆಗೂ ಈ ಪ್ರಕರಣಕ್ಕೂ ಸಂಬಂಧ ಇಲ್ಲ
ಸಿದ್ದರಾಮಯ್ಯ ರಾಜೀನಾಮೆ ಕೊಡಲಿ ಅಂತಾ ಕೇಳಲ್ಲ. ಅವರು ರಾಜೀನಾಮೆ ಕೊಡುವುದೂ ಇಲ್ಲ. ಅದು ನನಗೆ ಗೊತ್ತಿದೆ. ಕಾನೂನು ಅಂತಾ ಒಂದಿದೆ. ಯಾವ ಹಂತದಲ್ಲಿ ಏನು ತೀರ್ಮಾನ ಆಗಬೇಕೋ ಅದು ಆಗುತ್ತೆ. ನಮ್ಮ ಪಾದಯಾತ್ರೆಗೂ ಈ ಪ್ರಕರಣಕ್ಕೂ ಸಂಬಂಧ ಇಲ್ಲ. ಜನತೆಗೆ ಒಂದು ರಾಜಕೀಯ ಸಂದೇಶ ಕೊಡಬೇಕಿತ್ತು ಕೊಟ್ಟಿದ್ದೇವೆ. ನಮ್ಮ ಪಾದಯಾತ್ರೆಯಿಂದ ಇದೆಲ್ಲಾ ಆಗಿದೆ ಅಂತ ನಾನು ಹೇಳಲ್ಲ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.