ಕೇಂದ್ರದ ಗ್ಯಾರಂಟಿ ಇಲ್ಲದಿದ್ದರೆ ಮೆಟ್ರೋ ಸಾಲವೇ ಸಿಗುತ್ತಿರಲಿಲ್ಲ: ಸಿಎಂ ಡಿಕೆಶಿಗೆ ಒಕ್ಕೂಟ ವ್ಯವಸ್ಥೆಯ ಅರಿವಿಲ್ಲ ಎಂದ ಸಂಸದ ತೇಜಸ್ವಿ ಸೂರ್ಯ
ತೇಜಸ್ವಿ ಸೂರ್ಯ ಅವರು ಬೆಂಗಳೂರು ಮೆಟ್ರೋ ಯೋಜನೆಯ ಹಣಕಾಸು ಮಾದರಿಯ ಬಗ್ಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮೆಟ್ರೋ ಯೋಜನೆಗೆ ಕೇಂದ್ರ ಸರ್ಕಾರದ 20% ಪಾಲು ಮತ್ತು 60% ಅಂತರರಾಷ್ಟ್ರೀಯ ಸಾಲಕ್ಕೆ ಅದರ 'ಸಾರ್ವಭೌಮ ಖಾತರಿ' ಅನಿವಾರ್ಯ ಎಂದು ಸ್ಪಷ್ಟಪಡಿಸಿದ್ದಾರೆ. ಕೇಂದ್ರದ ದೊಡ್ಡ ಕೊಡುಗೆಯನ್ನು ರಾಜಕೀಯ ಬಣ್ಣ ಬಳಿಯದೆ ಅರ್ಥೈಸಿಕೊಳ್ಳಲು ಅವರು ಸಿಎಂಗೆ ಸವಾಲು ಹಾಕಿದ್ದಾರೆ.

ಬೆಂಗಳೂರು, ನ.7: “ಬೆಂಗಳೂರು ಮೆಟ್ರೋ ಯೋಜನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ರಾಜಕೀಯ ಬಣ್ಣ ಬಳಿಯುವುದನ್ನು ಬಿಟ್ಟು ಮೊದಲು ಒಕ್ಕೂಟ ವ್ಯವಸ್ಥೆ ಎಂದರೆ ಏನು? ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಹಕಾರ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು” ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಕಡಕ್ ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಡಿಕೆ ಶಿವಕುಮಾರ್ ಅವರಿಗೆ ಎಕ್ಸ್ (ಟ್ವಿಟರ್) ಮೂಲಕ ನೇರ ಸವಾಲು ಎಸೆದಿರುವ ಅವರು, ನಮ್ಮ ಮೆಟ್ರೋ ಯೋಜನೆಯ ಕೇಂದ್ರ ಸರ್ಕಾರದ ಕೊಡುಗೆ ಹಾಗೂ ಅಂತರರಾಷ್ಟ್ರೀಯ ಸಾಲದ ಸತ್ಯಾಸತ್ಯತೆಗಳ ಪಕ್ಕಾ ಅಂಕಿ-ಅಂಶಗಳನ್ನು ಬಹಿರಂಗಪಡಿಸಿದ್ದಾರೆ. ಮೆಟ್ರೋ ಯೋಜನೆಯ ಆರ್ಥಿಕ ಮಾದರಿಯನ್ನು ವಿವರಿಸಿದ ತೇಜಸ್ವಿ ಸೂರ್ಯ, ಬೆಂಗಳೂರು ಮೆಟ್ರೋ ಯೋಜನೆಯು 20:20:60 ಹಣಕಾಸು ಮಾದರಿಯಲ್ಲಿ ನಡೆಯುತ್ತಿದೆ. ಅಂದರೆ ಶೇ. 20ರಷ್ಟು ಕೇಂದ್ರ ಸರ್ಕಾರ, ಶೇ. 20ರಷ್ಟು ರಾಜ್ಯ ಸರ್ಕಾರ ಹಾಗೂ ಉಳಿದ ಶೇ. 60ರಷ್ಟು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಸಾಲದ ಮೂಲಕ ಹಣಕಾಸು ಒದಗಿಸಲಾಗುತ್ತದೆ.” ಎಂದು ಹೇಳಿದ್ದಾರೆ.
“ಈ 60% ಬೃಹತ್ ಸಾಲಗಳಿಗೆ ಕೇಂದ್ರ ಸರ್ಕಾರದ ‘ಸಾರ್ವಭೌಮ ಖಾತರಿ’ (Sovereign Guarantee) ಅತ್ಯಂತ ಪ್ರಮುಖ ಆಧಾರವಾಗಿದೆ. ಕೇಂದ್ರ ಸರ್ಕಾರದ ಬೆಂಬಲ ಮತ್ತು ಗ್ಯಾರಂಟಿ ಇಲ್ಲದಿದ್ದರೆ ಅಂತರರಾಷ್ಟ್ರೀಯ ಸಂಸ್ಥೆಗಳಿಂದ ಸಾಲವೇ ಸಿಗುವುದಿಲ್ಲ. ಸಾಲವಿಲ್ಲದೆ ಮೆಟ್ರೋ ಯೋಜನೆಯೇ ಮುಂದುವರಿಯಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಇಲ್ಲಿದೆ ನೋಡಿ ಎಕ್ಸ್ ಪೋಸ್ಟ್:
Mr. Chief Minister,
Since you don’t acknowledge nuances of federal cooperation, let me explain,
Bengaluru Metro follows a 20:20:60 funding model: 20% each from Centre and State, and 60% through loans from international agencies, backed by the Centre’s sovereign guarantee.
Without the Centre’s backing, these projects would not even take off.
Considering all the approved phases Bangalore Metro Phase 1, Phase 2, Phase 2A & 2B and Phase 3 Government of India has committed Rs 41,557 crores for construction of various metro projects in Bengaluru .
Whereas Government of Karnataka has committed Rs. 36,332 crores of rupees for the construction of Bangalore Metro.
Which international lender would fund a project based on the guarantee of your Pauper Sarkara?
— Tejasvi Surya (@Tejasvi_Surya) November 7, 2026
ಮೆಟ್ರೋ ಹಂತ-1, ಹಂತ-2, ಹಂತ-2A, ಹಂತ-2B ಹಾಗೂ ಹಂತ-3 ಸೇರಿದಂತೆ ವಿವಿಧ ಹಂತಗಳ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರದ ಒಟ್ಟು ಬದ್ಧತೆ 41,557 ಕೋಟಿ ರೂ. ಇದೇ ಹಂತಗಳ ಯೋಜನೆಗಳಿಗಾಗಿ ಕರ್ನಾಟಕ ಸರ್ಕಾರದ ಒಟ್ಟು ಬದ್ಧತೆ 36,332 ಕೋಟಿ ರೂ ನೀಡಿದೆ ಎಂದು ತಮ್ಮ ಎಕ್ಸ್ ಪೋಸ್ಟ್ನಲ್ಲಿ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಇದನ್ನೂ ಓದಿ: ಆನಂದ್ ವಿಹಾರ್ ರೈಲು ನಿಲ್ದಾಣಕ್ಕೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ದಿಢೀರ್ ಭೇಟಿ; ಪ್ರಯಾಣಿಕರ ಜೊತೆ ಸಂವಾದ
“ನಿಮ್ಮ ಆರ್ಥಿಕ ವಿಶ್ವಾಸಾರ್ಹತೆಗೆ ಸಾಲ ಕೊಡುವವರಾರು?”: ತೇಜಸ್ವಿ ಸೂರ್ಯ ಪ್ರಶ್ನೆ
“ಕೇಂದ್ರ ಸರ್ಕಾರದ ಗ್ಯಾರಂಟಿಯ ಮೇಲೆಯೇ ಅಂತರರಾಷ್ಟ್ರೀಯ ಸಂಸ್ಥೆಗಳು ಸಾವಿರಾರು ಕೋಟಿ ರೂಪಾಯಿ ಸಾಲ ನೀಡುತ್ತಿವೆ. ಹಾಗಿದ್ದ ಮೇಲೆ ನಿಮ್ಮ ರಾಜ್ಯ ಸರ್ಕಾರದ ಆರ್ಥಿಕ ವಿಶ್ವಾಸಾರ್ಹತೆಯ ಮೇಲೆ ಇಷ್ಟೊಂದು ಬೃಹತ್ ಮೊತ್ತದ ಸಾಲ ನೀಡಲು ಯಾವ ಅಂತರರಾಷ್ಟ್ರೀಯ ಸಂಸ್ಥೆ ತಾನೇ ಮುಂದೆ ಬರುತ್ತದೆ?” ಎಂದು ಪ್ರಶ್ನಿಸಿದ್ದಾರೆ. “ಕೇಂದ್ರದ ಖಾತರಿ ಬೇಕು, ಕೇಂದ್ರದ ಸಹಕಾರ ಬೇಕು, ಕೇಂದ್ರದ ನೆರವಿನಿಂದಲೇ ಯೋಜನೆಗಳು ನಡೀಬೇಕು. ಆದರೆ ಮೈಕ್ ಮುಂದೆ ನಿಂತಾಗ ಮಾತ್ರ ಕೇಂದ್ರದ ಈ ಮಹತ್ತರ ಕೊಡುಗೆ ಮರೆತು ಹೋಗುತ್ತದೆಯೇ? ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬಣ್ಣ ಬಳಿಯುವುದಕ್ಕಿಂತ ಮೊದಲು ಅಂಕಿ-ಅಂಶಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಿ” ಎಂದು ತೇಜಸ್ವಿ ಸೂರ್ಯ ಕಿಡಿಕಾರಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




