ತುಮಕೂರು: ಈದ್ಗಾ ಮೊಹಲ್ಲಾದಲ್ಲಿ ವಿದ್ಯುತ್ ಕಡಿತ, ಗಂಗ ಕಲ್ಯಾಣ ಯೋಜನೆಗೆ ಅರ್ಜಿ ಆಹ್ವಾನ
Tumkur: ಈದ್ಗಾ ಮೊಹಲ್ಲಾ, ಪಿಎಚ್ ಕಾಲೋನಿ, ವಿನೋಬ ನಗರ, ಲೇಬರ್ ಕಾಲೋನಿ, ಹೆಗಡೆ ಕಾಲೋನಿ, ಜೈಪುರ, ತಿಲಕ್ ಪಾರ್ಕ್, ಕೆಎಚ್ ಬಿ ಕಾಲೋನಿ, ಕಾಲ್ ಟ್ಯಾಕ್ಸ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ
ತುಮಕೂರು: ತುಮಕೂರು ಬೆಸ್ಕಾಂ ನಗರ ಉಪವಿಭಾಗ-1 ರ ವ್ಯಾಪ್ತಿಯಲ್ಲಿ ದುರಸ್ತಿ ಕಾಮಗಾರಿ ಕೈಗೊಂಡಿದ್ದು, ಫೆಬ್ರವರಿ 12-13 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ (power cut) ವ್ಯತ್ಯಯವಾಗಲಿದೆ. ಈದ್ಗಾ ಮೊಹಲ್ಲಾ, ಪಿಎಚ್ ಕಾಲೋನಿ, ವಿನೋಬ ನಗರ, ಲೇಬರ್ ಕಾಲೋನಿ, ಹೆಗಡೆ ಕಾಲೋನಿ, ಜೈಪುರ, ತಿಲಕ್ ಪಾರ್ಕ್, ಕೆಎಚ್ ಬಿ ಕಾಲೋನಿ, ಕಾಲ್ ಟ್ಯಾಕ್ಸ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ (tumkur).
ಗಂಗ ಕಲ್ಯಾಣ ಯೋಜನೆಗೆ ಅರ್ಜಿ ಆಹ್ವಾನ: ತುಮಕೂರಿನ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಪ್ರಸಕ್ತ ಸಾಲಿನ ಗಂಗಾ ಕಲ್ಯಾಣ ವೈಯಕ್ತಿಕ ನೀರಾವರಿ ಯೋಜನೆಯಡಿ ( ganga kalyana scheme) ಅರ್ಜಿ ಆಹ್ವಾನಿಸಲಾಗಿದೆ. ನಿಗಮದ ಜಿಲ್ಲಾ ಕಚೇರಿಯಲ್ಲಿ ಅರ್ಜಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನ ಮಾರ್ಚ್ 7 ರ ಒಳಗೆ ಸಲ್ಲಿಸಬೇಕು. ಮಾಹಿತಿಗೆ ವೆಬ್ ಸೈಟ್: www.dbcdc.Karnataka.gov.in ಅಥವಾ ಜಿಲ್ಲಾ ಕಚೇರಿಯ ದೂರವಾಣಿ 0816-200 5008 ಸಂಪರ್ಕಿಸಬಹುದು.
ತುಮಕೂರಿನಲ್ಲಿ ಶಾಲಾ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಖ್ಯ ಶಿಕ್ಷಕ ಅಮಾನತು ತುಮಕೂರು: ಶಾಲಾ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಹಿನ್ನೆಲೆ ಜಿಲ್ಲೆಯ ಪಾವಗಡ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕನಾದ ಸಿಎಂ ಮಲ್ಲಿಕಾರ್ಜುನನ್ನು ಅಮಾನತುಗೊಳಿಸಲಾಗಿದೆ. ಅನುಚಿತ ಅಸಭ್ಯ ವರ್ತನೆ ಆರೋಪದ ಹಿನ್ನೆಲೆ ಅಮಾನತು ಮಾಡಿ ಬಿಇಒ ಆದೇಶ ಹೊರಡಿಸಿದ್ದಾರೆ. ಮುಖ್ಯ ಶಿಕ್ಷಕ ಸಿಎಂ ಮಲ್ಲಿಕಾರ್ಜುನ ಶಾಲಾ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆ. ಅಲ್ಲದೇ ಶಾಲಾ ಸಿಬ್ಬಂದಿಯೊಂದಿಗೆ ಗೌರವವಾಗಿ ನಡೆದುಕೊಳ್ಳಲ್ಲ ಎಂಬ ಆರೋಪ ಕೇಳಿಬಂದಿತ್ತು. ಆರೋಪ ಸಾಬೀತಾದ ಹಿನ್ನೆಲೆ ಅಮಾನತು ಮಾಡಲಾಗಿದೆ.
ಕೊಲೆ ಪ್ರಕರಣ -ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ: ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ನಾಗನಹಳ್ಳಿ ಗ್ರಾಮದಲ್ಲಿ ಕಳೆದ ವರ್ಷ ಅಕ್ಟೋಬರ್ 18ರಂದು ಕೊಲೆ ನಡೆದಿತ್ತು. ಗ್ರಾಮದ ಗೋವಿಂದೇಗೌಡ, ವೆಂಕಟರಾಮಯ್ಯ, ಪ್ರಕಾಶ್, ನಂಜುಂಡಯ್ಯ ಹಾಗೂ ದೀಪು, ಗುರು, ಮಲ್ಲಿಕಾರ್ಜುನಯ್ಯ, ಸಿದ್ದಲಿಂಗಯ್ಯ ನಡುವೆ ಗಲಾಟೆ ನಡೆದಿತ್ತು. ಗಲಾಟೆಯಲ್ಲಿ ಗೋವಿಂದೇಗೌಡರ ತಂದೆ ಚನ್ನಿಗಪ್ಪರಿಗೆ ಸ್ಪೈನಲ್ ಕಾರ್ಡ್ ಮೇಲೆ ಹಲ್ಲೆ ಮಾಡಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಚನ್ನಿಗಪ್ಪ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ಈ ಬಗ್ಗೆ ಕುಣಿಗಲ್ ಸಿಪಿಐ ಧರ್ಮೇಂದ್ರ ತನಿಖೆ ನಡೆಸಿ ದೋಷಾರೋಪಣೆ ಸಲ್ಲಿಸಿದ್ದರು. ಆರೋಪ ಸಾಬೀತಾದ ಹಿನ್ನೆಲೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತುಮಕೂರಿನ 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.
Also Read: Organ Donation: ರಿಸೆಪ್ಷನ್ ವೇಳೆ ಕುಸಿದು ಬಿದ್ದ ಮದುಮಗಳು, ಬ್ರೈನ್ ಡೆಡ್ – ಅಂಗಾಂಗ ದಾನ ಮಾಡಿದ ಕುಟುಂಬಸ್ಥರು
Published On - 8:55 am, Sat, 12 February 22