AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡ ತಾಯಿಗೊಂದು ಆಲಯ; ಕದಂಬರ ಕಾಲದ ಭುವನೇಶ್ವರಿ ದೇವಾಲಯಕ್ಕಿದೆ ನೂರಾರು ವರ್ಷಗಳ ಇತಿಹಾಸ

Karnataka Rajyotsava 2021: ಬಿಳಗಿ ಸಾಮ್ರಾಜ್ಯವೂ ಗಂಗಾವಳಿ ತೀರದಿಂದ ಉಡುಪಿಯ ಗಂಗೊಳ್ಳಿ ತೀರದ ವರೆಗೆ ಹಬ್ಬಿತ್ತು. ಬಿಳಗಿಯ ಅರಸರು ಕನ್ನಡದ ಆರಾಧಕರು ಮತ್ತು ಕನ್ನಡವನ್ನು ಪ್ರೀತಿಸುವವರು ಆಗಿದ್ದರಿಂದ ಕನ್ನಡ ತಾಯಿಗಾಗಿ ಒಂದು ಆಲಯವನ್ನು ನಿರ್ಮಿಸಬೇಕೆಂಬ ಸಂಕಲ್ಪದಿಂದ ಭುವನಗಿಯಲ್ಲಿ ಕದಂಬರ ಕಾಲದ ಭುವನೇಶ್ವರಿ ದೇಗುಲವನ್ನು ಪುನರ್ ನಿರ್ಮಾಣ ಮಾಡಿದರು.

ಕನ್ನಡ ತಾಯಿಗೊಂದು ಆಲಯ; ಕದಂಬರ ಕಾಲದ ಭುವನೇಶ್ವರಿ ದೇವಾಲಯಕ್ಕಿದೆ ನೂರಾರು ವರ್ಷಗಳ ಇತಿಹಾಸ
ಆದಿ ದೇವತೆ ಭುವನೇಶ್ವರಿ ದೇವಿ ದೇವಾಲಯ
TV9 Web
| Updated By: Digi Tech Desk|

Updated on:Nov 01, 2021 | 9:30 AM

Share

ಉತ್ತರ ಕನ್ನಡ: ತಾಯಿ ಕನ್ನಡಾಂಬೆಗೆ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಭುವನಗಿರಿ ಬಳಿ ದೇವಾಲಯ ಇದೆ. ಇದು ಇವತ್ತು ನಿನ್ನೆಯ ದೇವಾಲಯ ಅಲ್ಲ. ಕದಂಬರ ಕಾಲದ ಕನ್ನಡ ದೇವಾಲಯ. ಹಚ್ಚಹಸುರಿನ ಮಲೆನಾಡಿನ ತಪ್ಪಲಿನ ಭುವನ ಗಿರಿ ಶಿಖರದಲ್ಲಿ ನಾಡಿನ ಆದಿ ದೇವತೆ ಭುವನೇಶ್ವರಿ ದೇವಿ ನೆಲೆಸಿದ್ದಾಳೆ. ಈ ದೇವಾಲಯಕ್ಕೆ ನೂರಾರು ವರ್ಷದ ಇತಿಹಾಸ ಇದೆ. ಕದಂಬರು ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಸಿದ್ದಾಪುರ ಆಳುವ ಸಂದರ್ಭದ ಕಾಲದಲ್ಲಿ ಭುವನೇಶ್ವರಿ ದೇವಿಯನ್ನು ಪ್ರತಿಷ್ಠಾಪಿಸಿ ತಮ್ಮ ಕುಲದೇವಿಯನ್ನಾಗಿ ಆರಾಧಿಸುತ್ತಿದ್ದರು.

ನಂತರದ ದಿನಗಳಲ್ಲಿ ದೇವಾಲಯ ಪೂರ್ಣ ಪ್ರಮಾಣದಲ್ಲಿ ನಿರ್ಮಾಣ ಆಗದ ಸಂದರ್ಭದಲ್ಲಿ ವಿಜಯನಗರ ಸಾಮ್ರಾಜ್ಯದ ಅರಸರು ದೇವಾಲಯ ನಿರ್ಮಾಣ ಮಾಡಲು ಮನಸ್ಸು ಮಾಡಿದರಾದರೂ. ಈ ಕಾಲದಲ್ಲೂ ಪೂರ್ಣ ಪ್ರಮಾಣದಲ್ಲಿ ದೇವಾಲಯ ನಿರ್ಮಾಣದ ಭಾಗ್ಯ ಕೈಗೂಡಲಿಲ್ಲ. ಬಳಿಕ ಬಿಳಗಿ ಅರಸರು ದೇವಾಲಯವನ್ನು ಪೂರ್ಣ ಪ್ರಮಾಣದಲ್ಲಿ ನಿರ್ಮಿಸಿದರು ಎನ್ನುವ ಬಗ್ಗೆ ಇತಿಹಾಸ ಇದೆ. ಕ್ರಿ.ಶ 1692ರಲ್ಲಿ ಬಿಳಗಿ ಅರಸರು ದೇವಾಲಯವನ್ನು ಪುನರ್ ನಿರ್ಮಾಣ ಮಾಡಿದರು ಎಂಬ ಉಲ್ಲೇಖವಿದೆ.

ದೇವಿ ಭುವನೇಶ್ವರಿ ನಾಡಿನ ಆದಿ ದೇವತೆಯಾಗಿದ್ದು ಹೇಗೆ? ಬಿಳಗಿ ಸಾಮ್ರಾಜ್ಯವೂ ಗಂಗಾವಳಿ ತೀರದಿಂದ ಉಡುಪಿಯ ಗಂಗೊಳ್ಳಿ ತೀರದ ವರೆಗೆ ಹಬ್ಬಿತ್ತು. ಬಿಳಗಿಯ ಅರಸರು ಕನ್ನಡದ ಆರಾಧಕರು ಮತ್ತು ಕನ್ನಡವನ್ನು ಪ್ರೀತಿಸುವವರು ಆಗಿದ್ದರಿಂದ ಕನ್ನಡ ತಾಯಿಗಾಗಿ ಒಂದು ಆಲಯವನ್ನು ನಿರ್ಮಿಸಬೇಕೆಂಬ ಸಂಕಲ್ಪದಿಂದ ಭುವನಗಿಯಲ್ಲಿ ಕದಂಬರ ಕಾಲದ ಭುವನೇಶ್ವರಿ ದೇಗುಲವನ್ನು ಪುನರ್ ನಿರ್ಮಾಣ ಮಾಡಿದರು.

ಅಂದಿನಿಂದ ಇಂದಿನವರೆಗೂ ಕೂಡಾ ತಾಯಿ ಭುವನೇಶ್ವರಿ ದೇವಿ ಕನ್ನಡದ ದೇವಿಯಾಗಿ ನೆಲೆನಿಂತಿದ್ದು, ಈಗ ತ್ರೀಕಾಲ ಪೂಜೆ ಪುನಸ್ಕಾರಗಳು ನಡೆಯುತ್ತಿವೆ. ಇನ್ನು ದೇವಾಲಯದ ಗರ್ಭಗುಡಿಯಲ್ಲಿ ಕದಂಬರ ಕಾಲದ ಕಲೆಯನ್ನು ಪರಿಚಯಿಸುವ ಅನೇಕ ಕೆತ್ತನೆಗಳು ಇಂದಿಗೂ ರಾರಾಜಿಸುತ್ತಿವೆ. ಜತೆಗೆ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ಪರ ಸಂಘಟನೆಗಳು ಹತ್ತಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿವೆ.

ಒಟ್ಟಾರೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಭುವನಗಿರಿಯಲ್ಲಿ ನೆಲೆನಿಂತ ಕನ್ನಡದ ಆದಿ ದೇವತೆಗೆ ಇಂದಿಗೂ ತ್ರಿಕಾಲ ಪೂಜೆ ಪುನಸ್ಕಾರಗಳು ನಡೆಯುತ್ತಿದೆ. ಐತಿಹಾಸಿಕ ಕನ್ನಡ ದೇವಾಲಯ ಅಭಿವೃದ್ದಿಯ ದೃಷ್ಟಿಯಿಂದ ಇಂದಿಗೂ ಸರಕಾರದ ಕಣ್ಣಿನಿಂದ ದೂರ ಇದ್ದಿದ್ದು ಮಾತ್ರ ಖೇದಕರ.

ವರದಿ: ಮಂಜುನಾಥ್ ಪಟಗಾರ್

ಇದನ್ನೂ ಓದಿ: Karnataka Rajyotsava 2021: ಕನ್ನಡಕ್ಕಿದೆ ಪ್ರಾದೇಶಿಕತೆಯ ಛಾಪು; ಆಯಾ ಸ್ಥಳ, ಜನಾಂಗಕ್ಕೆ ಅನುಗುಣವಾಗಿ ಬದಲಾಗುತ್ತದೆ ಆಡುನುಡಿ

Kannada Rajyotsava 2021: ಕನ್ನಡ ರಾಜ್ಯೋತ್ಸವ ಹಿನ್ನೆಲೆ; ಬೆಳಕಿನ ವಿನ್ಯಾಸದಲ್ಲಿ ಕಂಗೊಳಿಸಿದ ವಿಧಾನಸೌಧ!

Published On - 7:42 am, Mon, 1 November 21