ಕಿಟಕಿಯಿಂದ ಕೈ ಹೊರಚಾಚಿದ್ದ ಮಹಾಪರಾಧಕ್ಕೆ ಕೈ ಕಳೆದುಕೊಂಡ ವೃದ್ಧ ಬಸ್ ಪ್ರಯಾಣಿಕ, ಕಿಟಕಿಗೆ ನೇತಾಡುತ್ತಿದ್ದ ಕೈ ನೋಡಿ ಬೆಚ್ಚಿಬಿದ್ದ ದಾರಿಹೋಕರು

ಅಂಕೋಲಾ-ಬೆಳಗಾವಿ ಮಾರ್ಗದಲ್ಲಿ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೃದ್ಧ, ಪ್ರಯಾಣದ ವೇಳೆ ಬಸ್‌ನ ಕಿಟಕಿಯಿಂದ ಕೈ ಹೊರಚಾಚಿದ್ದಾರೆ. ಈ ವೇಳೆ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಕೈ ಎಲುಬು ತುಂಡಾಗಿ ಮಾಂಸ ಕಿತ್ತು ಬಂದು ಬಸ್‌ನ ಕಿಟಕಿ ಭಾಗದಲ್ಲಿ ನೇತಾಡತೊಡಗಿತ್ತು.

ಕಿಟಕಿಯಿಂದ ಕೈ ಹೊರಚಾಚಿದ್ದ ಮಹಾಪರಾಧಕ್ಕೆ ಕೈ ಕಳೆದುಕೊಂಡ ವೃದ್ಧ ಬಸ್ ಪ್ರಯಾಣಿಕ, ಕಿಟಕಿಗೆ ನೇತಾಡುತ್ತಿದ್ದ ಕೈ ನೋಡಿ ಬೆಚ್ಚಿಬಿದ್ದ ದಾರಿಹೋಕರು
ಕಿಟಕಿಯಿಂದ ಕೈ ಹೊರಚಾಚಿದ್ದ ಮಹಾಪರಾಧಕ್ಕೆ ಕೈ ಕಳೆದುಕೊಂಡ ವೃದ್ಧ
Follow us
TV9 Web
| Updated By: ಆಯೇಷಾ ಬಾನು

Updated on:Mar 28, 2022 | 7:48 PM

ಕಾರವಾರ: ಬಸ್ನಲ್ಲಿ ಪ್ರಯಾಣ ಮಾಡುವ ಬಹುತೇಕ ಪ್ರಯಾಣಿಕರಿಗೆ ಕಿಟಕಿ ಇರೋ ಸೀಟ್ನಲ್ಲಿ ಕುಳಿತು ಪ್ರಯಾಣಿಸೋದು ಇಷ್ಟ. ಆದ್ರೆ ಕೆಲವರು ಕಿಟಕಿಯಾಚೆಗೆ ಕೈ ಹಾಕುತ್ತ ಆಚಾತುರ್ಯವೆಸಗುತ್ತಾರೆ. ಇದಕ್ಕೆ ತಾಜಾ ಉದಾಹರಣೆಯೆಂಬಂತೆ ಬಸ್‌ನಲ್ಲಿ ಪ್ರಯಾಣಿಸುವಾಗ ಕಿಟಕಿಯಿಂದ ಆಚೆಗೆ ಕೈ ಚಾಚಿ ಪ್ರಯಾಣಿಕ ಕೈ ಕಳೆದುಕೊಂಡಿರುವ ಘಟನೆ ಕಾರವಾರ ಹೊರಭಾಗದ ಕದ್ರಾದಲ್ಲಿ ನಡೆದಿದೆ. ಅಣಶಿ ಮೂಲದ ಲಕ್ಷ್ಮಣ ಪಿ. ರಾಜುಗಾರ (74) ಎಂಬ ವೃದ್ಧನ ಕೈ ತುಂಡಾಗಿದ್ದು ಗಂಭೀರ ಗಾಯಗಳಿಂದ ನರಳುತ್ತಿದ್ದಾರೆ.

ಅಂಕೋಲಾ-ಬೆಳಗಾವಿ ಮಾರ್ಗದಲ್ಲಿ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೃದ್ಧ, ಪ್ರಯಾಣದ ವೇಳೆ ಬಸ್‌ನ ಕಿಟಕಿಯಿಂದ ಕೈ ಹೊರಚಾಚಿದ್ದಾರೆ. ಈ ವೇಳೆ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಕೈ ಎಲುಬು ತುಂಡಾಗಿ ಮಾಂಸ ಕಿತ್ತು ಬಂದು ಬಸ್‌ನ ಕಿಟಕಿ ಭಾಗದಲ್ಲಿ ನೇತಾಡತೊಡಗಿತ್ತು. ಇದನ್ನು ಕಂಡ ಪ್ರಯಾಣಿಕರು ಬೆಚ್ಚಿಬಿದ್ದಿದ್ದು ಕೂಡಲೇ ಆ್ಯಂಬುಲೆನ್ಸ್ ಮೂಲಕ ವೃದ್ಧನನ್ನು ಕಾರವಾರದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಗಾಯಾಳು ವೃದ್ಧನಿಗೆ ಚಿಕಿತ್ಸೆ ಮುಂದುವರೆದಿದೆ. ಕದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜ್ಞಾನಭಾರತಿ ಠಾಣೆ ಪೊಲೀಸರಿಂದ ಇಬ್ಬರು ಆರೋಪಿಗಳ ಬಂಧನ ಬೆಂಗಳೂರಿನ ಮಂಗನಹಳ್ಳಿ ಬಳಿ ಟ್ರಾನ್ಸ್ಫಾರ್ಮರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಜ್ಞಾನಭಾರತಿ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಘಟನೆ ಸಂಬಂಧ AE ದಿನೇಶ್, JE ಮಹಾಂತೇಶ್ ಬಂಧತ ಆರೋಪಿಗಳು. ಬೆಸ್ಕಾಂ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಮೃತರ ಸಂಬಂಧಿಕರು ಆರೋಪ ಮಾಡಿದ್ದರು. ದೂರು ದಾಖಲಿಸಿ ತನಿಖೆ ಕೈಗೊಂಡಿದ್ದ ಜ್ಞಾನಭಾರತಿ ಠಾಣೆ ಪೊಲೀಸರು ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಘಟನೆ ಹಿನ್ನೆಲೆ ಮಾ.23ರಂದು ಮಂಗನಹಳ್ಳಿ ಮುಖ್ಯ ರಸ್ತೆಯಲ್ಲಿ ಟ್ರಾನ್ಸ್ಫಾರ್ಮರ್ ಸ್ಫೋಟವಾಗಿತ್ತು. ಘಟನೆಯಲ್ಲಿ ತಂದೆ, ಮಗಳು ಮೃತಪಟ್ಟಿದ್ದರು. ಉಪ ಮುಖ್ಯ ವಿದ್ಯುತ್ ಪರಿವೀಕ್ಷಕರಿಂದ ಮಧ್ಯಂತರ ವರದಿ ಸಲ್ಲಿಕೆಯಾಗಿತ್ತು. ವರದಿಯಲ್ಲಿ ಮೇಲ್ನೋಟಕ್ಕೆ ಬೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯ ಕುರಿತು ಉಲ್ಲೇಖ ಮಾಡಲಾಗಿತ್ತು. ಸ್ಪೋಟಗೊಂಡ ಟ್ರಾನ್ಸ್ ಫಾರ್ಮರ್ ನಿರ್ವಹಣೆ ಮಾಡದೆ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾಗಿ ನಮೂದಿಸಲಾಗಿತ್ತು. ಬೆಸ್ಕಾಂ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಮೃತರ ಸಂಬಂಧಿಕರು ಆರೋಪ ಮಾಡಿದ್ದರು. ದೂರು ದಾಖಲಿಸಿ ತನಿಖೆ ಕೈಗೊಂಡಿದ್ದ ಜ್ಞಾನಭಾರತಿ ಠಾಣೆ ಪೊಲೀಸರು AE ದಿನೇಶ್, JE ಮಹಾಂತೇಶ್ ಸೇರಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ಬೆಸ್ಕಾಂ ಇಇ ಲಕ್ಷ್ಮೀಶ್ ಎಸಿಬಿ ಬಲೆಗೆ ಬೆಂಗಳೂರಿನಲ್ಲಿ ಬೆಸ್ಕಾಂ ಇಇ ಲಕ್ಷ್ಮೀಶ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಹೈಟೆನ್ಷನ್, ಲೋಟೆನ್ಷನ್ ಸಂಪರ್ಕ ಒದಗಿಸಲು ಲಂಚಕ್ಕೆ ಬೇಡಿಕೆ ಇಟ್ಟು 10 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗ ಶಿವಾನಂದ ಸರ್ಕಲ್ ಬಳಿಯ ಬೆಸ್ಕಾಂ ಕಚೇರಿಯಲ್ಲಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ಸದ್ಯ ಇಇ ಲಕ್ಷ್ಮೀಶ್‌ನನ್ನು ಬಂಧಿಸಿ ಎಸಿಬಿ ವಿಚಾರಣೆ ನಡೆಸ್ತಿದ್ದಾರೆ.

ಇದನ್ನೂ ಓದಿ: ಕಾಮಗಾರಿ ಮಾಡಿದ ಬಿಲ್ ಕೊಡಿಸುವಂತೆ ಸಚಿವ ಕೆಎಸ್ ಈಶ್ವರಪ್ಪ ವಿರುದ್ಧ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ಸಂತೋಷ್ ಪಾಟೀಲ್

ಹಿಜಾಬ್​ ಗೆಟಪ್​ನಲ್ಲಿ ಉಪೇಂದ್ರ ಕಾಣಿಸಿಕೊಂಡಿದ್ದು ಏಕೆ? ಇದು ‘ಹೋಮ್​ ಮಿನಿಸ್ಟರ್​’ ವಿಷಯ

Published On - 5:55 pm, Mon, 28 March 22