ಬಿಜೆಪಿ ಶಾಸಕ ನಡಹಳ್ಳಿ ಸಹೋದರ ಮತ್ತು ಅಬಕಾರಿ ಇಲಾಖೆಯ ಮಹಿಳಾ ಅಧಿಕಾರಿ ಮಧ್ಯೆ ಮಾತಿನ ಜಟಾಪಟಿ
ಮುದ್ದೇಬಿಹಾಳ ಬಿಜೆಪಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಸಹೋದರ ಶಾಂತಗೌಡ ಮತ್ತು ಮುದ್ದೇಬಿಹಾಳ ಅಬಕಾರಿ ಕಛೇರಿಯ ಮಹಿಳಾ ಅಧಿಕಾರಿ ಜ್ಯೋತಿ ಮೇತ್ರಿ ಮಧ್ಯೆ ಮಾತಿನ ಜಟಾಪಟಿ ನಡೆದಿದೆ.
ವಿಜಯಪುರ: ಮುದ್ದೇಬಿಹಾಳ (Muddebihal) ಬಿಜೆಪಿ (BJP) ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ (A.S. Patil Nadahalli) ಸಹೋದರ ಶಾಂತಗೌಡ ಮತ್ತು ಮುದ್ದೇಬಿಹಾಳ ಅಬಕಾರಿ ಕಛೇರಿಯ (Excise office) ಮಹಿಳಾ ಅಧಿಕಾರಿ ಜ್ಯೋತಿ ಮೇತ್ರಿ ಮಧ್ಯೆ ಮಾತಿನ ಜಟಾಪಟಿ ನಡೆದಿದೆ. ಡಾಬಾಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದರೂ ಮೌನವಾಗಿದ್ದೇಕೆ ? ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರುತ್ತಿದ್ದರೂ ಕ್ರಮ ಏಕೆ ಕೈಗೊಂಡಿಲ್ಲ ? ಸಣ್ಣ ಪುಟ್ಟ ಅಂಗಡಿಕಾರರು, ಮೇಲಷ್ಟೇ ನಿಮ್ಮ ಪ್ರಹಾರವೇ ? ಎಂದು ಮಹಿಳಾ ಅಧಿಕಾರಿ ಜ್ಯೋತಿಗೆ ಬಿಜೆಪಿ ಶಾಸಕ ನಡಹಳ್ಳಿ ಸಹೋದರ ಶಾಂತಗೌಡ ಪ್ರಶ್ನೆ ಮಾಡಿದ್ದಾರೆ.
ವಾಗ್ವಾದ ಹಿನ್ನೆಲೆಯಲ್ಲಿ ಅಧಿಕಾರಿ ಜ್ಯೋತಿ ಸ್ಥಳದಲ್ಲೇ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.