ಅಪ್ರಾಪ್ತ ಬಾಲಕನನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ, ಹಲ್ಲೆ! ಯಾಕೀ ಅಮಾನವೀಯತೆ? ಆತ ಮಾಡಿದ ಮಹಾಪರಾಧವೇನು?
ಇಷ್ಟಕ್ಕೂ ಆ ಬಾಲಕನ ಮೇಲಿದ್ದ ಆರೋಪ ಅಥವಾ ಆತ ಮಾಡಿರುವ ಮಹಾಪರಾಧ ಅಂದರೆ ಗ್ರಾಮಸ್ಥರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ಎಂಬುದುದಾಗಿದೆ. ಅಪ್ರಾಪ್ತ ಬಾಲಕನನ್ನು ಬೆತ್ತಲೆಗೊಳಿಸಿ ವಿದ್ಯುತ್ ಕಂಬಕ್ಕೆ ಕಟ್ಟಿ ಆತನಿಗೆ ಗ್ರಾಮದ ಮುಖಂಡ ಹಣಮಂತರಾಯ ಮಡಿಕೇಶ್ವರ ಎಂಬಾತ ಕಪ್ಪು ಬಣ್ಣ ಬಳಿದಿದ್ದಾನೆ
ವಿಜಯಪುರ: ಅಪ್ರಾಪ್ತ ವಯಸ್ಸಿನ ಬಾಲಕನನ್ನು ಬೆತ್ತಲೆಗೊಳಿಸಿ ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ, ಹಲ್ಲೆ ಮಾಡಿರುವ ಅಮಾನವೀಯ ಘಟನೆ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ವಡಬಡಗಿ ಗ್ರಾಮದಲ್ಲಿ ನಡೆದಿದೆ. ಇಷ್ಟಕ್ಕೂ ಆ ಬಾಲಕನ ಮೇಲಿದ್ದ ಆರೋಪ ಅಥವಾ ಆತ ಮಾಡಿರುವ ಮಹಾಪರಾಧ ಅಂದರೆ ಗ್ರಾಮಸ್ಥರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ಎಂಬುದುದಾಗಿದೆ. ಅಪ್ರಾಪ್ತ ಬಾಲಕನನ್ನು ಬೆತ್ತಲೆಗೊಳಿಸಿ ವಿದ್ಯುತ್ ಕಂಬಕ್ಕೆ ಕಟ್ಟಿ ಆತನಿಗೆ ಗ್ರಾಮದ ಮುಖಂಡ ಹಣಮಂತರಾಯ ಮಡಿಕೇಶ್ವರ ಎಂಬಾತ ಕಪ್ಪು ಬಣ್ಣ ಬಳಿದಿದ್ದಾನೆ ಎಂದು ತಿಳಿದುಬಂದಿದೆ. ಬಾಲಕನ ಮೇಲೆ ಹಲ್ಲೆ ನಡೆಸಿರುವ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆಯಾಗಿದೆ. ಬಸವನಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ನಿನ್ನೆ ಮಂಗವಾರ ನಡೆದಿರುವ ಈ ಘಟನೆ ಇಂದು ಬೆಳಕಿಗೆ ಬಂದಿದೆ.
ಬೇಡವೆಂದು ಗೋಗರೆದರೂ ಬೆತ್ತಲೆ ಮಾಡಿ, ಸುಟ್ಟ ಎಂಜಿನ್ ಆಯಿಲ್ ಸುರಿದಿದ್ದಾರೆ -ಹೆತ್ತೊಡಲ ಆಕ್ರಂದನ: ಅಪ್ರಾಪ್ತ ಬಾಲಕನನ್ನ ಬೆತ್ತಲೆ ಮಾಡಿ ಕಂಬಕ್ಕೆ ಕಟ್ಟಿ ಥಳಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಪ್ರಾಪ್ತ ಬಾಲಕನ ತಾಯಿ ಮಲಕಮ್ಮ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಮಗನಿಗೆ ಆದ ಸ್ಥಿತಿಯ ಕುರಿತು ಅಳಲು ತೋಡಿಕೊಂಡಿರುವ ಹೆತ್ತೊಡಲು ನಮ್ಮ ಮುಂದೆಯೇ ಮಗನ ಮೇಲೆ ಹಲ್ಲೆ ಮಾಡಿದ್ದಾರೆ. ಬೇಡವೆಂದು ಗೋಗರೆದರೂ ಬೆತ್ತಲೆ ಮಾಡಿ, ಸುಟ್ಟ ಎಂಜಿನ್ ಆಯಿಲ್ ಸುರಿದಿದ್ದಾರೆ. ಊರ ಗೌಡರಾಗಿ ಆ ಮುಖಂಡ ಹೀಗೆ ಮಾಡಿದ್ದಾರೆ. ನಾವು ಊರಲ್ಲಿ ಸಣ್ಣ ಜನ, ನಿತ್ಯ ದುಡಿದು ತಿನ್ನೋರು, ಏನು ಮಾಡೋದು? ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ ಎಂದು ಅವತ್ತುಕೊಂಡಿದ್ದಾರೆ.
ಹಣಮಂತರಾಯ ಸೇರಿ ಹಲವರ ವಿರುದ್ಧ ದೂರು ನೀಡಿದ್ದೇವೆ. ನಮ್ಮ ಮಗ ಗ್ರಾಮದ ಜನರಿಗೆ ಅಶ್ಲೀಲವಾಗಿ ಬೈದಿದ್ದಾನೆ ಎಂದಾಗ ನಾನೇ ಹುಡುಗನನ್ನ ಗೌಡರ ಬಳಿ ಕರೆದೊಯ್ದೆ. ಮಾನವೀಯತೆ ಇಲ್ಲದಂತೆ ಬಟ್ಟೆ ಬಿಚ್ಚಿ ಹೀಗೆ ಮಾಡಿದ್ದಾರೆ ಎಂದು ತಾಯಿ ಅಳಲು ತೋಡಿಕೊಂಡಿದ್ದಾರೆ. ಬಸನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಸಂಬಂಧ ಇನ್ನೂ ಯಾರನ್ನೂ ಬಂಧಿಸಿಲ್ಲ. ಅಪ್ರಾಪ್ತ ಬಾಲಕನ ಮೇಲೆ ಹಲ್ಲೆ ಮಾಡಿದ ಹನುಂತರಾಯಗೌಡ ಹಾಗೂ ಇತರರು ಪರಾರಿಯಾಗಿದ್ದಾರೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.
3 ದಿನದಿಂದ ಮನಸ್ಸಿಗೆ ನೆಮ್ಮದಿ ಇಲ್ಲ ಎಂದು ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ ಚಾಮರಾಜನಗರ: ಮೂರು ದಿನದಿಂದ ಮನಸ್ಸಿಗೆ ನೆಮ್ಮದಿ ಇಲ್ಲ ಎಂದು ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೊಳ್ಳೆಗಾಲ ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಮಮತಾ (16) ಆತ್ಮಹತ್ಯೆ ಮಾಡಿಕೊಂಡಾಕೆ. ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೊಳ್ಳೆಗಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Randeep Hooda: ಅನೌನ್ಸ್ ಆಯ್ತು ‘ಸ್ವತಂತ್ರ ವೀರ್ ಸಾವರ್ಕರ್’; ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳೋರು ಯಾರು?
ಇದನ್ನೂ ಓದಿ: ರೋಹಿಣಿ ಸಿಂಧೂರಿ ಡಿಸಿ ಆಗಿದ್ದ ಅವಧಿಯಲ್ಲಿ ಬಟ್ಟೆ ಬ್ಯಾಗ್ ಖರೀದಿ ಹಗರಣ: ತನಿಖೆಗೆ ಸರ್ಕಾರ ಆದೇಶ
Published On - 3:36 pm, Wed, 23 March 22