AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅವಸಾನದತ್ತ.. ಇತಿಹಾಸ ಪ್ರಸಿದ್ಧ ಮೈಲಾರ ಮಲ್ಲಣ್ಣ ದೇವಾಲಯದ ಹೊಂಡಗಳು

ಬೀದರ್‌: ಹೈದರಾಬಾದ್ ಕರ್ನಾಟಕದ ಪ್ರಮುಖ ದೇವಾಲಯಗಳಲ್ಲೊಂದಾದ ಮೈಲಾರ ಮಲ್ಲಣ್ಣ ದೇವಾಸ್ಥಾನದ ಹೊಂಡಗಳು ಇದೀಗ ಅವಸಾನದ ಅಂಚಿನಲ್ಲಿವೆ. ಶತಮಾನಗಳ ಇತಿಹಾಸ ಸಾರುವ ಅಪರೂಪದ ಹೊಂಡಗಳನ್ನು, ಇಲ್ಲಿನ ಮೂರ್ತಿಗಳನ್ನ ಸಂರಕ್ಷಿಸುವಲ್ಲಿ ಪುರಾತತ್ವ ಇಲಾಖೆ ವಿಫಲವಾಗಿದೆ. ಪರಿಣಾಮ ದಕ್ಷಿಣದ ಕಾಶಿ ಅಂತಲೇ ಪ್ರಸಿದ್ಧಿ ಪಡೆದಿರುವ ಮೈಲಾರ ಮಲ್ಲಣ್ಣ ದೇವಾಲಯದ ಹೊಂಡಗಳು ಈಗ ಅಳಿವಿನಂಚಿನಲ್ಲಿ ಕುಸಿಯುತ್ತಿವೆ. ಪುರಾತತ್ವ ಇಲಾಖೆಯ ದಿವ್ಯ ನಿರ್ಲಕ್ಷ ಹೌದು, ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿರುವ ಮೈಲಾರ ಮಲ್ಲಣ್ಣ ದೇವಾಲಯದ ಪವಿತ್ರ ಹೊಂಡಗಳು ಕ್ರಮೇಣ ಮಾಯಾವಾಗುತ್ತಿವೆ. ತ್ರೇತಾಯುಗ ಕಾಲದ 9 […]

ಅವಸಾನದತ್ತ.. ಇತಿಹಾಸ ಪ್ರಸಿದ್ಧ ಮೈಲಾರ ಮಲ್ಲಣ್ಣ ದೇವಾಲಯದ ಹೊಂಡಗಳು
ಸಾಧು ಶ್ರೀನಾಥ್​
| Edited By: |

Updated on:Jun 18, 2020 | 2:42 PM

Share

ಬೀದರ್‌: ಹೈದರಾಬಾದ್ ಕರ್ನಾಟಕದ ಪ್ರಮುಖ ದೇವಾಲಯಗಳಲ್ಲೊಂದಾದ ಮೈಲಾರ ಮಲ್ಲಣ್ಣ ದೇವಾಸ್ಥಾನದ ಹೊಂಡಗಳು ಇದೀಗ ಅವಸಾನದ ಅಂಚಿನಲ್ಲಿವೆ. ಶತಮಾನಗಳ ಇತಿಹಾಸ ಸಾರುವ ಅಪರೂಪದ ಹೊಂಡಗಳನ್ನು, ಇಲ್ಲಿನ ಮೂರ್ತಿಗಳನ್ನ ಸಂರಕ್ಷಿಸುವಲ್ಲಿ ಪುರಾತತ್ವ ಇಲಾಖೆ ವಿಫಲವಾಗಿದೆ. ಪರಿಣಾಮ ದಕ್ಷಿಣದ ಕಾಶಿ ಅಂತಲೇ ಪ್ರಸಿದ್ಧಿ ಪಡೆದಿರುವ ಮೈಲಾರ ಮಲ್ಲಣ್ಣ ದೇವಾಲಯದ ಹೊಂಡಗಳು ಈಗ ಅಳಿವಿನಂಚಿನಲ್ಲಿ ಕುಸಿಯುತ್ತಿವೆ.

ಪುರಾತತ್ವ ಇಲಾಖೆಯ ದಿವ್ಯ ನಿರ್ಲಕ್ಷ ಹೌದು, ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿರುವ ಮೈಲಾರ ಮಲ್ಲಣ್ಣ ದೇವಾಲಯದ ಪವಿತ್ರ ಹೊಂಡಗಳು ಕ್ರಮೇಣ ಮಾಯಾವಾಗುತ್ತಿವೆ. ತ್ರೇತಾಯುಗ ಕಾಲದ 9 ಪವಿತ್ರ ಹೊಂಡಗಳು ಪುರಾತತ್ವ ಇಲಾಖೆಯ ದಿವ್ಯ ನಿರ್ಲಕ್ಷದಿಂದಾಗಿ ತಮ್ಮ ಗತ ವೈಭವವನ್ನ ಕಳೆದುಕೊಂಡು ಕೊನೆ ದಿನಗಳನ್ನ ಎಣಿಸುತ್ತಿವೆ. ಒಂದು ಕಾಲದಲ್ಲಿ ಇಲ್ಲಿಗೆ ಬರುವ ಭಕ್ತರ ಆರೋಗ್ಯ ಸಂಜೀವಿನಿಯಾಗಿದ್ದ ಈ ಹೊಂಡಗಳು ಈಗ ಮಾಯವಾಗುತ್ತಿವೆ.

ಹೊಂಡಗಳಲ್ಲಿ ಸ್ನಾನ ಮಾಡಿ ದರ್ಶನ ಪಡೆದರೆ ಪಾಪ ಪರಿಹಾರ ಪವಾಡ ಪುರುಷನ ನಾಡು ಎಂದೇ ಖ್ಯಾತಿಯಾಗಿರುವ ಸುಕ್ಷೇತ್ರ ಮೈಲಾರಕ್ಕೆ ಪ್ರತಿ ನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ಹಾಗೇ ಬರುವ ಭಕ್ತರು ಹೊಂಡಗಳಲ್ಲಿ ಸ್ನಾನ ಮಾಡಿ ದರ್ಶನ ಪಡೆದರೆ ಪಾಪ ಪರಿಹಾರವಾಗುತ್ತದೆ ಅನ್ನುವ ನಂಬಿಕೆಯಿದೆ. ಹೀಗಾಗಿ ಪ್ರತಿಯೊಬ್ಬ ಭಕ್ತರು ಇಲ್ಲಿನ ಹೊಂಡಗಳಲ್ಲಿ ಸ್ನಾನ ಮಾಡುತ್ತಾರೆ. ಆದರೆ ಈಗ ಇಲ್ಲಿನ ಹೊಂಡಗಳಲ್ಲಿ ನೀರು ನಿಲ್ಲುತ್ತಿಲ್ಲ. ಸ್ನಾನ ಮಾಡದೇ ದೇವರ ದರ್ಶನ ಮಾಡುವ ಸ್ಥಿತಿ ನಿರ್ಮಾಣವಾಗಿದೆ.

ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿವೆ ಹೊಂಡಗಳು  ಇತಿಹಾಸದ ಗತವೈಭವವನ್ನ ನೆನಪು ಮಾಡುವ 9 ಹೊಂಡಗಳು ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿವೆ. ಹೀಗಾಗಿ ಆ ಸ್ಥಳದಲ್ಲಿ ದೇವಾಲಯದ ಅರ್ಚಕರಾಗಲಿ, ಭಕ್ತರಾಗಲಿ ಇವುಗಳನ್ನ ಅಭಿವೃದ್ಧಿ ಮಾಡಬೇಕೆಂದರೂ ಅರಣ್ಯ ಇಲಾಖೆ ಅಧಿಕಾರಿಗಳು ಬಿಡುತ್ತಿಲ್ಲ. ಇದರಿಂದ ಪಾಪನಾಶ ಹೊಂಡ, ಗಣೇಶ ಹೊಂಡ, ನಂದಿ ಹೊಂಡ, ಗಯಾ ಹೊಂಡ ಹಾಗೂ ಭೂತನಾತ ಹೊಂಡಗಳು ಅವಸಾನದ ಅಂಚಿಗೆ ತಳ್ಳಲ್ಪಟ್ಟಿವೆ.

ಪವಿತ್ರ ಸ್ನಾನ ಮಾಡದೇ ದೇವರ ದರ್ಶನದ ಅನಿವಾರ್ಯತೆ  ಹೀಗಾಗಿ ಕೇವಲ ದೇವಸ್ಥಾನದ ಪಕ್ಕದಲ್ಲಿರುವ ಹೊಂಡದಲ್ಲಿ ಸ್ನಾನ ಮಾಡಿ ದರ್ಶನ ಪಡೆಯಲು ಭಕ್ತರು ಉಪಯೋಗಿಸುತ್ತಿದ್ದಾರೆ. ಆದರೆ ದರ್ಶನಕ್ಕಾಗಿ ದಿನವೊಂದಕ್ಕೆ ಸಾವಿರಾರು ಭಕ್ತರು ಬರುವುದರಿಂದ ಆ ನೀರು ಕಲ್ಮಶವಾಗಿದೆ. ಪರಿಣಾಮ ಈಗ ಸ್ನಾನ ಮಾಡದಂತಹ ಸ್ಥಿತಿ ನಿರ್ಮಾಣವಾಗಿದೆ.

ಇತಿಹಾಸ ಸಾರುವ ಪ್ರಸಿದ್ಧ ಹೊಂಡಗಳು ಈ ರೀತಿ ವಿನಾಶದ ಅಂಚಿಗೆ ಬಂದು ನಿಂತಿರೋದು ಸ್ಥಳೀಯರು ಮತ್ತು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಇದು ಹೀಗೆ ಮುಂದುವರೆದರೆ ಇತಿಹಾಸ ಸಾರುವ ಅದ್ಭುತ ದೇವಸ್ಥಾನದ ಕುರುಹು ಕೂಡ ಅಳಿಯುವುದರಲ್ಲಿ ಅನುಮಾನವೇ ಇಲ್ಲಾ. ಹೀಗಾಗಿ ಕೂಡಲೇ ಪ್ರವಾಸೋದ್ಯಮ ಇಲಾಖೆ ಮತ್ತು ಪುರಾತತ್ವ ಇಲಾಖೆ ಇತ್ತ ಗಮನ ಹರಿಸಿ ಶಿಲ್ಪಕಲೆಯ ನಾಡನ್ನ ಸಂರಕ್ಷಿಸಬೇಕೆಂದು ಒತ್ತಾಯಿಸಿದ್ದಾರೆ. -ಸುರೇಶ್​ ನಾಯ್ಕ್

Published On - 5:46 pm, Wed, 17 June 20