ಬಿಗ್ ಬಜಾರ್ ಇನ್ನು ಬಿಗ್ ಬ್ರದರ್ ಒಡೆತನಕ್ಕೆ
ವಿಶ್ವದ ಐದನೇ ಆಗರ್ಭ ಶ್ರೀಮಂತ ಮತ್ತು ರಿಲಯನ್ಸ್ ಸಂಸ್ಥೆಗಳ ಒಡೆಯ ಮುಕೇಶ್ ಅಂಬಾನಿ ಹಾಗೂ ಕಿಶೋರ್ ಬಿಯಾನಿ ಒಡೆತನದ ಫ್ಯೂಚರ್ ಎಂಟರ್ಪ್ರೈಸಸ್ ಮಧ್ಯೆ ವಹಿವಾಟು ಕುರಿತ ಒಪ್ಪಂದವೊಂದು ಇಂದು ಅಂತಿಮಗೊಳ್ಳುವ ಸಾಧ್ಯತೆ ಇದೆ. ಎರಡೂ ಸಂಸ್ಥೆಗಳಬೋರ್ಡ್ ನಿರ್ದೇಶಕರು ಇಂದು ಸಭೆ ಸೇರಲಿದ್ದಾರೆ ಎಂದು ಮೂಲಗಳು ತಳಿಸಿವೆ. ರಿಲಯನ್ಸ್ ಗ್ರೂಪ್, ಬಿಯಾನಿ ಸಂಸ್ಥೆಯ ಎಲ್ಲಾ ಸಾಲಗಳನ್ನು ತೀರಿಸಿ ಇದರ ತ್ವರಿತ ಗತಿಯಲ್ಲಿ ಮಾರಾಟವಾಗುವ ಗ್ರಾಹಕ ಉತ್ಪನ್ನಗಳ ವಿಭಾಗದಲ್ಲಿ ಅಲ್ಪ ಪ್ರಮಾಣದ ಪಾಲುದಾರಿಕೆಯನ್ನು ಪಡೆದುಕೊಳ್ಳಲಿದೆ. ಇಂದಿನ ಎಲ್ಲಾ ವಹಿವಾಟುಗಳು ನಗದು […]

ವಿಶ್ವದ ಐದನೇ ಆಗರ್ಭ ಶ್ರೀಮಂತ ಮತ್ತು ರಿಲಯನ್ಸ್ ಸಂಸ್ಥೆಗಳ ಒಡೆಯ ಮುಕೇಶ್ ಅಂಬಾನಿ ಹಾಗೂ ಕಿಶೋರ್ ಬಿಯಾನಿ ಒಡೆತನದ ಫ್ಯೂಚರ್ ಎಂಟರ್ಪ್ರೈಸಸ್ ಮಧ್ಯೆ ವಹಿವಾಟು ಕುರಿತ ಒಪ್ಪಂದವೊಂದು ಇಂದು ಅಂತಿಮಗೊಳ್ಳುವ ಸಾಧ್ಯತೆ ಇದೆ. ಎರಡೂ ಸಂಸ್ಥೆಗಳಬೋರ್ಡ್ ನಿರ್ದೇಶಕರು ಇಂದು ಸಭೆ ಸೇರಲಿದ್ದಾರೆ ಎಂದು ಮೂಲಗಳು ತಳಿಸಿವೆ. ರಿಲಯನ್ಸ್ ಗ್ರೂಪ್, ಬಿಯಾನಿ ಸಂಸ್ಥೆಯ ಎಲ್ಲಾ ಸಾಲಗಳನ್ನು ತೀರಿಸಿ ಇದರ ತ್ವರಿತ ಗತಿಯಲ್ಲಿ ಮಾರಾಟವಾಗುವ ಗ್ರಾಹಕ ಉತ್ಪನ್ನಗಳ ವಿಭಾಗದಲ್ಲಿ ಅಲ್ಪ ಪ್ರಮಾಣದ ಪಾಲುದಾರಿಕೆಯನ್ನು ಪಡೆದುಕೊಳ್ಳಲಿದೆ. ಇಂದಿನ ಎಲ್ಲಾ ವಹಿವಾಟುಗಳು ನಗದು ವ್ಯವಹಾರದ ಮೂಲಕವಾಗಿಯೇ ನಡೆಯಲಿವೆಯೆಂದು ತಿಳಿದು ಬಂದಿದೆ.

ವರದಿಯ ಪ್ರಕಾರ. ಇಂದಿನ ವರ್ಗಾವಣೆ ಪ್ರಕ್ರಿಯೆಯು ಸುಮಾರು 30,000 ಕೋಟಿ ರೂಪಾಯಿಗಷ್ಟಾಗಿರುತ್ತದೆ. ವರ್ಗಾವಣೆಗೆ ಮೊದಲು, ಬಿಯಾನಿ ಅವರ ತಮ್ಮ ಫ್ಯೂಚರ್ ಎಂಟರ್ಪ್ರೈಸಸ್ನ ಐದು ಲಿಸ್ಟೆಡ್ ಘಟಕಗಳಾದ, ಬಟ್ಟೆ, ದಿನಸಿ, ಗೃಹುಪಯೋಗಿ ಹಾಗೂ ಇತರ ಉತ್ಪನ್ನಗಳ ಸಂಸ್ಥೆಗಳನ್ನು ಫ್ಯೂಚರ್ ಎಂಟರ್ಪ್ರೈಸಸ್ ಲಿಮಿಟೆಡ್ಗೆ ವರ್ಗಾಯಿಸಿ ಅದರ ಒಡೆತನದ ಹಕ್ಕನ್ನು ರಿಲಯನ್ಸ್ ಗ್ರೂಪ್ಗೆ ಒಪ್ಪಿಸಿಕೊಡಲಿದೆ. ಬಿಗ್ ಬಜಾರ್, ಎಫ್ ಬಿ ಬಿ, ಕೊಯ್ರೊ, ಈಸಿ ಡೇ, ಹೆರಿಟೇಜ್, ಬ್ರ್ಯಾಂಡ್ ಫ್ಯಾಕ್ಟರಿಮೊದಲಾದ ಮಾರ್ಟ್ ಮತ್ತು ಸುಪರ್ ಮಾರ್ಟ್ಗಳು ಇನ್ನು ಮುಂದೆ ರಿಲಯನ್ಸ್ ಗ್ರೂಪ್ ಪಾಲಾಗಲಿವೆ.
ಮೂಲಗಳ ಪ್ರಕಾರ, ಫ್ಯೂಚರ್ ಗ್ರೂಪ್ನ 13,000 ಕೋಟಿ ರೂಪಾಯಿಗಳ ಸಾಲವನ್ನು ರಿಲಯನ್ಸ್ ತೀರಿಸಲಿದೆ. ಅದರ ಇತರ ಹೊಣೆಗಾರಿಕೆಯ ರೂಪದಲ್ಲಿರುವ 7,000 ಕೋಟಿಗಳನ್ನು ಸಹ ರಿಲಯನ್ಸ್ ತೀರಿಸಲಿದೆ. ಆದಾದ ನಂತರ ಫ್ಯೂಚರ್ ಎಂಟರ್ಪ್ರೈಸಸ್ನಲ್ಲಿ ಸುಮಾರು 16% ಪಾಲನ್ನು ರಿಲಯನ್ಸ್ ಗ್ರೂಪ್ ಹೊಂದಲಿದೆ.
ಅಂದಹಾಗೆ, ಫ್ಯೂಚರ್ ಎಂಟರ್ಪ್ರೈಸಸ್, ಉಳಿದ ಅಂದರೆ ಎಫ್ಎಮ್ಸಿಜಿ ವಹಿವಾಟನ್ನು ಮುಂದುವರಿಸಿಕೊಂಡು ಹೋಗಲಿದೆ. ಎಫ್ಈಎಲ್, ರಿಲಯನ್ಸ್ ರಿಟೇಲ್ಗೆ ದೀರ್ಘಾವಧಿವರೆಗೆ ಬಟ್ಟೆ ಮತ್ತು ದಿನಸಿಗಳನ್ನು ಪೂರೈಸುವ ಒಪ್ಪಂದಕ್ಕೆ ಸಹಿ ಹಾಕಲಿದೆ.




