National Maritime day 2024: ವಾಣಿಜ್ಯ ಚಟುವಟಿಕೆಗಳಿಗೆ ವರದಾನವಾದ ಈ ಸಮುದ್ರಯಾನ

ಬಹುತೇಕ ದೇಶಗಳು ತಮ್ಮಲ್ಲಿರುವ ಸರಕು ಸಾಮಗ್ರಿಗಳನ್ನು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ರಫ್ತು ಹಾಗೂ ಆಮದು ಮಾಡಲು ಸೇರಿದಂತೆ ವಾಣಿಜ್ಯ ಚಟುವಟಿಕೆಗಳಿಗೆ ಈ ಸಮುದ್ರಯಾನವನ್ನು ಅವಲಂಬಿಸಿದೆ. ಹೀಗಾಗಿ ಒಂದು ದೇಶದ ಆರ್ಥಿಕ ಅಭಿವೃದ್ಧಿಗೆ ಸಮುದ್ರಯಾನವೇ ಮೂಲಧಾರವಾಗಿದೆ. ಪ್ರತಿ ವರ್ಷ ಎಪ್ರಿಲ್‌ 5ರಂದು ಭಾರತದಲ್ಲಿ ರಾಷ್ಟ್ರೀಯ ಕಡಲ ದಿನವನ್ನು ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನದ ಆಚರಣೆಯ ಹಿಂದಿನ ಇತಿಹಾಸ ಹಾಗೂ ಮಹತ್ವದ ಬಗೆಗಿನ ಮಾಹಿತಿಯು ಇಲ್ಲಿದೆ.

National Maritime day 2024: ವಾಣಿಜ್ಯ ಚಟುವಟಿಕೆಗಳಿಗೆ ವರದಾನವಾದ ಈ ಸಮುದ್ರಯಾನ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 04, 2024 | 5:57 PM

ಭಾರತವು ಸಮುದ್ರ ಮಾರ್ಗಗಳ ಮೂಲಕ ಅಂತರರಾಷ್ಟ್ರೀಯ ಸಂಬಂಧಗಳ ಸುದೀರ್ಘ ಇತಿಹಾಸವನ್ನು ಹೊಂದಿದೆ. ಪ್ರಾಚೀನ ಕಾಲದಿಂದಲೂ, ನಮ್ಮ ದಕ್ಷಿಣದ ರಾಜ್ಯಗಳು, ಪೂರ್ವ ಏಷ್ಯಾವು ಆಫ್ರಿಕಾದ ದೇಶಗಳೊಂದಿಗೆ ವ್ಯಾಪಾರ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಹೊಂದಿವೆ. ಇನ್ನಿತ್ತರ ಸಾರಿಗೆ ಸಂಪರ್ಕಗಳಿಗೆ ಹೋಲಿಕೆ ಮಾಡಿದರೆ ಹಡಗುಗಳ ಮುಖಾಂತರ ಸರುಕುಗಳನ್ನು ಸಾಗಿಸಲು ತಗಲುವ ವೆಚ್ಚವು ಕಡಿಮೆಯಾಗಿದೆ. ಅದಲ್ಲದೇ ಆಮದು ಹಾಗೂ ರಫ್ತುಗಳ ಮೂಲಕ ದೇಶದ ಬೆಳವಣಿಗೆಯಲ್ಲಿ ಈ ಬಂದರುಗಳ ಪಾತ್ರವು ಬಹುದೊಡ್ಡದು. ಹೀಗಾಗಿ ಭಾರತೀಯರ ಆರ್ಥಿಕತೆಯ ಮೂಲ ವರಮಾನವೇ ಈ ಬಂದರುಗಳಿಂದ ಎಂದೇಳಬಹುದು. ರಾಷ್ಟ್ರೀಯ ಕಡಲ ದಿನವು, ಕಡಲ ವ್ಯಾಪಾರ, ಕಡಲ ರಕ್ಷಣೆ ಮತ್ತು ಸಮುದ್ರ ಸಂಪನ್ಮೂಲಗಳ ಅಭಿವೃದ್ಧಿಯ ಪ್ರಾಮುಖ್ಯತೆಯನ್ನು ತಿಳಿಸುವ ಉದ್ದೇಶವನ್ನು ಹೊಂದಿದೆ.

ರಾಷ್ಟ್ರೀಯ ಕಡಲ ದಿನದ ಇತಿಹಾಸ

ಭಾರತೀಯ ಉದ್ಯಮಿಗಳ ದಿ ಸಿಂಧಿಯಾ ಸ್ಟೀಮ್‌ ನ್ಯಾವಿಗೇಶನ್‌ ಲಿ ಈ ಹಡಗು ಕಂಪೆನಿಯ ಮೊದಲ ಹಡಗು ಎಸ್‌ಎಸ್‌ ಲಾಯಲ್ಟಿ ಬಾಂಬೆಯಿಂದ (ಮುಂಬಯಿ) ಯುನೈಟೆಡ್‌ ಕಿಂಗ್‌ಡಮ್‌ (ಲಂಡನ್‌)ಗೆ ಪ್ರಯಾಣಿಸಿತು. ಈ ಭಾರತೀಯ ಹಡಗು 1919ರ ಎಪ್ರಿಲ್‌ 5ರಂದು ತನ್ನ ಮೊದಲ ಸಮುದ್ರಯಾನವನ್ನು ಪ್ರಾರಂಭಿಸಿತು. ಇದರ ನೆನಪಿಗೆ ಈ ದಿನವನ್ನು 1964ರಿಂದ ಆಚರಿಸಲಾಗುತ್ತಿದೆ. ಹೀಗಾಗಿ ಪ್ರತೀ ವರ್ಷ ಎಪ್ರಿಲ್‌ 5ರಂದು ಭಾರತದಲ್ಲಿ ರಾಷ್ಟ್ರೀಯ ಕಡಲ ದಿನವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ: ಉರಿ ಉರಿ ಸೆಕೆಯ ನಡುವೆ ಐಸ್ ಬಾತ್ ಮಾಡಿ, ಇದರ ಪ್ರಯೋಜನ ಒಂದೆರಡರಲ್ಲ

ರಾಷ್ಟ್ರೀಯ ಕಡಲ ದಿನದ ಮಹತ್ವ

ಸಮುದ್ರಯಾನವು ಪ್ರಪಂಚದಾದ್ಯಂತ ಸರಕುಗಳನ್ನು ಸಾಗಿಸುವ ಅತ್ಯಂತ ಪರಿಣಾಮಕಾರಿ ಹಾಗೂ ಸುರಕ್ಷಿತ ಮಾರ್ಗವಾಗಿದೆ. ಈ ರಾಷ್ಟ್ರೀಯ ಕಡಲ ದಿನವನ್ನು ಅಂತರಾಷ್ಟ್ರೀಯ ಆರ್ಥಿಕತೆಯನ್ನು ಬೆಂಬಲಿಸಲು ಆಚರಿಸಲಾಗುತ್ತದೆ. ಈ ದಿನದಂದು ಭಾರತೀಯ ಕಡಲ ಕ್ಷೇತ್ರಕ್ಕೆ ಅತ್ಯುತ್ತಮ ಕೊಡುಗೆ ನೀಡಿದವರನ್ನು ಗೌರವಿಸಿ ಪ್ರಶಸ್ತಿ ನೀಡಲಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ