ಮುತ್ತೆತ್ತರಾಯನ ನೋಡಲು ಜನಾನೂ ಬರ್ತಿಲ್ಲ, ಬಸ್ಸೂ ಇಲ್ಲ: ಕೋತಿಗಳಿಗೆ ಉಪವಾಸವೇ ಗತಿ!
ಮಂಡ್ಯ: ಜಿಲ್ಲೆಯ ಹಲವು ಪ್ರವಾಸಿ ತಾಣಗಳನ್ನ ಹೊಂದಿದ್ದರೂ ಮಳವಳ್ಳಿ ತಾಲೂಕಿನ ಮುತ್ತತ್ತಿ ಅನ್ನೋ ಪ್ರವಾಸಿ ಸ್ಥಳ ಬಹಳಷ್ಟು ಪ್ರಾಮುಖ್ಯತೆಯನ್ನ ಪಡೆದುಕೊಂಡಿದೆ. ಕಾವೇರಿ ನದಿಯ ನೀರು ಹರಿಯುತ್ತಿದ್ದು, ಸುತ್ತಲೂ ಹಸಿರಿನಿಂದ ಕಂಗೊಳಿಸುವ ಈ ಪ್ರದೇಶದಲ್ಲಿ ಮುತ್ತೆತ್ತ ರಾಯ ಅನ್ನೋ ಪುರಾತನ ಕಾಲದ ದೇವಾಲಯವೂ ಇದೆ. ಈ ಸುಂದರ ಪ್ರವಾಸಿ ತಾಣಗಳನ್ನ ನೋಡುವುದಕ್ಕಾಗಿಯೇ ಅಪಾರ ಸಂಖ್ಯೆಯಲ್ಲಿ ಜನ ಭೇಟಿ ನೀಡುತ್ತಾರೆ. ಇಲ್ಲಿನ ಪರಿಸರ ಅಹ್ಲಾದಕರ ಇರುವಂತೆಯೇ ಅಪಾರ ಪ್ರಮಾಣದಲ್ಲಿ ಕಾಡು ಪ್ರಾಣಿಗಳೂ ಇವೆ. ಮಂಗಗಳೂ ಹೆಚ್ಚಿನ ಸಂಖ್ಯೆಯಲ್ಲಿವೆ. ರಸ್ತೆಯ ಪಕ್ಕದಲ್ಲಿ […]
ಮಂಡ್ಯ: ಜಿಲ್ಲೆಯ ಹಲವು ಪ್ರವಾಸಿ ತಾಣಗಳನ್ನ ಹೊಂದಿದ್ದರೂ ಮಳವಳ್ಳಿ ತಾಲೂಕಿನ ಮುತ್ತತ್ತಿ ಅನ್ನೋ ಪ್ರವಾಸಿ ಸ್ಥಳ ಬಹಳಷ್ಟು ಪ್ರಾಮುಖ್ಯತೆಯನ್ನ ಪಡೆದುಕೊಂಡಿದೆ. ಕಾವೇರಿ ನದಿಯ ನೀರು ಹರಿಯುತ್ತಿದ್ದು, ಸುತ್ತಲೂ ಹಸಿರಿನಿಂದ ಕಂಗೊಳಿಸುವ ಈ ಪ್ರದೇಶದಲ್ಲಿ ಮುತ್ತೆತ್ತ ರಾಯ ಅನ್ನೋ ಪುರಾತನ ಕಾಲದ ದೇವಾಲಯವೂ ಇದೆ. ಈ ಸುಂದರ ಪ್ರವಾಸಿ ತಾಣಗಳನ್ನ ನೋಡುವುದಕ್ಕಾಗಿಯೇ ಅಪಾರ ಸಂಖ್ಯೆಯಲ್ಲಿ ಜನ ಭೇಟಿ ನೀಡುತ್ತಾರೆ.
ಇಲ್ಲಿನ ಪರಿಸರ ಅಹ್ಲಾದಕರ ಇರುವಂತೆಯೇ ಅಪಾರ ಪ್ರಮಾಣದಲ್ಲಿ ಕಾಡು ಪ್ರಾಣಿಗಳೂ ಇವೆ. ಮಂಗಗಳೂ ಹೆಚ್ಚಿನ ಸಂಖ್ಯೆಯಲ್ಲಿವೆ. ರಸ್ತೆಯ ಪಕ್ಕದಲ್ಲಿ ಎಲ್ಲೆಂದರಲ್ಲಿ ಗುಂಪು ಗುಂಪಾಗಿ ನೂರಾರು ಸಂಖ್ಯೆಯಲ್ಲಿರುವ ಈ ವಾನರಗಳಿಗೆ ಮುತ್ತೆತ್ತರಾಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ನೀಡುವ ಆಹಾರವೇ ಹೊಟ್ಟೆ ತುಂಬಿಸುತ್ತವೆ.
ಆದರೆ, ಕಳೆದ ಎರಡು ತಿಂಗಳುಗಳಿಂದ ಲಾಕ್ ಡೌನ್ ಘೋಷಣೆಯಾಗಿದ್ದು ಪ್ರವಾಸಿ ತಾಣಗಳಿಗೆ ಸಾರ್ವಜನಿಕ ಪ್ರವೇಶವನ್ನ ನಿಷೇಧಿಸಿರುವುದರಿಂದ ಮುತ್ತತ್ತಿಯ ನೂರಾರು ಮಂಗಗಳಿಗೆ ಆಹಾರವೇ ಇಲ್ಲದಂತಾಗಿರುವುದನ್ನ ಮನಗಂಡ ಕೆಲವು ಯುವಕರು ಮಂಗಗಳಿಗೆ ಹಣ್ಣನ್ನು ಹಂಚುವ ಮೂಲಕ ಅವುಗಳ ಹಸಿವನ್ನ ನೀಗಿಸಿದ್ದಾರೆ.
ಹಲಗೂರಿನ ಹಣ್ಣಿನ ವ್ಯಾಪಾರಿಗಳು ಕಳಿಸುವ ಡ್ಯಾಮೇಜ್ ಹಣ್ಣುಗಳೂ ಬರ್ತಿಲ್ಲ ಹಲಗೂರಿನಲ್ಲಿ ಹಣ್ಣಿನ ವ್ಯಾಪಾರ ಮಾಡುವ ವ್ಯಾಪಾರಸ್ಥರು ಡ್ಯಾಮೇಜ್ ಹಣ್ಣುಗಳು ತೆಗೆದುಕೊಂಡು ಮುತ್ತತ್ತಿಗೆ ಹೋಗುವ ಸರ್ಕಾರಿ ಬಸ್ ಮೂಲಕ ಮಂಗಗಳಿಗೆ ಆಹಾರವನ್ನ ಕಳುಹಿಸುತ್ತಿದ್ದರು. ಬಸ್ ಗಳು ಮುತ್ತತ್ತಿಯ ಅರಣ್ಯ ಪ್ರದೇಶಕ್ಕೆ ಬರುತ್ತಿದ್ದಂತೆ ರಸ್ತೆಯ ಎರಡು ಕಡೆಗಳಲ್ಲಿ ಗುಂಪು ಗುಂಪಾಗಿ ಕಾಯುತ್ತಿದ್ದ ಮಂಗಗಳು ಚಾಲಕ ಅಥವಾ ನಿರ್ವಾಹಕರು ಹಾಕುವ ಹಣ್ಣುಗಳನ್ನ ತಿಂದು ಹಸಿವು ನೀಗಿಸಿಕೊಳ್ಳುತ್ತಿದ್ದವು.
ಇನ್ನ ಮುತ್ತತ್ತಿಯಲ್ಲಿರುವ ಮುತ್ತೆತ್ತರಾಯ ಸ್ವಾಮಿ ಅನ್ನೋ ದೇವರನ್ನ ಆರಾಧಿಸುವ ಭಕ್ತರೂ ಸಹ ಅಪಾರ ಪ್ರಮಾಣದಲ್ಲಿದ್ದು, ಅವರೂ ಸಹ ದೇವರಿಗೆ ಪೂಜೆ ಸಲ್ಲಿಸಿ ವಾಪಸ್ ಹೋಗುವ ವೇಳೆಯೋ ಅಥವಾ ದೇವಾಲಯಕ್ಕೆ ಪೂಜೆ ಸಲ್ಲಿಸುವುದಕ್ಕೆ ಮುಂಚಿತವಾಗಿಯೋ.. ಮಂಗಗಳಿಗೆ ಹಾಕುವುದಕ್ಕಾಗಿಯೇ ಹಣ್ಣುಗಳನ್ನ ತಂದು ಹಾಕುತ್ತಿದ್ದರು.
ಆದರೆ, ಈಗ ಕಳೆದೆರಡು ತಿಂಗಳುಗಳಿಂದ ಮಂಗಗಳಿಗೆ ಆಹಾರದ ಸಮಸ್ಯೆ ಎದುರಾಗಿದೆ. ಮುತ್ತತ್ತಿಯಲ್ಲಿರುವ ನೂರಾರು ಮಂಗಗಳಿಗೆ ಆಹಾರದ ಸಮಸ್ಯೆ ಉಂಟಾಗಿರುವ ವಿಚಾರ ತಿಳಿದು ಹಲಗೂರಿನ ಕೆಲವರು ಇತ್ತೀಚೆಗೆ ತೆರಳಿ ಒಂದಷ್ಟು ಹಣ್ಣುಗಳನ್ನ ನೀಡಿ ಮಂಗಗಳ ಹಸಿವನ್ನ ನೀಗಿಸುವ ಪ್ರಯತ್ನ ಮಾಡಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.