‘ಅದು ಭಾರತೀಯ ಜನತಾ ಪಕ್ಷ ಅಲ್ಲ, ಬ್ರಿಟಿಷ್ ಜನತಾ ಪಕ್ಷ’: ಮಧು ಬಂಗಾರಪ್ಪ
ತೆರಿಗೆ ಹಣದಲ್ಲಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ರಾಜ್ಯ ಕಾಂಗ್ರೆಸ್ ಸರ್ಕಾರ ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ಮಾಡಿತು. ಬಳಿಕ ದೆಹಲಿಯಿಂದ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕರ್ನಾಟಕ ಸಚಿವರು ಕೇಂದ್ರ ವಿರುದ್ಧ ಕಿಡಿಕಾರಿದ್ದಾರೆ.

ಬೆಂಗಳೂರು, (ಫೆಬ್ರವರಿ 08): “ಅದು ಭಾರತೀಯ ಜನತಾ ಪಕ್ಷ (bharatiya janata party) ಅಲ್ಲ, ಬ್ರಿಟಿಷ್ ಜನತಾ ಪಕ್ಷ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ದೆಹಲಿಯಲ್ಲಿ ಕೂತು ಅಂಕಿ ಅಂಶಗಳನ್ನು ಹೇಳಿದರೆ ಆಗುವುದಿಲ್ಲ. 4 ಲಕ್ಷ ಚಿಲ್ಲರೆ ಎಲ್ಲಿ, ಇವರು ಕೊಟ್ಟಿರುವ 1 ಲಕ್ಷ ಚಿಲ್ಲರೆ ಎಲ್ಲಿ”? ಎಂದು ಸಚಿವ ಮಧು ಬಂಗಾರಪ್ಪ (Madhu Bangarappa) ವಾಗ್ದಾಳಿ ನಡೆಸಿದರು.
ತೆರಿಗೆ ಹಣದಲ್ಲಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ರಾಜ್ಯ ಕಾಂಗ್ರೆಸ್ ಸರ್ಕಾರ ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ಮಾಡಿತು. ಬಳಿಕ ದೆಹಲಿಯಿಂದ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಚಿವ ಮಧು ಬಂಗಾರಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, “ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ದೆಹಲಿಯಲ್ಲಿ ಕೂತು ಅಂಕಿ ಅಂಶಗಳನ್ನು ಹೇಳಿದರೆ ಆಗುವುದಿಲ್ಲ. 4 ಲಕ್ಷ ಚಿಲ್ಲರೆ ಎಲ್ಲಿ, ಇವರು ಕೊಟ್ಟಿರುವ 1 ಲಕ್ಷ ಚಿಲ್ಲರೆ ಎಲ್ಲಿ” ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ: ಕರ್ನಾಟಕಕ್ಕೆ ಎಷ್ಟು ತೆರಿಗೆ ಹಣ ನೀಡಲಾಗಿದೆ? ಅಂಕಿ-ಅಂಶ ಬಿಚ್ಚಿಟ್ಟ ನಿರ್ಮಲಾ ಸೀತಾರಾಮನ್
ಇನ್ನು ಇದೇ ವೇಳೆ ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, “ದೇಶವನ್ನ ಇಬ್ಬಾಗ ಮಾಡುವಂತಹ ಪ್ರಶ್ನೆಯಿಲ್ಲ. ಕೇಂದ್ರದ ಬಜೆಟ್ ನಲ್ಲಿ ದಕ್ಷಿಣ ಭಾರತಕ್ಕೆ ಆಗಿರುವ ಅನ್ಯಾಯ ಎದ್ದು ಕಾಣುತ್ತಿದೆ. ಅನ್ಯಾಯದ ಬಗ್ಗೆ ನಾವು ಹೋರಾಟ ಮಾಡದಿದ್ರೆ ಅದು ಜನರಿಗೆ ಮಾಡಿದ ಅನ್ಯಾಯವಾಗುತ್ತೆ. 4.5 ಲಕ್ಷ ಕೋಟಿ ರೂ. ನಾವು ಕಳಿಸಿದ್ರೆ ನಮಗೆ ಬರುತ್ತಿರುವುದು 50 ಸಾವಿರ ಕೋಟಿ ರೂಪಾಯಿ. ಇದು ಸಾಕಾ” ಎಂದು ಪ್ರಶ್ನಿಸಿದರು.
“ಅದೇ ಯುಪಿಯವರು 100 ರೂ. ಕೊಟ್ಟರೆ ಅವರಿಗೆ ಕೇಂದ್ರ ಸರ್ಕಾರ ವಾಪಸ್ 313 ರೂಪಾಯಿ ನೀಡಿದೆ. ಬಿಹಾರಕ್ಕೆ 450 ರೂ ಬರುತ್ತಿದೆ. ಆಯ್ತು ಬಡ ರಾಜ್ಯಗಳನ್ನ ಅಭಿವೃದ್ಧಿ ಮಾಡಬೇಕು ಅದು ಜವಾಬ್ದಾರಿ. ಕರ್ನಾಟಕ ಮುಂದುವರೆದ ರಾಜ್ಯವಾಗಿ ನಮ್ಮ ಪಾಲಿಗೆ ನಾವು ಹೋರಾಟ ಮಾಡುವುದು ಯಾವಾಗ. 226 ತಾಲೂಕು ಬರ ಘೋಷಣೆಯಾಗಿದೆ. ಕೇಂದ್ರದಿಂದ ಪರಿಹಾರ ಕೇಳುತ್ತಿದ್ದೇವೆ. ಕೇಂದ್ರ ಸರ್ಕಾರ ಜವಬ್ದಾರಿ ಏನಾಯಿತು. ಜಿಎಸ್ಟಿ ಭಾಗ ಕೊಟ್ಟಿಲ್ಲ ಹೋಗಲಿ ಬರದಲ್ಲಾದ್ರು ನಮ್ಮ ಕಡೆ ಕಣ್ ಬಿಟ್ಟು ನೋಡುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಇವೆಲ್ಲದರ ಬಗ್ಗೆ ನಾವು ಹೋರಾಟ ಮಾಡದಿದ್ರೆ ನಮ್ಮ ಕರ್ತವ್ಯಕ್ಕೆ ನಾವು ಲೋಪ ಮಾಡಿದಂತಾಗುತ್ತದೆ. ಪ್ರಾದೇಶಿಕ ತಾರತಮ್ಯ ಯಾರಾದ್ರು ಮಾಡಿದ್ರೆ ಅದು ಕೇಂದ್ರ ಸರ್ಕಾರವಾಗಿದೆ. ಮತಗಳು ಅವರಿಗೆ ಎಲ್ಲಿ ಸಿಗ್ತಿದೆ ಅಲ್ಲಿ ಮಾತ್ರ ಅವರು ಗಮನಕೊಡ್ತಿದ್ದಾರೆ. ದಕ್ಷಿಣ ಭಾರತದ ಬಗ್ಗೆ ಗಮನವಿಲ್ಲ. ಇದು ಬಜೆಟ್ ನಲ್ಲಿ ಆಗಿದೆ. ಮುಂದಿನ ದಿನಗಳಲ್ಲಿ ಡಿಲಿಮಿಟೇಶನ್ ಆಗುತ್ತೆ ಬರೆದಿಟ್ಟುಕೊಳ್ಳಿ. ಆಗ ಎಲ್ಲಾ ಸೀಟ್ಗಳನ್ನ ಉತ್ತರ ಭಾರತದಲ್ಲಿ ಹಾಕಿ ದಕ್ಷಿಣ ಭಾರತದಲ್ಲಿ 40 50 ಸೀಟ್ ಜಾಸ್ತಿ ಮಾಡ್ತಾರೆ. ಯುಪಿ ಒಂದರಲ್ಲೆಲ್ಲೇ 60 ರಿಂದ 70 ಸೀಟ್ ಜಾಸ್ತಿ ಮಾಡಿ ಮುಂದೆ ಬಜೆಟ್ ರೀತಿ ಜನಪ್ರತಿ ನಿಧಿಗಳಲ್ಲು ತಾರತಮ್ಯ ಆಗುತ್ತೆ. ಕರ್ನಾಟಕಕ್ಕೆ ತೆರಿಗೆ ಹಣ ಕೊಡದಿರಲು ಕಾರಣ ಬಿಜೆಪಿ ಸರ್ಕಾರ ಇಲ್ಲ ಅಂತಾನ. ಅಥವಾ ಪ್ರಗತಿ ಪರವಾದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಇದೆ ಅಂತಾನ” ಎಂದು ವಾಗ್ದಾಳಿ ನಡೆಸಿದರು.
