ಸುಶಾಂತ್ ಸಿಂಗ್ ರಜಪೂತ್ ಜನ್ಮದಿನ: ಶುಭಾಶಯ ಕೋರಿದ ಗಣ್ಯರು

ಸುಶಾಂತ್ ಸ್ನೇಹಿತರು, ಅಭಿಮಾನಿಗಳು ಮತ್ತು ಕುಟುಂಬದವರು ಈ ಕುರಿತು ಪೊಸ್ಟ್ ಮಾಡಿದ್ದು, ಸುಶಾಂತ್ ಸಿಂಗ್ ದಿನ , ಎಸ್​ಎಸ್​ಆರ್​​ ದಿನ ಎಂದು ಬರೆದುಕೊಂಡು ಭಾವುಕರಾಗಿದ್ದಾರೆ.

  • TV9 Web Team
  • Published On - 15:00 PM, 21 Jan 2021
ಸುಶಾಂತ್ ಸಿಂಗ್ ರಜಪೂತ್ ಜನ್ಮದಿನ: ಶುಭಾಶಯ ಕೋರಿದ ಗಣ್ಯರು
ಸುಶಾಂತ್ ಸಿಂಗ್ ರಜಪೂತ್

ಮುಂಬೈ: ಸುಶಾಂತ್ ಸಿಂಗ್ ರಜಪೂತ್ ಬಾಲಿವುಡ್​ನ ಪ್ರತಿಭಾವಂತ ನಟರಲ್ಲಿ ಒಬ್ಬರು. ಸದ್ಯ ಸುಶಾಂತ್ ಸಿಂಗ್ 35ನೇ ಹುಟ್ಟುಹಬ್ಬದ ಈ ದಿನದಂದು, ದೇಶದೆಲ್ಲೆಡೆ ಸುಶಾಂತ್ ಸಿಂಗ್​ ಅಭಿಮಾನಿಗಳು ಅವರನ್ನು ನೆನೆದು ಶುಭಾಶಯ ಕೋರಿದ್ದಾರೆ.

ಹಿಂದಿ ಧಾರವಾಹಿಯ ಮೂಲಕ ಪರಿಚಿತರಾದ ಸುಶಾಂತ್ ಸಿಂಗ್ ನಂತರ ಬಾಲಿವುಡ್​ಗೆ ಪಾದಾರ್ಪಣೆ ಮಾಡಿದ್ದರು. ಬಳಿಕ ಎಂ ಎಸ್ ಧೋನಿ ಬಯೋಪಿಕ್ ಸಿನಿಮಾದ ಮೂಲಕ ದೇಶವ್ಯಾಪಿಯಾಗಿ ಅಭಿಮಾನಿಗಳನ್ನು ಸಂಪಾದಿಸಿದ ಯುತ್ ಐಕಾನ್ ಎಂದರೆ ತಪ್ಪಾಗಲಾರದು.ಆದರೆ ದುರಂತ ಎಂದರೆ ಈ ನಟ ಕಳೆದ ವರ್ಷ ಜೂನ್ 14 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು.  ಇಂದಿಗೂ ಕೂಡ ಅವರದ್ದು ಸಾವೋ ಅಥವಾ ಆತ್ಮಹತ್ಯೆಯೋ ಎನ್ನುವುದು ನಿಗೂಢವಾಗಿಯೇ ಇದೆ. ಆದರೆ ಭಾರತೀಯ ಜನತೆ ಒಬ್ಬ ಉತ್ತಮ ನಟನನ್ನು ಕಳೆದುಕೊಂಡಿದ್ದು ಮಾತ್ರ ನಿಜ.

ಸುಶಾಂತ್ ಸಿಂಗ್ ಹುಟ್ಟುಹಬ್ಬದ ಈ ದಿನದಂದು ಅಭಿಮಾನಿಗಳು, ಸಿನಿಮಾ ನಟ-ನಟಿಯರು ಹಾಗೂ ಗಣ್ಯರು ನಟನನ್ನು ನೆನೆದು ಶುಭಕೋರಿದ್ದು, ಸಾವಿನ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಮುಖ್ಯವಾಗಿ ಕಂಗನಾ ರಣವತ್  ತಮ್ಮ ಟ್ವೀಟರ್​ನಲ್ಲಿ ಸಹಾಯ ಬೇಕಾದಾಗ ನಿನ್ನ ಜೊತೆ ಇರುವುದಕ್ಕೆ ಆಗಲಿಲ್ಲವೆಂದು ವಿಷಾದಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಇಂದು ಬಾಲಿವುಡ್ ನಟ ಸುಶಾಂತ್ ಸಿಂಗ್ ಅವರ ಹುಟ್ಟುಹಬ್ಬದ ಪ್ರಯುಕ್ತ ಕಂಗನಾ ರಣವತ್ ಪ್ರತಿಕ್ರಿಯೆ ನೀಡಿದ್ದು, ಇಡಿ ಮುಂಬೈನ ಸಿನಿಮಾರಂಗ ಸುಶಾಂತ್​ನನ್ನು ಬ್ಯಾನ್ ಮಾಡುವುದಾಗಿ ಬೆದರಿಕೆ ಹಾಕಿತ್ತು ಮತ್ತು ಈ ಮೂಲಕ ಪರೋಕ್ಷವಾಗಿ ಅವರ ಸಾವಿಗೆ ಕಾರಣವಾಗಿದ್ದಾರೆ ಎಂದು ಹೇಳುವ ಮೂಲಕ ಚರ್ಚೆಗೆ ಕಾರಣವಾಗಿದ್ದರು.

ಕಂಗನಾ ಟ್ವೀಟ್​ನಲ್ಲಿ ಬಾಲಿವುಡ್ ಸಿನಿರಂಗದ ವಿರುದ್ಧ ಮಾತನಾಡಿದ್ದು, ಪ್ರೀತಿಯ ಸುಶಾಂತ್…. ಸಿನಿಮಾ ಮಾಫಿಯಾ ನಿಮಗೆ ನಿಷೇಧ ಹೇರಿತು, ನಿಮಗೆ ಹಿಂಸೆ ಮತ್ತು ಕಿರುಕುಳ ನೀಡಿತು. ಈ ಕುರಿತು ನೀವು ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ಬಾರಿ ಸಹಾಯವನ್ನು ಕೇಳಿದ್ದೀರಿ ಆದರೆ ನಾನು ನಿಮ್ಮ ನೇರವಿಗೆ ಬರಲು ಸಾಧ್ಯವಾಗಲಿಲ್ಲ ಎಂದು ವಿಷಾದಿಸುತ್ತೇನೆ. ನೀವು ಬಹಳ ಶಕ್ತಿಶಾಲಿ ಎಂದು ನಾನು ಅಂದುಕೊಂಡಿದ್ದೆ  ಮತ್ತು ಈ ಮಾಫಿಯಾದ ಎಲ್ಲಾ ಕಿರುಕುಳವನ್ನು ಮೆಟ್ಟಿ ನೀವು ನಿಲ್ಲುತ್ತೀರಿ ಎಂದು ಭಾವಿಸಿದ್ದೆ. ಆದರೆ ಅದು ಸುಳ್ಳಾಯಿತು. ಹುಟ್ಟುಹಬ್ಬದ ಶುಭಾಶಯಗಳು ಪ್ರೀತಿಯ ಸುಶಾಂತ್ ಸಿಂಗ್ ಎಂದು ಬರೆದುಕೊಂಡಿದ್ದಾರೆ.

ಇನ್ನು ಕಂಗನಾ ಸ್ವಜನಪಕ್ಷಪಾತದ ಮೂಲಕ ಚಲನಚಿತ್ರೋದ್ಯಮ ಸುಶಾಂತ್​ನನ್ನು ಹೇಗೆ ಕುಗ್ಗಿಸುವ ಪ್ರಯತ್ನ ಮಾಡಿತು ಎನ್ನುವ ಬಗ್ಗೆ ಮಾತನಾಡಿದ್ದು, ಸುಶಾಂತ್ ಸಿಂಗ್ ಸಾವಿಗೂ ಮುನ್ನ ಸಾಮಾಜಿಕ ಮಾಧ್ಯಮಗಳಲ್ಲಿ, ಚಿತ್ರರಂಗ ನನ್ನನ್ನು ಹೊರದೂ ಪ್ರಯತ್ನಿಸುತ್ತಿದೆ. ಈ ಕಾರಣಕ್ಕೆ ಅಭಿಮಾನಿಗಳು ನನ್ನ ಸಿನಿಮಾಗೆ ಯಶಸ್ಸು ತಂದುಕೊಡಬೇಕು ಎಂದು ಬಾಲಿವುಡ್ ಮಾಫಿಯಾದ ಬಗ್ಗೆ ಸುಶಾಂತ್ ಹಂಚಿಕೊಂಡಿದ್ದನ್ನು ನಾನು ಎಂದಿಗೂ ಮರೆಯುವುದಿಲ್ಲ. ಸ್ವಜನ ಪಕ್ಷಪಾತದ ಬಗ್ಗೆ ಸುಶಾಂತ್ ಕೂಡ ಈ ಹಿಂದೆ ತಮ್ಮ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದು ತಮ್ಮ ಉತ್ತಮ ಸಿನಿಮಾವನ್ನು ವಿಫಲವನ್ನಾಗಿಸಿದ ಈ ಚಿತ್ರಂಗದ ವಿರುದ್ಧ ನೋವನ್ನು ತೋರ್ಪಡಿಸಿದ್ದರು ಎಂದು ಕಂಗನಾ ಹೇಳಿದ್ದಾರೆ.

ಸುಶಾಂತ್ ಸಿಂಗ್ ಸಾವಿಗೂ ಮುನ್ನ  ಮಾನಸಿಕವಾಗಿ ನೊಂದಿದ್ದರು, ಖಿನ್ನತೆಯಿಂದ ಬಳಲುತ್ತಿದ್ದರು ಎಂಬ ವಿಷಯಗಳು ಹೊರಬಂದಾಗ ಈ ಬಗ್ಗೆ ಕಂಗನಾ ವಿರೋಧ ವ್ಯಕ್ತಪಡಿಸಿದ್ದರು.

ಕಂಗನಾ ಇದೇ ಮೊದಲ ಬಾರಿ ಈ ರೀತಿ ಹೇಳಿಕೆಗಳನ್ನು ನೀಡುತ್ತಿಲ್ಲ. ಬದಲಿಗೆ ಸುಶಾಂತ್ ಸಾವಿಗೀಡಾದ ದಿನದಿಂದಲೂ ನಟನ ಸಾವಿನ ನಿಜವಾದ ರಹಸ್ಯವನ್ನು ಮತ್ತು ಡ್ರಗ್ಸ್ ದಂಧೆಯ ಬಗ್ಗೆ ತನಿಖೆ ನಡೆಸುವಂತೆ ತನ್ನದೇ ಅದ ಶೈಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಇನ್ನೂ ಸುಶಾಂತ್ ಸ್ನೇಹಿತರು, ಅಭಿಮಾನಿಗಳು ಮತ್ತು ಕುಟುಂಬದವರು ಈ ಕುರಿತು ಪೊಸ್ಟ್ ಮಾಡಿದ್ದು, ಸುಶಾಂತ್ ಸಿಂಗ್ ದಿನ , ಎಸ್​ಎಸ್​ಆರ್​​ ದಿನ ಎಂದು ಬರೆದುಕೊಂಡು ಭಾವುಕರಾಗಿದ್ದಾರೆ. ಈ ಕುರಿತು ಸುಶಾಂತ್ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ ಕೂಡ ಟ್ವೀಟ್ ಮಾಡಿದ್ದು, ಸುಶಾಂತ್ ಸಿಂಗ್ ನೃತ್ಯ ಮಾಡಿದ ವಿಡಿಯೋ ಹಂಚಿಕೊಂಡು ಇದು ತುಂಬಾ ಕಷ್ಟದ ಸಂದರ್ಭ ಎಂದು ಪೋಸ್ಟ್ ಮಾಡಿದ್ದಾರೆ.

ಇನ್ನೂ ಸುಶಾಂತ್ ಸಿಂಗ್ ಸಹೋದರಿ ಶ್ವೇತಾ ಸಿಂಗ್ ಕೂಡ ಸಹೋದರನನ್ನು ನೆನೆದು ಭಾವುಕರಾಗಿದ್ದು, ಸಹೋದರನ ಜೊತೆ ಇರುವ ಫೋಟೊಗಳನ್ನು ಪೋಸ್ಟ್ ಮಾಡಿ ಲವ್ ಯೂ….. ನೀನು ಯಾವಾಗಲೂ ನನ್ನ ಜೊತೆ ಇರುತ್ತಿಯಾ ಎಂದು ಬರೆದುಕೊಂಡಿದ್ದಾರೆ.

ಥಳಕು ಬಳುಕಿನ ಲೋಕದಲ್ಲಿ ‘ನೆಟ್​’ವರ್ಥ್​ ತುಳುಕುತ್ತಿತ್ತು! ಆದ್ರೂ ಇರುವುದೆಲ್ಲವ ಬಿಟ್ಟು..