ನಿಮ್ಮ ದಿನವನ್ನು ಸಂತೋಷದಾಯಕವಾಗಿ ಆರಂಭಿಸಲು ಜಪಾನೀಯರ ಈ ತಂತ್ರವನ್ನು ಅಳವಡಿಸಿಕೊಳ್ಳಿ
ಇಂದಿನ ಈ ಒತ್ತಡದ ಜೀವನದಲ್ಲಿ ಜನರು ಖುಷಿ ಖುಷಿಯಾಗಿರುವುದೇ ಅಪರೂಪವಾಗಿಬಿಟ್ಟಿದೆ. ಅನೇಕರು ಯಾಕಾದ್ರೂ ಬೆಳಗಾಗುತ್ತೋ, ಯಾರು ಈ ಆಫೀಸ್ ಕೆಲಸಕ್ಕೆ ಹೋಗ್ತಾರೆ ಎಂದು ಗೊಣಗುತ್ತಿರುತ್ತಾರೆ. ನೀವು ಕೂಡಾ ಹೀಗೆನಾ? ಹಾಗಿದ್ರೆ ಈ ಎಲ್ಲಾ ಟೆನ್ಷನ್‌ಗಳನ್ನು ಪಕ್ಕಕ್ಕಿಟ್ಟು, ಸಂತೋಷದಾಯಕವಾಗಿ ದಿನವನ್ನು ಆರಂಭಿಸಲು, ದಿನವಿಡೀ ಲವಲವಿಕೆಯಿಂದಿರಲು ಜಪಾನೀಯರ ಈ ತಂತ್ರಗಳನ್ನು ಅಳವಡಿಸಿಕೊಳ್ಳಿ.

ಪ್ರತಿಯೊಬ್ಬರೂ ಕೂಡ ಜೀವನದಲ್ಲಿ ಖುಷಿ ಖುಷಿಯಾಗಿರಬೇಕು (happiness) ಎಂದು ಬಯಸುತ್ತಾರೆ. ಆದರೆ ಇಂದಿನ ಈ ಒತ್ತಡದ ಜೀವನಶೈಲಿಯ ಕಾರಣ ಅನೇಕರಿಗೆ ಜೀವನ ಖುಷಿಯೇ ಸಿಗುತ್ತಿಲ್ಲ. ಬೆಳಗ್ಗೆ ಎದ್ದ ತಕ್ಷಣ ಒತ್ತಡ, ನಕಾರಾತ್ಮಕತೆಯಿಂದ ದಿನವನ್ನು ಆರಂಭಿಸುತ್ತಾರೆ. ಇದು ಸಂಪೂರ್ಣ ದಿನವನ್ನೇ ಹಾಳು ಮಾಡುತ್ತದೆ. ಹೀಗಿರುವಾಗ ಜಪಾನೀಯರ ಈ ತಂತ್ರಗಳನ್ನು ಅಳವಡಿಸಿಕೊಳ್ಳಿ. ಇದು ನಿಮಗೆ ದಿನವನ್ನು ಸಕಾರಾತ್ಮಕತೆಯಿಂದ ಆರಂಭಿಸಲು, ದಿನವಿಡೀ ಸಂತೋಷದಾಯಕವಾಗಿರಲು ಸಹಾಯ ಮಾಡುತ್ತದೆ.
ಸಂತೋಷದಿಂದ ದಿನವನ್ನು ಆರಂಭಿಸಲು ಸಹಕಾರಿ ಈ ಜಪಾನೀ ತಂತ್ರ:
ಮನಸ್ಸಿನಿಂದ ನಡೆಯುವುದು (ಶಿನ್ರಿನ್-ಯೋಕು): ನೀವು ಬೆಳಗ್ಗೆ ಎದ್ದ ತಕ್ಷಣ ಉದ್ಯಾನವನ ಅಥವಾ ಕಾಡಿನ ಸುತ್ತಲೂ ಆರಾಮವಾಗಿ ನಡೆಯಿರಿ, ನಿಮ್ಮ ಸುತ್ತಲಿನ ದೃಶ್ಯಗಳು, ಶಬ್ದಗಳು ಮತ್ತು ಪ್ರಕೃತಿಯ ಸುವಾಸನೆಯನ್ನು ಆಸ್ವಾದಿಸಿ. ಈ ಅಭ್ಯಾಸವು ಪ್ರಕೃತಿಯಲ್ಲಿ ಮುಳುಗುವುದು ಮತ್ತು ನಿಮ್ಮ ಇಂದ್ರಿಯಗಳೊಂದಿಗೆ ನೀವು ಸಂಪರ್ಕ ಸಾಧಿಸುವುದನ್ನು ಒಳಗೊಂಡಿರುತ್ತದೆ. ಇದು ನಿಮ್ಮ ಒತ್ತಡವನ್ನು ನಿವಾರಿಸಲು, ವಿಶ್ರಾಂತಿಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಮತ್ತು ಇದು ಸಂತೋಷವಾಗಿರಲು ಅತ್ಯುತ್ತಮ ಜಪಾನೀಸ್ ಸಲಹೆಗಳಲ್ಲಿ ಒಂದಾಗಿದೆ.
ಚಹಾದೊಂದಿಗೆ ದಿನದ ಆರಂಭ (ಸಾಡೋ): ಇದು ಸಾವಧಾನತೆ, ಗೌರವ ಮತ್ತು ಶಾಂತಿಯನ್ನು ಉತ್ತೇಜಿಸುವ ಒಂದು ಅಭ್ಯಾಸವಾಗಿದೆ. ಒಂದು ಕಪ್ ಚಹಾ ಕೂಡ ನಿಮ್ಮ ದಿನವನ್ನು ಸಕಾರಾತ್ಮಕ ರೀತಿಯಲ್ಲಿ ಬದಲಾಯಿಸಬಹುದು. ಅದಕ್ಕಾಗಿ ನಿಮ್ಮ ಚಹಾವನ್ನು ನಿಧಾನವಾಗಿ ಮತ್ತು ಉದ್ದೇಶಪೂರ್ವಕವಾಗಿ ತಯಾರಿಸಿ, ಸುವಾಸನೆ ಮತ್ತು ರುಚಿಯನ್ನು ಮೆಚ್ಚಿಕೊಳ್ಳಿ. ಚಹಾದ ಪ್ರತಿ ಸಿಪ್ ಅನ್ನು ಸವಿಯಿರಿ. ಖಂಡಿತವಾಗಿಯೂ ಇದು ನಿಮ್ಮ ಮನಸ್ಸನ್ನು ಶಾಂತಗೊಳಿಸಲು ಮತ್ತು ಪ್ರಸ್ತುತ ಕ್ಷಣದೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತದೆ.
ಕೃತಜ್ಞತಾ ಅಭ್ಯಾಸ (ಕಂಶಾ): ಕೃತಜ್ಞತೆಯನ್ನು ಬೆಳೆಸಿಕೊಳ್ಳುವುದು ಜಪಾನೀಸ್ ಸಂಸ್ಕೃತಿಯ ಮೂಲಾಧಾರವಾಗಿದೆ. ಕೃತಜ್ಞತೆಯನ್ನು ವ್ಯಕ್ತಪಡಿಸುವ ಒಂದು ಸಣ್ಣ ನಡೆ ನಿಮ್ಮ ಗಮನವನ್ನು ನಕಾರಾತ್ಮಕತೆಯಿಂದ ಸಕಾರಾತ್ಮಕತೆಗೆ ಬದಲಾಯಿಸುತ್ತದೆ. ಅಲ್ಲದೆ ಸಂತೋಷವಾಗಿರಲು ಇದು ಅತ್ಯುತ್ತಮ ಮಾರ್ಗಗಳಲ್ಲಿ ಒಂದಾಗಿದೆ . ಕೃತಜ್ಞತೆಯ ಭಾವನೆಯನ್ನು ಬೆಳೆಸಿಕೊಳ್ಳುವ ಮೂಲಕ, ನೀವು ಹೆಚ್ಚು ಸಕಾರಾತ್ಮಕ ಮನಸ್ಥಿತಿಯನ್ನು ಬೆಳೆಸಿಕೊಳ್ಳಬಹುದು.
ಇದನ್ನೂ ಓದಿ: ಮಲಗಿದ ತಕ್ಷಣ ಒಳ್ಳೆ ನಿದ್ದೆ ಬರ್ಬೇಕು ಅಂದ್ರೆ ಈ ಟಿಪ್ಸ್ ಅನುಸರಿಸಿ
ಜೀವನದ ಉದ್ದೇಶ (ಇಕಿಗೈ): ಇಕಿಗೈ ಎಂದರೆ “ಇರುವುದಕ್ಕೆ ಕಾರಣ” ಅಥವಾ “ಜೀವನದ ಉದ್ದೇಶ”. ನೀವು ಪ್ರತಿದಿನ ಬೆಳಿಗ್ಗೆ ಎಚ್ಚರಗೊಳ್ಳುವ ಉದ್ದೇಶವೇನು?ನೀವು ಏನು ಇಷ್ಟಪಡುತ್ತೀರಿ, ನೀವು ಯಾವುದರಲ್ಲಿ ನಿಪುಣರು, ಜಗತ್ತಿಗೆ ಏನು ಬೇಕು ಮತ್ತು ನೀವು ಯಾವುದಕ್ಕಾಗಿ ಬದುಕಬೇಕು ಎಂಬುದರ ಕುರಿತು ಇರುವ ವಿಷಯವಾಗಿದೆ. ಹಾಗಾಗಿ ನಿಮ್ಮ ಇಕಿಗೈಯನ್ನು ನಿಮ್ಮ ಉತ್ಸಾಹಗಳು, ಸಾಮರ್ಥ್ಯಗಳು, ಮೌಲ್ಯಗಳು ಮತ್ತು ನಿಮ್ಮ ಸುತ್ತಲಿನ ಪ್ರಪಂಚದ ಅಗತ್ಯಗಳನ್ನು ಪರಿಗಣಿಸುವ ಮೂಲಕ ಪ್ರಾರಂಭಿಸಿ, ಇದು ನಿಮ್ಮನ್ನು ದಿನವಿಡೀ ಸಂತೋಷದಾಯಕವಾಗಿರಲು, ಸಕಾರಾತ್ಮಕತೆಯಿಂದ ಇರಲು ಸಹಾಯ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




