AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Green Banana: ಬಾಳೆಕಾಯಿಯ ಪ್ರಮುಖ 5 ಆರೋಗ್ಯ ಪ್ರಯೋಜನಗಳು ಇಲ್ಲಿವೆ

ಇತ್ತೀಚಿಗೆ ಇನ್ಸ್ಟಾಗ್ರಾಮ್​​​​ ಪೋಸ್ಟ್‌ನಲ್ಲಿ, ಪೌಷ್ಟಿಕತಜ್ಞರಾದ ಲೊವ್ನೀತ್ ಬಾತ್ರಾ ಅವರು ಬಾಳೆಕಾಯಿಯ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ.

Green Banana: ಬಾಳೆಕಾಯಿಯ ಪ್ರಮುಖ 5 ಆರೋಗ್ಯ ಪ್ರಯೋಜನಗಳು ಇಲ್ಲಿವೆ
Raw Banana
ಅಕ್ಷತಾ ವರ್ಕಾಡಿ
|

Updated on: Jul 22, 2023 | 6:42 AM

Share

ಬಾಳೆಹಣ್ಣುಗಳು ಹಲವಾರು ಅಗತ್ಯ ಪೋಷಕಾಂಶಗಳಿಂದ ತುಂಬಿರುತ್ತವೆ ಎಂಬುದು ಈಗಾಗಲೇ ತಿಳಿದಿರುವ ವಿಷಯ. ಇದರ ಹೊರತಾಗಿಯೂ ನೀವು ಬಾಳೆ ಕಾಯಿಯನ್ನು ಕೂಡ ನಿಮ್ಮ ಆಹಾರ ಕ್ರಮದಲ್ಲಿ ಸೇರಿಸುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಬಾಳೆಕಾಯಿ ಪೊಟ್ಯಾಸಿಯಮ್, ಫೈಬರ್ ಮತ್ತು ಹಲವಾರು ಇತರ ಅಗತ್ಯ ಪೋಷಕಾಂಶಗಳ ಉತ್ತಮ ಮೂಲವಾಗಿದೆ. ಆದಾಗ್ಯೂ, ಅನೇಕರು ಬಾಳೆಕಾಯಿಯನ್ನು ಹೆಚ್ಚಾಗಿ ಸೇವಿಸುವುದಿಲ್ಲ. ಬಾಳೆಕಾಯಿ ಹಲವಾರು ಅಗತ್ಯ ಪೋಷಕಾಂಶಗಳಿಂದ ತುಂಬಿರುತ್ತದೆ ಮತ್ತು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇತ್ತೀಚಿಗೆ ಇನ್ಸ್ಟಾಗ್ರಾಮ್​​​​ ಪೋಸ್ಟ್‌ನಲ್ಲಿ, ಪೌಷ್ಟಿಕತಜ್ಞರಾದ ಲೊವ್ನೀತ್ ಬಾತ್ರಾ ಅವರು ಬಾಳೆಕಾಯಿಯ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ.

ಬಾಳೆಕಾಯಿಯ ಆರೋಗ್ಯ ಪ್ರಯೋಜನಗಳು:

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ:

ಬಾಳೆಕಾಯಿ ಅತಿ ಹೆಚ್ಚು ಶೇಕಡಾವಾರು ಫೀನಾಲಿಕ್ ಸಂಯುಕ್ತಗಳನ್ನು ಹೊಂದಿದ್ದು, ಈ ಸಂಯುಕ್ತಗಳು ಜಠರ ಮತ್ತು ಸಣ್ಣ ಕರುಳಿನ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಜೊತೆಗೆ ನಿಮ್ಮ ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾವನ್ನು ಪೂರೈಸುವ ಮೂಲಕ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ.

ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ:

ಬಾಳೆಕಾಯಿ ಹೃದಯದ ಆರೋಗ್ಯವನ್ನು ಕಾಪಾಡುವ ಪೋಷಕಾಂಶಗಳಿಂದ ತುಂಬಿವೆ. ಬಾಳೆಹಣ್ಣುಗಳಂತೆ, ಬಾಳೆ ಕಾಯಿಯೂ ಸಹ ಪೊಟ್ಯಾಸಿಯಮ್ನ ಉತ್ತಮ ಮೂಲವಾಗಿದೆ. ಪೊಟ್ಯಾಸಿಯಮ್ ಆರೋಗ್ಯಕರ ರಕ್ತದೊತ್ತಡದ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಹೃದಯದ ಲಯವನ್ನು ನಿಯಂತ್ರಿಸುತ್ತದೆ.

ಇದನ್ನೂ ಓದಿ: ಬಾಳೆಹಣ್ಣು ತಿನ್ನುವುದರಿಂದ ಈ ಆರೋಗ್ಯ ಪ್ರಯೋಜನ ಖಂಡಿತ

ಮಧುಮೇಹಿಗಳಿಗೆ ಒಳ್ಳೆಯದು:

ಬಾಳೆಕಾಯಿ ಬಾಳೆಹಣ್ಣುಗಳಿಗಿಂತ ಕಡಿಮೆ ಸಿಹಿ ಮತ್ತು ಕಡಿಮೆ ಸಕ್ಕರೆಯನ್ನು ಹೊಂದಿರುತ್ತವೆ. ಹೆಚ್ಚು ನಿರೋಧಕ ಪಿಷ್ಟವನ್ನು ಹೊಂದಿದ್ದು ಅದು ಆರೋಗ್ಯಕರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಬಾಳೆಕಾಯಿ ಉತ್ಕರ್ಷಣ ನಿರೋಧಕಗಳಿಂದ ತುಂಬಿವೆ:

ಆಂಟಿಆಕ್ಸಿಡೆಂಟ್‌ಗಳು ನಿಮ್ಮ ದೇಹವನ್ನು ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ರಕ್ಷಿಸಲು ಮತ್ತು ಆಕ್ಸಿಡೇಟಿವ್ ಹಾನಿಯನ್ನು ತಡೆಯಲು ಸಹಾಯ ಮಾಡುತ್ತದೆ. ಬಾಳೆಕಾಯಿ ವಿಟಮಿನ್ ಸಿ, ಬೀಟಾ-ಕ್ಯಾರೋಟಿನ್ ಮತ್ತು ಇತರ ಫೈಟೊನ್ಯೂಟ್ರಿಯೆಂಟ್‌ ಗಳಿಂದ ತುಂಬಿವೆ. ಈ ಜೈವಿಕ-ಸಕ್ರಿಯ ಸಂಯುಕ್ತಗಳು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ತೂಕ ನಷ್ಟಕ್ಕೆ ಸಹಾಯ ಮಾಡಬಹುದು:

ಬಾಳೆಕಾಯಿ ನಿಮ್ಮ ಹಸಿವನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ. ಇದು ಹೆಚ್ಚಿನ ಫೈಬರ್ ಅಂಶವು ಅತ್ಯಾಧಿಕತೆಯನ್ನು ಉತ್ತೇಜಿಸುತ್ತದೆ, ದಿನದಲ್ಲಿ ನೀವು ಕಡಿಮೆ ಕ್ಯಾಲೊರಿಗಳನ್ನು ಸೇವಿಸುವಂತೆ ಮಾಡುತ್ತದೆ.

ಬಾಳೆ ಕಾಯಿ ಹೇಗೆ ಸೇವಿಸುವುದು?

ಪೌಷ್ಟಿಕತಜ್ಞರು ನಿಮ್ಮ ಆಹಾರದಲ್ಲಿ ಬಾಳೆ ಕಾಯಿ ಸೇರಿಸುವ ಕೆಲವು ವಿಧಾನಗಳನ್ನು ಹಂಚಿಕೊಂಡಿದ್ದಾರೆ. ಬಾಳೆಕಾಯಿ ಚಿಪ್ಸ್, ಬಾಳೆ ಕಾಯಿಗಂಜಿ ಅಥವಾ ಬೇಯಿಸಿ ತಿನ್ನಬಹುದು ಎಂದು ಅವರು ಹೇಳಿದ್ದಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: