AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

K-beauty trend: ಕಾಂತಿಯುತ ಚರ್ಮ ಪಡೆಯಬೇಕಾ? ಹಾಗಾದರೆ ಕೊರಿಯನ್ ರೈಸ್ ವಾಟರ್ ಹ್ಯಾಕ್ ಟ್ರೈ ಮಾಡಿ

ನಿಮ್ಮ ನೆಚ್ಚಿನ ಕೊರಿಯನ್ ಸೆಲೆಬ್ರಿಟಿಗಳಂತೆ ನಿಮ್ಮ ಚರ್ಮವನ್ನು ಇಟ್ಟುಕೊಳ್ಳಬೇಕೆಂಬ ಆಸೆ ಇರುವವರು ಕೊರಿಯನ್ ರೈಸ್ ವಾಟರ್ ಹ್ಯಾಕ್ ಟ್ರೈ ಮಾಡಬಹುದು. ಚರ್ಮಕ್ಕೆ ಅಕ್ಕಿ ನೀರಿನ ಪ್ರಯೋಜನಗಳು ಮತ್ತು ಅದನ್ನು ಹೇಗೆ ತಯಾರಿಸುವುದು ಎಂದು ತಿಳಿಯಲು ಈ ಸರಳ ಹಂತಗಳನ್ನು ಅನುಸರಿಸಿ ನೋಡಿ.

K-beauty trend: ಕಾಂತಿಯುತ  ಚರ್ಮ ಪಡೆಯಬೇಕಾ? ಹಾಗಾದರೆ ಕೊರಿಯನ್ ರೈಸ್ ವಾಟರ್ ಹ್ಯಾಕ್ ಟ್ರೈ ಮಾಡಿ
K-beauty TrendImage Credit source: Pinterest
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ|

Updated on: Jan 06, 2024 | 6:55 PM

Share

ಇತ್ತೀಚಿನ ದಿನಗಳಲ್ಲಿ ಕೊರಿಯನ್ ರೈಸ್ ವಾಟರ್ ಹ್ಯಾಕ್ ಹೆಚ್ಚು ಪ್ರಸಿದ್ದಿ ಪಡೆದಿರುವುದು ನಿಮಗೆ ಗೊತ್ತಿರಬಹುದು. ಏಕೆಂದರೆ ಕೊರಿಯನ್ ಜನರು ಸಾಮಾನ್ಯವಾಗಿ ಸೌಂದರ್ಯದ ಬಗ್ಗೆ ಉತ್ತಮ ಜ್ಞಾನ ಹೊಂದಿರುತ್ತಾರೆ. ಅದರಲ್ಲಿಯೂ ಆಹಾರ, ಬ್ಯೂಟಿ ಉತ್ಪನ್ನ ಹೀಗೆ ಹಲವಾರು ರೀತಿಯಲ್ಲಿ ನಾವು ಅವರ ಹ್ಯಾಕ್ ಗಳನ್ನು ಟ್ರೈ ಮಾಡುತ್ತೇವೆ. ಅಂತಹ ಒಂದು ಚರ್ಮದ ಆರೈಕೆ ಪ್ರವೃತ್ತಿಯೆಂದರೆ ಅಕ್ಕಿ ನೀರನ್ನು ಬಳಸುವುದು. ಈ ವಿಧಾನ ನಿಮಗೆ ಮನೆಯಲ್ಲಿಯೇ ಸುಲಭವಾಗಿ ತಯಾರಿಸಿಕೊಳ್ಳ ಬಹುದಾಗಿದ್ದು, ಸುಂದರವಾದ ಚರ್ಮ ಪಡೆದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.  ನಿಮ್ಮ ನೆಚ್ಚಿನ ಕೊರಿಯನ್ ಸೆಲೆಬ್ರಿಟಿಗಳಂತೆ ನಿಮ್ಮ ಚರ್ಮವನ್ನು ಇಟ್ಟುಕೊಳ್ಳಬೇಕೆಂಬ ಆಸೆ ಇರುವವರು ಈ ಮನೆಮದ್ದನ್ನು ಟ್ರೈ ಮಾಡಬಹುದು. ಚರ್ಮಕ್ಕೆ ಅಕ್ಕಿ ನೀರಿನ ಪ್ರಯೋಜನಗಳು ಮತ್ತು ಅದನ್ನು ಹೇಗೆ ತಯಾರಿಸುವುದು ಎಂದು ತಿಳಿಯಲು ಈ ಸರಳ ಹಂತಗಳನ್ನು ಅನುಸರಿಸಿ.

ಕೊರಿಯನ್ ರೈಸ್ ವಾಟರ್ ಹ್ಯಾಕ್ ಬಗ್ಗೆ ಗೊತ್ತಾ?

ಕೊರಿಯನ್ ರೈಸ್ ವಾಟರ್ ಹ್ಯಾಕ್ ತುಂಬಾ ಸರಳವಾಗಿದ್ದು ಇದನ್ನು ನೀವು ಸಹ ಮನೆಯಲ್ಲಿಯೇ ಮಾಡಿ ನೋಡಬಹುದಾಗಿದೆ. ಅಕ್ಕಿಯನ್ನು ನೀರಿನಲ್ಲಿ ನೆನೆಸಿ ಅಥವಾ ತೊಳೆಯಿರಿ, ಇದರಿಂದ ಪೋಷಕಾಂಶ ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ಹಾಲಿನ ದ್ರವ ಸಿಗುತ್ತದೆ. ಇದು ನಿಮ್ಮ ಚರ್ಮಕ್ಕೆ ನೈಸರ್ಗಿಕ ಪರಿಹಾರವಾಗಿದ್ದು ಹೊಳೆಯುವ ಮತ್ತು ಹೈಡ್ರೇಟೆಡ್ ಚರ್ಮವನ್ನು ನೀಡುತ್ತದೆ. ಇದು ಹೆಚ್ಚು ಕಾಂತಿಯುತ ಮತ್ತು ಯೌವನದ ಮೈ ಬಣ್ಣವನ್ನು ನಿಮಗೆ ನೀಡುತ್ತದೆ. ಇದನ್ನು ಹೆಚ್ಚಾಗಿ ಕೊರಿಯನ್ ಅಕ್ಕಿ ನೀರಿನ ವಿಧಾನ ಎಂದು ಕೂಡ ಕರೆಯಲಾಗುತ್ತದೆ ಏಕೆಂದರೆ ಇದು ಕೊರಿಯನ್ ಬ್ಯೂಟಿ ಉದ್ಯಮದಿಂದ ಜನಪ್ರಿಯವಾದ ಚರ್ಮದ ಆರೈಕೆಯಾಗಿದೆ. ಈ ಸುಲಭವಾದ ಹ್ಯಾಕ್ ಬಗ್ಗೆ ಚರ್ಮರೋಗ ತಜ್ಞ ಡಾ. ಸೋನಾಲ್ ಬನ್ಸಾಲ್ ಅವರು ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಮನೆಯಲ್ಲಿ ಅಕ್ಕಿ ನೀರನ್ನು ತಯಾರಿಸುವುದು ಹೇಗೆ?

  1. ಅಕ್ಕಿಯನ್ನು ಚೆನ್ನಾಗಿ ತೊಳೆಯಿರಿ: ಒಂದು ಬಟ್ಟಲಿನಲ್ಲಿ ಸ್ವಲ್ಪ ಅಕ್ಕಿಯನ್ನು ತೆಗೆದುಕೊಂಡು ತಣ್ಣೀರಿನಿಂದ ಚೆನ್ನಾಗಿ ತೊಳೆಯಿರಿ. ಇದು ಮಾಲಿನ್ಯಕಾರಕಗಳು ಅಥವಾ ಕಲ್ಮಶಗಳನ್ನು ತೆಗೆಯಲು ಸಹಾಯ ಮಾಡುತ್ತದೆ.
  2. ಅಕ್ಕಿಯನ್ನು ನೆನೆಸಿ: ಅಕ್ಕಿಯನ್ನು ಎರಡು ಕಪ್ ನೀರಿನಲ್ಲಿ 15 ರಿಂದ 30 ನಿಮಿಷಗಳ ಕಾಲ ನೆನೆಸಿಡಿ. ಈ ಅವಧಿಯಲ್ಲಿ ನೀರು ಮಂಜಾಗಿ ಕಾಣುತ್ತದೆ.
  3. ಕಲಕಿ ಹೊರತೆಗೆಯಿರಿ: ಅಕ್ಕಿ ನೀರಿನಿಂದ ಬೇರ್ಪಡಿಸಿ ಚೆನ್ನಾಗಿ ಕಲಕಿ. ಆಗ ಅಕ್ಕಿ ನೆನೆಸಿದ ನೀರು ತಯಾರಾಗುತ್ತದೆ.

ಚರ್ಮಕ್ಕೆ ಅಕ್ಕಿ ನೀರಿನ ಪ್ರಯೋಜನಗಳು ಹೀಗಿವೆ:

  •  ಅಕ್ಕಿ ನೀರು ಚರ್ಮದಲ್ಲಿರುವ ಕಪ್ಪು ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  • ಇದು ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕಾರ್ಯ ನಿರ್ವಹಿಸುತ್ತದೆ, ಚರ್ಮವನ್ನು ಮೃದುವಾಗಿ ಮತ್ತು ಹೈಡ್ರೇಟ್ ಆಗಿರಿಸುತ್ತದೆ.
  • ಆಂಟಿ ಏಜಿಂಗ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಇದು ವಯಸ್ಸಾದ ಚಿಹ್ನೆಗಳನ್ನು ಎದುರಿಸಲು ಸಹಾಯ ಮಾಡುತ್ತದೆ.
  •  ಅಕ್ಕಿ ನೀರನ್ನು ಮೃದುವಾದ ಕ್ಲೆನ್ಸರ್ ಆಗಿ ಬಳಸಬಹುದು, ಏಕೆಂದರೆ ಇದು ನಿಮ್ಮ ಚರ್ಮದಿಂದ ಕಲ್ಮಶಗಳು ಮತ್ತು ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕುವ ಮೂಲಕ ಚರ್ಮವನ್ನು ಸ್ವಚ್ಛಗೊಳಿಸುತ್ತದೆ.
  1. ನೀವು ಅಕ್ಕಿ ನೀರನ್ನು ಹತ್ತಿ ಉಂಡೆ ಅಥವಾ ಹತ್ತಿ ಪ್ಯಾಡ್ ನಿಂದ ನಿಧಾನವಾಗಿ ಮುಖಕ್ಕೆ ಹಚ್ಚಿ. ಬಳಿಕ ನಿಮ್ಮ ಮುಖವನ್ನು ನಿಧಾನವಾಗಿ ಒರೆಸಿ. ಇದು ನಿಮ್ಮ ಚರ್ಮದಲ್ಲಿನ ನೈಸರ್ಗಿಕ ತೈಲಗಳನ್ನು ಸಂರಕ್ಷಿಸುವ ಸೌಮ್ಯ, ಕ್ಲೆನ್ಸರ್ ಆಗಿ ಕಾರ್ಯ ನಿರ್ವಹಿಸುತ್ತದೆ.
  2. ಹೈಡ್ರೇಟಿಂಗ್ ಫೇಸ್ ಮಾಸ್ಕ್ ತಯಾರಿಸಲು, ಅಕ್ಕಿ ನೀರನ್ನು ಜೇನುತುಪ್ಪ ಅಥವಾ ಅಲೋವೆರಾ ಜೆಲ್ ನಂತಹ ಇತರ ನೈಸರ್ಗಿಕ ಪದಾರ್ಥಗಳೊಂದಿಗೆ ಬೆರೆಸಿ. ಈ ಮಿಶ್ರಣವನ್ನು ಮುಖದ ಎಲ್ಲಾ ಭಾಗದಲ್ಲಿಯೂ ಸಮನಾಗಿ ಹಚ್ಚಿಕೊಳ್ಳಿ.
  3. ಇದನ್ನು 15 ರಿಂದ 20 ನಿಮಿಷಗಳ ಕಾಲ ಬಿಡಿ, ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ನಿಮ್ಮ ಚರ್ಮದ ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸಲು ಹೈಡ್ರೇಟ್ ಆಗಿರುವುದು, ಸಮತೋಲಿತ ಆಹಾರವನ್ನು ಸೇವಿಸುವುದು ಮತ್ತು ಸಾಕಷ್ಟು ನಿದ್ರೆ ಮಾಡುವುದು ಸಹ ಮುಖ್ಯವಾಗಿದೆ.

ಗಮನಿಸಿ: ಇದು ಸಾಮಾನ್ಯವಾಗಿ ಸುರಕ್ಷಿತವಾಗಿದ್ದರೂ, ಕೆಲವು ವ್ಯಕ್ತಿಗಳಿಗೆ ಕಿರಿಕಿರಿ ಅಥವಾ ಅಲರ್ಜಿ ಉಂಟಾಗಬಹುದು. ಹಾಗಾಗಿ ಇದನ್ನು ಬಳಸುವ ಮೊದಲು ಪ್ಯಾಚ್ ಟೆಸ್ಟ್ ಮಾಡುವುದು ಸೂಕ್ತವಾಗಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ಅಂತಿಮ ಪರೀಕ್ಷೆ ವೇಳೆ ಬ್ರೌನ್ ವಿವಿಯಲ್ಲಿ ಗುಂಡಿನ ದಾಳಿ, ಇಬ್ಬರು ಸಾವು
ಅಂತಿಮ ಪರೀಕ್ಷೆ ವೇಳೆ ಬ್ರೌನ್ ವಿವಿಯಲ್ಲಿ ಗುಂಡಿನ ದಾಳಿ, ಇಬ್ಬರು ಸಾವು