ಪುರುಷರು ಹೇಳುವ ಈ ಸರಳ ಸುಳ್ಳುಗಳನ್ನು ಪತ್ತೆ ಹಚ್ಚಲು ಮಹಿಳೆಯರಿಗೆ ಸಾಧ್ಯವಾಗುವುದೇ ಇಲ್ಲ! ಅವು ಇನ್ನೆಂತಹವು?
ಚೋದ್ಯವೆಂದರೆ ಪುರುಷರು ಹೀಗೆ ಸುಳ್ಳು ಹೇಳುವುದನ್ನೇ ಆ ಮನದನ್ನೆಯರು ನಂಬುತ್ತಾರೆ, ಬಯಸುತ್ತಾರೆ. ಇಲ್ಲಿ ವಿಶ್ವಾಸಕ್ಕೆ ಯಾವುದೇ ಬಾಧಕವಾಗಲಿ, ಘಾತಕವಾಗಲಿ ಆಗುವುದಿಲ್ಲ; ಬದಲಿಗೆ ಪರಸ್ಪರರು ಗೆಲ್ಲುತ್ತಾರೆ. ಏನಂತೀರಿ? ನಿಮ್ಮ ಅನುಭವ ಏನು ಹೇಳುತ್ತದೆ?
ಸಾಮಾನ್ಯವಾಗಿ ಪುರುಷರು ಹೇಳುವ ಕೆಲ ನಿರ್ದಿಷ್ಟ ರೀತಿಯ, ಸರಳ ಸುಳ್ಳುಗಳನ್ನು ಅಷ್ಟೇ ಸರಳವಾಗಿ ಕಂಡುಹಿಡಿಯಲು ಮಹಿಳೆಯರಿಗೆ ಸಾಧ್ಯವಾಗುವುದೇ ಇಲ್ಲ. ಹಾಗಾದರೆ ಅವು ಇನ್ನೆಂಥಹವು? ಈ ಲೇಖನದಲ್ಲಿ, ಅಂತಹ ಸುಳ್ಳುಗಳ ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ, ಪುರುಷರು ತಮ್ಮ ಹೆಂಡತಿಯರಿಗೆ ಅಥವಾ ಗೆಳತಿಯರಿಗೆ ಆಗಾಗ್ಗೆ ಹೇಳುವ ಇಂತಹ ಸಾಮಾನ್ಯ ಸುಳ್ಳುಗಳ ಬಗ್ಗೆ ತಿಳಿಯಿರಿ …
ವಯಸ್ಸು ಯಾವುದೇ ಆಗಿದ್ದರೂ ನಾವೆಲ್ಲರೂ ಜೀವನದ ಒಂದು ಕಾಲಘಟ್ಟದಲ್ಲಿ ಸುಳ್ಳು ಹೇಳುತ್ತೇವೆ. ಕೆಲವೊಮ್ಮೆ ಈ ಸುಳ್ಳುಗಳನ್ನು ಒಳ್ಳೆಯದಕ್ಕಾಗಿ ಹೇಳಲಾಗುತ್ತದೆ. ಕೆಲವೊಮ್ಮೆ ಮೋಸದ ಅಥವಾ ತಪ್ಪು ವಿಷಯಗಳಿಗಾಗಿ ಹೇಳಲಾಗುತ್ತದೆ. ಆದರೆ ಅವುಗಳಲ್ಲಿ ಹೆಚ್ಚಿನವು ಹಾನಿಯನ್ನುಂಟುಮಾಡುತ್ತವೆ. ಏಕೆಂದ್ರೆ ಸುಳ್ಳು ಹೇಳುವುದು ಕೆಟ್ಟದ್ದು ಎಂದು ಬಗೆದಿರುವ ಸಮಾಜ ನಮ್ಮದು ಅಲ್ಲವೇ!? ಸುಳ್ಳು ಹೇಳುವುದು ಒಂದು ರೀತಿಯ ಮನೋಭಾವನೆಯಾಗಿದೆ.
ಮದುವೆ ಅಥವಾ ಪ್ರೇಮ ಸಂಬಂಧದಲ್ಲಿ ಮಾತನಾಡುವ ಸುಳ್ಳುಗಳ ಬಗ್ಗೆ ನಾವು ಇಲ್ಲಿ ಮಾತನಾಡುತ್ತಿದ್ದೇವೆ. ಸಂಬಂಧದಲ್ಲಿ ಮಹಿಳೆಯರಿಗಿಂತ ಪುರುಷರು ಹೆಚ್ಚು ಸುಳ್ಳು ಹೇಳುತ್ತಾರೆ. ಸಾಮಾನ್ಯವಾಗಿ ಪುರುಷರು ಸುಳ್ಳು ಹೇಳುವುದು ಮಹಿಳೆಯರಿಗೆ ಸುಲಭವಾಗಿ ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ. ಈ ಲೇಖನದಲ್ಲಿ ಪುರುಷರು ತಮ್ಮ ಹೆಂಡತಿ ಅಥವಾ ಗೆಳತಿಗೆ ಆಗಾಗ್ಗೆ ಹೇಳುವ ಇಂತಹ ಸುಳ್ಳುಗಳ ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ. ಇಂತಹ ಸಾಮಾನ್ಯ ಸುಳ್ಳುಗಳ ಬಗ್ಗೆ ತಿಳಿದುಕೊಳ್ಳಿ.. ಬಂಧ-ಸಂಬಂಧದಲ್ಲಿ ಸತ್ಯ-ಸುಳ್ಳುಗಳ ಮೇಲಾಟ ಇಲ್ಲಿದೆ!
- 1. ನಾನು ಸದಾ ನಿನ್ನ ಬಗ್ಗೆಯೇ ಯೋಚಿಸುತ್ತಾ ಇರುತ್ತೇನೆ..ಆಗಾಗ್ಗೆ ಪುರುಷರು ತಮ್ಮ ಸಂಗಾತಿಯೊಂದಿಗೆ ಹೀಗೆ ಮಾತನಾಡುವುದು ಸಾಮಾನ್ಯ. ಆದರೆ ಇದರ ಹಿಂದಿನ ಸತ್ಯ ಏನು ಎಂಬುದು ಅದನ್ನು ಹೇಳಿದವನಿಗೆ ಮಾತ್ರವೇ ತಿಳಿದಿರುತ್ತದೆ. ಪುರುಷ ತನ್ನ ಗೆಳತಿ-ಹೆಂಡತಿಯ ಬಂಧ-ಸಂಬಂಧದಲ್ಲಿ ಈ ಸುಳ್ಳನ್ನು ಬಳಸುತ್ತಿದ್ದರೆ, ಅವನ ಸಂಗಾತಿ ಅದರ ಸತ್ಯಾಸತ್ಯತೆ ತಿಳಿಯ ಬಯಸಿದ ನಂತರವೂ ಆ ಸತ್ಯವನ್ನು ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬುದು ಅನುಭವಸ್ಥರು ಹೇಳುವ ಸತ್ಯದ ಮಾತು! ಸಂಗಾತಿಯ ಮನ ಗೆಲ್ಲಲು ಗಂಡನೋ, ಗೆಳೆಯನೋ ಈ ರೀತಿ ಮಾತನಾಡುತ್ತಾನೆ. ಆದರೆ ಇದರಾಚೆಗೆ ಸುಳ್ಳು ಯಾಕೆ ಹೇಳಿದ ಎಂಬುದು ಯಾರಿಗೂ ಗೊತ್ತಿಲ್ಲ, ಅದು ಆತನೊಬ್ಬನಿಗೇ ಗೊತ್ತುಂಟು ಅಷ್ಟೆ.
- 2. ನೀನು ನನ್ನ ಮೊದಲ ಪ್ರೀತಿ: ಸಂಬಂಧ ಬೆಳೆದ ನಂತರ, ಕೆಲವು ಪುರುಷರು ತಮ್ಮ ಸಂಗಾತಿಯನ್ನು ಮೆಚ್ಚಿಸಲು ಸುಳ್ಳು ಹೇಳುವುದು ಕಂಡುಬರುತ್ತದೆ. ನೀನು ನನ್ನ ಮೊದಲ ಪ್ರೀತಿ ಎಂದು ಸಂಗಾತಿಗೆ ಹೇಳುತ್ತಾನೆ. ಇದರ ಹಿಂದೆ ಎಷ್ಟು ಸತ್ಯ ಅಡಗಿದೆ ಎಂಬುದು ಅವನಿಗಷ್ಟೇ ಗೊತ್ತು..
- 3. ಇನ್ನು, ಧೂಮಪಾನದ ಬಗ್ಗೆ ಸುಳ್ಳು: ಹೆಚ್ಚಿನ ಸಂದರ್ಭಗಳಲ್ಲಿ, ಬಹುತೇಕ ಸಂಬಂಧಗಳಲ್ಲಿ ಪುರುಷರು ಸಿಗರೇಟ್ ಸೇದುವುದನ್ನು ಮಹಿಳೆಯರು ನಿಷೇಧಿಸುತ್ತಾರೆ, ಅಂದರೆ ಅದು ಅವರಿಗೆ ಇಷ್ಟ ಇರುವುದಿಲ್ಲ. ಇದರ ಹೊರತಾಗಿಯೂ ಅವನು ಧೂಮಪಾನ ಮಾಡುತ್ತಾನೆ. ಅನೇಕ ಬಾರಿ ಪುರುಷ ತಾನು ಎಂದಿಗೂ ಧೂಮಪಾನ ಮಾಡಿಲ್ಲ ಎಂದೇ ಸಂಗಾತಿಯನ್ನು ಮೆಚ್ಚಿಸಲು ಮಾತನಾಡಿರುತ್ತಾರೆ. ಅಥವಾ ಮದುವೆಯ ನಂತರ ಧೂಮಪಾನ ಮಾಡುವುದಿಲ್ಲ ಎಂದು ಸಲೀಸಾಗಿ ಸುಳ್ಳು ಹೇಳುತ್ತಾನೆ. ಪುರುಷರ ಈ ಸುಳ್ಳಿನಲ್ಲಿ ನಿಜಾಯಿತಿ, ಅಂದರೆ ಸತ್ಯಾಂಶ ಎಷ್ಟಿದೆ ಎಂಬವುದು ಹೆಚ್ಚಾಗಿ ಅವರಲ್ಲೇ ಉಳಿಯುತ್ತದೆ.
- 4. ಸಂಗಾತಿ ಇಲ್ಲದೆ ಬುದಕೇ ಬೇಡಾ, ಬದುಕಲು ಸಾಧ್ಯವೇ ಇಲ್ಲ ಎನ್ನುವ ಪುರುಷ: ನೀನು ಇಲ್ಲದೆ ನಾನು ಒಂದು ನಿಮಿಷವೂ ಬದುಕಲಾರೆ ಎಂದು ಹುಡುಗರು ಅಥವಾ ಗಂಡಂದಿರು ತಮ್ಮ ಸಂಗಾತಿಯೊಂದಿಗೆ ಹೇಳುವುದನ್ನು ಚಲನಚಿತ್ರ ಅಥವಾ ಧಾರಾವಾಹಿಗಳಲ್ಲಿಯಷ್ಟೇ ಅಲ್ಲ, ನಿಜ ಜೀವನದಲ್ಲೂ ನೋಡಬಹುದು. ಆದರೆ ಆ ಘಳಿಗೆ ಮುಗಿಯುತ್ತಿದ್ದಂತೆ ಅದೇ ಪುರುಷ ಪಾರ್ಟಿ ಅಥವಾ ವಿನೋದಗಳಲ್ಲಿ ಮುಳುಗಿಹೋಗುವುದು ಸರ್ವತ್ರ ಸತ್ಯ ಎನ್ನಬಹುದು. ಚೋದ್ಯವೆಂದರೆ ಪುರುಷರು ಹೀಗೆ ಸುಳ್ಳು ಹೇಳುವುದನ್ನೇ ಆ ಮನದನ್ನೆಯರು ನಂಬುತ್ತಾರೆ, ಬಯಸುತ್ತಾರೆ. ಇಲ್ಲಿ ವಿಶ್ವಾಸಕ್ಕೆ ಯಾವುದೇ ಬಾಧಕವಾಗಲಿ, ಘಾತಕವಾಗಲಿ ಆಗುವುದಿಲ್ಲ; ಬದಲಿಗೆ ಪರಸ್ಪರರು ಗೆಲ್ಲುತ್ತಾರೆ. ಏನಂತೀರಿ? ನಿಮ್ಮ ಅನುಭವ ಏನು ಹೇಳುತ್ತದೆ?