World Malaria Day 2023: ವಿಶ್ವ ಮಲೇರಿಯಾ ದಿನದ ಇತಿಹಾಸ, ಇದು ಏಕೆ ಮುಖ್ಯ? ಇಲ್ಲಿದೆ ಮಾಹಿತಿ
ಮಲೇರಿಯಾ ರೋಗ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ.ಆದರೆ ಸೊಳ್ಳೆಗಳ ಕಡಿತದಿಂದ ಹರಡುವ ಮಾರಣಾಂತಿಕ ಕಾಯಿಲೆಯಾಗಿದೆ. ಹಾಗಾಗಿ ಈ ಬಗ್ಗೆ ಜಾಗೃತಿ ಮೂಡಿಸಲು ಮತ್ತು ರೋಗದ ಹರಡುವಿಕೆಯನ್ನು ನಿಯಂತ್ರಿಸಲು ಪ್ರತಿವರ್ಷ ಏಪ್ರಿಲ್ 25 ರಂದು ಈ ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ಮಲೇರಿಯಾ ದಿನವು (World Malaria Day) ರೋಗದ ಜಾಗತಿಕ ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ರೋಗದ ಹರಡುವಿಕೆಯನ್ನು ನಿಯಂತ್ರಿಸಲು ಹಾಗೂ ತಡೆಗಟ್ಟುವ ಪ್ರಯತ್ನಗಳನ್ನು ಜನರಿಗೆ ಮನವರಿಕೆ ಮಾಡಲು ಏಪ್ರಿಲ್ 25 ರಂದು ಈ ದಿನವನ್ನು ಆಚರಿಸಲಾಗುತ್ತದೆ. ಇದನ್ನು 2007 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಆರಂಭಿಸಿದ್ದು ಇದು 2030 ರ ವೇಳೆಗೆ ಮಲೇರಿಯಾ ಪ್ರಕರಣಗಳು ಮತ್ತು ಸಾವುಗಳನ್ನು 90% ರಷ್ಟು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಆ ಬಳಿಕ ಪ್ರತಿವರ್ಷ ಈ ದಿನವನ್ನು ಆಚರಿಸಲಾಗುತ್ತದೆ. ವಿಶ್ವದ ಅನೇಕ ಭಾಗಗಳಲ್ಲಿ ಮಲೇರಿಯಾ ಒಂದು ಪ್ರಮುಖ ಸಾರ್ವಜನಿಕ ಆರೋಗ್ಯ ಸವಾಲಾಗಿ ಉಳಿದಿದೆ. ಹಾಗಾಗಿ ಈ ದಿನದ ಜಾಗೃತಿಗಾಗಿ ಅಲ್ಲಲ್ಲಿ ಆರೋಗ್ಯ ಅಭಿಯಾನಗಳು, ಶೈಕ್ಷಣಿಕ ಕಾರ್ಯಕ್ರಮಗಳು ಮಲೇರಿಯಾ ಮತ್ತು ಅದರ ತಡೆಗಟ್ಟುವಿಕೆಯ ಬಗ್ಗೆ ಜಾಗೃತಿ ಮೂಡಿಸಲು ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. ಮಲೇರಿಯಾ ವಿರುದ್ಧದ ಹೋರಾಟದಲ್ಲಿ ಮತ್ತು 2030 ರ ವೇಳೆಗೆ ಮಲೇರಿಯಾ ಮುಕ್ತ ವಿಶ್ವ ಆರೋಗ್ಯ ಸಂಸ್ಥೆಯ ಗುರಿಯನ್ನು ಸಾಧಿಸುವಲ್ಲಿ ಈ ಪ್ರಯತ್ನಗಳು ನಿರ್ಣಾಯಕವಾಗಿವೆ.
ಮಲೇರಿಯಾವು ಸೋಂಕಿತ ಸೊಳ್ಳೆಗಳ ಕಡಿತದಿಂದ ಹರಡುವ ಮಾರಣಾಂತಿಕ ಕಾಯಿಲೆಯಾಗಿದೆ. ಡಬ್ಲ್ಯುಎಚ್ಒ ಪ್ರಕಾರ, 2016 ರಲ್ಲಿ, ಪ್ರಪಂಚದಾದ್ಯಂತ 216 ಮಿಲಿಯನ್ ಹೊಸ ಮಲೇರಿಯಾ ಪ್ರಕರಣಗಳು ವರದಿಯಾಗಿದ್ದವು. ಬಳಿಕ 2019 ರಲ್ಲಿ ವಿಶ್ವಾದ್ಯಂತ ಅಂದಾಜು 229 ಮಿಲಿಯನ್ ಪ್ರಕರಣಗಳು ಮತ್ತು 409,000 ಸಾವುಗಳಿಗೆ ಕಾರಣವಾಗಿತ್ತು. ಸಮಾನ್ಯವಾಗಿ ಹೆಚ್ಚಿನ ಪ್ರಕರಣಗಳು ಮತ್ತು ಸಾವುಗಳು ಉಪ-ಸಹಾರನ್ ಆಫ್ರಿಕಾದಲ್ಲಿ ಸಂಭವಿಸುತ್ತವೆ. ಬಳಿಕ ಮಲೇರಿಯಾ ಚಿಕಿತ್ಸೆಯಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. ಉಪ-ಸಹಾರನ್ ಆಫ್ರಿಕಾದ ಮಕ್ಕಳು ವಿಶ್ವದ ಮೊದಲ ಮಲೇರಿಯಾ ಲಸಿಕೆಯನ್ನು ಸ್ವೀಕರಿಸಿದರು, ಇದನ್ನು 2019 ರ ವಿಶ್ವ ಮಲೇರಿಯಾ ದಿನಕ್ಕೆ ಕೇವಲ ಎರಡು ದಿನಗಳ ಮೊದಲು ವೈದ್ಯಕೀಯ ವೃತ್ತಿಪರರು ನೀಡಿದ್ದರು. ಈ ಔಷಧಿಗಳು ವಾರ್ಷಿಕವಾಗಿ ಸಾವಿರಾರು ಜನರ ಸಾವನ್ನು ತಡೆಗಟ್ಟುವ ಸಾಮರ್ಥ್ಯವನ್ನು ಹೊಂದಿದೆ.
ಇದನ್ನೂ ಓದಿ:Malaria Symptoms: ಮಲೇರಿಯಾ ರೋಗ ಲಕ್ಷಣ, ಚಿಕಿತ್ಸೆಗಳೇನು? ಇಲ್ಲಿದೆ ಮಾಹಿತಿ
ಮಲೇರಿಯಾ ಮಾರಣಾಂತಿಕ ಕಾಯಿಲೆಯಾಗಿದ್ದು, ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ. ಈ ರೋಗಕ್ಕೆ ಕೆಲವು ಲಕ್ಷಣಗಳಿವೆ:
-ಜ್ವರ
-ಬೆವರು
-ಶೀತ
– ತಲೆನೋವು
-ಅಸ್ವಸ್ಥತೆ
-ಸ್ನಾಯುಗಳಲ್ಲಿ ನೋವು
– ಮೈ, ಕೈ ನೋವು
– ವಾಕರಿಕೆ ಮತ್ತು ವಾಂತಿ
ವಿಶ್ವ ಮಲೇರಿಯಾ ದಿನಾಚರಣೆಗೆ ಮನ್ನಣೆ ನೀಡುವುದು ಹೇಗೆ?
-ಉತ್ತಮ ಶಿಕ್ಷಣ ಅತ್ಯಗತ್ಯ. ನಿಮ್ಮ ವಿವಿಧ ಸಾಮಾಜಿಕ ನೆಟ್ ವರ್ಕ್ಗಳಲ್ಲಿ ಈ ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ, ಈ ಮಾರಣಾಂತಿಕ ಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸಲು ನೀವು ಸಹಾಯ ಮಾಡಬಹುದು.
-ಮಲೇರಿಯಾ ಚಿಕಿತ್ಸಾ ಸಲಕರಣೆಗಳನ್ನು ಅತೀ ಹೆಚ್ಚು ಬೇಡಿಕೆ ಇರುವ ರಾಷ್ಟ್ರಗಳಿಗೆ ತಲುಪಿಸಲು ಹಲವಾರು ಸಂಸ್ಥೆಗಳು ಲಾಭರಹಿತವಾಗಿ ಕಾರ್ಯನಿರ್ವಹಿಸುತ್ತಿವೆ. ನಿಮ್ಮ ಸ್ವಲ್ಪ ಸಮಯವನ್ನು ಸ್ವಯಂಸೇವಕರಾಗಿ ಅಥವಾ ಅವರನ್ನು ಬೆಂಬಲಿಸಲು ಹಣವನ್ನು ದಾನ ಮಾಡುವ ಮೂಲಕ ಅವರ ಪ್ರಯತ್ನಗಳಿಗೆ ನೀವು ಹೇಗೆ ಕೊಡುಗೆ ನೀಡಬಹುದು ಎಂಬುದನ್ನು ಕಂಡುಕೊಳ್ಳಿ.
-ಮಲೇರಿಯಾವನ್ನು ಕಡಿಮೆ ಮಾಡಲು ಕೆಲಸ ಮಾಡುವ ಗೌರವಾನ್ವಿತ ಸಂಸ್ಥೆಗಳಿಗೆ, ವ್ಯಕ್ತಿಗಳಿಗೆ ಕೊಡುಗೆ ನೀಡುವಂತೆ ವಿನಂತಿಸಿ. ಮಲೇರಿಯಾ ಸ್ವಲ್ಪಮಟ್ಟಿಗೆ ಚಿರಪರಿಚಿತವಾಗಿದೆ, ಆದರೆ ರೋಗ ಹರಡದಂತೆ ಹೇಗೆ ತಪ್ಪಿಸುವುದು ಎಷ್ಟು ಸರಳವಾಗಿದೆ ಎಂದು ಹೆಚ್ಚಿನ ಜನರಿಗೆ ತಿಳಿದಿಲ್ಲ.
ವಿಶ್ವ ಮಲೇರಿಯಾ ದಿನ ಏಕೆ ಮುಖ್ಯವಾಗಿದೆ?
-2017 ರಲ್ಲಿ, ಮಲೇರಿಯಾ 435,000 ಜನರನ್ನು ಬಲಿತೆಗೆದುಕೊಂಡಿತು. ರೋಗಕ್ಕೆ ತುತ್ತಾಗುವ ವ್ಯಕ್ತಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ಪ್ರಯತ್ನಗಳು ನಡೆಯುತ್ತಿದ್ದರೂ, ಪ್ರತಿವರ್ಷ ಲಕ್ಷಾಂತರ ಜನರ ಸಾವಿಗೆ ಮಲೇರಿಯಾ ಕಾರಣವಾಗಿದೆ. ಉಪ-ಸಹಾರನ್ ಆಫ್ರಿಕಾ ಹೆಚ್ಚು ಹಾನಿಗೊಳಗಾದ ಪ್ರದೇಶವಾಗಿದೆ.
-ಮುಂದಿನ ಹತ್ತು ವರ್ಷಗಳ ಅವಧಿಯಲ್ಲಿ ಮರಣ ಪ್ರಮಾಣವನ್ನು ಶೇಕಡಾ ತೊಂಬತ್ತು ರಷ್ಟು ಕಡಿತಗೊಳಿಸುವ ಪ್ರಸ್ತಾಪವಿದ್ದು, ಈ ಗುರಿಯನ್ನು ಸಾಧಿಸಲು, ವಿಶ್ವ ಆರೋಗ್ಯ ಸಂಸ್ಥೆ ಮಲೇರಿಯಾ ತಡೆಗಟ್ಟುವಿಕೆ ಯಶಸ್ವಿಯಾಗಲು ನಿರಂತರ ಧನಸಹಾಯ ಮಾಡುವಲ್ಲಿ ಶ್ರಮವಹಿಸುತ್ತಿದೆ.
-ಮಲೇರಿಯಾ ಒಂದು ಕಾಯಿಲೆಯಾಗಿದ್ದು, ಇದನ್ನು ಚಿಕಿತ್ಸೆ ಮೂಲಕ ಗುಣಪಡಿಸಬಹುದಾಗಿದೆ. ಹಾಗಾಗಿ ಇದರ ನಿರ್ಮೂಲನೆಗಾಗಿ ಕೆಲಸ ಮಾಡುತ್ತಿರುವ ಆರೋಗ್ಯ ಸಂಸ್ಥೆಗಳು ಈ ಗುರಿಯನ್ನು ಸಾಧಿಸಲು ಅವರು ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಚರ್ಚಿಸುತ್ತಾರೆ. ಇನ್ನು ಹೆಚ್ಚು ಹೆಚ್ಚು ಲಸಿಕೆ ನೀಡುವ ಮೂಲಕ ಆ ರೋಗವನ್ನು ಸಾಧ್ಯವಾದಷ್ಟು ಕಡಿಮೆ ಮಾಡುತ್ತಾರೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:38 pm, Mon, 24 April 23