Literature: ನೆರೆನಾಡ ನುಡಿಯೊಳಗಾಡಿ; ತಿರ್ಪರಪ್ಪು ಸ್ಥಳಪುರಾಣದಲ್ಲಿ ಹೇಳಲಾದ ಕಥೆಗಳನ್ನೇ ಅವರೂ ಹೇಳಿದರು

B. Jeyamohan’s Tamil Story : ‘ರೆಜಿನಾನಾ ಕ್ರಿಶ್ಚಿಯನ್ ಸ್ಕೂಲಲ್ಲಿ ಓದುತ್ತಾಳಲ್ಲವೇ?’ ಮಲಯನ್‌ನ ಮಗಳು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಳು. ‘ಗೋಧಿಯೂ, ಹಾಲು ಪುಡಿಯೂ ಸಿಗುತ್ತವೆ. ಕ್ರಿಸ್‌ಮಸ್‌ಗೆ ಬಟ್ಟೆಯನ್ನೂ ಕೊಡುತ್ತಾರೆ’ ಅಂದರು ಮಲಯನ್.

Literature: ನೆರೆನಾಡ ನುಡಿಯೊಳಗಾಡಿ; ತಿರ್ಪರಪ್ಪು ಸ್ಥಳಪುರಾಣದಲ್ಲಿ ಹೇಳಲಾದ ಕಥೆಗಳನ್ನೇ ಅವರೂ ಹೇಳಿದರು
ತಮಿಳು ಲೇಖಕ ಬಿ. ಜಯಮೋಹನ್, ಅನುವಾದಕರಾದ ಪಾವಣ್ಣನ್ ಮತ್ತು ಚಿಂತಾಮಣಿ ಕೊಡ್ಲೆಕೆರೆ
Follow us
|

Updated on:Apr 15, 2022 | 1:45 PM

ನೆರೆನಾಡ ನುಡಿಯೊಳಗಾಡಿ | NereNaada Nudiyolagaadi : ನಾನು ಆದಿ ಕಿರಾತ ಮೂರ್ತಿಯನ್ನು ಪ್ರತಿಷ್ಠೆ ಮಾಡಿದ ಜಾಗ ನೋಡಿದೆ. ಆ ರೀತಿಯ ಪ್ರತಿಷ್ಠೆ ದಕ್ಷಿಣ ತಿರುದಿದಾಂಗೂರಿನಲ್ಲಿ ಏನಿಲ್ಲವೆಂದರೂ ಅರ್ಧಲಕ್ಷ ಸ್ಥಳಗಳಲ್ಲಿದೆ. ಮರದಡಿಯಲ್ಲಿ ಕಡೈಕ್ಕಲ್ಲ ಮೇಲೆ ಕೂರಿಸಿದ ಕುತ್ತುಕ್ಕಲ್ಲು. ಚಂದನ, ಕುಂಕುಮದಿಂದ ಲೇಪನಗೊಂಡು, ಅರಳಿಮಾಲೆಯೋ, ತೆಟ್ರಿ ಮಾಲೆಯೋ ತಿಳಿಯಲಾಗದ ಬಾಡಿದ ಮಾಲೆ ಧರಿಸಿ, ಸುತ್ತಲೂ ಬಿದ್ದ ಒಣಗಿದೆಲೆಗಳ ಮಧ್ಯೆ ನೆರಳಿನಲ್ಲಿ ತಣ್ಣಗೆ ಕುಳಿತಿದೆ. ಆ ಪ್ರದೇಶವನ್ನು ದೇವಸ್ಥಾನದ ಎಸ್ಟೇಟ್ ಎಂದು ರಿಜಿಸ್ಟರ್ ಮಾಡಿದ್ದರೂ, ಅದು ಕಾಡೇ. ಕಾಡಿನಲ್ಲಿ ಮಾತ್ರ ಕೇಳಬಹುದಾದ ಸದ್ದು. ಗಾಳಿ ಹಾರುವ ಸದ್ದು. ಕೊಳೆತ ಎಲೆಗಳ ದುರ್ವಾಸನೆ. ಒಣಗಿದೆಲೆಗಳ ಮೇಲೆ ತೆವಳುವ ಪ್ರಾಣಿಗಳ ಭಯ ಹುಟ್ಟಿಸುವ ಸದ್ದು. ತುಂಬ ಸಮಯ ಅಲ್ಲೇ ಕುಳಿತಿದ್ದೆ. ಅಲ್ಲಿಂದ ಕೇವಲ ಒಂದು ಕಿ.ಮೀ. ದೂರದಲ್ಲಿ ದೊಡ್ಡದೊಂದು ಮಂದಿರ, ಅದರ ಸುತ್ತಲೂ ರಥ ಬೀದಿಗಳು, ಮಹಡಿ ಮನೆಗಳು ಇವೆ ಎಂದು ನಂಬಲು ಸಾಧ್ಯವೇ ಇಲ್ಲ. ಅಲ್ಲಿರುವಾಗ ದೇವಸ್ಥಾನದ ಶಬ್ದಗಳಲ್ಲಿ ಒಂದೆಂಬಂತೆ ಕೇಳಿಸುತ್ತಿದ್ದ ಜಲಪಾತದ ಸದ್ದು ಇಲ್ಲಿ ಕಾಡಿನ ದನಿಯೆಂಬಂತೆಯೇ ಕೇಳುತ್ತಿತ್ತು.

ಕಥೆ: ವಿಷಸರ್ಪ (ನಚ್ಚರವಂ) |  ತಮಿಳು ಮೂಲ: ಜಯಮೋಹನ್ | ಕನ್ನಡಕ್ಕೆ: ಪಾವಣ್ಣನ್ ಮತ್ತು ಚಿಂತಾಮಣಿ ಕೊಡ್ಲೆಕೆರೆ | ಸೌಜನ್ಯ : ದೇಶಕಾಲ, ಸಾಹಿತ್ಯ ಪತ್ರಿಕೆ.

(ಭಾಗ 3)

ಒಂದು ವಾರದ ನಂತರ ಮಲಯನ್‌ನನ್ನು ಮತ್ತೆ ಭೇಟಿಯಾದೆ. ನೀಲಿಮಲೈಯ ತುದಿಯಲ್ಲಿ ಮಾತ್ರ ಕಾಡು ಉಳಿದಿವೆ. ನಾಲ್ಕೂ ಕಡೆಗೂ ರಬ್ಬರ್ ಎಸ್ಟೇಟುಗಳು. ರಸ್ತೆಯಿಂದ ನೋಡುವಾಗ ಸೈನಿಕನ ಕ್ರಾಪಿನಂತೆ ಕಾಣುತ್ತಿತ್ತು. ತೊರೆಯೊಂದು ಓಡಿ ಬಂದು ಬಂಡೆಗಲ್ಲಿಗೆ ಢಿಕ್ಕಿ ಹೊಡೆದು ಮಗ್ಗುಲು ಬದಲಿಸುವಲ್ಲಿ ಮಲಯನ್‌ನ ಗುಡಿಸಲು. ಬಿದಿರಿನ ಗಳು ಹೂಡಿ ನೆಲದಿಂದ ಸ್ವಲ್ಪ ಮೇಲೆ ಕಟ್ಟಿದ ಆ ಗುಡಿಸಲು ತೆಪ್ಪದಂತೆ ಅಥವಾ ದೊಡ್ಡ ಗುಬ್ಬಿ ಗೂಡಿನಂತೆ ತೋರುತ್ತಿತ್ತು. ನಾನು ಹೋದಾಗ ಮಲಯನ್ ಮನೆಯಲ್ಲೇ ಇದ್ದರು. ದುಡಿಗೆ ಬಿಗಿಯಾಗಿ ದಾರ ಕಟ್ಟುತ್ತಿದ್ದರು. ಅವರ ಮೊಮ್ಮಗಳು ಅಥವಾ ಮರಿಮಗಳು ಹೊರಗೆ ಬಂಡೆಯ ಮೇಲೆ ಒಣಕಡ್ಡಿಗಳನ್ನು ಕೂಡಿಸಿ ಬೆಂಕಿ ಒಟ್ಟಿ ಗೆಣಸು ಬೇಯಿಸುತ್ತಿದ್ದಳು. ಮಲಯನ್‌ನ ಕಿವಿಗಳು ತುಂಬ ಸೂಕ್ಷ್ಮ. ನಾನು ದೂರದಲ್ಲಿದ್ದಾಗಲೇ ಸದ್ದು ಕೇಳಿ ಎದ್ದು ಹಣೆಗೆ ಕೈಯಿಟ್ಟು ದಿಟ್ಟಿಸಿ ನೋಡಿ ನಕ್ಕು ತಲೆಯಾಡಿಸಿದರು. ಜಗುಲಿಯ ಮೇಲೆ ಕುಳಿತ ಬಳಿಕ ಜೇನು ಬೆರೆಸಿದ ನೀರು ಕೊಟ್ಟು ಉಪಚರಿಸಿದರು. ಆಮೇಲೆ ಬಾಳೆಲೆಯ ಮೇಲಿಟ್ಟು ತುಂಡರಿಸಿ ಕೊಟ್ಟ ಹೊಗೆ ಹಾರುವ ಬಿಸಿಗೆಣಸನ್ನು ತಿಂದೆವು. ಮಲಯನ್ ತನ್ನ ಕುಟುಂಬದ ಕಥೆ ಹೇಳಿದರು. ಅವರ ಏಳೂ ಗಂಡು ಮಕ್ಕಳು ಸತ್ತಿದ್ದರು. ಮೊಮ್ಮಕ್ಕಳೆಲ್ಲ ಎಲ್ಲೆಲ್ಲೋ ಚದುರಿ ಹೋದ ಬಳಿಕ ಉಳಿದ ಒಬ್ಬಳೇ ಮೊಮ್ಮಗಳು ಜೇನು ಹುಡುಕಿ ಹೋಗಿದ್ದಾಳೆ. ಅವಳ ಒಬ್ಬಳೇ ಮಗಳು, ಈ ಹುಡುಗಿ ಹೆಸರು ರೆಜಿನಾ.

‘ರೆಜಿನಾನಾ?’ ಅಂದೆ

‘ಹೌದು, ಕ್ರಿಶ್ಚಿಯನ್ ಸ್ಕೂಲಲ್ಲಿ ಓದುತ್ತಾಳಲ್ಲವೇ?’ ಅಂದರು ಮಲಯನ್. ಮಲಯನ್‌ನ ಮಗಳು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಳು. ‘ಗೋಧಿಯೂ, ಹಾಲು ಪುಡಿಯೂ ಸಿಗುತ್ತವೆ. ಕ್ರಿಸ್‌ಮಸ್‌ಗೆ ಬಟ್ಟೆಯನ್ನೂ ಕೊಡುತ್ತಾರೆ’ ಅಂದರು ಮಲಯನ್.

‘ಮಲಯನ್ ಮತಾಂತರಗೊಳ್ಳಲಿಲ್ಲವೇ?’ ಅಂದೆ

‘ನಮಗೆ ಮಂತ್ರ ಪೂಜೆಗೀಜೆ ಎಲ್ಲ ಇದೆಯಲ್ಲ. ಅದರಿಂದ ಮತಾಂತರಗೊಳ್ಳಲಿಲ್ಲ’ ಅಂದರು.

ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ರಷ್ಯಾದ ಪ್ರಸಿದ್ಧ ಕಥೆಗಾರ ಆ್ಯಂಟನ್ ಚೆಕಾವ್​ 128 ವರ್ಷಗಳ ಹಿಂದೆ ಬರೆದ ಕಥೆ

ಆ ದಿನ ರಾತ್ರಿಯವರೆಗೂ ಮಲಯನ್ ಜೊತೆ ಮಾತಾಡಿ ಹೊರಟೆ. ನನಗಾದ ಸಣ್ಣ ಲಾಭ ಎಂದರೆ ಮಲಯನ್‌ನ ಭಾಷೆಯಿಂದಲೇ ಆ ಮೂಲ ತಾಂತ್ರಿಕ ಗ್ರಂಥ ಅನುವಾದಗೊಂಡಿದೆ ಎಂಬುದು ಖಾತ್ರಿಯಾಯಿತು. ಮಲಯನ್ ಮಾತಾಡಿದ ಭಾಷೆ ತಮಿಳಿನಂತೆಯೇ, ಆದರೆ ತಮಿಳಿಗಿಂತಲೂ ಹಿಂದೆ ಇದ್ದ ಒಂದು ಬಗೆಯ ಹಳೆಯ ಭಾಷೆ. ಅದರ ಹಲವಾರು ನುಡಿಗಟ್ಟುಗಳು ಆ ತಾಂತ್ರಿಕ ಗ್ರಂಥದಲ್ಲಿಯೂ ಇದ್ದವು. ಉದಾಹರಣೆಗೆ ಅಡಿಕೆ ಗೊನೆಯನ್ನು ಅಡಿಕೆ ಕಿವಿ ಎಂದು ಕರೆಯಲಾಗಿದೆ. ತೆಚ್ಚಿ ಹೂ ಮೊಗ್ಗುಗಳನ್ನು ತೆಚ್ಚಿ ಮೂಗು ಎಂದು ಕರೆಯಲಾಗಿದೆ.

ಆದರೆ ಮಲಯನ್‌ನಿಗೆ ತಾಂತ್ರಿಕ ಗ್ರಂಥದಲ್ಲಿ ಬರೆಯಲಾದ ಯಾವ ಸಂಗತಿಯೂ ತಿಳಿದಿರಲಿಲ್ಲ. ತಿರ್ಪರಪ್ಪು ಸ್ಥಳಪುರಾಣದಲ್ಲಿ ಹೇಳಲಾದ ಕಥೆಗಳನ್ನೇ ಅವರೂ ಹೇಳಿದರು. ಮತ್ತೆ ಮತ್ತೆ ಭೆಟ್ಟಿಯಾಗಿ ಮಾತನಾಡಿದರೂ ಅದನ್ನೇ ಹೇಳುತ್ತಿದ್ದರು. ಕೇಳಿ ಕೇಳಿ ನನಗೆ ಆಯಾಸವೇ ಆಯಿತು ನಾನು ಮಲಯನ್‌ನ ಬಳಿ ಹೋಗುವುದೂ ಕಡಿಮೆಯಾಯಿತು. ಮುಖ್ಯ ಕಾರಣ ಖರ್ಚು. ನಾನು ಅವರಿಗಾಗಿ ಖರ್ಚು ಮಾಡಲು ಸಿದ್ಧನಿದ್ದೇನೆಂದು ತಿಳಿದ ಬಳಿಕ ಮಲಯನ್ ತಂಬಾಕು, ಬೆಲ್ಲ, ಚಾಪುಡಿಗಳನ್ನು ತಾನಾಗಿ ತರುವುದು ಪೂರ್ತಿಯಾಗಿ ನಿಲ್ಲಿಸಿದರು. ಇದಕ್ಕಿಂತ ಹೆಚ್ಚಾಗಿ ಇವನ್ನೆಲ್ಲ ತಂದು ಕೊಡುವುದು ನನ್ನ ಕರ್ತವ್ಯವೆಂದೇ ಭಾವಿಸತೊಡಗಿದರು. ನಾನು ತಂದು ಕೊಡುವ ಸಾಮಾನುಗಳ ಗುಣಮಟ್ಟ ಪ್ರಮಾಣಗಳ ಬಗೆಗೆ ನನ್ನ ಬಳಿಯೇ ಆಕ್ಷೇಪವೆತ್ತತೊಡಗಿದರು. ಒಮ್ಮೆ ಬೇಕೆಂತಲೇ ಏನನ್ನೂ ಕೊಂಡುಕೊಳ್ಳದೆ ಅವರನ್ನು ನೋಡಲು ಹೋದೆ. ಅವರು ನಾನು ಬಂದುದನ್ನು ಗಮನಿಸಿದಂತೆ ತೋರಿಸಿಕೊಳ್ಳಲಿಲ್ಲ. ಅವರ ಮೊಮ್ಮಗಳು ಮತ್ತು ಮರಿಮಗಳು ಹೊರಗಿನ ಮನುಷ್ಯ ಬಂದರೆ ಅವನೊಡನೆ ಸೈತಾನನೂ ಬರುತ್ತಾನೆ ಎಂಬ ಭಯದಿಂದ ನನ್ನ ಬಳಿ ಮುಖಕೊಟ್ಟು ಮಾತನಾಡುತ್ತಿರಲಿಲ್ಲ.

ಏಳೆಂಟು ತಿಂಗಳ ನಂತರ ಮತ್ತೊಮ್ಮೆ ಮಲಯನ್‌ನನ್ನು ನೋಡಲು ಹೋದೆ. ಅಷ್ಟರಲ್ಲಿ ತಿರುವಾದಿರೈ ಹಬ್ಬ ಮುಗಿದಿತ್ತು. ಮಲಯನ್ ಭಾಗವಹಿಸುವುದು ಸಾಧ್ಯವಾಗಲಿಲ್ಲವೆಂದು ಇನ್ನೊಬ್ಬ ಮಲಯನ್ ಎಲ್ಲವನ್ನೂ ಮಾಡಿ ಪೂರೈಸಿದ. ಕಂಠಪೂರ್ತಿ ಕುಡಿದು ನಿಲ್ಲಲೂ ಸಾಧ್ಯವಾಗದ ಸ್ಥಿತಿಯಲ್ಲಿ ಬಂದಿದ್ದ. ಏಳು ಕೋಳಿಗಳನ್ನು ಬಲಿಕೊಟ್ಟು ರಕ್ತವನ್ನು ಲಿಂಗಕ್ಕೆ ಎರೆದು, ಪೂಜೆ ಮಾಡಿ, ತೆಚ್ಚಿ ಹೂವು, ಅರಳಿಹೂವು, ಬಿಲ್ವ ಪತ್ರೆಗಳನ್ನೆಲ್ಲ ಸೇರಿಸಿ ಕಟ್ಟಿದ್ದ ಮಾಲೆಯಿಂದ ಲಿಂಗವನ್ನು ಅಲಂಕರಿಸಿದ. ಎರಡು ಸಲ ಕಾಲು ಜಾರಿ ಲಿಂಗದ ಮೇಲೆ ಕೈಯೂರುವಂತಾಯಿತು. ನಾನೂ, ನಾರಾಯಣ ಪಿಳ್ಳೆಯೂ, ವಾಲಗದವರೂ ಮಾತ್ರವೇ ಸಾಕ್ಷಿ. ಮಲಯನ್‌ನಿಗೆ ಆರೋಗ್ಯ ಸರಿ ಇಲ್ಲವೆಂದು ನಾರಾಯಣ ಪಿಳ್ಳೈಯೇ ಹೇಳಿದರು. ‘ಸತ್ತರೂ ಸಾಯಬಹುದು. ಹಳೇ ಕೊರಡು’ ಎಂದರು. ಸರಿ, ಹೋಗಿ ನೋಡೋಣವೆಂದು ಹೊರಟೆ. ಸತ್ತರೂ ಸತ್ತಿರಬಹುದೆಂಬ ಸಂದೇಹದೊಂದಿಗೆ ನಡೆದೆ. ಆದರೂ ಹಾಗೆಲ್ಲ ಸಾಯುವವರಲ್ಲ ಎಂದೂ ಅನಿಸುತ್ತಿತ್ತು. ಗುಡಿಸಲಲ್ಲಿ ಮಲಯನ್ ಇರಲಿಲ್ಲ. ಆ ಹುಡುಗಿ ಮಾತ್ರ ಇದ್ದಳು. ‘ಅಜ್ಜ ಬೆಟ್ಟಕ್ಕೆ ಹೋಗಿದ್ದಾನೆ’ ಎಂದಳು.

‘ಎಲ್ಲಿ?’ ‘ಬೆಟ್ಟದ ಅಪ್ಪಚ್ಚಿಗೆ ಬಲಿಕೊಡಲು’ ‘ಎಲ್ಲಿಗೆ?’ ಅವಳು ಕೆಳಕ್ಕಿಳಿದು ‘ಅದೋ, ಆ ಬೆಟ್ಟದಲ್ಲಿ’ ಎಂದು ತೋರಿಸಿದಳು.

ಭಾಗ 4 : Literature: ನೆರೆನಾಡ ನುಡಿಯೊಳಗಾಡಿ; ‘ಈ ಪ್ರತಿಷ್ಠೆಯೇ ನಿಮ್ಮ ಕುಲ ದೇವತೆಯೇ?’

ಈ ಅಂಕಣದ ಎಲ್ಲಾ ಅನುವಾದಿತ ಕಥೆಗಳನ್ನು ಇಲ್ಲಿ ಓದಿ : https://tv9kannada.com/tag/nerenaada-nudiyolagaadi

ಪ್ರತಿಕ್ರಿಯೆಗಾಗಿ : tv9kannadadigital@gmail.com

Published On - 1:29 pm, Fri, 15 April 22

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ