AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

5 ವರ್ಷದಲ್ಲಿ ನಕಲಿ ತುಪ್ಪದಿಂದ ತಯಾರಿಸಿದ 20 ಕೋಟಿ ತಿರುಪತಿ ಲಡ್ಡು ವಿತರಣೆ; ಸಿಎಂ ಚಂದ್ರಬಾಬು ನಾಯ್ಡು ಮಾಹಿತಿ

ತಿರುಪತಿ ದೇವಸ್ಥಾನದ ಪವಿತ್ರ ಪ್ರಸಾದವಾದ ಲಡ್ಡು ತಯಾರಿಕೆಗೆ ಹಿಂದಿನ ಸರ್ಕಾರದ ಅವಧಿಯಲ್ಲಿ 20 ಕೋಟಿ ಲಡ್ಡುಗಳ ತಯಾರಿಕೆಗೆ ನಕಲಿ ತುಪ್ಪ ಬಳಸಲಾಗಿತ್ತು. ಲಡ್ಡು ತಯಾರಿಕೆಗೆ ಸರಬರಾಜು ಮಾಡಲಾದ ತುಪ್ಪದ ತಯಾರಿಕೆಯಲ್ಲಿ ಯಾವುದೇ ಹಾಲನ್ನು ಬಳಸಲಾಗಿಲ್ಲ ಎಂಬುದು ತನಿಖೆ ವೇಳೆ ಬಯಲಾಗಿದೆ. ರಾಸಾಯನಿಕಗಳೊಂದಿಗೆ ಬೆರೆಸಿದ ಪಾಮ್ ಆಯಿಲ್ ಬಳಸಿ ಲಡ್ಡು ತಯಾರಿಸಲಾಗುತ್ತಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಎಸ್‌ಐಟಿ 36 ಆರೋಪಿಗಳನ್ನು ಗುರುತಿಸಿದೆ. ಪವಿತ್ರ ಪ್ರಸಾದವನ್ನು ಅಪವಿತ್ರಗೊಳಿಸುವ ಗುರಿಯನ್ನು ಹೊಂದಿರುವ ಯೋಜಿತ ಪಿತೂರಿಯ ಪರಿಣಾಮವಾಗಿ ಕಲಬೆರಕೆ ನಡೆದಿದೆ ಆಂಧ್ರ ಪ್ರದೇಶ ಸರ್ಕಾರ ಮಾಹಿತಿ ನೀಡಿದೆ.

5 ವರ್ಷದಲ್ಲಿ ನಕಲಿ ತುಪ್ಪದಿಂದ ತಯಾರಿಸಿದ 20 ಕೋಟಿ ತಿರುಪತಿ ಲಡ್ಡು ವಿತರಣೆ; ಸಿಎಂ ಚಂದ್ರಬಾಬು ನಾಯ್ಡು ಮಾಹಿತಿ
Tirupati Laddu
ಸುಷ್ಮಾ ಚಕ್ರೆ
|

Updated on: Feb 24, 2026 | 10:20 PM

Share

ಅಮರಾವತಿ, ಫೆಬ್ರವರಿ 24: ವೈಎಸ್‌ಆರ್‌ಸಿಪಿ ಸರ್ಕಾರದ ಆಡಳಿತದ ಅವಧಿಯಲ್ಲಿ 20 ಕೋಟಿಗೂ ಹೆಚ್ಚು ತಿರುಪತಿ ಲಡ್ಡುಗಳನ್ನು (Tirupati Laddu) ಕಲಬೆರಕೆ ತುಪ್ಪದಿಂದ ತಯಾರಿಸಿ ಮಾರಾಟ ಮಾಡಲಾಗಿದೆ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹೇಳಿದ್ದಾರೆ. 2019 ಮತ್ತು 2024ರ ನಡುವೆ ತಿರುಮಲ ತಿರುಪತಿ ದೇವಸ್ಥಾನಕ್ಕೆ (ಟಿಟಿಡಿ) 59.71 ಲಕ್ಷ ಲೀಟರ್ ಕಲಬೆರಕೆ ತುಪ್ಪವನ್ನು ಪೂರೈಕೆ ಮಾಡಲಾಗಿದೆ. ಅದಕ್ಕಾಗಿ 234 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.

ತಿರುಪತಿ ಲಡ್ಡು ಕಲಬೆರಕೆ ಕುರಿತು ರಾಜ್ಯ ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಉತ್ತರಿಸಿದ ಸಿಎಂ ಚಂದ್ರಬಾಬು ನಾಯ್ಡು, 20.01 ಕೋಟಿ ಲಡ್ಡುಗಳನ್ನು ಕಲಬೆರಕೆ ತುಪ್ಪದಿಂದ ತಯಾರಿಸಿ ಭಕ್ತರಿಗೆ ಮಾರಾಟ ಮಾಡಲಾಗಿದೆ. ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ ಮತ್ತು ಗುಣಮಟ್ಟವನ್ನು ಪರೀಕ್ಷಿಸಲು ಪ್ರಯೋಗಾಲಯಗಳನ್ನು ಬೈಪಾಸ್ ಮಾಡುವ ಮೂಲಕ ಕಲಬೆರಕೆ ತುಪ್ಪವನ್ನು ಉತ್ಪಾದಿಸಲು ಮತ್ತು ಟಿಟಿಡಿಗೆ ಪೂರೈಸಲು ಸಿಂಡಿಕೇಟ್ ರಚಿಸಲಾಗಿದೆ ಎಂದು ಅವರು ಆರೋಪಿಸಿದರು.

ಇದನ್ನೂ ಓದಿ: ತಿರುಪತಿ ಲಡ್ಡುವಿನ ಕಲಬೆರಕೆ ಆಗಿದೆ ಎಂಬುದಕ್ಕೆ ಸಾಕ್ಷಿ ನೀಡಿದ ಎಸ್‌ಐಟಿ! ನಾಲ್ವರ ಬಂಧನ

ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ತುಪ್ಪ ಕಲಬೆರಕೆ ಕುರಿತು ನೀಡಲಾದ ಎನ್‌ಡಿಡಿಬಿ ವರದಿಯನ್ನು ಉಲ್ಲೇಖಿಸಿ ಅವರು ಸ್ಪಷ್ಟಪಡಿಸಿದರು. ಈ ವಿಷಯ ಸರ್ಕಾರದ ಗಮನಕ್ಕೆ ಬಂದ ನಂತರ, ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲು ನಿರ್ಧರಿಸಲಾಯಿತು. ಇದನ್ನೂ ಅವರು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಹೋದರು. ಇದರಲ್ಲಿ ಯಾವುದೇ ರಾಜಕೀಯ ಭಾಗವಹಿಸುವಿಕೆ ಇರಬಾರದು, ಎಸ್‌ಐಟಿ ರಚಿಸಿ ತನಿಖೆ ನಡೆಸಬೇಕು ಎಂದು ನ್ಯಾಯಾಲಯ ಹೇಳಿದೆ ಎಂದು ಸಿಎಂ ಚಂದ್ರಬಾಬು ನಾಯ್ಡು ಹೇಳಿದರು.

ಎಸ್‌ಐಟಿ ವರದಿಯ ಪ್ರಕಾರ ಕ್ರಮ ಕೈಗೊಳ್ಳಲು ಸರ್ಕಾರ ಏಕವ್ಯಕ್ತಿ ಸಮಿತಿಯನ್ನು ರಚಿಸಿದೆ. ಏಕಸದಸ್ಯ ಸಮಿತಿಯ ವಿರುದ್ಧ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಇದನ್ನೂ ಓದಿ: ತಿರುಪತಿ ಲಡ್ಡು ಇತಿಹಾಸ ಮತ್ತು ಉತ್ಪಾದನೆ: ಪವಿತ್ರ ಪ್ರಸಾದ ಕುರಿತು ಕುತೂಹಲಕಾರಿ ಸಂಗತಿಗಳು ಇಲ್ಲಿವೆ

2022ರಲ್ಲಿ ತುಪ್ಪ ಕಲಬೆರಕೆಯ ಕುರಿತು ಸಿಎಫ್‌ಟಿಆರ್‌ಐ ತನ್ನ ವರದಿಯನ್ನು ನೀಡಿದ್ದರೂ, ಆಗಿನ ಟಿಟಿಡಿ ಅಧ್ಯಕ್ಷರು ಅದನ್ನು ಒಪ್ಪಿರಲಿಲ್ಲ. ನಿಯಮಗಳನ್ನು ಗಾಳಿಗೆ ತೂರಿ ಅರ್ಹತೆ ಇಲ್ಲದ ಕಂಪನಿಗಳ ಜೊತೆ ತುಪ್ಪ ಪೂರೈಕೆ ಒಪ್ಪಂದಗಳನ್ನು ಮಾಡಿಕೊಳ್ಳಲಾಯಿತು. ಟಿಟಿಡಿ ಅಧ್ಯಕ್ಷ ಸುಬ್ಬಾರೆಡ್ಡಿ ಅವರ ಆಪ್ತ ಸಹಾಯಕ ಚಿನ್ನಪ್ಪಣ್ಣ 4.5 ಕೋಟಿ ರೂ. ಲಂಚ ಪಡೆದಿದ್ದಾರೆ. ಕಲಬೆರಕೆ ತುಪ್ಪ ತಯಾರಿಸಲು ವಿವಿಧ ರೀತಿಯ ರಾಸಾಯನಿಕಗಳನ್ನು ಬಳಸಲಾಗುತ್ತಿತ್ತು ಎಂದು ಕಂಡುಬಂದಿದೆ ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ವ್ಯಕ್ತಿಯನ್ನು ಚೀಲಕ್ಕೆ ತುಂಬಿಕೊಂಡು ತಂದು ಕೊರಿಯರ್ ಮಾಡುವಂತೆ ಪಟ್ಟು
ವ್ಯಕ್ತಿಯನ್ನು ಚೀಲಕ್ಕೆ ತುಂಬಿಕೊಂಡು ತಂದು ಕೊರಿಯರ್ ಮಾಡುವಂತೆ ಪಟ್ಟು
ಅಪ್ಪು ಅಭಿಮಾನಿಗಳ ಪುಣ್ಯದ ಕೆಲಸ: ಮನಸಾರೆ ಹೊಗಳಿದ ನಟ ಪ್ರಥಮ್
ಅಪ್ಪು ಅಭಿಮಾನಿಗಳ ಪುಣ್ಯದ ಕೆಲಸ: ಮನಸಾರೆ ಹೊಗಳಿದ ನಟ ಪ್ರಥಮ್
ಧಾರವಾಡದಲ್ಲಿ ಭಾರೀ ಮಳೆ: ಕಲ್ಲಘಟಗಿ ರಸ್ತೆ ತುಂಬೆಲ್ಲಾ ಆಲಿಕಲ್ಲು
ಧಾರವಾಡದಲ್ಲಿ ಭಾರೀ ಮಳೆ: ಕಲ್ಲಘಟಗಿ ರಸ್ತೆ ತುಂಬೆಲ್ಲಾ ಆಲಿಕಲ್ಲು
ಮಂಗಳೂರಿನಲ್ಲಿ ಕಾರಿನಿಂದ ಗುದ್ದಿ ಕೊಲೆಗೆ ಯತ್ನ: ಭಯಾನಕ ವಿಡಿಯೋ
ಮಂಗಳೂರಿನಲ್ಲಿ ಕಾರಿನಿಂದ ಗುದ್ದಿ ಕೊಲೆಗೆ ಯತ್ನ: ಭಯಾನಕ ವಿಡಿಯೋ
ಐಪಿಎಲ್​ಗಾಗಿ ಭಾರತಕ್ಕೆ ಬಂದಿಳಿದ ವಿರಾಟ್ ಕೊಹ್ಲಿ
ಐಪಿಎಲ್​ಗಾಗಿ ಭಾರತಕ್ಕೆ ಬಂದಿಳಿದ ವಿರಾಟ್ ಕೊಹ್ಲಿ
ಆರೋಗ್ಯ ಇಲಾಖೆ ಕಾರ್ಯಕ್ಕೆ ಸ್ವಪಕ್ಷೀಯ ಶಾಸಕರ ಅಸಮಾಧಾನ, ಆಗಿದ್ದೇನು?
ಆರೋಗ್ಯ ಇಲಾಖೆ ಕಾರ್ಯಕ್ಕೆ ಸ್ವಪಕ್ಷೀಯ ಶಾಸಕರ ಅಸಮಾಧಾನ, ಆಗಿದ್ದೇನು?
‘ಕೆಡಿ’ ಚಿತ್ರತಂಡದ ವಿರುದ್ಧ ಕ್ರಮ ತೆಗೆದುಕೊಳ್ಳಲು ಮಹಿಳಾ ಆಯೋಗ ಪತ್ರ
‘ಕೆಡಿ’ ಚಿತ್ರತಂಡದ ವಿರುದ್ಧ ಕ್ರಮ ತೆಗೆದುಕೊಳ್ಳಲು ಮಹಿಳಾ ಆಯೋಗ ಪತ್ರ
ಇನ್ಸ್​​ಪೆಕ್ಟರ್ ಸಂದೇಶ್ ಮತ್ತಷ್ಟು ಲೀಲೆಗಳು ಬಯಲು: ಹೊಸ ಆಡಿಯೋ ವೈರಲ್​​
ಇನ್ಸ್​​ಪೆಕ್ಟರ್ ಸಂದೇಶ್ ಮತ್ತಷ್ಟು ಲೀಲೆಗಳು ಬಯಲು: ಹೊಸ ಆಡಿಯೋ ವೈರಲ್​​
ಬೆಳಗಾವಿಯಲ್ಲಿ ದಿಢೀರ್ ಆಲಿಕಲ್ಲು ಸಹಿತ ಮಳೆ ಅಬ್ಬರ: ವಾಹನ ಸವಾರರು ಪರದಾಟ
ಬೆಳಗಾವಿಯಲ್ಲಿ ದಿಢೀರ್ ಆಲಿಕಲ್ಲು ಸಹಿತ ಮಳೆ ಅಬ್ಬರ: ವಾಹನ ಸವಾರರು ಪರದಾಟ
ಅಪ್ಪು ಸಮಾಧಿಗೆ ಪೂಜೆ ಮಾಡಿದ ಶಿವರಾಜ್ ಕುಮಾರ್: ವಿಡಿಯೋ ನೋಡಿ
ಅಪ್ಪು ಸಮಾಧಿಗೆ ಪೂಜೆ ಮಾಡಿದ ಶಿವರಾಜ್ ಕುಮಾರ್: ವಿಡಿಯೋ ನೋಡಿ