ಹರ್ಷ ಎಂದು ಹೆಸರು ಬದಲಿಸಿಕೊಂಡು ಯುವತಿಗೆ ಪ್ರಪೋಸ್ ಮಾಡಿದ್ದ ಅರ್ಷದ್, ಆಮೇಲೇನಾಯ್ತು, ಇಲ್ಲಿದೆ ಮಾಹಿತಿ

ಯುವಕನೊಬ್ಬ ತನ್ನ ನಿಜವಾದ ಗುರುತನ್ನು ಮರೆಮಾಚಿ ಯುವತಿಗೆ ಮೋಸಮಾಡಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಅರ್ಷದ್ ಎಂಬ ಯುವಕ ತನ್ನ ಹೆಸರನ್ನು ಹರ್ಷ ಎಂದು ಬದಲಾಯಿಸಿಕೊಂಡು ಯುವತಿಗೆ ಪ್ರೇಮ ನಿವೇದನೆ ಮಾಡಿದ್ದಾನೆ, ಆಗ ಆಕೆಯೂ ಒಪ್ಪಿಕೊಂಡಿದ್ದಾಳೆ, ಆದರೆ ಬಳಿಕ ಆತನ ವರ್ತನೆಯಿಂದ ಅನುಮಾನ ಬಂದು ಬಜರಂಗದಳದವರಿಗೆ ಕರೆ ಮಾಡಿದ್ದಾಳೆ. ಬಳಿಕ ಅವರು ಬಂದು ವಿಚಾರಿಸುವಾಗ ಆತ ಅನ್ಯ ಸಮುದಾಯದವನು ಎಂಬುದು ತಿಳಿದುಬಂದಿದೆ.

ಹರ್ಷ ಎಂದು ಹೆಸರು ಬದಲಿಸಿಕೊಂಡು ಯುವತಿಗೆ ಪ್ರಪೋಸ್ ಮಾಡಿದ್ದ ಅರ್ಷದ್, ಆಮೇಲೇನಾಯ್ತು, ಇಲ್ಲಿದೆ ಮಾಹಿತಿ
ಅರ್ಷದ್Image Credit source: TV9 Bharatvarsh
Follow us
ನಯನಾ ರಾಜೀವ್
|

Updated on: Feb 14, 2024 | 12:57 PM

ತನ್ನ ನಿಜವಾದ ಗುರುತನ್ನು ಮರೆಮಾಚಿ ಹರ್ಷ ಎಂಬ ಹೆಸರಿನಲ್ಲಿ ಯುವತಿಯನ್ನು ಪ್ರೀತಿಯ ಬಲೆಗೆ ಬೀಳಿಸಿದ್ದ ಅರ್ಷದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆತ ತನ್ನನ್ನು ಹರ್ಷ ಎಂದು ಯುವತಿಗೆ ಪರಿಚಯಿಸಿಕೊಂಡಿದ್ದ, ಆಕೆಗೆ ಪ್ರೇಮ ನಿವೇದನೆ ಮಾಡುವ ಸಂದರ್ಭದಲ್ಲಿ ಭಜರಂಗದಳದ ಕಾರ್ಯಕರ್ತರು ಬಂದು ಆತನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಇಂದೋರ್‌ನ ಚಂದನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅನ್ಯ ಸಮುದಾಯದ ಯುವಕನೊಬ್ಬ ತಾನು ಹಿಂದೂ ಎಂದು ನಂಬಿಸಿದ್ದ ಆಕೆಗೆ ಪ್ರೇಮ ನಿವೇದನೆ ಮಾಡಲು ಅಲ್ಲಿಗೆ ಬಂದಿದ್ದ, ಆರೋಪಿಯನ್ನು ಅರ್ಷದ್ ಎಂದು ಗುರುತಿಸಲಾಗಿದೆ.

ಹುಡುಗಿ ಬಳಿ ತನ್ನ ಹೆಸರು ಹರ್ಷ ಎಂದು ಆತ ಹೇಳಿದ್ದ, ಆರೋಪಿಯ ಪ್ರೇಮ ನಿವೇದನೆಯನ್ನು ಆಕೆ ಒಪ್ಪಿಕೊಂಡಿದ್ದಳು, ಬಳಿಕ ಆಕೆಯ ಮನೆಗೂ ಆತ ಬಂದಿದ್ದ ಎನ್ನಲಾಗಿದೆ. ಆಕೆಯ ಬಳಿ ಬಾ ವಾಕಿಂಗ್​ಗೆ ಹೋಗೋಣ ಎಂದು ಪದೇ ಪದೇ ಹೇಳುತ್ತಿದ್ದ, ಬಳಿಕ ಆತನ ವರ್ತನೆ ಸ್ವಲ್ಪ ಬದಲಾಗಿತ್ತು, ಅನುಮಾನಗೊಂಡ ಯುವತಿ ಬಜರಂಗದಳಕ್ಕೆ ವಿಷಯ ಮುಟ್ಟಿಸಿದ್ದಾರೆ. ಆರೋಪಿಯ ಬಳಿ ಆಧಾರ್ ಕಾರ್ಡ್​ ತೋರಿಸುವಂತೆ ಕೇಳಿಕೊಂಡಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ.

ಮತ್ತಷ್ಟು ಓದಿ: Memorable Love Proposal: ಗೆಳತಿಗೆ ವಿಶಿಷ್ಟ ರೀತಿಯಲ್ಲಿ ಪ್ರಪೋಸ್ ಮಾಡಿದ ಯುವಕ

ಆರೋಪಿಯ ಹೆಸರು ಅರ್ಷದ್ ಮತ್ತು ಆತನ ತಂದೆಯ ಹೆಸರು ಸಲೀಂ ಎಂದು ತಿಳಿದುಬಂದಿದೆ. ಇದಾದ ನಂತರ ಪೊಲೀಸರು ಆತನಿಗೆ ತೀವ್ರವಾಗಿ ಥಳಿಸಿ ನಂತರ ಪೊಲೀಸರನ್ನು ಕರೆಸಿ ಒಪ್ಪಿಸಿದ್ದಾರೆ.

ಸಂತ್ರಸ್ತೆ ಆರೋಪಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಕಿರುಕುಳ ಮತ್ತು ಲವ್ ಜಿಹಾದ್ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪಿಎನನ್ನು ಇದುವರೆಗೆ ಯಾಕೆ ಬಂಧಿಸಿಲ್ಲ? ರವಿ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪಿಎನನ್ನು ಇದುವರೆಗೆ ಯಾಕೆ ಬಂಧಿಸಿಲ್ಲ? ರವಿ
ನನ್ನ ಸಹೋದರನಿಂದ ಸಚಿನ್ ರೂ. 80 ಲಕ್ಷ ತೆಗೆದುಕೊಂಡಿದ್ದ: ಪ್ರಕಾಶ್ ಕಪನೂರ್
ನನ್ನ ಸಹೋದರನಿಂದ ಸಚಿನ್ ರೂ. 80 ಲಕ್ಷ ತೆಗೆದುಕೊಂಡಿದ್ದ: ಪ್ರಕಾಶ್ ಕಪನೂರ್