AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅರಾಜಕತಾವಾದಿಗಳ ಫ್ಲಾಪ್ ಶೋ, ಪ್ರಜಾಪ್ರಭುತ್ವದ ಗೆಲುವು’; ದೆಹಲಿ ಪ್ರತಿಭಟನಾಕಾರರ ವಿರುದ್ಧ ಬಿಜೆಪಿ ವಾಗ್ದಾಳಿ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಹಾಗೂ ಸಂಸದ ಸಂಬಿತ್ ಪಾತ್ರ, ಇದನ್ನು ದೆಹಲಿಯಲ್ಲಿ ಅಶಾಂತಿ ಸೃಷ್ಟಿಸಲು ವಿಪಕ್ಷಗಳು ನಡೆಸುತ್ತಿರುವ ಯತ್ನ ಎಂದು ಬಣ್ಣಿಸಿದ್ದಾರೆ. ಈ ಪ್ರತಿಭಟನೆಯು ದೇಶದ ನೈಜ ಮನಸ್ಥಿತಿಯನ್ನು ಬಿಂಬಿಸುತ್ತಿಲ್ಲ ಎಂದಿರುವ ಅವರು, ಉದ್ರೇಕಿತ ಗುಂಪಿನ ಷಡ್ಯಂತ್ರದ ವಿರುದ್ಧ ಪ್ರಜಾಪ್ರಭುತ್ವ ಜಯಗಳಿಸಿದೆ ಎಂದು ಪ್ರತಿಪಾದಿಸಿದ್ದಾರೆ.

‘ಅರಾಜಕತಾವಾದಿಗಳ ಫ್ಲಾಪ್ ಶೋ, ಪ್ರಜಾಪ್ರಭುತ್ವದ ಗೆಲುವು’; ದೆಹಲಿ ಪ್ರತಿಭಟನಾಕಾರರ ವಿರುದ್ಧ ಬಿಜೆಪಿ ವಾಗ್ದಾಳಿ
ಸಂಬಿತ್ ಪಾತ್ರImage Credit source: PTI
ಸುಷ್ಮಾ ಚಕ್ರೆ
|

Updated on: Oct 10, 2026 | 7:45 PM

Share

ನವದೆಹಲಿ, ಅಕ್ಟೋಬರ್ 10: ರಾಜಧಾನಿ ದೆಹಲಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯು ಸಂಪೂರ್ಣವಾಗಿ “ಫ್ಲಾಪ್ ಶೋ” ಆಗಿದೆ ಎಂದು ಬಿಜೆಪಿ ನಾಯಕ ಹಾಗೂ ಸಂಸದ ಸಂಬಿತ್ ಪಾತ್ರ ಹೇಳಿದ್ದಾರೆ. ಇದೇ ವೇಳೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿದೇಶಿ ಶಕ್ತಿಗಳೊಂದಿಗೆ ಕೈಜೋಡಿಸಿ ದೇಶದಲ್ಲಿ ಅರಾಜಕತೆಯನ್ನು ಹರಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.   ಜಂತರ್ ಮಂತರ್ ಪ್ರತಿಭಟನಾ ಸ್ಥಳಕ್ಕೆ ಹೊರಟಿದ್ದ ನೂರಾರು ಯುವಕರು ಹಾಗೂ ಹಲವು ರಾಜಕಾರಣಿಗಳನ್ನು ಪೊಲೀಸರು ವಶಕ್ಕೆ ಪಡೆದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಬಿತ್ ಪಾತ್ರ, ಇದು ಉದ್ರೇಕಿತ ಗುಂಪಿನ ಆಡಳಿತದ ವಿರುದ್ಧ ಪ್ರಜಾಪ್ರಭುತ್ವ ಸಾಧಿಸಿದ ಗೆಲುವು ಎಂದು ಬಣ್ಣಿಸಿದ್ದಾರೆ.

ಬಿಜೆಪಿಯ ಪ್ರಧಾನ ಕಚೇರಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಸಂಬಿತ್ ಪಾತ್ರ, ರಾಹುಲ್ ಗಾಂಧಿ ಅವರನ್ನು ನಾಲಾಯಕ್ ನಾಯಕ ಎಂದು ಕರೆದಿದ್ದು, ಶುಕ್ರವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಸಭೆಯಲ್ಲಿ ಇಂಡಿಯ ಮೈತ್ರಿಕೂಟದ ಮತ ಕಳ್ಳತನದ ಆರೋಪವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ ಎಂದು ರಾಹುಲ್ ನೀಡಿದ್ದ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದರು.

“ಜಂತರ್ ಮಂತರ್‌ನಲ್ಲಿ ಏನು ನಡೆಯುತ್ತಿದೆಯೋ, ಟಿವಿ ಹಾಗೂ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಏನು ತೋರಿಸಲಾಗುತ್ತಿದೆಯೋ ಅದು ಭಾರತದ ನೈಜ ಚಿತ್ರಣವಲ್ಲ. ಭಾರತವು ಶಾಂತಿಯುತವಾಗಿದೆ ಮತ್ತು ಉತ್ತಮ ಆಡಳಿತದೊಂದಿಗೆ ಮುನ್ನಡೆಯುತ್ತಿದೆ” ಎಂದು ಸಂಬಿತ್ ಪಾತ್ರ ಹೇಳಿದ್ದಾರೆ.

ಇದನ್ನೂ ಓದಿ: ‘ನೀವು ಅನುಮಾನಿಸುತ್ತಿರುವುದು ವ್ಯವಸ್ಥೆಯನ್ನೋ, ಫಲಿತಾಂಶವನ್ನೋ?’; ಚುನಾವಣಾ ಆಯೋಗದ ಪರ ನಿಂತ 124 ಮಾಜಿ ಐಎಎಸ್, ಐಎಫ್‌ಎಸ್ ಅಧಿಕಾರಿಗಳು

ಈ ಪ್ರತಿಭಟನೆಯ ಮೂಲಕ ದೇಶದ ರಾಜಧಾನಿ ಹಾಗೂ ಇಡೀ ಭಾರತವನ್ನು ಬಂಧಿಯಾಗಿಸುವ ಯತ್ನ ನಡೆದಿತ್ತು ಎಂದು ಅವರು ಆರೋಪಿಸಿದ್ದಾರೆ. ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ (ಎಸ್​ಐಆರ್​) ನೆಪದಲ್ಲಿ ಮತದಾರರ ಪಟ್ಟಿಯನ್ನು ತಿದ್ದಲಾಗಿದೆ ಮತ್ತು ಮತದಾರರಾಗಿ ನೋಂದಾಯಿಸಿಕೊಳ್ಳಲು ಪ್ರಮುಖ ದಾಖಲೆಯಾದ ಫಾರ್ಮ್ 6 ಅನ್ನು ಬದಲಾಯಿಸಲು ತಮ್ಮ ಇಬ್ಬರು ಸಹೋದ್ಯೋಗಿಗಳನ್ನು ಬದಿಗೊತ್ತಿದ್ದಾರೆ ಎಂದು ಆರೋಪ ಎದುರಿಸುತ್ತಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಕರೆ ನೀಡಿದ್ದ ಪ್ರತಿಭಟನೆಯನ್ನು ತಡೆಯಲು ಇಂದು ದೆಹಲಿಯಲ್ಲಿ ಬಿಗಿ ಭದ್ರತೆ ಒದಗಿಸಲಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More