AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಯನಾಡ್ ಭೂಕುಸಿತ: ಮಾಧ್ಯಮಗಳೊಂದಿಗೆ ಮಾತನಾಡದಂತೆ ರಾಜ್ಯದ ವಿಜ್ಞಾನ ಸಂಸ್ಥೆಗಳಿಗೆ ಕೇರಳ ಸರ್ಕಾರ ಸೂಚನೆ

ರಾಜ್ಯ ಪರಿಹಾರ ಆಯುಕ್ತ ಮತ್ತು ವಿಪತ್ತು ನಿರ್ವಹಣೆಯ ಪ್ರಧಾನ ಕಾರ್ಯದರ್ಶಿ ಟಿಂಕು ಬಿಸ್ವಾಲ್ ಅವರ ಪತ್ರದಲ್ಲಿ “ವೈಜ್ಞಾನಿಕ ಸಮುದಾಯವು ತಮ್ಮ ಅಭಿಪ್ರಾಯಗಳನ್ನು ಮತ್ತು ಅಧ್ಯಯನ ವರದಿಗಳನ್ನು ಮಾಧ್ಯಮಗಳಿಗೆ ಹಂಚಿಕೊಳ್ಳದಂತೆ ತಮ್ಮನ್ನು ತಾವು ನಿರ್ಬಂಧಿಸುವಂತೆ ನಿರ್ದೇಶಿಸಬೇಕು. ವಿಪತ್ತು ಪೀಡಿತ ಪ್ರದೇಶದಲ್ಲಿ ಯಾವುದೇ ಅಧ್ಯಯನವನ್ನು ಕೈಗೊಳ್ಳಬೇಕಾದರೆ, ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯಬೇಕು ಎಂದು ಹೇಳಲಾಗಿದೆ.

ವಯನಾಡ್ ಭೂಕುಸಿತ: ಮಾಧ್ಯಮಗಳೊಂದಿಗೆ ಮಾತನಾಡದಂತೆ ರಾಜ್ಯದ ವಿಜ್ಞಾನ ಸಂಸ್ಥೆಗಳಿಗೆ ಕೇರಳ ಸರ್ಕಾರ ಸೂಚನೆ
ಕೇರಳ ಸಿಎಂ
ರಶ್ಮಿ ಕಲ್ಲಕಟ್ಟ
|

Updated on: Aug 01, 2024 | 8:40 PM

Share

ತಿರುವನಂತಪುರಂ ಆಗಸ್ಟ್ 01: ಕೇರಳ ರಾಜ್ಯ ಪರಿಹಾರ ಆಯುಕ್ತರು ಮತ್ತು ವಿಪತ್ತು ನಿರ್ವಹಣೆಯ ಪ್ರಧಾನ ಕಾರ್ಯದರ್ಶಿ ಅವರು ವಿಜ್ಞಾನ ತಂತ್ರಜ್ಞಾನ ಇಲಾಖೆಗೆ ಪತ್ರ ಬರೆದಿದ್ದು, ವಯನಾಡ್ ಭೂಕುಸಿತದ ಬಗ್ಗೆ ವೈಜ್ಞಾನಿಕ ಸಮುದಾಯವು ಮಾಧ್ಯಮಗಳೊಂದಿಗೆ ಮಾತನಾಡುವುದು ಬೇಡ ಎಂದು ಹೇಳಿದ. ವಿಪತ್ತು ಪೀಡಿತ ವಲಯವೆಂದು ಗುರುತಿಸಲಾಗಿರುವ ವಯನಾಡಿನ ಮೇಪ್ಪಾಡಿ ಪ್ರದೇಶಕ್ಕೆ ಭೇಟಿ ನೀಡುವುದನ್ನು ತಡೆಯಲು ಕೇರಳದ ಎಲ್ಲಾ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗಳನ್ನು ಕೇಳಲಾಗುತ್ತದೆ. ರಾಜ್ಯ ಪರಿಹಾರ ಆಯುಕ್ತ ಮತ್ತು ವಿಪತ್ತು ನಿರ್ವಹಣೆಯ ಪ್ರಧಾನ ಕಾರ್ಯದರ್ಶಿ ಟಿಂಕು ಬಿಸ್ವಾಲ್ ಅವರ ಪತ್ರದಲ್ಲಿ “ವೈಜ್ಞಾನಿಕ ಸಮುದಾಯವು ತಮ್ಮ ಅಭಿಪ್ರಾಯಗಳನ್ನು ಮತ್ತು ಅಧ್ಯಯನ ವರದಿಗಳನ್ನು ಮಾಧ್ಯಮಗಳಿಗೆ ಹಂಚಿಕೊಳ್ಳದಂತೆ ತಮ್ಮನ್ನು ತಾವು ನಿರ್ಬಂಧಿಸುವಂತೆ ನಿರ್ದೇಶಿಸಬೇಕು. ವಿಪತ್ತು ಪೀಡಿತ ಪ್ರದೇಶದಲ್ಲಿ ಯಾವುದೇ ಅಧ್ಯಯನವನ್ನು ಕೈಗೊಳ್ಳಬೇಕಾದರೆ, ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯಬೇಕು ಎಂದು ಹೇಳಲಾಗಿದೆ.

ವಿಪತ್ತಿನ ಸಂದರ್ಭದಲ್ಲಿ ಅನಗತ್ಯವಾದ ಸಿದ್ಧಾಂತಗಳು ಮತ್ತು ಪ್ರತಿ-ಸಿದ್ಧಾಂತಗಳನ್ನು ಪ್ರಚೋದಿಸದಂತೆ ನೋಡಿಕೊಳ್ಳಲು ಇದನ್ನು ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರದ ಮೂಲವೊಂದು ಹೇಳಿರುವುದಾಗಿ ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

ಕೇರಳ ಫಾರೆಸ್ಟ್ ರಿಸರ್ಚ್ ಇನ್ಸ್ಟಿಟ್ಯೂಟ್ ಮತ್ತು ಇನ್ಸ್ಟಿಟ್ಯೂಟ್ ಫಾರ್ ಕ್ಲೈಮೇಟ್ ಚೇಂಜ್ ಸ್ಟಡೀಸ್ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಡಿಯಲ್ಲಿರುವ ಸಂಸ್ಥೆಗಳಾಗಿವೆ.

ಜುಲೈ 30 ರಂದು ವಯನಾಡ್‌ನಲ್ಲಿ ಸಂಭವಿಸಿದ ಮೂರು ಭೂಕುಸಿತಗಳು ಕನಿಷ್ಠ 250 ಸಾವುಗಳಿಗೆ ಕಾರಣವಾಗಿದ್ದು, ಸುಮಾರು 200 ಜನರು ಇನ್ನೂ ಕಾಣೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: ಮುಂಡಕೈ ಭೂಕುಸಿತ ಪೀಡಿತ ಪ್ರದೇಶದಲ್ಲಿ ಯಾರೂ ಬದುಕುಳಿದಿಲ್ಲ: ಕೇರಳ ಸಿಎಂ ಪಿಣರಾಯಿ ವಿಜಯನ್

ಪಶ್ಚಿಮ ಘಟ್ಟಗಳಲ್ಲಿರುವ ಗುಡ್ಡಗಾಡು ಜಿಲ್ಲೆಯಾದ ವಯನಾಡ್ ವಿಶೇಷವಾಗಿ ಮಳೆಗಾಲದಲ್ಲಿ ಭೂಕುಸಿತಕ್ಕೆ ಒಳಗಾಗುತ್ತದೆ. 2020ರಲ್ಲಿ ಇಡುಕ್ಕಿ ಜಿಲ್ಲೆಯ ಪೆಟ್ಟಿಮುಡಿಯಲ್ಲಿ ಸಂಭವಿಸಿದ ಭೂಕುಸಿತವು 66 ಜನರನ್ನು ಬಲಿ ತೆಗೆದುಕೊಂಡ ನಂತರ ಕೇರಳದಲ್ಲಿ ಸಂಭವಿಸಿದ ಅತೀ ದೊಡ್ಡ ಭೂಕುಸಿತ ಇದಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಜಸ್ಥಾನದಲ್ಲಿ ಭಾರೀ ಪ್ರವಾಹ; ಒಂದೇ ದಿನದಲ್ಲಿ 6 ಜನ ಸಾವು
ರಾಜಸ್ಥಾನದಲ್ಲಿ ಭಾರೀ ಪ್ರವಾಹ; ಒಂದೇ ದಿನದಲ್ಲಿ 6 ಜನ ಸಾವು
ಭಾವಿ ಪತಿಯ ಜೊತೆಗೆ ಆರತಿ ಮಾಡಿದ ಆಂಕರ್ ಅನುಶ್ರೀ, ಹಳೆ ವಿಡಿಯೋ ವೈರಲ್
ಭಾವಿ ಪತಿಯ ಜೊತೆಗೆ ಆರತಿ ಮಾಡಿದ ಆಂಕರ್ ಅನುಶ್ರೀ, ಹಳೆ ವಿಡಿಯೋ ವೈರಲ್
ಬುಧವಾರ ಪುನಃ ವಿಚಾರಣೆಗೆ ಬರಲು ಹೇಳಿದ್ದಾರೆ: ಭೈರತಿ ಬಸವರಾಜ
ಬುಧವಾರ ಪುನಃ ವಿಚಾರಣೆಗೆ ಬರಲು ಹೇಳಿದ್ದಾರೆ: ಭೈರತಿ ಬಸವರಾಜ
ಶ್ರೀಗಳ ವಿರುದ್ಧ ಆಡಿದ ಮಾತನ್ನು ಕಾಶಪ್ಪನವರ್ ವಾಪಸ್ಸ ಪಡೆಯಬೇಕು: ವೀರಣ್ಣ
ಶ್ರೀಗಳ ವಿರುದ್ಧ ಆಡಿದ ಮಾತನ್ನು ಕಾಶಪ್ಪನವರ್ ವಾಪಸ್ಸ ಪಡೆಯಬೇಕು: ವೀರಣ್ಣ
ಬಸವರಾಜ ಆಸಂಗಿ, ಲಕ್ಷ್ಮಿ ವಿರುದ್ಧ ಪೊಲೀಸ್ ದೂರು ಸಲ್ಲಿಸಿರುವ ಸಂತ್ರಸ್ತೆ
ಬಸವರಾಜ ಆಸಂಗಿ, ಲಕ್ಷ್ಮಿ ವಿರುದ್ಧ ಪೊಲೀಸ್ ದೂರು ಸಲ್ಲಿಸಿರುವ ಸಂತ್ರಸ್ತೆ
ಎಂಎ ಸಲೀಂರನ್ನು ಐಜಿ-ಡಿಜಿಪಿ ನೇಮಕಾತಿ ಹಿಂದೆ ರಾಜಕೀಯ ಇದೆ: ಅನುಪಮಾ ಶೆಣೈ
ಎಂಎ ಸಲೀಂರನ್ನು ಐಜಿ-ಡಿಜಿಪಿ ನೇಮಕಾತಿ ಹಿಂದೆ ರಾಜಕೀಯ ಇದೆ: ಅನುಪಮಾ ಶೆಣೈ
ಹ್ಯಾಟ್ರಿಕ್ ವಿಕೆಟ್ ಉರುಳಿಸಿದ ಪಾಕ್ ಮೂಲದ ಫರ್ಹಾನ್
ಹ್ಯಾಟ್ರಿಕ್ ವಿಕೆಟ್ ಉರುಳಿಸಿದ ಪಾಕ್ ಮೂಲದ ಫರ್ಹಾನ್
ಸಮಸ್ಯೆ ಹೆಚ್ಚುತ್ತಿದೆ, ಕೂಡಲೇ ಸರ್ಕಾರ ಮಧ್ಯಪ್ರವೇಶಿಸಬೇಕು: ಧಾಬಾ ಮಾಲೀಕ
ಸಮಸ್ಯೆ ಹೆಚ್ಚುತ್ತಿದೆ, ಕೂಡಲೇ ಸರ್ಕಾರ ಮಧ್ಯಪ್ರವೇಶಿಸಬೇಕು: ಧಾಬಾ ಮಾಲೀಕ
ಸಾಧನಾ ಸಮಾವೇಶದಿಂದ ವಾಪಸ್​ ಬರುತ್ತಿದ್ದ ಡಿಕೆಶಿ ಎಸ್ಕಾರ್ಟ್​​ ವಾಹನ ಪಲ್ಟಿ
ಸಾಧನಾ ಸಮಾವೇಶದಿಂದ ವಾಪಸ್​ ಬರುತ್ತಿದ್ದ ಡಿಕೆಶಿ ಎಸ್ಕಾರ್ಟ್​​ ವಾಹನ ಪಲ್ಟಿ
ಸಿಎಂ ಸಿದ್ದರಾಮಯ್ಯರನ್ನು ವಿನಾಕಾರಣ ದೂಷಿಸಲಾಗುತ್ತಿದೆ: ಕಾಶಪ್ಪನವರ್
ಸಿಎಂ ಸಿದ್ದರಾಮಯ್ಯರನ್ನು ವಿನಾಕಾರಣ ದೂಷಿಸಲಾಗುತ್ತಿದೆ: ಕಾಶಪ್ಪನವರ್