AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ದೇವಸ್ಥಾನದಲ್ಲಿ ಪ್ರಸಾದವಾಗಿ ನೂಡಲ್ಸ್, ಪಿಜ್ಜಾ ಕೊಡ್ತಾರೆ!

ದೇವಸ್ಥಾನಗಳಲ್ಲಿ ಪ್ರಸಾದದ ರೂಪದಲ್ಲಿ ಪುಳಿಯೋಗರೆಯನ್ನೋ, ಅವಲಕ್ಕಿಯನ್ನೋ, ಲಡ್ಡು ಅಥವಾ ಬೇರೆ ಸಿಹಿ ತಿನಿಸುಗಳನ್ನು ನೀಡುವ ಸಂಪ್ರದಾಯವಿದೆ. ಆದರೆ, ಈ ದೇವಾಲಯದಲ್ಲಿ ನೂಡಲ್ಸ್ ಮತ್ತು ಪಿಜ್ಜಾವನ್ನು ನೈವೇದ್ಯವಾಗಿ ನೀಡಲಾಗುತ್ತದೆಇದು ಕಾಳಿಯ ದೇವಸ್ಥಾನವಾಗಿದ್ದು, ಇಲ್ಲಿಯ ಪ್ರಸಾದ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ. . ವಿಭಿನ್ನವಾದ ಇತಿಹಾಸ ಹೊಂದಿರುವ ಈ ದೇವಾಲಯ ಎಲ್ಲಿದೆ ಎಂದು ನಿಮಗೆ ತಿಳಿದಿದೆಯೇ?

ಈ ದೇವಸ್ಥಾನದಲ್ಲಿ ಪ್ರಸಾದವಾಗಿ ನೂಡಲ್ಸ್, ಪಿಜ್ಜಾ ಕೊಡ್ತಾರೆ!
Noodles Prasada
ಸುಷ್ಮಾ ಚಕ್ರೆ
|

Updated on: Apr 06, 2026 | 7:59 PM

Share

ಕೊಲ್ಕತ್ತಾ, ಏಪ್ರಿಲ್ 6: ಭಾರತೀಯ ಭಕ್ತಿ, ಚೀನಾದ ಸಂಪ್ರದಾಯದ ಸಂಗಮವಾಗಿರುವ ಕೊಲ್ಕತ್ತಾದ ‘ಚೀನಾ ಕಾಳಿ ದೇವಸ್ಥಾನ’ದಲ್ಲಿ ಪಿಜ್ಜಾ ಮತ್ತು ನೂಡಲ್ಸ್​ ಅನ್ನೇ ಪ್ರಸಾದವಾಗಿ ನೀಡಲಾಗುತ್ತದೆ. ಹಲವು ದಶಕಗಳ ಹಿಂದೆ ಚೀನಾದಿಂದ ಇಲ್ಲಿ ನೆಲೆಸಿ ಬಂಗಾಳಿ ಸಂಸ್ಕೃತಿಯನ್ನು ಸ್ವೀಕರಿಸಿದವರು ಈ ದೇವಾಲಯವನ್ನು (Kali Temple) ನಿರ್ಮಿಸಿದರು. ಈ ಮಂದಿರ ವೈವಿಧ್ಯತೆಯಲ್ಲಿ ಏಕತೆಗೆ ಸಾಕ್ಷಿಯಾಗಿದೆ. ನೂಡಲ್ಸ್ ಮತ್ತು ಸೂಪ್ ಅನ್ನು ನೈವೇದ್ಯವಾಗಿ ನೀಡುವ ಈ ವಿಚಿತ್ರ ಪದ್ಧತಿಯ ಹಿಂದಿನ ವಿಷಯಗಳ ಕುರಿತಾದ ಮಾಹಿತಿ ಇಲ್ಲಿದೆ.

ಸಾಮಾನ್ಯವಾಗಿ ನಾವು ದೇವಸ್ಥಾನಗಳಿಗೆ ಹೋದಾಗ ನಮಗೆ ಲಡ್ಡು, ಪುಳಿಯೋಗರೆ, ಪೋಹಾ ಅಥವಾ ಹಣ್ಣುಗಳನ್ನು ಪ್ರಸಾದವಾಗಿ ನೀಡಲಾಗುತ್ತದೆ. ಆದರೆ ಈ ಒಂದು ದೇವಸ್ಥಾನದಲ್ಲಿ, ನೂಡಲ್ಸ್, ಮೊಮೊಸ್, ಪಾಸ್ತಾ ಮತ್ತು ಪಿಜ್ಜಾವನ್ನು ದೇವಿಗೆ ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಇದು ವಿಚಿತ್ರವೆನಿಸಬಹುದು ಆದರೆ ಇದು ಅಕ್ಷರಶಃ ನಿಜ. ಕೊಲ್ಕತ್ತಾದ ಚೈನಾಟೌನ್ ಎಂದು ಕರೆಯಲ್ಪಡುವ ಟ್ಯಾಂಗ್ರಾ ಪ್ರದೇಶದಲ್ಲಿ ನೆಲೆಗೊಂಡಿರುವ ಚೈನಾ ಕಾಳಿ ದೇವಸ್ಥಾನದ ವಿಶೇಷತೆಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ.

ಇದನ್ನೂ ಓದಿ: Global Shiva Temples: ಭಾರತದ ಹೊರಗೂ ಮೊಳಗುತ್ತಿದೆ ಹರಹರ ಮಹಾದೇವ ಘೋಷ; ಇವು ಜಗತ್ತಿನ ಪ್ರಸಿದ್ಧ 5 ಶಿವ ದೇವಾಲಯಗಳು

ಈ ದೇವಾಲಯವು ಕೆಲವು ದಶಕಗಳ ಇತಿಹಾಸವನ್ನು ಹೊಂದಿದೆ. ಈ ದೇವಾಲಯವನ್ನು ಕೋಲ್ಕತ್ತಾದ ಟ್ಯಾಂಗ್ರಾ ಪ್ರದೇಶದಲ್ಲಿ ನೆಲೆಸಿದ ಚೀನೀ ಸಮುದಾಯದ ಸದಸ್ಯರು ನಿರ್ಮಿಸಿದ್ದಾರೆ. ಅವರು ಚರ್ಮದ ಉದ್ಯಮದಲ್ಲಿ ಕೆಲಸ ಮಾಡುತ್ತಾ ಇಲ್ಲಿ ನೆಲೆಸಿದರು. ಬಳಿಕ ಸ್ಥಳೀಯ ಬಂಗಾಳಿ ಸಂಸ್ಕೃತಿಯನ್ನು ಅಳವಡಿಸಿಕೊಂಡರು. ಕಾಳಿ ದೇವಿಯ ಬಗ್ಗೆ ಅಪಾರ ಭಕ್ತಿಯನ್ನು ಬೆಳೆಸಿಕೊಂಡರು. ಅವರು ತಮ್ಮ ಸಂಪ್ರದಾಯಗಳು ಮತ್ತು ಸ್ಥಳೀಯ ಭಕ್ತಿಯನ್ನು ಸೇರಿಸುವ ಮೂಲಕ ಈ ವಿಶಿಷ್ಟ ದೇವಾಲಯವನ್ನು ವಿನ್ಯಾಸಗೊಳಿಸಿದರು. ಹೀಗಾಗಿಯೇ ಈ ಮಂದಿರದಲ್ಲಿ ಭಕ್ತರು ತಮ್ಮ ನೆಚ್ಚಿನ ಚೌಮೀನ್, ಮೊಮೊಸ್, ನೂಡಲ್ಸ್, ಸೂಪ್ ಮತ್ತು ಪಿಜ್ಜಾಗಳನ್ನು ದೇವಿಗೆ ನೈವೇದ್ಯವಾಗಿ ಅರ್ಪಿಸುತ್ತಾರೆ. ಪೂಜೆಯ ನಂತರ ಅದೇ ಪದಾರ್ಥಗಳನ್ನು ಪ್ರಸಾದವಾಗಿ ಭಕ್ತರಿಗೆ ವಿತರಿಸಲಾಗುತ್ತದೆ.

ಇದನ್ನೂ ಓದಿ: ವಿಶ್ವದ ಏಕೈಕ ಸ್ತ್ರೀ ರೂಪದ ಹನುಮಂತನ ದೇವಾಲಯ; ಇಲ್ಲಿನ ವಿಗ್ರಹದ ರಹಸ್ಯವೇನು ಗೊತ್ತೇ?

ಈ ದೇವಾಲಯವು ಕಾಳಿ ಮತ್ತು ಶಿವನ ವಿಗ್ರಹಗಳನ್ನು ಹೊಂದಿದೆ. ಪುರೋಹಿತರು ಮಂತ್ರಗಳನ್ನು ಪಠಿಸಿ, ಆರತಿಗಳನ್ನು ಮಾಡುವ ಮೂಲಕ ಧೂಪ ಮತ್ತು ದೀಪಗಳನ್ನು ಅರ್ಪಿಸುತ್ತಾರೆ. ಭಕ್ತಿಯು ಧಾರ್ಮಿಕ ಮತ್ತು ರಾಷ್ಟ್ರೀಯ ಗಡಿಗಳನ್ನು ಹೇಗೆ ಮೀರುತ್ತದೆ ಎಂಬುದಕ್ಕೆ ಈ ದೇವಾಲಯವು ಜೀವಂತ ಸಾಕ್ಷಿಯಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us