AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಲಪಾತದ ಮೇಲಿಂದ ಪ್ರೇಯಸಿಯನ್ನು ತಳ್ಳಿ ಕೊಂದ ಯುವಕ; ಸೆಲ್ಫೀ ತೆಗೆಯುವಾಗ ಜಾರಿ ಬಿದ್ದಳೆಂದು ಕತೆ ಕಟ್ಟಿದ

ಮಹಾರಾಷ್ಟ್ರದ ಯುವಕನೊಬ್ಬ ತನ್ನ ಪ್ರೇಯಸಿಯನ್ನು ಜಲಪಾತದ ಬಳಿ ವಾಕಿಂಗ್‌ಗೆ ಕರೆದುಕೊಂಡು ಹೋಗಿದ್ದ. ಆಗ ಆ ಯುವಕ ಆಕೆಯನ್ನು ಅಲ್ಲಿಂದ 1000 ಅಡಿ ಆಳದ ಕಂದಕಕ್ಕೆ ತಳ್ಳಿ, ನಂತರ ಇಡೀ ಘಟನೆಯನ್ನು ಅಪಘಾತ ಎಂದು ಪೊಲೀಸರಿಗೆ ವಿವರಿಸಲು ಪ್ರಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ದುರಂತ ಘಟನೆ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ ನಡೆದಿದೆ. ಆ ಯುವಕ ನೇರವಾಗಿ ಪೊಲೀಸ್ ಠಾಣೆಗೆ ಹೋದನು. ಅಲ್ಲಿ, ಅವನು ಜಲಪಾತದ ಮೇಲೆ ಎತ್ತರದಲ್ಲಿ ನಿಂತು ತನ್ನ ಗೆಳತಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಆಕೆ ಜಾರಿಬಿದ್ದು ಸಾವನ್ನಪ್ಪಿದ್ದಾಳೆ ಎಂದು ಕತೆ ಕಟ್ಟಿದ್ದ.

ಜಲಪಾತದ ಮೇಲಿಂದ ಪ್ರೇಯಸಿಯನ್ನು ತಳ್ಳಿ ಕೊಂದ ಯುವಕ; ಸೆಲ್ಫೀ ತೆಗೆಯುವಾಗ ಜಾರಿ ಬಿದ್ದಳೆಂದು ಕತೆ ಕಟ್ಟಿದ
ನೈಕ್‌ವಾಡಿ ಜಲಪಾತImage Credit source: X
ಸುಷ್ಮಾ ಚಕ್ರೆ
|

Updated on: Oct 13, 2026 | 2:04 PM

Share

ಕೊಲ್ಹಾಪುರ, ಅಕ್ಟೋಬರ್ 13: ಡೇಟಿಂಗ್‌ಗಾಗಿ ಜಲಪಾತಕ್ಕೆ ತೆರಳಿದ್ದ ವೇಳೆ, ಮದುವೆ ನಿರಾಕರಿಸಿದ ಯುವತಿಯನ್ನು ಪ್ರಿಯಕರನೇ 1,000 ಅಡಿ ಆಳದ ಕಮರಿಗೆ ತಳ್ಳಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ ವರದಿಯಾಗಿದೆ. ಈ ಘಟನೆಯನ್ನು ಮುಚ್ಚಿಹಾಕಲು ಆರೋಪಿಯು ಇದೊಂದು ಆಕಸ್ಮಿಕ ಅಪಘಾತ ಎಂದು ಪೊಲೀಸರನ್ನು ದಾರಿ ತಪ್ಪಿಸಲು ಯತ್ನಿಸಿದ್ದರೂ, ಅಂತಿಮವಾಗಿ ಸಿಕ್ಕಿಬಿದ್ದಿದ್ದಾನೆ. ಮಹಾರಾಷ್ಟ್ರದ ಪುಣೆಯಲ್ಲಿ ಇತ್ತೀಚೆಗೆ ನಡೆದಿದ್ದ ಇದೇ ರೀತಿಯ ಕೊಲೆ ಪ್ರಕರಣವೊಂದು ದೇಶಾದ್ಯಂತ ಸದ್ದು ಮಾಡಿತ್ತು. ಸಿಯಾ ಗೋಯಲ್ ಎನ್ನುವವಳು ತನ್ನ ಪ್ರೇಮಿಯೊಂದಿಗೆ ಸೇರಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ವ್ಯಕ್ತಿಯನ್ನು ಕೋಟೆಯಿಂದ ಕೆಳಗೆ ತಳ್ಳಿ ಕೊಲೆ ಮಾಡಿದ್ದಳು. ಇದೀಗ ಕೊಲ್ಹಾಪುರದಲ್ಲಿಯೂ ಅಂಥದ್ದೇ ಅಘಾತಕಾರಿ ಕೃತ್ಯ ಮರುಕಳಿಸಿದೆ.

ಶ್ರೀಪಾದ ದಿನಕರ್ ಎಂಬ 25 ವರ್ಷದ ವ್ಯಕ್ತಿ ತನ್ನ ಪ್ರೇಯಸಿ 23 ವರ್ಷದ ತರನ್ನಮ್ ಬಶೀರ್ ನಾಯಕ್ ಅವರನ್ನು ನಾಯಕ್ ವಾಕ್ ವಾಡಿ ಜಲಪಾತದ ಬಳಿ ಡೇಟಿಂಗ್ ಗೆ ಕರೆದುಕೊಂಡು ಹೋಗಿದ್ದ. ಜಲಪಾತದ ಮೇಲ್ಭಾಗವನ್ನು ತಲುಪಿದ ನಂತರ, ಆ ಯುವತಿ ಯುವಕನಿಗೆ ತನ್ನ ಮದುವೆ ಬೇರೆಡೆ ನಿಗದಿಯಾಗಿದ್ದ ಕಾರಣ ತಮ್ಮ ಸಂಬಂಧವನ್ನು ಮುಂದೆ ಕೊಂಡೊಯ್ಯಲು ಸಾಧ್ಯವಿಲ್ಲ ಎಂದು ಹೇಳಿದಳು. ಮುಂದಿನ ಕೆಲವು ತಿಂಗಳುಗಳಲ್ಲಿಯೇ ಮದುವೆ ನಡೆಯಲು ನಿರ್ಧರಿಸಲಾಗಿದೆ ಎಂದು ಸಹ ಅವಳು ಹೇಳಿದಳು. ಇದರಿಂದ ಪ್ರೇಮಿಗಳ ನಡುವೆ ಜಗಳವಾಯಿತು. ತನಗೆ ಸಿಗದ ಹುಡುಗಿ ಯಾರಿಗೂ ಸಿಗಬಾರದು ಎಂದು ಶ್ರೀಪಾದ ಎಂಬ ಯುವಕ ಅವಳನ್ನು ಜಲಪಾತದ ಮೇಲ್ಭಾಗದಿಂದ ತಳ್ಳಿದನು.

ಇದನ್ನೂ ಓದಿ: ಅಂತ್ಯಕ್ರಿಯೆ ಸ್ಥಳದಿಂದ ಶವ ವಶಕ್ಕೆ ಪಡೆದ ಪೊಲೀಸರು: ಮಂಚದಿಂದ ಬಿದ್ದು ಸತ್ತಿದ್ಳು ಅಂದಿದ್ದ ಮಗ; ರಿಪೋರ್ಟ್‌ನಿಂದ ಕೊಲೆ ರಹಸ್ಯ ರಿವೀಲ್

ಈ ಇಡೀ ಘಟನೆಯ ನಂತರ, ಆರೋಪಿಯು ಅಪರಾಧವನ್ನು ಒಪ್ಪಿಕೊಳ್ಳಲಿಲ್ಲ. ತನ್ನ ಮೇಲೆ ಯಾವುದೇ ಅನುಮಾನ ಬರದಂತೆ ಅವನು ಪ್ಲಾನ್ ಮಾಡಿದನು. ಸೆಲ್ಫೀ ತೆಗೆದುಕೊಳ್ಳುತ್ತಿದ್ದಾಗ ಆಕೆ ಜಾರಿಬಿದ್ದು ಸಾವನ್ನಪ್ಪಿದ್ದಾಳೆ ಎಂದು ಆತ ಹೇಳಿದನು. ಆದರೆ, ಆ ಯುವಕನ ಕಥೆಯನ್ನು ಕೇಳಿದ ನಂತರ ಪೊಲೀಸರು ಅನುಮಾನಗೊಂಡರು. ಶ್ರೀಪಾದರನ್ನು ವಿಚಾರಣೆಗೆ ಒಳಪಡಿಸಲು ಪ್ರಾರಂಭಿಸಿದರು. ವಿವಿಧ ಪ್ರಶ್ನೆಗಳನ್ನು ಕೇಳಿದ ನಂತರ, ಆರೋಪಿ ಶ್ರೀಪಾದ ಪೊಲೀಸರ ಮುಂದೆ ತನ್ನ ಅಪರಾಧವನ್ನು ಒಪ್ಪಿಕೊಂಡನು. ನಂತರ ಆ ಯುವಕನನ್ನು ಬಂಧಿಸಲಾಯಿತು.

ಗರ್ಗೋತಿಯ ಶಿವಾಜಿನಗರದ ನಿವಾಸಿಗಳಾದ ಶ್ರೀಪಾದ್ ದಿನಕರ್ ವಾದರ್ ಎಂಬ 25 ವರ್ಷದ ಯುವಕ ಹಾಗೂ ಎಂಜಿನಿಯರಿಂಗ್ ವಿದ್ಯಾರ್ಥಿನಿಯಾದ ತರನ್ನುಮ್ ಬಶೀರ್ ನಾಯ್ಕ್ 23 ವರ್ಷದ ಯುವತಿ ಕಳೆದ 5 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಅಕ್ಟೋಬರ್ 9ರಂದು ಶ್ರೀಪಾದ ತನ್ನ ಪ್ರೇಯಸಿ ತರನ್ನುಮ್ ಅವರನ್ನು ಸುತ್ತಾಡಿಕೊಂಡು ಬರೋಣ ಎಂದು ನೈಕ್‌ವಾಡಿ ಜಲಪಾತಕ್ಕೆ ಕರೆದೊಯ್ದಿದ್ದನು. ಜಲಪಾತದ ತುತ್ತತುದಿಗೆ ತಲುಪಿದಾಗ ತರನ್ನುಮ್ ತನ್ನ ಪ್ರಿಯಕರನಿಗೆ, ಮುಂದಿನ ತಿಂಗಳು ತನಗೆ ಬೇರೆಡೆ ಮದುವೆ ನಿಶ್ಚಯವಾಗಿದ್ದು, ಈ ಸಂಬಂಧವನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಪತ್ನಿಗೆ ವಿಷದ ಇಂಜೆಕ್ಷನ್​ ಕೊಡಿಸಿ ಕೊಲೆ ಯತ್ನ: ಹೆಂಡ್ತಿ ಬದುಕುಳಿಯುತ್ತಿದ್ದಂತೆಯೇ ಪ್ರೇಯಸಿ ಜತೆ ಪತಿ ಆತ್ಮಹತ್ಯೆ

ಇದರಿಂದ ಆಕ್ರೋಶಗೊಂಡ ಆತ ಆಕೆಯ ಜೊತೆ ಜಗಳವಾಡಿದ್ದ. ಈ ವೇಳೆ ಸಿಟ್ಟಿಗೆದ್ದ ಶ್ರೀಪಾದ ಆಕೆಯನ್ನು 1,000 ಅಡಿ ಆಳದ ಕಮರಿಗೆ ತಳ್ಳಿದ್ದಾನೆ. ಕೊಲೆ ಎಸಗಿದ ಬಳಿಕ ಪರಾರಿಯಾಗುವ ಬದಲು ಪೊಲೀಸರನ್ನು ನಂಬಿಸಲು ಆರೋಪಿ ನಾಟಕವಾಡಿದ್ದನು. ಘಟನೆ ನಡೆದ ಮರುದಿನವೇ ಭುದರ್‌ಗಡ್ ಪೊಲೀಸ್ ಠಾಣೆಗೆ ತೆರಳಿದ ಶ್ರೀಪಾದ, ಜಲಪಾತದ ಬಳಿ ಸೆಲ್ಫಿ ತೆಗೆದುಕೊಳ್ಳುವಾಗ ಕಾಲು ಜಾರಿ ತರನ್ನುಮ್ ಕಮರಿಗೆ ಬಿದ್ದು ಮೃತಪಟ್ಟಿದ್ದಾಳೆ ಎಂದು ದೂರು ನೀಡಿದ್ದನು. ಆದರೆ, ಪೊಲೀಸರಿಗೆ ಆತನ ಹೇಳಿಕೆಯ ಮೇಲೆ ಸಂಶಯ ಮೂಡಿಸಿ ತೀವ್ರವಾಗಿ ವಿಚಾರಣೆ ನಡೆಸಿದಾಗ, ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಪೊಲೀಸರು ಆತನನ್ನು ತಕ್ಷಣವೇ ಬಂಧಿಸಿದ್ದಾರೆ.

ಪೊಲೀಸರು ಸುಮಾರು 1,000 ಅಡಿ ಆಳದ ಕಮರಿಯಿಂದ ಯುವತಿಯ ಮೃತದೇಹವನ್ನು ಹೊರತೆಗೆದು, ಕೊಲ್ಹಾಪುರದ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ. ಈ ಘಟನೆಯಿಂದಾಗಿ ಆ ಗ್ರಾಮದಲ್ಲಿ ತೀವ್ರ ಆಕ್ರೋಶ ಭುಗಿಲೆದ್ದಿದೆ. ಆರೋಪಿಗೆ ರಾಜಕೀಯ ನಾಯಕರೊಬ್ಬರ ನಂಟಿದೆ ಎಂದು ಮೃತರ ಕುಟುಂಬ ಆರೋಪಿಸಿದ್ದು, ಯಾವುದೇ ರಾಜಕೀಯ ಒತ್ತಡವಿಲ್ಲದೆ ನಿಷ್ಪಕ್ಷಪಾತ ತನಿಖೆಯಾಗಬೇಕು ಹಾಗೂ ಪ್ರಕರಣವನ್ನು ತ್ವರಿತ ನ್ಯಾಯಾಲಯಕ್ಕೆ ಒಳಪಡಿಸಿ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ
ಗಜೇಂದ್ರಗಡ: ಹೈಟೆಕ್ ಅಗ್ನಿಶಾಮಕ ಠಾಣೆ ಇದ್ದರೂ ಸಿಬ್ಬಂದಿ ಇಲ್ಲದೆ ವ್ಯರ್ಥ!
ಗಜೇಂದ್ರಗಡ: ಹೈಟೆಕ್ ಅಗ್ನಿಶಾಮಕ ಠಾಣೆ ಇದ್ದರೂ ಸಿಬ್ಬಂದಿ ಇಲ್ಲದೆ ವ್ಯರ್ಥ!
ಇಂಡಿಯಾ- ವೆಸ್ಟ್ ಇಂಡೀಸ್ ಪಂದ್ಯಕ್ಕೆ  ಡಿಸಿಎಂಗೆ ವೆಂಕಟೇಶ್ ಪ್ರಸಾದ್ ಆಹ್ವಾನ
ಇಂಡಿಯಾ- ವೆಸ್ಟ್ ಇಂಡೀಸ್ ಪಂದ್ಯಕ್ಕೆ  ಡಿಸಿಎಂಗೆ ವೆಂಕಟೇಶ್ ಪ್ರಸಾದ್ ಆಹ್ವಾನ
ಸರ್ಕಾರ ನಿಮ್ಮೊಂದಿಗಿದೆ ಪ್ರತಿಭಟನೆ ಕೈಬಿಡಿ ಎಂದು ರೈತರಿಗೆ ಜೋಶಿ ಮನವಿ!
ಸರ್ಕಾರ ನಿಮ್ಮೊಂದಿಗಿದೆ ಪ್ರತಿಭಟನೆ ಕೈಬಿಡಿ ಎಂದು ರೈತರಿಗೆ ಜೋಶಿ ಮನವಿ!
ಹೈಕಮಾಂಡ್ ತಲುಪಿದ ಸ್ಟಿಂಗ್ ವಿಚಾರ: ಕ್ಯಾಬಿನೆಟ್ ಪ್ರಸ್ತಾಪಕ್ಕೆ ಗರಂ
ಹೈಕಮಾಂಡ್ ತಲುಪಿದ ಸ್ಟಿಂಗ್ ವಿಚಾರ: ಕ್ಯಾಬಿನೆಟ್ ಪ್ರಸ್ತಾಪಕ್ಕೆ ಗರಂ
ಹುನಗುಂದದಲ್ಲಿ ರೈತರ ಪ್ರತಿಭಟನೆ: ರಾಯಚೂರು-ಸೊಲ್ಲಾಪುರ ಹೆದ್ದಾರಿ ಬಂದ್
ಹುನಗುಂದದಲ್ಲಿ ರೈತರ ಪ್ರತಿಭಟನೆ: ರಾಯಚೂರು-ಸೊಲ್ಲಾಪುರ ಹೆದ್ದಾರಿ ಬಂದ್
ರಾಹುಲ್ ಗಾಂಧಿ ನಿವಾಸದಲ್ಲಿ ವಿಪಕ್ಷ ನಾಯಕರ ಹೈ-ಟೀ
ರಾಹುಲ್ ಗಾಂಧಿ ನಿವಾಸದಲ್ಲಿ ವಿಪಕ್ಷ ನಾಯಕರ ಹೈ-ಟೀ
ಕ್ಯಾಪ್ಟನ್ ಟೀಕಿಸಿದ ತಂಡವನ್ನೇ ಆಯ್ಕೆ ಮಾಡಿಕೊಂಡ ಕುಮಾರಿ
ಕ್ಯಾಪ್ಟನ್ ಟೀಕಿಸಿದ ತಂಡವನ್ನೇ ಆಯ್ಕೆ ಮಾಡಿಕೊಂಡ ಕುಮಾರಿ
ಹೈದರಾಬಾದ್‌ನಲ್ಲಿ ಮೈ ಹೋಮ್ ವ್ಯೋಮ ಗ್ರ್ಯಾಂಡ್ ಲಾಂಚ್
ಹೈದರಾಬಾದ್‌ನಲ್ಲಿ ಮೈ ಹೋಮ್ ವ್ಯೋಮ ಗ್ರ್ಯಾಂಡ್ ಲಾಂಚ್