TV9 Digital Live: ಒಂದು ದೇಶ-ಒಂದು ಚುನಾವಣೆ; ಅರ್ಥಪೂರ್ಣ ಚರ್ಚೆಗೆ ವೇದಿಕೆ ಕಲ್ಪಿಸಿದ ಟಿವಿ9 ಡಿಜಿಟಲ್ ಲೈವ್

ಒಂದು ದೇಶ-ಒಂದು ಚುನಾವಣೆ, ಈ ಕುರಿತು ಸಂಸತ್ತಿನಿಂದ ಹಿಡಿದು ಹಲವು ರಾಜ್ಯಗಳ ವಿಧಾನಸಭೆಯಲ್ಲಿ ಚರ್ಚೆ ನಡೆದಿದೆ. ಈ ಕುರಿತಂತೆ ಟಿವಿ9 ಡಿಜಿಟಲ್​ ಚರ್ಚೆ ನಡೆಸಿದೆ.

TV9 Digital Live: ಒಂದು ದೇಶ-ಒಂದು ಚುನಾವಣೆ; ಅರ್ಥಪೂರ್ಣ ಚರ್ಚೆಗೆ ವೇದಿಕೆ ಕಲ್ಪಿಸಿದ ಟಿವಿ9 ಡಿಜಿಟಲ್ ಲೈವ್
ಭಾರತೀಯ ಜನತಾ ಪಕ್ಷದ ಶಾಸಕ ಪಿ. ರಾಜೀವ್ ಮತ್ತು ಕೆಪಿಸಿಸಿ ವಕ್ತಾರ ರಮೇಶ್​ ಬಾಬು
Follow us
shruti hegde
| Updated By: guruganesh bhat

Updated on: Mar 12, 2021 | 6:52 PM

ಒಂದು ದೇಶ-ಒಂದು ಚುನಾವಣೆ; ಅರ್ಥಪೂರ್ಣ ಚರ್ಚೆಗೆ ವೇದಿಕೆ ಕಲ್ಪಿಸಿದ ಟಿವಿ9 ಡಿಜಿಟಲ್ ಲೈವ್ಒಂದು ದೇಶ-ಒಂದು ಚುನಾವಣೆ, ಈ ಕುರಿತು ಸಂಸತ್ತಿನಿಂದ ಹಿಡಿದು ಹಲವು ರಾಜ್ಯಗಳ ವಿಧಾನಸಭೆಯಲ್ಲಿ ಚರ್ಚೆ ನಡೆದಿದೆ.  ಬಹು ಮಹತ್ವದ ಒಂದು ದೇಶ-ಒಂದು ಚುನಾವಣೆಯನ್ನೇ ವಿಷಯವಾಗಿರಿಸಿಕೊಂಡು ಟಿವಿ9 ಕನ್ನಡ ಡಿಜಿಟಲ್​ ಲೈವ್​ ಚರ್ಚೆಯನ್ನು ಆ್ಯಂಕರ್​ ಹರಿಪ್ರಸಾದ್ ನಡೆಸಿಕೊಟ್ಟರು. . ಬಿಜೆಪಿ ವಕ್ತಾರ ವಿವೇಕ್ ರೆಡ್ಡಿ, ಶಾಸಕ ಪಿ. ರಾಜೀವ್​ ಹಾಗೂ ಕೆಪಿಸಿಸಿ ವಕ್ತಾರ ರಮೇಶ್​ ಬಾಬು ಕಾರ್ಯಕ್ರಮದಲ್ಲಿ ವಿಷಯ ಮಂಡಿಸಿದರು.

ಭಾರತೀಯ ಜನತಾ ಪಕ್ಷದ ಶಾಸಕ ಪಿ. ರಾಜೀವ್​  ಮಾತನಾಡಿ, ಒಂದು ದೇಶ ಒಂದು ಚುನಾವಣೆ ಸಂವಿಧಾನದ ಆಶಯವಾಗಿದೆ. 1952-62ರವರೆಗೆ ಇದೇ ಪ್ರಕ್ರಿಯೆ ಇತ್ತು. ಮೊದಲಿನಿಂದಲೂ ಇದನ್ನು ನಡೆಸುತ್ತಾ ಬಂದಿದ್ದೇವೆ. ನೀತಿ ಆಯೋಗ ಕೆಲವು ಸ್ಪಷ್ಟವಾಗಿ ಕೆಲವು ಮಾರ್ಗ ಸೂಚನೆ ಕೊಟ್ಟಿದೆ. ಇಲ್ಲಿಯವರೆಗೆ ಯಾವುದೇ ಚುನಾಯಿತ ಸರ್ಕಾರ ಪ್ರಮಾಣವಚನ ಸ್ವೀಕಾರ ಮಾಡಿದಾಗ ಅದಕ್ಕೆ 5 ವರ್ಷದ ಕಾಲಾವಧಿಯಿದೆ. ತಿದ್ದುಪಡಿ ಮಾಡಿದಾಗ ಒಂದು ಚುನಾವಣಾ ಅಂದರೆ ವಿಧಾನ ಸಭೆಯ ಅವಧಿ, ಸಂಸತ್ತಿನ ಅವಧಿಯನ್ನು ಸರಿ ಹೊಂದಿಸಲಿಕ್ಕೆ 2 ಹಂತದಲ್ಲಿ ರಾಜ್ಯಗಳ ಚುನಾವಣೆ ಮಾಡಲಾಗುತ್ತದೆ. ಅವಧಿ ನಿರ್ಧಾರವಾದ ಮೇಲೆ ನಂತರ ಎಲ್ಲಾ ವಿಧಾನ ಸಭೆ ಚುನಾವಣೆಗಳು ಅವಧಿಗಾಗಿ 5 ವರ್ಷ ಆಗುತ್ತವೆ. ಇದರ ಮಧ್ಯೆ ಯಾವುದೇ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ ವಿಸರ್ಜನೆಗೊಂಡರೆ, ಉಳಿದ ಅವಧಿಗೆ ಉಪ ಚುನಾವಣೆ ನಡೆಯುತ್ತದೆ. ಇದರ ಅವಧಿ 5 ವರ್ಷ ಇರುವುದಿಲ್ಲ. ವಿಧಾನಸಭೆಯ ಅವಧಿ  5 ವರ್ಷಕ್ಕೆ ಸೀಮಿತಗೊಂಡಾಗ ಯಾವುದೋ ಒಂದು ಸರ್ಕಾರವನ್ನು ಬೆಳೆಸುವ ಪ್ರಯತ್ನ ಕಡಿಮೆಯಾಗುತ್ತದೆ. ಜನರು ಯೋಚಿಸಿ ಮತ ಹಾಕಿದರೆ ಇಂತಹ ಚಟುವಟಿಕೆ ಕಡಿಮೆಯಾಗುತ್ತದೆ. ಒಂದು ದೇಶ ಒಂದು ಚುನಾವಣೆ ಜಾರಿಗೆ ತಂದರೆ ಪ್ರಜಾಪ್ರಭುತ್ವ ಚಿಂತನೆಗಳು ಅನುಷ್ಠಾನಗೊಳ್ಳಲು ಸಹಾಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ದೇಶದಲ್ಲಿ ಏಕಕಾಲದಲ್ಲಿ ಚುನಾವಣೆ ನಡೆದರೆ ಅನುಕೂಲವಾಗುತ್ತದೆ ಎಂಬುದು ಆದರ್ಶವಾಗಿ ಕಾಣಿಸುತ್ತದೆ. ಅದರೆ ಈಗಿರುವ ಪರಿಸ್ಥಿತಿಯಲ್ಲಿ ಅದು ಹೇಗೆ ಸಾಧ್ಯವಾಗುತ್ತದೆ ಎಂಬುದರ ಕುರಿತಾಗಿ ಬಿಜೆಪಿ ವಕ್ತಾರ ವಿವೇಕ್ ರೆಡ್ಡಿ ಮಾತನಾಡಿ, ಹಣದ ವ್ಯಯವನ್ನು ಚುನಾವಣೆಗೆ ಅಲ್ಪಮಟ್ಟಿಗೆ ಮೀಸಲಿಡಬೇಕು. ಪ್ರಜಾಪ್ರಭುತ್ವ ಎಂಬುದು ನಮಗೆ ಋಣ ಭಾರವಾಗಬಾರದು. ಚುನಾವಣೆ ಹೆಚ್ಚಾದಂತೆ ಹಣ ವೆಚ್ಚವಾಗುತ್ತಿದೆ. ದೇಶದ ಎಲ್ಲೆಡೆ ಒಮ್ಮೆಗೆ ಚುನಾವಣೆ ನಡೆಸುವುದರಿಂದ ಸಮಯ, ಹಣ ಉಳಿತಾಯವಾಗುತ್ತದೆ.  ಉಪಚುನಾವಣೆಯ ಕುರಿತು ಮಾತನಾಡುವಾಗ, ಇದರಲ್ಲಿ ಮುಖ್ಯವಾಗಿ ಗಮನಿಸಿದಾಗ ಉಪಚುನಾವಣೆಗಳು ಅವಿವಾರ್ಯವಾಗಿ ಆಗುವುದಿಲ್ಲ. ಶಾಸನ ಸಭೆ ವಿಸರ್ಜನೆಗೊಳ್ಳುವ ಸಂದರ್ಭ ಬಂದರೆ ಉಪ ಚುನಾವಣೆಗಳು ನಡೆಯುತ್ತದೆ. ಎಂದಿಗೂ ಉಪ ಚುನಾವಣೆಗಳೇ ನಡೆಯುತ್ತಿರದು, ಬದಲಿಗೆ ಎಂದಿಗೋ ಒಮ್ಮೆಯಷ್ಟೇ ಉಪ ಚುನಾವಣೆ ನಡೆಸುವ ಪರಿಸ್ಥಿತಿ ಬರಬಹುದು ಎಂದು ವಿವರಿಸಿದರು.

ಈ ಕುರಿತಂತೆ ಕೆಪಿಸಿಸಿ ವಕ್ತಾರ ರಮೇಶ್​ ಬಾಬು ಮಾತನಾಡಿ, ಒಂದು ದೇಶ ಒಂದು ಚುನಾವಣೆಯನ್ನು ಭಾರತೀಯ ಜನತಾ ಪಕ್ಷ ಜಾರಿಗೆ ತರಲು ಪ್ರಯತ್ನಿಸುತ್ತಿದೆ. ಆದರೆ ಅದು ತಪ್ಪು ನಿರ್ಧಾರ. ಸಂವಿಧಾನದ ಮೂಲ ರಚನೆಯನ್ನು ಅರ್ಥ ಮಾಡಿಕೊಂಡರೆ ಬಿಜೆಪಿ ಈ ಕ್ರಮಕ್ಕೆ ಮುಂದಾಗುತ್ತಿರಲಿಲ್ಲ. ಸಂವಿಧಾನ ವೈವಿಧ್ಯತೆಯಲ್ಲಿ ಏಕತೆ ಎಂದು ಸಾರುತ್ತದೆ. ರಾಜಕೀಯ ತಂತ್ರಗಾರಿಕೆಯನ್ನು ಮುಂದಿಟ್ಟುಕೊಂಡು ಒಂದು ದೇಶ ಒಂದು ಚುನಾವಣೆ ಚರ್ಚೆಯನ್ನು ಮುನ್ನೆಲೆಗೆ ತಮದಿರುವುದು ತಂದಿರುವುದು ವಿಷಾದದ ಸಂಗತಿ. ಜನರನ್ನು ಸೆಳೆಯಲು ಬಿಜೆಪಿ ಈ ತರಹದ ಅಂಶಗಳನ್ನು ಹುಟ್ಟುಹಾಕುತ್ತಿದೆ. ಭಾರತೀಯ ಜನತಾ ಪಕ್ಷ ಹಸಿ ಸುಳ್ಳು ಹೇಳುವುದನ್ನು ಮೊದಲು ಬಿಡಬೇಕು ಎಂದು ಹೇಳಿದರು. ಈಮೂಲಕ ಒಂದು ದೇಶ ಒಂದು ಚುನಾವಣೆಯ ಕುರಿತು ಟಿವಿ 9 ಕನ್ನಡ ಡಿಜಿಟಲ್​ ಒಂದು ಅರ್ಥಪೂರ್ಣ ಚರ್ಚೆಗೆ ವೇದಿಕೆಯಾಯಿತು.

ಇದನ್ನೂ ಓದಿ: TV9 Digital Live | ನೌಕರಿಗೆ ಸೇರಲು ಪೊಲೀಸ್ ಪ್ರಮಾಣಪತ್ರ ಅಗತ್ಯ ಎಂಬ ನಿಯಮ ಬೇಕೇ?

ಇದನ್ನೂ ಓದಿ: Tv9 Digital Live | ರಮೇಶ್ ಜಾರಕಿಹೊಳಿ ಮಂತ್ರಿಗಿರಿ ಹೋಗಲು ರಾಜಕೀಯ ವೈಷಮ್ಯ ಕಾರಣವೇ?

Daily Horoscope: ಈ ರಾಶಿಯವರಿಗೆ ಇಂದು ಐದು ಗ್ರಹಗಳ ಶುಭ ಫಲವಿದೆ
Daily Horoscope: ಈ ರಾಶಿಯವರಿಗೆ ಇಂದು ಐದು ಗ್ರಹಗಳ ಶುಭ ಫಲವಿದೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ