AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tamil Nadu Election Exit Poll Results 2026: ತಮಿಳುನಾಡಿನಲ್ಲಿ ನಡೆಯಲಿಲ್ಲ ಬಿಜೆಪಿ ಕಮಾಲ್; ಡಿಎಂಕೆ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ

ತಮಿಳುನಾಡಿನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷವು ಸರ್ಕಾರ ರಚಿಸುತ್ತದೆ ಎಂಬುದರ ಕುರಿತು ಎಕ್ಸಿಟ್ ಪೋಲ್ ಸಮೀಕ್ಷೆ ಬಹಿರಂಗಪಡಿಸಿದೆ. ಈ ಸಮೀಕ್ಷೆಯಲ್ಲಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮೈತ್ರಿಕೂಟ ಮತ್ತೆ ಗೆದ್ದು ಸರ್ಕಾರ ರಚಿಸುತ್ತದೆ ಎನ್ನಲಾಗಿದೆ. ಹಾಗೇ, ಎಂ.ಕೆ. ಸ್ಟಾಲಿನ್ 2ನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವುದು ಖಚಿತವಾಗಿದೆ. ಯಾವ ಎಕ್ಸಿಟ್ ಪೋಲ್ ಸಮೀಕ್ಷೆ ಏನು ಹೇಳಿದೆ ಎಂಬುದರ ಮಾಹಿತಿ ಇಲ್ಲಿದೆ.

Tamil Nadu Election Exit Poll Results 2026: ತಮಿಳುನಾಡಿನಲ್ಲಿ ನಡೆಯಲಿಲ್ಲ ಬಿಜೆಪಿ ಕಮಾಲ್; ಡಿಎಂಕೆ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ
MK StalinImage Credit source: PTI
ಸುಷ್ಮಾ ಚಕ್ರೆ
|

Updated on: Apr 29, 2026 | 9:27 PM

Share

ಚೆನ್ನೈ, ಏಪ್ರಿಲ್ 29: ಎಕ್ಸಿಟ್ ಪೋಲ್ ಸಮೀಕ್ಷೆಗಳು (Exit Poll) ಡಿಎಂಕೆ ಮೈತ್ರಿಕೂಟ ಗರಿಷ್ಠ 103ರಿಂದ 169 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿವೆ. ಇದರೊಂದಿಗೆ, ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಮೈತ್ರಿಕೂಟವು ತಮಿಳುನಾಡಿನಲ್ಲಿ ಮತ್ತೆ ಗೆದ್ದು ಸರ್ಕಾರ ರಚಿಸುವ ಸಾಧ್ಯತೆಯಿದೆ. ಕಳೆದ ಚುನಾವಣೆಯಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ 133 ಸ್ಥಾನಗಳನ್ನು ಗೆದ್ದಿದ್ದವು. ಈ ಮೈತ್ರಿಕೂಟದ ಭಾಗವಾಗಿದ್ದ ಕಾಂಗ್ರೆಸ್ 18 ಸ್ಥಾನಗಳನ್ನು ಗೆದ್ದಿತ್ತು ಮತ್ತು ಇತರ ಮೈತ್ರಿ ಪಕ್ಷಗಳು 8 ಸ್ಥಾನಗಳನ್ನು ಗೆದ್ದಿದ್ದವು.

234 ಸದಸ್ಯರ ಸದನದಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟ 122-132 ಸ್ಥಾನಗಳನ್ನು ಗೆಲ್ಲಬಹುದು ಎಂದು ಚುನಾವಣೋತ್ತರ ಸಮೀಕ್ಷೆ ಹೇಳಿದೆ. ಎಐಡಿಎಂಕೆ ನೇತೃತ್ವದ ಮೈತ್ರಿಕೂಟ 87ರಿಂದ 100 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ನಟ ವಿಜಯ್ ಅವರ ಟಿವಿಕೆ 10-12 ಸ್ಥಾನಗಳನ್ನು ಗೆಲ್ಲಬಹುದು. ಇತರರು 0-6 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: 5 State Assembly Election Exit Poll Results 2026: ಅಸ್ಸಾಂ, ಬಂಗಾಳದಲ್ಲಿ ಬಿಜೆಪಿಗೆ ಭರ್ಜರಿ ಜಯ, ಕೇರಳ, ತಮಿಳುನಾಡಿನಲ್ಲಿ ಕಾಂಗ್ರೆಸ್ ಮೈತ್ರಿಗೆ ಗೆಲುವು; ಎಕ್ಸಿಟ್ ಪೋಲ್ ಸಮೀಕ್ಷೆ ಇಲ್ಲಿದೆ

ಮತ ಹಂಚಿಕೆಯ ಪ್ರಕಾರ, ಡಿಎಂಕೆ ನೇತೃತ್ವದ ಮೈತ್ರಿಕೂಟವು ಶೇ. 40.3ರಷ್ಟು ಮತಗಳನ್ನು ಪಡೆಯಬಹುದು. ಎಐಎಡಿಎಂಕೆ ನೇತೃತ್ವದ ಮೈತ್ರಿಕೂಟವು ಶೇ. 37.1ರಷ್ಟು ಮತಗಳನ್ನು ಪಡೆಯಬಹುದು. ಟಿವಿಕೆ ಶೇ 17.5ರಷ್ಟು ಮತಗಳನ್ನು ಪಡೆಯಬಹುದು.

  1. ಚಾಣಕ್ಯ ಸ್ಟಾಟಜಿಸ್ ಎಕ್ಸಿಟ್ ಪೋಲ್ ಪ್ರಕಾರ, ಡಿಎಂಕೆ ಮೈತ್ರಿಕೂಟ 145ರಿಂದ 160 ಸ್ಥಾನ ಪಡೆಯಲಿದೆ.
  2. ಪೀಪಲ್ಸ್ ಪಲ್ಸ್ ಸಮೀಕ್ಷೆಯು DMK ಮೈತ್ರಿಕೂಟವು 125ರಿಂದ 145 ಸ್ಥಾನಗಳೊಂದಿಗೆ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದೆ. AIDMK ಮೈತ್ರಿಕೂಟವು ಸುಮಾರು 65 ರಿಂದ 80 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಅದು ಭವಿಷ್ಯ ನುಡಿದಿದೆ. TVK 18ರಿಂದ 24 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ಹೇಳುತ್ತದೆ.
  3. ಮ್ಯಾಟ್ರಿಕ್ಸ್ ಸಮೀಕ್ಷೆ ಪ್ರಕಾರ ಡಿಎಂಕೆ 122ರಿಂದ 132 ಸ್ಥಾನ ಗೆಲ್ಲಲಿದೆ. ಎಐಎಡಿಎಂಕೆ 87ರಿಂದ 110 ಸ್ಥಾನ ಗೆಲ್ಲಲಿದೆ. ಸಮೀಕ್ಷೆಯ ಪ್ರಕಾರ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) 10-12 ಸ್ಥಾನಗಳನ್ನು ಪಡೆಯಬಹುದು.
  4. ರಿಪಬ್ಲಿಕ್ ಬಿ ಮಾರ್ಕ್ ಸಮೀಕ್ಷೆ ಪ್ರಕಾರ ಡಿಎಂಕೆ 125ರಿಂದ 145 ಸ್ಥಾನಗಳನ್ನು ಪಡೆಯಲಿದೆ.
  5. PMARQ ಮತದಾನೋತ್ತರ ಸಮೀಕ್ಷೆಯ ಪ್ರಕಾರ ಡಿಎಂಕೆ 125ರಿಂದ 145 ಸ್ಥಾನಗಳನ್ನು ಪಡೆಯಲಿದೆ. AIADMK 65ರಿಂದ 85 ಸ್ಥಾನಗಳನ್ನು ಪಡೆಯಲಿದೆ. TVKಗೆ 16-20 ಸ್ಥಾನಗಳು ಸಿಗುವ ನಿರೀಕ್ಷೆಯಿದೆ.
  6. ಆಕ್ಸಿಸ್ ಮೈ ಇಂಡಿಯಾದ ಎಕ್ಸಿಟ್ ಪೋಲ್ ಸಮೀಕ್ಷೆಯು ಅತ್ಯಂತ ಆಶ್ಚರ್ಯಕರವಾಗಿದೆ. ಇದು ವಿಜಯ್ ಅವರ TVKಗೆ 92ರಿಂದ 120 ಸ್ಥಾನಗಳು ಸಿಗಲಿದೆ ಎಂದು ಹೇಳಿದೆ. ಇದು AIADMKಗೆ 22-32 ಸ್ಥಾನಗಳನ್ನು ಘೋಷಿಸಿದೆ. DMK 92-110 ಸ್ಥಾನಗಳನ್ನು ಪಡೆಯಲಿದೆ ಎಂದು ಹೇಳಿದೆ.
  7. ಜೆವಿಸಿಯ ಎಕ್ಸಿಟ್ ಪೋಲ್ ಸಮೀಕ್ಷೆಯು ಎಐಎಡಿಎಂಕೆ ಮೈತ್ರಿಕೂಟವು 128 ರಿಂದ 147 ಸ್ಥಾನಗಳೊಂದಿಗೆ ಕ್ಲೀನ್ ಸ್ವೀಪ್ ಮಾಡಲಿದೆ ಎಂದು ಭವಿಷ್ಯ ನುಡಿದಿದೆ. ಡಿಎಂಕೆ ಸುಮಾರು 75 ರಿಂದ 95 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಅದು ಭವಿಷ್ಯ ನುಡಿದಿದೆ. ಟಿವಿಕೆಗೆ 8 ರಿಂದ 15 ಸ್ಥಾನಗಳನ್ನು ನೀಡುವ ನಿರೀಕ್ಷೆಯಿದೆ ಎಂದು ಹೇಳಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us