Tamil Nadu Fire Accident: ಪಟಾಕಿ ಕಾರ್ಖಾನೆಯಲ್ಲಿ ಸ್ಪೋಟ; ಮೃತರ ಸಂಖ್ಯೆ 20ಕ್ಕೆ ಏರಿಕೆ
ಬೆಂಕಿ ಕೆನ್ನಾಲಿಗೆಗೆ ಸಿಲುಕಿ ಇಡೀ ಕಾರ್ಖಾನೆಯೇ ಹೊತ್ತಿ ಉರಿದಿದೆ. ಸ್ಥಳದಲ್ಲೆ ಕೆಲ ಕಾರ್ಮಿಕರು ಮೃತಪಟ್ಟಿದ್ದರು. ಇನ್ನು ಕೆಲವರನ್ನು ಆಸ್ಪತ್ರೆ ದಾಖಲು ಮಾಡಲಾಗಿತ್ತು. ಇದೀಗ ಮೃತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.
ತಮಿಳುನಾಡು: ವಿರುಧುನಗರದಲ್ಲಿರುವ ಫೆ.12 ರಂದು ಪಟಾಕಿ ಫ್ಯಾಕ್ಟರಿಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಸ್ಥಳದಲ್ಲೇ ಅನೇಕ ಕಾರ್ಮಿಕರು ಸಜೀವ ದಹನವಾಗಿದ್ದರು. ಅನೇಕರು ಗಾಯಗೊಂಡಿದ್ದರು. ಇದೀಗ ಮೃತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಮೃತರ ಕುಟುಂಬಸ್ಥರು ಹಾಗೂ ಗಾಯಾಳುಗಳಿಗೆ ಪರಿಹಾರ ಘೋಷಣೆ ಮಾಡಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಸರ್ಕಾರ ಪರಿಹಾರವಾಗಿ ಹಣ ನೀಡಲು ಮುಂದಾಗಿದೆ. ಮೃತರ ಕುಟುಂಬಸ್ಥರಿಗೆ ಪರಿಹಾರವಾಗಿ, ಪಿಎಂ ಫಂಡ್‌ನಿಂದ ತಲಾ ₹2 ಲಕ್ಷ, ತಮಿಳುನಾಡು ಸರ್ಕಾರದಿಂದ ₹3 ಲಕ್ಷ, ಗಾಯಾಳುಗಳಿಗೆ ಪಿಎಂ ಫಂಡ್‌ನಿಂದ ₹50 ಸಾವಿರ ಪರಿಹಾರ ಹಾಗೂ ತಮಿಳು ನಾಡು ಸರ್ಕಾರ ₹1 ಲಕ್ಷ ನೀಡಿದೆ.
#UPDATE Tamil Nadu: Death toll rises to 20 in fire incident that took place in Virudhunagar firecracker factory on 12th Feb
PM & CM announced ex-gratia of Rs 2 Lakhs & Rs 3 Lakhs each respectively to kin of deceased; Rs 50,000 & Rs 1 Lakh each respectively for critically injured
— ANI (@ANI) February 15, 2021
ಇದನ್ನೂ ಓದಿ: ತಮಿಳುನಾಡು ಪಟಾಕಿ ಕಾರ್ಖಾನೆ ಸ್ಫೋಟ: ಮೃತರ ಸಂಖ್ಯೆ 15ಕ್ಕೆ ಏರಿಕೆ, ಪ್ರಧಾನಿ ನರೇಂದ್ರ ಮೋದಿ ಸಂತಾಪ
ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿಕೆ ಆಗಿತ್ತು. ಈ ಘಟನೆಗೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದರು. ಚೆನ್ನೈನಿಂದ 500 ಕಿ.ಮೀ. ದೂರದಲ್ಲಿರುವ ವಿರುಧುನಗರದಲ್ಲಿ ಮಧ್ಯಾಹ್ನ 1:30ರ ಸುಮಾರಿಗೆ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿತ್ತು.
ಸ್ಫೋಟದ ರಭಸಕ್ಕೆ ಸ್ಥಳದಲ್ಲೇ 6 ಜನರು ಸಜೀವ ದಹನವಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಹೆಚ್ಚುವರಿಯಾಗಿ 9 ಜನರು ಮೃತಪಟ್ಟಿದ್ದರು. ಇದೀಗ ಮೃತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.
Fire at a firecracker factory in Virudhunagar, Tamil Nadu is saddening. In this hour of grief, my thoughts are with the bereaved families. I hope those injured recover soon. Authorities are working on the ground to assist those affected: PM @narendramodi
— PMO India (@PMOIndia) February 12, 2021