AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೆಲಿಕಮ್ಯೂನಿಕೇಶನ್ಸ್ ಬಿಲ್; ಸೆಟಿಲೈಟ್ ಸ್ಪೆಕ್ಟ್ರಂ ಹಂಚಿಕೆಗೆ ಹೊಸ ವಿಧಾನ ಸೇರಿ ಹಲವು ಸುಧಾರಣೆಗಳು

Telecommunications Bill 2023, Highlights: ಕೇಂದ್ರ ಸರ್ಕಾರ 2023ರ ದೂರಸಂಪರ್ಕ ಮಸೂದೆಯನ್ನು ಲೋಕಸಭೆಯಲ್ಲಿ ಮಂಡನೆ ಮಾಡಿದೆ. 138 ವರ್ಷದ ಹಿಂದಿನ ಟೆಲಿಗ್ರಾಂ ಕಾಯ್ದೆಯ ಬದಲು ಇದನ್ನು ರೂಪಿಸಲಾಗಿದೆ. 4ಜಿ, 5ಜಿ ಇತ್ಯಾದಿ ಸ್ಪೆಕ್ಟ್ರಂ ಹಂಚಿಕೆಗೆ ಇರುವಂತೆ ಸೆಟಿಲೈಟ್ ಸ್ಪೆಕ್ಟ್ರಂ ಹಂಚಿಕೆಯಲ್ಲಿ ಹರಾಜು ಪ್ರಕ್ರಿಯೆ ಇರುವುದಿಲ್ಲ. ಸರ್ಕಾರವೇ ಶುಲ್ಕ ನಿಗದಿ ಮಾಡುತ್ತದೆ. ತುರ್ತು ಸಂದರ್ಭ ಬಂದರೆ ಸರ್ಕಾರ ಯಾವುದೇ ಟೆಲಿಕಮ್ಯೂನಿಕೇಶನ್ಸ್ ನೆಟ್ವರ್ಕ್ ಅನ್ನು ತನ್ನ ಹತೋಟಿಗೆ ತೆಗೆದುಕೊಳ್ಳಲು ಹೊಸ ಕಾಯ್ದೆ ಬಲ ಕೊಡುತ್ತದೆ.

ಟೆಲಿಕಮ್ಯೂನಿಕೇಶನ್ಸ್ ಬಿಲ್; ಸೆಟಿಲೈಟ್ ಸ್ಪೆಕ್ಟ್ರಂ ಹಂಚಿಕೆಗೆ ಹೊಸ ವಿಧಾನ ಸೇರಿ ಹಲವು ಸುಧಾರಣೆಗಳು
ಲೋಕಸಭೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 19, 2023 | 12:35 PM

ನವದೆಹಲಿ, ಡಿಸೆಂಬರ್ 19: ಕೇಂದ್ರ ಸರ್ಕಾರ ಶತಮಾನದಷ್ಟು ಹಳೆಯದಾದ ಟೆಲಿಗ್ರಾಫ್ ಕಾಯ್ದೆಯ ಬದಲು 2023ರ ದೂರಸಂಪರ್ಕ ಮಸೂದೆ (Telecommunications Bill 2023) ಜಾರಿಗೊಳಿಸಲು ಮುಂದಾಗಿದೆ. ಸರ್ಕಾರ ನಿನ್ನೆ ಸೋಮವಾರ (ಡಿ. 18) ಲೋಕಸಭೆಯಲ್ಲಿ ಈ ಹೊಸ ಮಸೂದೆ ಮಂಡನೆ ಮಾಡಿದೆ. ಪರಿಣಿತರ ಪ್ರಕಾರ, ಈ ಮಸೂದೆ ಹೊಸ ಕಾಲಕ್ಕೆ ಅನುಗುಣವಾಗಿರುವ ಕಾನೂನುಗಳನ್ನು ಪ್ರಸ್ತಾಪಿಸಿದೆ. ದೇಶದಲ್ಲಿ ಇಂಟರ್ನೆಟ್ ಕ್ರಾಂತಿ ಹೆಚ್ಚಿಸಲಿದೆ, ಸರ್ಕಾರಕ್ಕೆ ಹೆಚ್ಚಿನ ಬಲ ಕೊಡಲಿದೆ, ಟೆಲಿಕಾಂ ನೀತಿಗಳಲ್ಲಿ ಸುಧಾರಣೆ ತರಲು ಸಹಾಯವಾಗಲಿದೆ ಎಂದು ಹೇಳಲಾಗುತ್ತಿದೆ. ಆಗಸ್ಟ್ ತಿಂಗಳಲ್ಲಿ ಕ್ಯಾಬಿನೆಟ್ ಈ ಮಸೂದೆಗೆ ಅನುಮೋದನೆ ಕೊಟ್ಟಿತ್ತು. ಇದೀಗ ಲೋಕಸಭೆಯಲ್ಲೂ ಇದಕ್ಕೆ ಅನುಮೋದನೆ ಸಿಗುವ ನಿರೀಕ್ಷೆ ಇದೆ. ರಾಜ್ಯಸಭೆಯಲ್ಲಿ ಅನುಮೋದನೆ ಪಡೆದ ಬಳಿಕ ಇದು ಕಾಯ್ದೆಯಾಗಿ ಜಾರಿಗೆ ಬರುತ್ತದೆ.

ಸೆಟಿಲೈಟ್ ಸ್ಪೆಕ್ಟ್ರಂ ಹಂಚಿಕೆಯಲ್ಲಿ ಹೊಸ ವಿಧಾನ

ಟೆಲಿಕಮ್ಯುನಿಕೇಶನ್ಸ್ ಬಿಲ್​ನಲ್ಲಿ ಇರುವ ಪ್ರಮುಖ ಅಂಶಗಳಲ್ಲಿ ಒಂದು ಸೆಟಿಲೈಟ್ ಸ್ಪೆಕ್ಟ್ರಂ ಹಂಚಿಕೆ (satellite spectrum allocation) ವಿಚಾರ. 2ಜಿ, 3ಜಿ, 4ಜಿ, 5ಜಿ ಇತ್ಯಾದಿ ಸ್ಪೆಕ್ಟ್ರಂಗಳನ್ನು ಹರಾಜು ಮೂಲಕ ಹಂಚಿಕೆ ಮಾಡಲಾಗುತ್ತದೆ. ಆದರೆ, ಸೆಟಿಲೈಟ್ ಸ್ಪೆಕ್ಟ್ರಂ ಹಂಚಿಕೆಯಲ್ಲಿ ಈ ವಿಧಾನಕ್ಕೆ ತಿಲಾಂಜಲಿ ಹೇಳಿ, ಆಡಳಿತಾತ್ಮಕ ಹಂಚಿಕೆ ವಿಧಾನ (administrative allocation) ಅನುಸರಿಸಲು ನಿರ್ಧರಿಸಲಾಗಿದೆ. ಅಂದರೆ, ಈ ಸ್ಪೆಕ್ಟ್ರಂ ಬಳಕೆಗೆ ಸರ್ಕಾರವೇ ಶುಲ್ಕ ನಿಗದಿ ಮಾಡುತ್ತದೆ.

ಭಾರ್ತಿ ಏರ್ಟೆಲ್ ಹಾಗೂ ಇಲಾನ್ ಮಸ್ಕ್ ಅವರ ಸ್ಟಾರ್​ಲಿಂಕ್ ಸಂಸ್ಥೆಗಳೂ ಕೂಡ ಆಡಳಿತಾತ್ಮಕವಾಗಿ ಸೆಟಿಲೈಟ್ ಸ್ಪೆಕ್ಟ್ರಂ ಹಂಚಿಕೆ ಆಗಲಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಏರ್​ಟೆಲ್​ನ ಒನ್​ವೆಬ್, ಸ್ಟಾರ್​ಲಿಂಕ್, ಅಮೇಜಾನ್​ನ ಕ್ಯೂಪರ್, ರಿಲಾಯನ್ಸ್​ನ ಜಿಯೋ ಸೆಟಿಲೈಟ್ ಕಮ್ಯೂನಿಕೇಶನ್ಸ್ ಮೊದಲಾದ ಕಂಪನಿಗಳಿಗೆ ಸಹಾಯವಾಗಲಿದೆ.

ಇದನ್ನೂ ಓದಿ: CP Gurnani: ಎಐ ತಂತ್ರಜ್ಞಾನದಿಂದ ಉದ್ಯೋಗನಷ್ಟಕ್ಕಿಂತ ಉದ್ಯೋಗಸೃಷ್ಟಿ ಹೆಚ್ಚು ಎಂದ ಟೆಕ್ ಮಹೀಂದ್ರ ನಿರ್ಗಮಿತ ಸಿಇಒ

ಅಲ್ಲದೇ, ಹೈಸ್ಪೀಡ್ ಇಂಟರ್ನೆಟ್ ಸಂಪರ್ಕ ಸೇವೆಯ ವೆಚ್ಚ ಕಡಿಮೆ ಆಗುತ್ತದೆ. ಹಾಗು ಬಹಳ ಬೇಗ ಈ ಸೇವೆ ಭಾರತದ ಮೂಲೆಮೂಲೆ ತಲುಪಲು ಸಾಧ್ಯವಾಗುತ್ತದೆ. ಹರಾಜು ಪ್ರಕ್ರಿಯೆ ಅನುಸರಿಸಿದರೆ ಸೆಟಿಲೈಟ್ ಬ್ರಾಡ್​ಬ್ಯಾಂಡ್ ಸೇವೆಗಳ ವೆಚ್ಚ ಹೆಚ್ಚಾಗುತ್ತದೆ. ಜೊತೆಗೆ ಸಮಯವೂ ಹೆಚ್ಚು ವ್ಯಯವಾಗುತ್ತದೆ.

ದೂರಸಂಪರ್ಕ ಸೇವೆಗಳ ನಿಯಂತ್ರಣ ಸರ್ಕಾರದ ಕೈಯಲ್ಲಿ…

2023ರ ಟೆಲಿಕಮ್ಯೂನಿಕೇಶನ್ಸ್ ಬಿಲ್​ನಲ್ಲಿ ಇರುವ ಇನ್ನೊಂದು ಪ್ರಮುಖ ಅಂಶವೆಂದರೆ ಅದು ಸರ್ಕಾರಕ್ಕೆ ಕೊಟ್ಟಿರುವ ಹೆಚ್ಚಿನ ನಿಯಂತ್ರಣ ಅಧಿಕಾರ. ರಾಷ್ಟ್ರೀಯ ಭದ್ರತಾ ಅಪಾಯದ ಸ್ಥಿತಿ ಬಂದರೆ ಯಾವುದೇ ದೂರಸಂಪರ್ಕ ಸೇವೆ ಅಥವಾ ನೆಟ್ವರ್ಕ್ ಅನ್ನು ಸುಪರ್ದಿಗೆ ತೆಗೆದುಕೊಳ್ಳುವ, ಅಥವಾ ರದ್ದು ಮಾಡುವ ಅಧಿಕಾರ ಸರ್ಕಾರಕ್ಕೆ ಇರುತ್ತದೆ.

ಬಳಕೆದಾರರ ಹಿತದೃಷ್ಟಿಯಿಂದ ವಾಟ್ಸಾಪ್ ಇತ್ಯಾದಿ ಇಂಟರ್ನೆಟ್ ಆಧಾರಿತ ಕರೆ ಮತ್ತು ಮೆಸೇಜಿಂಗ್ ಆ್ಯಪ್​ಗಳನ್ನು ಟೆಲಿಕಮ್ಯೂನಿಕೇನ್ಸ್ ವ್ಯಾಖ್ಯಾನದ ಪರಿಧಿಗೆ ತರಲಾಗಿದೆ.

ಇದನ್ನೂ ಓದಿ: ಬಿಹಾರದಲ್ಲಿ ಸೀತಾ ಜನ್ಮಸ್ಥಳ ಅಭಿವೃದ್ಧಿ ಯೋಜನೆ ಕೈಗೊಂಡ ನಿತೀಶ್ ಕುಮಾರ್, ಏನಿದು ಅಜೆಂಡಾ?

ಇದರ ಜೊತೆ ಕರಡು ಮಸೂದೆಯಲ್ಲಿ ಇನ್ನೂ ಕೆಲ ಮಹತ್ವದ ಸುಧಾರಣಾ ಕ್ರಮಗಳು ಪ್ರಸ್ತಾಪವಾಗಿವೆ. ಪ್ರವೇಶ ಶುಲ್ಕ, ಪರವಾನಗಿ ಶುಲ್ಕ, ದಂಡ ಇತ್ಯಾದಿಯನ್ನು ಮನ್ನಾ ಮಾಡುವಂತಹ ಅಧಿಕಾರವನ್ನು ಸರ್ಕಾರಕ್ಕೆ ಕೊಡಲಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕತೆ ಹೆಚ್ಚುತ್ತದೆ, ಟೆಲಿಕಾಂ ನೆಟ್ವರ್ಕ್​ಗಳ ಲಭ್ಯತೆ ಹೆಚ್ಚುತ್ತದೆ. ಅಂತಿಮವಾಗಿ ಗ್ರಾಹಕರಿಗೆ ಮತ್ತು ರಾಷ್ಟ್ರೀಯ ಭದ್ರತೆಗೆ ಲಾಭ ಆಗುತ್ತದೆ.

ಇನ್ನು, ಒಂದು ಕಂಪನಿ ತನ್ನ ಪರವಾನಿಗೆಯನ್ನು ಮರಳಿಸಿದರೆ ಲೈಸೆನ್ಸ್ ಶುಲ್ಕದ ರೀಫಂಡ್ ಇತ್ಯಾದಿ ವಿಚಾರದಲ್ಲಿ ನಿಯಮಗಳನ್ನು ಸುಲಭಗೊಳಿಸುವ ಪ್ರಸ್ತಾಪವು ಈ ಮಸೂದೆಯಲ್ಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹೇಳಿಕೆ ಮೂಲಕ ಮುತ್ಸದ್ದಿತನದ ಪರಿಚಯ ನೀಡಿದ ಮಾಜಿ ಪ್ರಧಾನಿ ದೇವೇಗೌಡ
ಹೇಳಿಕೆ ಮೂಲಕ ಮುತ್ಸದ್ದಿತನದ ಪರಿಚಯ ನೀಡಿದ ಮಾಜಿ ಪ್ರಧಾನಿ ದೇವೇಗೌಡ
ಅಮೆರಿಕದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಹೆಸರಲ್ಲಿ ಅಣ್ಣಾಮಲೈ ಪೂಜೆ
ಅಮೆರಿಕದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಹೆಸರಲ್ಲಿ ಅಣ್ಣಾಮಲೈ ಪೂಜೆ
ತಾಯಿಯ ತ್ಯಾಗ... ತಂದೆಯ ಪರಿಶ್ರಮ: ನನ್ನೆಲ್ಲಾ ಸಾಧನೆಗೆ ಹೆತ್ತವರೇ ಕಾರಣ..!
ತಾಯಿಯ ತ್ಯಾಗ... ತಂದೆಯ ಪರಿಶ್ರಮ: ನನ್ನೆಲ್ಲಾ ಸಾಧನೆಗೆ ಹೆತ್ತವರೇ ಕಾರಣ..!
ಯುದ್ಧ ಬೇಡವೆಂಬ ತಮ್ಮ ಮಾತನ್ನು ಮಾಡಿಫೈ ಮಾಡಿ ಹೇಳಿದ ತಿಮ್ಮಾಪುರ
ಯುದ್ಧ ಬೇಡವೆಂಬ ತಮ್ಮ ಮಾತನ್ನು ಮಾಡಿಫೈ ಮಾಡಿ ಹೇಳಿದ ತಿಮ್ಮಾಪುರ
ಸಿಎಂ ಸಿದ್ದರಾಮಯ್ಯ ಯಾವತ್ತೂ ತಾಳ್ಮೆ ಕಳೆದುಕೊಳ್ಳಲ್ಲ: ಸಚಿವ ತಂಗಡಿಗಿ
ಸಿಎಂ ಸಿದ್ದರಾಮಯ್ಯ ಯಾವತ್ತೂ ತಾಳ್ಮೆ ಕಳೆದುಕೊಳ್ಳಲ್ಲ: ಸಚಿವ ತಂಗಡಿಗಿ
ಪಾಕ್ ಪರ ಘೋಷಣೆ ಕೂಗುವವರ ನಿರ್ನಾಮಕ್ಕಾಗಿ ಹೋಮ ಯಜ್ಞ: ಮುತಾಲಿಕ್
ಪಾಕ್ ಪರ ಘೋಷಣೆ ಕೂಗುವವರ ನಿರ್ನಾಮಕ್ಕಾಗಿ ಹೋಮ ಯಜ್ಞ: ಮುತಾಲಿಕ್
ಮಹಿಳೆಯರು ಬಿಜೆಪಿ ಶಾಲು ಹೊದ್ದಿದ್ದರೆ ಭದ್ರತಾ ಲೋಪ ಗೊತ್ತಾಗುತಿತ್ತು: ಸಚಿವ
ಮಹಿಳೆಯರು ಬಿಜೆಪಿ ಶಾಲು ಹೊದ್ದಿದ್ದರೆ ಭದ್ರತಾ ಲೋಪ ಗೊತ್ತಾಗುತಿತ್ತು: ಸಚಿವ
ವ್ಯಾನಿಟಿ ಬ್ಯಾಗ್​ನಲ್ಲಿ ಚೂರಿ ಇರಲಿ: ಕಲ್ಲಡ್ಕ ಪ್ರಭಾಕರ ಭಟ್
ವ್ಯಾನಿಟಿ ಬ್ಯಾಗ್​ನಲ್ಲಿ ಚೂರಿ ಇರಲಿ: ಕಲ್ಲಡ್ಕ ಪ್ರಭಾಕರ ಭಟ್
ಸಿದ್ದರಾಮಯ್ಯ ಏನು ಮಾಡುತ್ತಾರೋ ಎಂಬ ಭಯವಂತೂ ಇದೆ: ನಾಡಗೌಡ
ಸಿದ್ದರಾಮಯ್ಯ ಏನು ಮಾಡುತ್ತಾರೋ ಎಂಬ ಭಯವಂತೂ ಇದೆ: ನಾಡಗೌಡ
ದೆವ್ವದ ಹಾಡಿಗೆ ಭಯಬಿದ್ದ ಸರಿಗಮಪ ಮನೋಜ್; ಇಲ್ಲಿದೆ ಫನ್ನಿ ವಿಡಿಯೋ
ದೆವ್ವದ ಹಾಡಿಗೆ ಭಯಬಿದ್ದ ಸರಿಗಮಪ ಮನೋಜ್; ಇಲ್ಲಿದೆ ಫನ್ನಿ ವಿಡಿಯೋ