AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

WhatsApp Username: ವಾಟ್ಸಾಪ್‌ನಲ್ಲಿ ಸೆಲೆಬ್ರಿಟಿಗಳು, ಬ್ಯಾಂಕ್‌ಗಳ ಹೆಸರಲ್ಲಿ ವಂಚನೆ ಅಸಾಧ್ಯ: ಸರ್ಕಾರದ ನೋಟಿಸ್‌ಗೆ ಮೆಟಾ ಸ್ಪಷ್ಟನೆ

ವಾಟ್ಸಾಪ್‌ನ ಮುಂಬರುವ ಯೂಸರ್ ನೇಮ್ ವೈಶಿಷ್ಟ್ಯದ ಬಗ್ಗೆ ಸರ್ಕಾರ ವ್ಯಕ್ತಪಡಿಸಿದ್ದ ವಂಚನೆ ಆತಂಕಕ್ಕೆ ಮೆಟಾ ಸಂಸ್ಥೆ ಸ್ಪಷ್ಟನೆ ನೀಡಿದೆ. ಸೆಲೆಬ್ರಿಟಿಗಳು, ಬ್ಯಾಂಕ್‌ಗಳು ಮತ್ತು ಪ್ರಮುಖ ವ್ಯಕ್ತಿಗಳ ಹೆಸರುಗಳನ್ನು ಮೊದಲೇ ಕಾಯ್ದಿರಿಸಲಾಗಿದೆ. ನಕಲಿ ಖಾತೆಗಳಿಂದ ವಂಚನೆ ತಪ್ಪಿಸಲು ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಯೂಸರ್ ನೇಮ್ ದುರುಪಯೋಗ ತಡೆಯಲು ಹಲವು ಸುರಕ್ಷತಾ ಪದರಗಳನ್ನು ಅಳವಡಿಸಲಾಗಿದೆ ಎಂದು ಮೆಟಾ ಭರವಸೆ ನೀಡಿದೆ.

WhatsApp Username: ವಾಟ್ಸಾಪ್‌ನಲ್ಲಿ ಸೆಲೆಬ್ರಿಟಿಗಳು, ಬ್ಯಾಂಕ್‌ಗಳ ಹೆಸರಲ್ಲಿ ವಂಚನೆ ಅಸಾಧ್ಯ: ಸರ್ಕಾರದ ನೋಟಿಸ್‌ಗೆ ಮೆಟಾ  ಸ್ಪಷ್ಟನೆ
ವಾಟ್ಸಾಪ್
ನಯನಾ ರಾಜೀವ್
|

Updated on: Jul 02, 2026 | 11:15 AM

Share

ಮುಖ್ಯಾಂಶಗಳು

  • ವಾಟ್ಸಾಪ್ ಯೂಸರ್ ನೇಮ್ ವೈಶಿಷ್ಟ್ಯಕ್ಕೆ ಭದ್ರತೆ
  • ಸೆಲೆಬ್ರಿಟಿಗಳು,ಬ್ಯಾಂಕ್​ಗಳ ಅಧಿಕೃತ ಹೆಸರು ಮೊದಲೇ ಲಾಕ್
  • ವಂಚನೆ ತಡೆಯಲು ವ್ಯವಸ್ಥೆಯಲ್ಲಿ ಹಲವು ಲೇಯರ್‌ ಭದ್ರತೆ

ನವದೆಹಲಿ, ಜುಲೈ 02: ಮೊಬೈಲ್ ಸಂಖ್ಯೆ ಹಂಚಿಕೊಳ್ಳದೆ ಚಾಟ್ ಮಾಡಲು ಅನುಕೂಲ ಮಾಡಿಕೊಡುವ ತನ್ನ ಮುಂಬರುವ ಯೂಸರ್​ ನೇಮ್ವೈ(Username)ಶಿಷ್ಟ್ಯದ ಕುರಿತು ಕೇಂದ್ರ ಸರ್ಕಾರ ವ್ಯಕ್ತಪಡಿಸಿರುವ ಆತಂಕಕ್ಕೆ ವಾಟ್ಸಾಪ್(WhatsApp) ಸೂಕ್ತ ಸ್ಪಷ್ಟನೆ ನೀಡಿದೆ. ಈ ಹೊಸ ವೈಶಿಷ್ಟ್ಯದಲ್ಲಿ ನಕಲಿ ಖಾತೆಗಳ ಮೂಲಕ ವಂಚನೆ ಮಾಡುವುದನ್ನು ತಡೆಯಲು ಅತ್ಯಂತ ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರುವುದಾಗಿ ಮೆಟಾ ಸಂಸ್ಥೆ ತಿಳಿಸಿದೆ.

ಏನಿದು ವಿವಾದ? ನಿಷೇಧದ ಭೀತಿ ಯಾಕಿತ್ತು?:

ವಾಟ್ಸಾಪ್ ಇತ್ತೀಚೆಗಷ್ಟೇ ತನ್ನ ಹೊಸ ಯೂಸರ್​ ನೇಮ್ ವೈಶಿಷ್ಟ್ಯವನ್ನು ಘೋಷಿಸಿತ್ತು. ಆದರೆ, ಈ ವೈಶಿಷ್ಟ್ಯದ ಅಡಿಯಲ್ಲಿ ವಂಚಕರು ಪ್ರಸಿದ್ಧ ವ್ಯಕ್ತಿಗಳು, ಬ್ಯಾಂಕುಗಳು ಅಥವಾ ಸರ್ಕಾರಿ ಸಂಸ್ಥೆಗಳ ಹೆಸರಿನಲ್ಲಿ ನಕಲಿ ಯೂಸರ್ ನೇಮ್‌ಗಳನ್ನು ಮೊದಲೇ ಬುಕ್ ಮಾಡಿಕೊಳ್ಳುತ್ತಿದ್ದಾರೆ ಎಂಬ ವರದಿಗಳು ಬಂದಿದ್ದವು.

ಇದರಿಂದ ಗುರುತಿನ ಕಳ್ಳತನ ಮತ್ತು ಆನ್‌ಲೈನ್ ವಂಚನೆಗಳ ಅಪಾಯ ಹೆಚ್ಚಾಗುವುದರಿಂದ, ಈ ವೈಶಿಷ್ಟ್ಯವನ್ನು ನಿಷೇಧಿಸುವ ಕಾನೂನು ಆಯ್ಕೆಗಳನ್ನು ಪರಿಗಣಿಸುತ್ತಿರುವುದಾಗಿ ಕೇಂದ್ರ ಸರ್ಕಾರ ಬುಧವಾರ ಎಚ್ಚರಿಸಿತ್ತು.

ಮತ್ತಷ್ಟು ಓದಿ: ವಾಟ್ಸಾಪ್ ಯೂಸರ್ ನೇಮ್ ಫೀಚರ್ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ; ಮೆಟಾಗೆ ನೋಟಿಸ್ ಜಾರಿ

ವಿಐಪಿ ಹೆಸರುಗಳು ಕಾಯ್ದಿರಿಸಲಾಗಿದೆ, ಬೇರೆಯವರಿಗೆ ಸಿಗಲ್ಲ

ಕೇಂದ್ರದ ಕಳವಳಕ್ಕೆ ಪ್ರತಿಕ್ರಿಯಿಸಿರುವ ವಾಟ್ಸಾಪ್, ವಂಚನೆ ತಡೆಯಲು ಕೈಗೊಂಡಿರುವ ಕ್ರಮಗಳನ್ನು ವಿವರಿಸಿದೆ. ಸೆಲೆಬ್ರಿಟಿಗಳು, ಸರ್ಕಾರಿ ಸಂಸ್ಥೆಗಳು ಮತ್ತು ಪರಿಶೀಲಿಸಲ್ಪಟ್ಟ ಮೆಟಾ ಖಾತೆಗಳನ್ನು ಹೊಂದಿರುವ ಪ್ರಮುಖ ವ್ಯಕ್ತಿಗಳ ಅಧಿಕೃತ ಹೆಸರುಗಳನ್ನು ವಾಟ್ಸಾಪ್ ಮೊದಲೇ ಕಾಯ್ದಿರಿಸಿ ಲಾಕ್ ಮಾಡಿದೆ. ಅವುಗಳ ನಿಜವಾದ ಮಾಲೀಕರು ಮಾತ್ರ ಆ ಹೆಸರುಗಳನ್ನು ಕ್ಲೈಮ್ ಮಾಡಲು ಸಾಧ್ಯ.

ಪ್ರಸಿದ್ಧ ಹೆಸರುಗಳನ್ನು ಹೋಲುವ ಅಥವಾ ಕನ್ಫ್ಯೂಸ್ ಮಾಡುವಂತಹ ಇತರ ಹೆಸರುಗಳನ್ನು ಸಹ ಬೇರೆ ಯಾರೂ ಇಡದಂತೆ ತಡೆಹಿಡಿಯಲಾಗಿದೆ. ಯೂಸರ್​ ನೇಮ್ ವೈಶಿಷ್ಟ್ಯ ಬಂದರೂ ಸಹ, ವಾಟ್ಸಾಪ್ ಬಳಸಲು ಫೋನ್ ಸಂಖ್ಯೆಯ ಅಗತ್ಯ ಕಡ್ಡಾಯವಾಗಿರುತ್ತದೆ.

ದುರುಪಯೋಗಕ್ಕೆ ಸಿಗಲ್ಲ ಚಾನ್ಸ್: ಈ ವೈಶಿಷ್ಟ್ಯದ ದುರುಪಯೋಗವನ್ನು ತಡೆಯಲು ವ್ಯವಸ್ಥೆಯಲ್ಲಿ ಹಲವು ಭದ್ರತಾ ಲೇಯರ್‌ಗಳನ್ನು ಅಳವಡಿಸಲಾಗಿದೆ.

ಊಹಿಸುವ ಪ್ರಯತ್ನಗಳಿಗೆ ಬ್ಲಾಕ್: ಯಾರೊಬ್ಬರ ಯೂಸರ್ ನೇಮ್ ಅನ್ನು ಸುಮ್ಮನೆ ಊಹಿಸಿ (Guess) ಹುಡುಕಲು ಪದೇ ಪದೇ ಪ್ರಯತ್ನಿಸಿದರೆ ಅಂತಹ ಖಾತೆಗಳನ್ನು ಸಿಸ್ಟಮ್ ತಂತಾನೇ ನಿರ್ಬಂಧಿಸುತ್ತದೆ. ಸಂದೇಶ ಕಳುಹಿಸಲು ನಿಖರವಾದ ಯೂಸರ್ ನೇಮ್ ಗೊತ್ತಿರಲೇಬೇಕು.

ಸಂಪರ್ಕದ ಮಿತಿ: ಒಂದು ಖಾತೆಯಿಂದ ದಿನಕ್ಕೆ ಎಷ್ಟು ಜನ ಹೊಸಬರನ್ನು ಸಂಪರ್ಕಿಸಬಹುದು ಎಂಬುದಕ್ಕೆ ಮಿತಿ ಇರಲಿದೆ. ಇದರಿಂದ ಸಾರಾಸಗಟಾಗಿ ವಂಚನೆಯ ಮೆಸೇಜ್ ಕಳುಹಿಸುವುದು ನಿಲ್ಲುತ್ತದೆ.

ಯಾರಾದರೂ ಹೊಸ ಯೂಸರ್ ನೇಮ್ ಬಳಸಿ ಮೊದಲ ಬಾರಿಗೆ ನಿಮಗೆ ಮೆಸೇಜ್ ಕಳುಹಿಸಿದರೆ, ಆ ಖಾತೆಯ ಸಂಪೂರ್ಣ ವಿವರ ನಿಮ್ಮ ಪರದೆಯ ಮೇಲೆ ಕಾಣಿಸುತ್ತದೆ. ಅದು ಹೊಸ ಖಾತೆಯೇ? ನಿಮ್ಮಿಬ್ಬರ ನಡುವೆ ಸಾಮಾನ್ಯ ಗ್ರೂಪ್‌ಗಳಿವೆಯೇ? ಅಥವಾ ಆ ಖಾತೆ ಬೇರೆ ದೇಶದ್ದಾಗಿದೆಯೇ ಎಂಬ ಮಾಹಿತಿ ಲಭ್ಯವಿರುತ್ತದೆ. ಇದರಿಂದ ಚಾಟ್ ಮುಂದುವರಿಸಬೇಕೇ ಬೇಡವೇ ಎಂದು ಬಳಕೆದಾರರೇ ನಿರ್ಧರಿಸಬಹುದು.

ಈ ಹೊಸ ವೈಶಿಷ್ಟ್ಯವು ಇನ್ನೂ ಅಧಿಕೃತವಾಗಿ ಬಿಡುಗಡೆಯಾಗಿಲ್ಲ ಮತ್ತು ಈ ವರ್ಷದ ಕೊನೆಯ ವೇಳೆಗೆ ಹಂತ-ಹಂತವಾಗಿ ಜಾರಿಗೆ ಬರಲಿದೆ ಎಂದು ವಾಟ್ಸಾಪ್ ತಿಳಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us