AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನೈತಿಕ ಸಂಬಂಧದವಿದೆ ಎಂದು ಶಂಕಿಸಿ ಪತ್ನಿಯನ್ನೇ ಕೊಂದ ಪತಿ: ಆಂಧ್ರದ ಮದನಪಲ್ಲೆ ಲಾಡ್ಜ್‌ನಲ್ಲಿ ಕರ್ನಾಟಕ ಮಹಿಳೆಯ ಶವ ಪತ್ತೆ

ಆಂಧ್ರಪ್ರದೇಶದ ಮದನಪಲ್ಲೆ ಲಾಡ್ಜ್‌ನಲ್ಲಿ ಅನೈತಿಕ ಸಂಬಂಧದ ಶಂಕೆಯಿಂದ ಕರ್ನಾಟಕದ ಕೋಲಾರ ಮೂಲದ ರೂಬಿಯಾ ತಾಜ್ ಎಂಬ ವಿವಾಹಿತ ಮಹಿಳೆಯನ್ನು ಆಕೆಯ ಪತಿ ನವೀದ್ ಬಾಷಾ ಬೀರು ಬಾಟಲಿಯಿಂದ ಹೊಡೆದು ಗಂಟಲು ಕೊಯ್ದು ಭೀಕರವಾಗಿ ಹತ್ಯೆ ಮಾಡಿದ್ದಾನೆ. ಕೃತ್ಯ ಎಸಗಿದ ಬಳಿಕ ಆರೋಪಿ ಪತಿ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದು, ಮದನಪಲ್ಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಅನೈತಿಕ ಸಂಬಂಧದವಿದೆ ಎಂದು ಶಂಕಿಸಿ ಪತ್ನಿಯನ್ನೇ ಕೊಂದ ಪತಿ: ಆಂಧ್ರದ ಮದನಪಲ್ಲೆ ಲಾಡ್ಜ್‌ನಲ್ಲಿ ಕರ್ನಾಟಕ ಮಹಿಳೆಯ ಶವ ಪತ್ತೆ
ಕೊಲೆಯಾದ ರೂಬಿಯಾ ತಾಜ್ (29)
ಭಾವನಾ ಹೆಗಡೆ
|

Updated on:Oct 16, 2026 | 8:52 AM

Share

ಮುಖ್ಯಾಂಶಗಳು

  • ಮದನಪಲ್ಲೆ ಲಾಡ್ಜ್‌ನಲ್ಲಿ ಕರ್ನಾಟಕ ಮೂಲದ ರೂಬಿಯಾ ತಾಜ್ ಭೀಕರ ಕೊಲೆಯಾಗಿದೆ.
  • ಅನೈತಿಕ ಸಂಬಂಧದ ಶಂಕೆಯಿಂದ ಪತಿ ನವೀದ್ ಬಾಷಾ ಹತ್ಯೆ ಮಾಡಿದ್ದಾನೆ.
  • ಕೊಲೆ ಬಳಿಕ ಆರೋಪಿ ಪತಿ ನೇರವಾಗಿ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.

ಮದನಪಲ್ಲೆ, ಅಕ್ಟೋಬರ್ 16: ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಮದನಪಲ್ಲೆಯ ಖಾಸಗಿ ಲಾಡ್ಜ್‌ನಲ್ಲಿ ಕರ್ನಾಟಕ ಮೂಲದ ವಿವಾಹಿತ ಮಹಿಳೆಯೋರ್ವಳು ರಕ್ತದ ಮಡುವಿನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಅನೈತಿಕ ಸಂಬಂಧದ ಶಂಕೆಯಿಂದ ಆಕೆಯ ಪತಿಯೇ ಈ ಪಾತಕ ಎಸಗಿದ್ದು, ಕೊಲೆ ನಡೆಸಿದ ಬಳಿಕ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.

ಪ್ರತ್ಯೇಕವಾಗಿಯೇ ವಾಸಿಸುತ್ತಿದ್ದ ಗಂಡ-ಹೆಂಡತಿ

ಕೊಲೆಯಾದ ಮಹಿಳೆಯನ್ನು ಕರ್ನಾಟಕದ ಕೋಲಾರ ಜಿಲ್ಲೆಯ ಮುಳಬಾಗಿಲು ಮೂಲದ ರೂಬಿಯಾ ತಾಜ್ (29) ಎಂದು ಗುರುತಿಸಲಾಗಿದೆ. ಈಕೆಗೆ ಬೈಕ್ ಮೆಕ್ಯಾನಿಕ್ ಶೇಕ್ ನವೀದ್ ಬಾಷಾ (ಅಲಿಯಾಸ್ ನವೀನ್ ಪಾಷಾ) ಎಂಬಾತನೊಂದಿಗೆ 13 ವರ್ಷಗಳ ಹಿಂದೆ ಮದುವೆಯಾಗಿದ್ದು, ನಾಲ್ವರು ಮಕ್ಕಳಿದ್ದಾರೆ. ಇತ್ತೀಚೆಗೆ ದಂಪತಿ ನಡುವೆ ಕೌಟುಂಬಿಕ ಕಲಹ ಹಾಗೂ ಅನೈತಿಕ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ ಗಲಾಟೆ ನಡೆದು ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.

ಬಿಯರ್ ಬಾಟಲಿಯಿಂದ ಪತ್ನಿ ತಲೆಗೆ ಹೊಡೆದ ಪತಿ!

ಬಳಿಕ ಸಂಬಂಧಿಕರು ಸಂಧಾನ ನಡೆಸಿ, ಇಬ್ಬರನ್ನೂ ಒಂದಾಗಿಸಲು ಪ್ರಯತ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಬುಧವಾರ ಪಲಮನೇರಿಗೆ ತೆರಳಿದ್ದ ನವೀದ್, ಪತ್ನಿಯನ್ನು ಕರೆದುಕೊಂಡು ಚಿತ್ತೂರಿನಲ್ಲಿ ಶಾಪಿಂಗ್ ಮಾಡಿಸಿದ್ದಾನೆ. ತಡರಾತ್ರಿಯಾದ ಕಾರಣ ಮದನಪಲ್ಲೆಗೆ ಆಗಮಿಸಿ ಅಲ್ಲಿನ ಖಾಸಗಿ ಲಾಡ್ಜ್‌ ಒಂದರಲ್ಲಿ ರೂಮ್ ಬುಕ್ ಮಾಡಿದ್ದರು.

ಲಾಡ್ಜ್‌ನಲ್ಲಿ ತಂಗಿದ್ದ ವೇಳೆ ಮತ್ತೆ ಇಬ್ಬರ ನಡುವೆ ಅನೈತಿಕ ಸಂಬಂಧದ ವಿಚಾರವಾಗಿ ತೀವ್ರ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಆಕ್ರೋಶಗೊಂಡ ನವೀದ್, ಬಿಯರ್ ಬಾಟಲಿಯಿಂದ ರೂಬಿಯಾ ತಲೆಗೆ ಹೊಡೆದು, ಪಗಿಲಿದ್ದ ಬಾಟಲಿ ಚೂರಿನಿಂದ ಆಕೆಯ ಗಂಟಲು ಕೊಯ್ದು ಭೀಕರವಾಗಿ ಹತ್ಯೆ ಮಾಡಿದ್ದಾನೆ.

ಪೊಲೀಸರಿಗೆ ಶರಣಾದ ಆರೋಪಿ

ಘಟನೆ ನಡೆದ ನಂತರ ಗುರುವಾರ ಬೆಳಿಗ್ಗೆ ಆರೋಪಿ ನವೀದ್ ನೇರವಾಗಿ ಮದನಪಲ್ಲೆ ಒನ್ ಟೌನ್ ಪೊಲೀಸ್ ಠಾಣೆಗೆ ತೆರಳಿ ತಾನು ಎಸಗಿದ ಅಪರಾಧವನ್ನು ಒಪ್ಪಿಕೊಂಡು ಶರಣಾಗಿದ್ದಾನೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:51 am, Fri, 16 October 26

Follow Us
ಭಾವನಾ ಹೆಗಡೆ
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More