2025 ವೇಳೆಗೆ ದೇಶದ ಆಧ್ಯಾತ್ಮಿಕ ರಾಜಧಾನಿ ತಿರುಪತಿಗೆ 300 ಕೋಟಿ ವೆಚ್ಚದಲ್ಲಿ ವಿಶ್ವ ದರ್ಜೆಯ ರೈಲ್ವೇ ನಿಲ್ದಾಣ
ಪೂರ್ವನಿಗದಿತ ಗಡುವಿನೊಳಗೆ ಕೆಲಸವನ್ನು ಪೂರ್ಣಗೊಳಿಸಲು ದಿನಪೂರ್ತಿ ಕಾಮಗಾರಿ ಕೆಲಸ ನಡೆಯುತ್ತಿದೆ. G+3 ರಚನೆಗಾಗಿ ಈಗಾಗಲೇ ಸ್ತಂಭಗಳನ್ನು ಎಬ್ಬಿಸಲಾಗಿದೆ. ಇದೀಗ ಅಡಿಭಾಗದ ಕೆಲಸ ನಡೆಯುತ್ತಿದೆ.
ತಿರುಪತಿ ರೈಲ್ವೇ ನಿಲ್ದಾಣದ ಪುನರಾಭಿವೃದ್ಧಿ ಯೋಜನೆಯಡಿ ಕಾಮಗಾರಿಗಳು ವೇಗದಲ್ಲಿ ನಡೆಯುತ್ತಿದ್ದು, ದಕ್ಷಿಣ ಮಧ್ಯ ರೈಲ್ವೇ (South Central Railway -SCR) ಗುರಿ 33 ತಿಂಗಳಲ್ಲಿ ಅವುಗಳನ್ನು ಪೂರ್ಣಗೊಳಿಸಲು ಮತ್ತು 2025 ರ ಆರಂಭದ ವೇಳೆಗೆ ಆಧುನೀಕರಿಸಿದ ನಿಲ್ದಾಣವನ್ನು ಬಳಕೆಗೆ ತರಲು ಉತ್ಸುಕವಾಗಿದೆ. ಯೋಜನೆಯನ್ನು ಇಪಿಸಿ ಅಡಿಯಲ್ಲಿ (procurement, construction, and commissioning -EPC mode) ಕೈಗೊಳ್ಳಲಾಗಿದೆ. ಅಂದರೆ ಸಂಗ್ರಹ, ನಿರ್ಮಾಣ ಮತ್ತು ಜಾರಿ ಒಪ್ಪಂದದಡಿ ಕಾರ್ಯಗತಗೊಳಿಸಲಾಗುತ್ತಿದೆ. ಗುತ್ತಿಗೆದಾರ ಯೋಜನೆಯನ್ನು ಹಸ್ತಾಂತರಿಸುವುದರ ಜೊತೆಗೆ ವಿನ್ಯಾಸ, ಸಂಗ್ರಹಣೆ, ನಿರ್ಮಾಣ ಮತ್ತು ಕಮಿಷನ್‌ನ ಜವಾಬ್ದಾರಿಯನ್ನು ಹೊಂದಿರುತ್ತಾರೆ (Tirupati railway station).
ಪೂರ್ವನಿಗದಿತ ಗಡುವಿನೊಳಗೆ ಕೆಲಸವನ್ನು ಪೂರ್ಣಗೊಳಿಸಲು ದಿನಪೂರ್ತಿ ಕಾಮಗಾರಿ ಕೆಲಸ ನಡೆಯುತ್ತಿದೆ. G+3 ರಚನೆಗಾಗಿ ಈಗಾಗಲೇ ಸ್ತಂಭಗಳನ್ನು ಎಬ್ಬಿಸಲಾಗಿದೆ. ಇದೀಗ ಅಡಿಭಾಗದ ಕೆಲಸ ನಡೆಯುತ್ತಿದೆ. ಮತ್ತು ಮಣ್ಣಿನ ಕೆಲಸ ಮುಗಿದ ನಂತರ, ಕಟ್ಟಡ ನಿರ್ಮಾಣದ ಕೆಲಸ ಪ್ರಾರಂಭವಾಗಲಿದೆ. ದಕ್ಷಿಣ ಭಾಗದಲ್ಲಿ ಕಾಮಗಾರಿ ಪೂರ್ಣಗೊಂಡ ನಂತರ, ಮತ್ತೊಂದು G+3 ಕಟ್ಟಡ ನಿಲ್ದಾಣದ ಉತ್ತರ ಭಾಗದಲ್ಲಿ ನಿರ್ಮಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಂಜಿನಿಯರಿಂಗ್ ಮತ್ತು ದೇವಾಲಯ ನಗರಿ ಯೋಜನಾ ಕಾರ್ಯವು ಚುರುಕಿನ ವೇಗದಲ್ಲಿ ಸಾಗುತ್ತಿದೆ. ನಿಗದಿತ ಗುರಿಯಿರುವ 33 ತಿಂಗಳುಗಳಲ್ಲಿ ಯೋಜನೆಯನ್ನು ಪೂರ್ಣಗೊಳಿಸಲು SCR ಉತ್ಸುಕವಾಗಿದೆ. 23 ಲಿಫ್ಟ್ಗಳು, 20 ಎಸ್ಕಲೆಟರುಗಳು ಕಾರ್ಯಗತವಾಗಲಿವೆ. ತಿರುಪತಿಗೆ ವಾರ್ಷಿಕವಾಗಿ 6 ಕೋಟಿ ಭಕ್ತರು ಭೇಟಿ ನೀಡುತ್ತಾರೆ.
ಪ್ರಯಾಣಿಕರಿಗೆ ವಿಶ್ವದರ್ಜೆಯ ಸೌಲಭ್ಯಗಳನ್ನು ಕಲ್ಪಿಸಲು ತಿರುಪತಿ ನಿಲ್ದಾಣದ ಆಧುನೀಕರಣ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ತಿರುಪತಿ ರೈಲು ನಿಲ್ದಾಣದ ಆಧುನೀಕರಣ ಯೋಜನೆಗೆ ದಶಕದ ಹಿಂದೆ ಮಂಜೂರಾತಿ ನೀಡಲಾಗಿತ್ತು, ಆದರೆ ಇದು ಇಂದಿನ ಸಚಿವಾಲಯದ ಮೂಲಕ ಟ್ರ್ಯಾಕ್‌ಗೆ ಬಂದಿತು. ರೈಲ್ವೇ ಇಲಾಖೆಯು ಈ ವರ್ಷದ ಮೇ ತಿಂಗಳಲ್ಲಿ ಆಡಳಿತಾತ್ಮಕ ಅನುಮತಿಯನ್ನು ನೀಡಿದೆ. ಸಂಸತ್ತಿನಲ್ಲಿ ವಿಷಯ ಪ್ರಸ್ತಾಪಿಸಿದ ತಿರುಪತಿ ಸಂಸದ ಡಾ. ಎಂ. ಗುರುಮೂರ್ತಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಹಲವು ಬಾರಿ ಭೇಟಿ ಮಾಡಿ, ಅಂತಿಮವಾಗಿ ಮರು ಅಭಿವೃದ್ಧಿಗೆ ಒಪ್ಪಿಗೆ ಪಡೆದರು.