AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಮಾಲಯದ 12,778 ಅಡಿ ಎತ್ತರದಲ್ಲಿದೆ ವಿಶ್ವದ ಅತಿ ಎತ್ತರದ ಕೃಷ್ಣ ಮಂದಿರ: ಯುಲ್ಲಾ ಕಾಂಡದ ಪೌರಾಣಿಕ ರಹಸ್ಯ ಇಲ್ಲಿದೆ!

ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ಯುಲ್ಲಾ ಕಾಂಡದಲ್ಲಿ ವಿಶ್ವದ ಅತಿ ಎತ್ತರದ ಶ್ರೀಕೃಷ್ಣ ದೇವಾಲಯವಿದೆ. ಸಮುದ್ರ ಮಟ್ಟದಿಂದ 12,778 ಅಡಿ ಎತ್ತರದಲ್ಲಿರುವ ಈ ದೇವಾಲಯವು ಮಹಾಭಾರತ ಕಾಲದ ನಂಬಿಕೆ, ಸಾಹಸಮಯ 12 ಕಿ.ಮೀ ಚಾರಣ ಮತ್ತು ಕಿನ್ನೌರಿ ಟೋಪಿ ಸಂಪ್ರದಾಯಗಳಿಗೆ ಹೆಸರುವಾಸಿ. ಮೋಡಗಳ ನಡುವೆ ದೈವಿಕ ಅನುಭವ ನೀಡುವ ಈ ಪುಣ್ಯಕ್ಷೇತ್ರ ಮೇ-ಅಕ್ಟೋಬರ್‌ನಲ್ಲಿ ಭಕ್ತರಿಗೆ ತೆರೆದಿರುತ್ತದೆ.

ಹಿಮಾಲಯದ 12,778 ಅಡಿ ಎತ್ತರದಲ್ಲಿದೆ ವಿಶ್ವದ ಅತಿ ಎತ್ತರದ ಕೃಷ್ಣ ಮಂದಿರ: ಯುಲ್ಲಾ ಕಾಂಡದ ಪೌರಾಣಿಕ ರಹಸ್ಯ ಇಲ್ಲಿದೆ!
ವಿಶ್ವದ ಅತಿ ಎತ್ತರದ ಶ್ರೀ ಕೃಷ್ಣ ದೇವಾಲಯImage Credit source: vayabletrip.com
ಅಕ್ಷತಾ ವರ್ಕಾಡಿ
|

Updated on: Sep 05, 2026 | 9:30 AM

Share

ಹಿಮಾಲಯ ಪರ್ವತಗಳ ಮಡಿಲಲ್ಲಿ, ಮೋಡಗಳನ್ನು ತಲುಪುವ ಎತ್ತರದಲ್ಲಿ ಶ್ರೀಕೃಷ್ಣ ಕುಳಿತಿರುವ ಅಪರೂಪದ ದೇವಾಲಯವಿದೆ. ವಿಶ್ವದ ಅತಿ ಎತ್ತರದ ಕೃಷ್ಣ ದೇವಾಲಯ ಎಂದು ಕರೆಯಲ್ಪಡುವ ಈ ದೇವಾಲಯವು ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ಯುಲ್ಲಾ ಕಾಂಡ ಪ್ರದೇಶದಲ್ಲಿದೆ. ಸಮುದ್ರ ಮಟ್ಟದಿಂದ ಸುಮಾರು 12,778 ಅಡಿ (3,895 ಮೀಟರ್) ಎತ್ತರದಲ್ಲಿರುವ ಈ ದೇವಾಲಯವು ಅದ್ಭುತ ಪ್ರಕೃತಿ ಸೌಂದರ್ಯದ ನಡುವೆ ಭಕ್ತರನ್ನು ಆಕರ್ಷಿಸುತ್ತಿದೆ.

ರೋರಾ ಕಣಿವೆಯ ಸರೋವರ ಮಧ್ಯದ ಕನ್ನಯ್ಯ:

ಹಿಮಾಲಯದ ರೋರಾ ಕಣಿವೆ ಪ್ರದೇಶದ ಒಂದು ಸಣ್ಣ ಸರೋವರದ ಮಧ್ಯದಲ್ಲಿ ಈ ಶ್ರೀ ಕೃಷ್ಣ ದೇವಾಲಯವು ಭವ್ಯವಾಗಿ ನಿಂತಿದೆ. ಎತ್ತರದ ಪರ್ವತಗಳು, ಹಿಮದಿಂದ ಆವೃತವಾದ ಶಿಖರಗಳು ಮತ್ತು ನಿರ್ಮಲ ಪ್ರಕೃತಿಯಿಂದ ಸುತ್ತುವರೆದಿರುವ ಈ ಸರೋವರದ ಮಧ್ಯದಲ್ಲಿ ನೆಲೆಗೊಂಡಿರುವ ಭಗವಾನ್ ಕನ್ನಯ್ಯನ ದರ್ಶನವು ಭಕ್ತರಿಗೆ ಅಭೂತಪೂರ್ವ ಆಧ್ಯಾತ್ಮಿಕ ಅನುಭವವನ್ನು ನೀಡುತ್ತದೆ. ವಿಶೇಷವಾಗಿ ಜನ್ಮಾಷ್ಟಮಿ ಸಂದರ್ಭದಲ್ಲಿ, ದೇಶದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

ಮಹಾಭಾರತ ಕಾಲದ ಪೌರಾಣಿಕ ಹಿನ್ನೆಲೆ:

ಸ್ಥಳೀಯ ದಂತಕಥೆಗಳ ಪ್ರಕಾರ ಈ ದೇವಾಲಯವು ಮಹಾಭಾರತದ ಕಾಲಕ್ಕೆ ನಿಕಟ ಸಂಬಂಧ ಹೊಂದಿದೆ. ಪಾಂಡವರು ಹಿಮಾಲಯದಲ್ಲಿ ಅಜ್ಞಾತವಾಸ ಹಾಗೂ ವನವಾಸ ಮಾಡುವಾಗ, ಶ್ರೀಕೃಷ್ಣನನ್ನು ಪೂಜಿಸಲು ಇಲ್ಲಿ ಒಂದು ಸಣ್ಣ ಸರೋವರವನ್ನು ನಿರ್ಮಿಸಿ ದೇವಾಲಯವನ್ನು ಸ್ಥಾಪಿಸಿದರು ಎಂದು ನಂಬಲಾಗಿದೆ. ಇನ್ನು ದೇವಾಲಯದಲ್ಲಿರುವ ಶ್ರೀಕೃಷ್ಣನ ವಿಗ್ರಹವು ಮಾನವ ನಿರ್ಮಿತವಲ್ಲ, ಬದಲಿಗೆ ಭೂಮಿಯಿಂದ ತಾನಾಗಿಯೇ ಹೊರಹೊಮ್ಮಿದ ಸ್ವಯಂಭೂ ವಿಗ್ರಹ ಎಂದು ಭಕ್ತರು ನಂಬುತ್ತಾರೆ.

ಕಿನ್ನೌರಿ ಟೋಪಿಯ ಹಿಂದಿರುವ ಕುತೂಹಲಕಾರಿ ನಂಬಿಕೆ:

ಈ ದೇವಾಲಯದ ಸರೋವರಕ್ಕೆ ಸಂಬಂಧಿಸಿದಂತೆ ಒಂದು ವಿಶೇಷವಾದ ಸಾಂಪ್ರದಾಯಿಕ ನಂಬಿಕೆಯಿದೆ. ಭಕ್ತರು ತಮ್ಮ ಸಾಂಪ್ರದಾಯಿಕ ‘ಕಿನ್ನೌರಿ ಟೋಪಿ’ಯನ್ನು ಸರೋವರದ ನೀರಿನಲ್ಲಿ ತಲೆಕೆಳಗಾಗಿ ತೇಲಿಬಿಡುತ್ತಾರೆ. ಆ ಟೋಪಿಯು ನೀರಿನಲ್ಲಿ ಮುಳುಗದೆ ಯಶಸ್ವಿಯಾಗಿ ತೇಲಿದರೆ, ಅವರಿಗೆ ಮುಂದಿನ ದಿನಗಳಲ್ಲಿ ಅದೃಷ್ಟ, ಶಾಂತಿ ಮತ್ತು ಸಂತೋಷ ಲಭಿಸುತ್ತದೆ ಎಂಬುದು ಸ್ಥಳೀಯರ ಬಲವಾದ ನಂಬಿಕೆ. ಈ ಆಸಕ್ತಿದಾಯಕ ಸಂಪ್ರದಾಯವು ಈ ದೇವಾಲಯದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.

ಇದನ್ನೂ ಓದಿ: ಮನಿ ಪ್ಲಾಂಟ್‌ಗಿಂತಲೂ ಪವರ್‌ಫುಲ್ ಈ ಗಿಡ; ಮನೆಯಲ್ಲಿದ್ದರೆ ಕುಬೇರನ ಕೃಪೆಯಿಂದ ಅದೃಷ್ಟ ಖುಲಾಯಿಸುವುದು ಖಚಿತ!

ಕಠಿಣ 12 ಕಿಲೋಮೀಟರ್ ಪರ್ವತ ಚಾರಣ:

ಈ ದೈವಿಕ ಸ್ಥಳವನ್ನು ತಲುಪುವುದು ಅಷ್ಟು ಸುಲಭವಲ್ಲ. ದೇವಾಲಯವಿರುವ ಎತ್ತರಕ್ಕೆ ನೇರ ವಾಹನ ಸಂಪರ್ಕವಿಲ್ಲದ ಕಾರಣ, ಭಕ್ತರು ಕಡಿದಾದ ಪರ್ವತ ಹಾದಿಯಲ್ಲಿ ಸುಮಾರು 11 ರಿಂದ 12 ಕಿಲೋಮೀಟರ್‌ಗಳಷ್ಟು ಕಠಿಣ ಚಾರಣ (Trekking) ಮಾಡಬೇಕಾಗುತ್ತದೆ. ಸಾಹಸಮಯ ಬೆಟ್ಟಗಳು ಮತ್ತು ಒರಟಾದ ಹಾದಿಗಳನ್ನು ದಾಟಿ ಸಾಗುವ ಈ ಪ್ರಯಾಣವು ಪ್ರಕೃತಿ ಪ್ರೇಮಿಗಳಿಗೆ ಹಾಗೂ ಭಕ್ತರಿಗೆ ಮರೆಯಲಾಗದ ಅನುಭವ ನೀಡುತ್ತದೆ.

ಭೇಟಿಗೆ ಸೂಕ್ತ ಸಮಯ:

ಚಳಿಗಾಲದಲ್ಲಿ ಇಲ್ಲಿ ಭಾರೀ ಹಿಮಪಾತವಾಗುವುದರಿಂದ ಈ ಇಡೀ ಪ್ರದೇಶವು ಸಂಪೂರ್ಣವಾಗಿ ಹಿಮದಿಂದ ಆವೃತವಾಗಿರುತ್ತದೆ. ಈ ಕಾರಣದಿಂದಾಗಿ ಚಳಿಗಾಲದಲ್ಲಿ ದೇವಾಲಯವನ್ನು ಮುಚ್ಚಲಾಗುತ್ತದೆ. ಸಾಮಾನ್ಯವಾಗಿ ಮೇ ತಿಂಗಳಿನಿಂದ ಅಕ್ಟೋಬರ್‌ವರೆಗೆ ಭಕ್ತರ ದರ್ಶನ ಮತ್ತು ಪೂಜಾದಿ ಕಾರ್ಯಗಳಿಗಾಗಿ ದೇವಾಲಯದ ಬಾಗಿಲು ತೆರೆದಿರುತ್ತದೆ.

ನೈಸರ್ಗಿಕ ಸೌಂದರ್ಯ, ಮಹಾಭಾರತ ಕಾಲದ ಪೌರಾಣಿಕ ನಂಬಿಕೆ, ಸಾಹಸಮಯ ಪರ್ವತ ಪ್ರಯಾಣ ಹಾಗೂ ಶ್ರೀಕೃಷ್ಣನ ಮೇಲಿನ ಅಪಾರ ಭಕ್ತಿಯ ಸಂಗಮವೇ ಈ ಯುಲ್ಲಾ ಕಾಂಡ ದೇವಾಲಯ. ಮೋಡಗಳ ನಡುವೆ ನೆಲೆಸಿರುವ ಈ ಕನ್ನಯ್ಯನ ದರ್ಶನ ಪಡೆಯುವುದು ಪ್ರತಿಯೊಬ್ಬ ಭಕ್ತನ ಜೀವನದಲ್ಲಿ ಒಂದು ಅತ್ಯಪೂರ್ವ ಆಧ್ಯಾತ್ಮಿಕ ಅನುಭವ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ಕೃಷ್ಣ ಜನ್ಮಾಷ್ಟಮಿ 2026: ಉಡುಪಿ ಶ್ರೀಕೃಷ್ಣ ಮಠದಲ್ಲಿ ಅರ್ಘ್ಯ ಪ್ರದಾನ
ಕೃಷ್ಣ ಜನ್ಮಾಷ್ಟಮಿ 2026: ಉಡುಪಿ ಶ್ರೀಕೃಷ್ಣ ಮಠದಲ್ಲಿ ಅರ್ಘ್ಯ ಪ್ರದಾನ
ಬೆಂಗಳೂರು: ಅಕ್ರಮವಾಗಿ ಸಾಗಿಸುತ್ತಿದ್ದ ಭಾರಿ ಪ್ರಮಾಣದ ಸ್ಫೋಟಕ ಜಪ್ತಿ
ಬೆಂಗಳೂರು: ಅಕ್ರಮವಾಗಿ ಸಾಗಿಸುತ್ತಿದ್ದ ಭಾರಿ ಪ್ರಮಾಣದ ಸ್ಫೋಟಕ ಜಪ್ತಿ
ಇಂದು ಈ ರಾಶಿಯವರಿಗಿದೆ ಐದು ಗ್ರಹಗಳ ಶುಭಫಲ!
ಇಂದು ಈ ರಾಶಿಯವರಿಗಿದೆ ಐದು ಗ್ರಹಗಳ ಶುಭಫಲ!
ಕಣ್ಣೀರಿಡುತ್ತಾ ಕೆಎಸ್‌ಆರ್‌ಟಿಸಿ ಬಸ್​​ಗೆ ಮುತ್ತನ್ನಿಟ್ಟ ಕೇರಳದ ಚಾಲಕ
ಕಣ್ಣೀರಿಡುತ್ತಾ ಕೆಎಸ್‌ಆರ್‌ಟಿಸಿ ಬಸ್​​ಗೆ ಮುತ್ತನ್ನಿಟ್ಟ ಕೇರಳದ ಚಾಲಕ
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ದಕ್ಷಿಣದ ಗೋವರ್ಧನಗಿರಿ ಎಂದು ಕರೆಯುವುದೇಕೆ
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ದಕ್ಷಿಣದ ಗೋವರ್ಧನಗಿರಿ ಎಂದು ಕರೆಯುವುದೇಕೆ
ಟಿವಿ9 ಇಂಪ್ಯಾಕ್ಟ್: 8 ವರ್ಷದಿಂದ ಆಗದ ಕೆಲಸ ಕೇವಲ ಹತ್ತು ದಿನದಲ್ಲೇ ಆಯ್ತು!
ಟಿವಿ9 ಇಂಪ್ಯಾಕ್ಟ್: 8 ವರ್ಷದಿಂದ ಆಗದ ಕೆಲಸ ಕೇವಲ ಹತ್ತು ದಿನದಲ್ಲೇ ಆಯ್ತು!
ಬಿಗ್ ಬಾಸ್ ಸ್ಪರ್ಧಿಗಳ ವಿಡಿಯೋ ಹಂಚಿಕೊಂಡ ಕಲರ್ಸ್ ಕನ್ನಡ; ಯಾರು ಗೊತ್ತಾಯ್ತಾ
ಬಿಗ್ ಬಾಸ್ ಸ್ಪರ್ಧಿಗಳ ವಿಡಿಯೋ ಹಂಚಿಕೊಂಡ ಕಲರ್ಸ್ ಕನ್ನಡ; ಯಾರು ಗೊತ್ತಾಯ್ತಾ
ದೆಹಲಿಯಲ್ಲಿ ಧಾರಾಕಾರ ಮಳೆ; ರಸ್ತೆಯಲ್ಲಿ ನಿಂತ ನೀರಿನಲ್ಲಿ ಈಜಾಡಿದ ಮಕ್ಕಳು
ದೆಹಲಿಯಲ್ಲಿ ಧಾರಾಕಾರ ಮಳೆ; ರಸ್ತೆಯಲ್ಲಿ ನಿಂತ ನೀರಿನಲ್ಲಿ ಈಜಾಡಿದ ಮಕ್ಕಳು
ವಿಚ್ಛೇದನದ ಬಗ್ಗೆ ಕೇಳಿದ್ದಕ್ಕೆ ದುನಿಯಾ ವಿಜಯ್ ನೀಡಿದ ಪ್ರತಿಕ್ರಿಯೆ ಏನು?
ವಿಚ್ಛೇದನದ ಬಗ್ಗೆ ಕೇಳಿದ್ದಕ್ಕೆ ದುನಿಯಾ ವಿಜಯ್ ನೀಡಿದ ಪ್ರತಿಕ್ರಿಯೆ ಏನು?
ಉದ್ಯಾನವನಗಳ ಸಂರಕ್ಷಣಾ ತಿದ್ದುಪಡಿ ವಿಧೇಯಕ ಸರ್ಕಾರಕ್ಕೆ ವಾಪಸ್
ಉದ್ಯಾನವನಗಳ ಸಂರಕ್ಷಣಾ ತಿದ್ದುಪಡಿ ವಿಧೇಯಕ ಸರ್ಕಾರಕ್ಕೆ ವಾಪಸ್