National Defence: ಹಗುರ ಯುದ್ಧ ಹೆಲಿಕಾಪ್ಟರ್​ ಖರೀದಿಗೆ ಭೂಸೇನೆಗೇಕೆ ನಿರಾಸಕ್ತಿ

ಇದರ ಉತ್ತಮ ಅಂಶಗಳನ್ನು ಪರಿಗಣಿಸಿದರೆ, ನಕಾರಾತ್ಮಕತೆ ಅಷ್ಟೇನೂ ಅಲ್ಲ. ಇದೊಂದು ಅವಳಿ ಎಂಜಿನ್ ಹೆಲಿಕಾಪ್ಟರ್ ಆಗಿದ್ದು, ಐದರಿಂದ ಎಂಟು ಟನ್‌ಗಳ ನಡುವೆ ತೂಗುತ್ತದೆ.

National Defence: ಹಗುರ ಯುದ್ಧ ಹೆಲಿಕಾಪ್ಟರ್​ ಖರೀದಿಗೆ ಭೂಸೇನೆಗೇಕೆ ನಿರಾಸಕ್ತಿ
ಎಚ್​ಎಎಲ್ ನಿರ್ಮಿಸಿರುವ ಹಗುರ ಯುದ್ಧ ಹೆಲಿಕಾಪ್ಟರ್
Follow us
TV9 Web
| Updated By: shruti hegde

Updated on: Nov 29, 2021 | 8:59 AM

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತೀಯ ವಾಯುಪಡೆಗೆ (Indian Air Force – IAF) ಹಗುರ ಯುದ್ಧ ಹೆಲಿಕಾಪ್ಟರ್​ಗಳನ್ನು (Light Combat Helicopter – LCH) ಮೊದಲ ತಂಡವನ್ನು ಹಸ್ತಾಂತರಿಸಿದ್ದಾರೆ. ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆಗಾಗಿ 15 ಲಘು ಯುದ್ಧ ಹೆಲಿಕಾಪ್ಟರ್‌ಗಳ ಮೊದಲ ಸೀಮಿತ ಸರಣಿ ಉತ್ಪಾದನೆ ಇದಾಗಿದೆ. ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್ (Hindustan Aeronautics Limited – HAL) ಕಾರ್ಖಾನೆಯಿಂದ ಹೊರಬರುತ್ತಿರುವ ಮೊದಲ ದಾಳಿ ಹೆಲಿಕಾಪ್ಟರ್ ಇದು. ಇದರ ಉತ್ತಮ ಅಂಶಗಳನ್ನು ಪರಿಗಣಿಸಿದರೆ, ನಕಾರಾತ್ಮಕತೆ ಅಷ್ಟೇನೂ ಅಲ್ಲ. ಇದೊಂದು ಅವಳಿ ಎಂಜಿನ್ ಹೆಲಿಕಾಪ್ಟರ್ ಆಗಿದ್ದು, ಐದರಿಂದ ಎಂಟು ಟನ್‌ಗಳ ನಡುವೆ ತೂಗುತ್ತದೆ. 5,000 ಮೀಟರ್‌ಗಳಷ್ಟು (16,400 ಅಡಿ) ಎತ್ತರದಲ್ಲಿ ಟೇಕ್​ಆಫ್ ಮತ್ತು ಲ್ಯಾಂಡಿಂಗ್ ಸಾಮರ್ಥ್ಯವನ್ನು ಹೊಂದಿರುವ ವಿಶ್ವದ ಏಕೈಕ ದಾಳಿ ಹೆಲಿಕಾಪ್ಟರ್ ಎಂದು ಬಣ್ಣಿಸಲಾಗಿದೆ.

ಇದು ವಿವಿಧ ಒಣ ಮರುಭೂಮಿಯ ಪರಿಸ್ಥಿತಿಗಳಲ್ಲಿ ಮೈನಸ್ 50 ಡಿಗ್ರಿ ಸೆಲ್ಸಿಯಸ್‌ನಿಂದ ಪ್ಲಸ್ 50 ಡಿಗ್ರಿ ಸೆಲ್ಸಿಯಸ್ತಾಪಮಾನಗಳಲ್ಲಿ ಕಾರ್ಯನಿರ್ವಹಿಸಬಲ್ಲದು. ಸ್ವದೇಶಿ ಹೆಲಿಕಾಪ್ಟರ್‌ನಲ್ಲಿ ಆಗಸದಲ್ಲಿರುವ ಗುರಿಗಳನ್ನು ಬೆನ್ನಟ್ಟುವ ಮತ್ತು ಆಗಸದಿಂದ ಭೂಮಿಯಲ್ಲಿರುವ ಗುರಿಗಳನ್ನು ನಾಶಪಡಿಸಬಲ್ಲ ಕ್ಷಿಪಣಿಗಳನ್ನು ಅಳವಡಿಸಲಾಗಿದೆ. 20 ಎಂಎಂ ಗನ್ ಮತ್ತು 70 ಎಂಎಂ ರಾಕೆಟ್‌ಗಳನ್ನು ಈ ಹೆಲಿಕಾಪ್ಟರ್ ಹೊಂದಿದೆ.

ಸುಧಾರಿತ ಏವಿಯಾನಿಕ್ಸ್ ಮತ್ತು ಶಸ್ತ್ರಾಸ್ತ್ರಗಳ ಸಹಾಯದಿಂದ ಈ ಹಗುರ ಹೆಲಿಕಾಪ್ಟರ್ ಗಾಳಿ ಮತ್ತು ನೆಲದ ಗುರಿಗಳನ್ನು ಪಡೆದುಕೊಳ್ಳಬಹುದು ಮತ್ತು ತಟಸ್ಥಗೊಳಿಸಬಹುದು. ಪೂರ್ಣ 360 ಡಿಗ್ರಿಗಳ ಪರಿಭ್ರಮಣ ಸಾಮರ್ಥ್ಯವನ್ನು ಎಲ್​ಸಿಎಚ್ ಹೊಂದಿದೆ. ಅಂದರೆ, ಈ ಹೆಲಿಕಾಪ್ಟರ್ ಅನ್ನು ಗಾಳಿಯಲ್ಲಿಯೇ ವೇಗವಾಗಿ ತಿರುಗಿಸಬಹುದು. ಎಚ್​ಎಎಲ್ ಹೇಳುವಂತೆ, ಭಾರತದಲ್ಲಿ ಮೊದಲ ಬಾರಿಗೆ ಸ್ಥಳೀಯವಾಗಿ ವಿನ್ಯಾಸಗೊಳಿಸಲಾದ ಮತ್ತು ಅಭಿವೃದ್ಧಿಪಡಿಸಲಾದ ಒಂದು ಯುದ್ಧ ಹೆಲಿಕಾಪ್ಟರ್ ಈ ಎಲ್​ಸಿಎಚ್. ಭಾರತೀಯ ಸಶಸ್ತ್ರ ಪಡೆಗಳ ನಿರ್ದಿಷ್ಟ ಆವಶ್ಯಕತೆಗಳನ್ನು ಪೂರೈಸುವ ಶಸ್ತ್ರಾಸ್ತ್ರಗಳು ಮತ್ತು ಇಂಧನದ ಗಣನೀಯ ಹೊರೆಯೊಂದಿಗೆ 5,000 ಮೀಟರ್ (16,400 ಅಡಿ) ಎತ್ತರದಲ್ಲಿ ಲ್ಯಾಂಡ್ ಆಗಬಲ್ಲ ಮತ್ತು ಟೇಕ್ಆಫ್ ಮಾಡಬಲ್ಲ ವಿಶ್ವದ ಏಕೈಕ ದಾಳಿ ಹೆಲಿಕಾಪ್ಟರ್ ಇದಾಗಿದೆ.

ಎಲ್ಲ 15 ಹೆಲಿಕಾಪ್ಟರ್‌ಗಳ ತಯಾರಿಗೆ ಅಗತ್ಯವಿರುವ ಸಾಮಗ್ರಿಗಳ ಸಂಗ್ರಹ ಪೂರ್ಣಗೊಂಡಿದೆ. ಬಳಕೆದಾರರಿಗೆ ತಲುಪಿಸಲು ಮೂರು ಹೆಲಿಕಾಪ್ಟರ್‌ಗಳು ಸಿದ್ಧವಾಗಿವೆ. ಬಾಕಿ ಉಳಿದಿರುವ ಹೆಲಿಕಾಪ್ಟರ್‌ಗಳ ಉತ್ಪಾದನೆಯು ನಡೆಯುತ್ತಿದೆ. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಎಂಐ-35 ಹಿಂದ್ ಅಟ್ಯಾಕ್ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲು ಸಾಧ್ಯವಾಗಲಿಲ್ಲ. ಅಂತಹ ಎತ್ತರದಲ್ಲಿ ಕಾರ್ಯ ನಿರ್ವಹಿಸಲು ಅಗತ್ಯವಿರುವ ಶಕ್ತಿಯ ಕೊರತೆ ಅವುಗಳಲ್ಲಿತ್ತು. ಈ ಹಿನ್ನೆಲೆಯಲ್ಲಿ ಭಾರತೀಯ ಸೇನೆಯ ಅಗತ್ಯಗಳಿಗೆ ಅನುಸಾರವಾಗಿ ರೂಪುಗೊಂಡಿರುವ ಈ ಹೆಲಿಕಾಪ್ಟರ್‌ಗಳು ತಮ್ಮೆಲ್ಲ ಅಭಿವೃದ್ಧಿ ಪ್ರಯೋಗಗಳನ್ನು ಪೂರ್ಣಗೊಳಿಸಿವೆ. ಆದರೆ ವಿಪರ್ಯಾಸವೆಂದರೆ, ಪ್ರಸ್ತುತ ಚೀನಾ ಸೇನೆಯೊಂದಿಗೆ ಬಿಕ್ಕಟ್ಟಿನಲ್ಲಿರುವ ಪ್ರದೇಶದಲ್ಲಿ ಗೇಮ್ ಚೇಂಜರ್ ಆಗಿ ಬರಬಹುದಾದ ಶಸ್ತ್ರಾಸ್ತ್ರ ವ್ಯವಸ್ಥೆಗಳಿಗೆ ಆದೇಶಗಳನ್ನು ನೀಡಲು ಭಾರತೀಯ ಸೇನೆಯು ಯಾವುದೇ ಆತುರವನ್ನು ತೋರುತ್ತಿಲ್ಲ.

ಮೂಲಗಳ ಪ್ರಕಾರ ಭಾರತೀಯ ಸೇನೆಯು ಎಎಲ್​ಎಚ್​ ಧ್ರುವ ಹೆಲಿಕಾಪ್ಟರ್​ನ ಶಸ್ತ್ರಸಜ್ಜಿತ ರೂಪಾಂತರವಾಗಿರುವ ಎಎಲ್​ಎಚ್​ ರುದ್ರ ಹೆಲಿಕಾಪ್ಟರ್ ಅನ್ನು ಇಷ್ಟಪಟ್ಟಿದೆ. ಇದನ್ನು ಎರಡು-ಉದ್ದೇಶಗಳಿಗೆ ಹಾರಾಟ ವಾಹನವಾಗಿ ಬಳಸಬಹುದು. ಏಕೆಂದರೆ, ಇಬ್ಬರು ಪೈಲಟ್‌ಗಳ ಜೊತೆಗೆ ಹೆಚ್ಚಿನ ಪ್ರಯಾಣಿಕರನ್ನು ಇದು ಸಾಗಿಸಬಲ್ಲದು. ಸೇನೆಯು ಈವರೆಗೆ 65 ಎಎಲ್​ಎಚ್​ ರುದ್ರ ಹೆಲಿಕಾಪ್ಟರ್‌ಗಳನ್ನು ಸೇರ್ಪಡೆಗೊಳಿಸಿದ್ದು ಹಗುರ ಯುದ್ಧ ಹೆಲಿಕಾಪ್ಟರ್ ಖರೀದಿಗೆ ಒಲವು ತೋರುತ್ತಿಲ್ಲ.

ಹಗುರ ಹೆಲಿಕಾಪ್ಟರ್​ಗೆ ಅಳವಡಿಸಿರುವ ಶಸ್ತ್ರಗಳಲ್ಲಿ ಟ್ಯಾಂಕ್ ವಿರೋಧಿ ನಿರ್ದೇಶಿತ ಕ್ಷಿಪಣಿಗಳ (Anti Tank Guided Missile – ATGM) ಕೊರತೆ ಮತ್ತು ರಕ್ಷಣಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆಯು (Defence Research and Development Organisation – DRDO) ಹೆಲಿಕಾಪ್ಟರ್‌ಗಳಿಗೆ ಅಳವಡಿಸುವ ಶಸ್ತ್ರಾಸ್ತ್ರಗಳ ಅಭಿವೃದ್ಧಿಯನ್ನು ಚುರುಕುಗೊಳಿಸಬೇಕಿದೆ. ಸರ್ಕಾರವೂ ಹೂಡಿಕೆಯನ್ನು ಹೆಚ್ಚಿಸಬೇಕಿದೆ. ಅಗತ್ಯ ಶಸ್ತ್ರಾಸ್ತ್ರಗಳು ಅಳವಡಿಕೆಯಾಗದ ಕಾರಣ ಎಎಲ್​ಎಚ್​-ರುದ್ರ ಮತ್ತು ಎಲ್​ಸಿಎಚ್​ ಹೆಲಿಕಾಪ್ಟರ್​ಗಳು ‘ಹಲ್ಲಿಲ್ಲದ ಹಾವಿನಂತಾಗಿವೆ’ ಎಂದು ಇದೀಗ ಭಾರತೀಯ ಸಶಸ್ತ್ರ ಪಡೆಗಳ ಸಿಬ್ಬಂದಿ ಮುಖ್ಯಸ್ಥ ಮತ್ತು ಈ ಹಿಂದೆ ಭೂಸೇನೆಯ ಮುಖ್ಯಸ್ಥರಾಗಿದ್ದ ಜನರಲ್ ಬಿಪಿನ್ ರಾವತ್ ವಿವರಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಹಗುರ ಹೆಲಿಕಾಪ್ಟರ್​ಗಳು ಮುಖ್ಯವಾಗಿ ಭಾರತೀಯ ಸೇನೆಯ ಬಳಕೆಗೆ ಬೇಕಿದೆ. ಹೀಗಾಗಿ ವಾಯುಪಡೆಯು ಭಾರತೀಯ ಸೇನೆಯ ಆದೇಶಕ್ಕೇ ಕಾಯುತ್ತಿರುವಂತೆ ತೋರುತ್ತದೆ. ಸೇನೆಯು ಹೆಚ್ಚು ಆಸಕ್ತಿ ತೋರುವವರೆಗೂ ಈ ಕಾರ್ಯಕ್ಕೆ ವೇಗ ಸಿಗುವ ಸಾಧ್ಯತೆಯಿಲ್ಲ. ಸಶಸ್ತ್ರ ಪಡೆಗಳಿಂದ ಇಂತಹ ತಣ್ಣನೆಯ ಪ್ರತಿಕ್ರಿಯೆಗಳು ಹಗುರ ಯುದ್ಧ ಹೆಲಿಕಾಪ್ಟರ್​ ಕಾರ್ಯೋಜನೆಗಳಿಗೆ ಉಪಯುಕ್ತವಾಗುವುದಿಲ್ಲ. ಅವುಗಳ ಖರೀದಿಗೆ ಆಸಕ್ತಿ ಹೊಂದಿರುವ ಇತರ ನಿರೀಕ್ಷಿತ ಗ್ರಾಹಕರ ದೃಷ್ಟಿಯಲ್ಲೂ ಇಂಥ ಉತ್ಪನ್ನಗಳ ಬಗ್ಗೆ ಗೌರವ ಉಳಿಯುವುದಿಲ್ಲ. ಸೈನ್ಯವು ಅದನ್ನು ಖರೀದಿಸುವ ಉದ್ದೇಶದ ಪತ್ರವನ್ನು ನೀಡದ ಕಾರಣ, ನಮ್ಮ ಜನರಲ್‌ಗಳು ಮತ್ತು ವಾಯುಪಡೆಯ ಮೇಲಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ವ್ಯವಸ್ಥೆಯನ್ನು ಸಂಗ್ರಹಿಸಲು ಇನ್ನೂ ಸಾಧ್ಯವಾಗದ ಕಾರಣ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಂದ ಹಣವನ್ನು ಎರವಲು ಪಡೆಯಬೇಕಾದ ಆಂತರಿಕ ನಿಧಿಯಿಂದ ಎಚ್​ಎಎಲ್ ಅದನ್ನು ನಿರ್ಮಿಸಿದೆ.

ಬರಹ: ಗಿರೀಶ್ ಲಿಂಗಣ್ಣ, ನಿರ್ದೇಶಕರು, ಎಡಿಡಿ ಎಂಜಿನಿಯರಿಂಗ್ ಇಂಡಿಯಾ ಲಿಮಿಟೆಡ್

HAL-LUH

ಎಚ್​ಎಎಲ್ ಅಭಿವೃದ್ಧಿಪಡಿಸಿರುವ ಹಗುರ ಹೆಲಿಕಾಪ್ಟರ್ (ಒಳಚಿತ್ರ: ಲೇಖಕ ಗಿರೀಶ್ ಲಿಂಗಣ್ಣ)

ಇದನ್ನೂ ಓದಿ: ತುಮಕೂರಿನಲ್ಲಿ ಸಿದ್ಧವಾಗಲಿದೆ ಲಘು ಯುದ್ಧವಿಮಾನ: ಭಾರತದ ರಕ್ಷಣಾ ಪಡೆಗಳಿಗೆ ಹೊಸ ಬಲ ಇದನ್ನೂ ಓದಿ: ಬಸವನಹುಳುವನ್ನು ನಾಚಿಸುತ್ತಿದೆ ಪ್ರಗತಿಯವೇಗ: ಗುಬ್ಬಿಯಲ್ಲಿ ಎಚ್​ಎಎಲ್ ಘಟಕ ಆರಂಭವಾಗುವುದು ಎಂದು?

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?