AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: ಹೊಸ ಲುಕ್​ನೊಂದಿಗೆ ಆರ್​ಸಿಬಿಗೆ ಮರಳಿದ ಕಿಂಗ್ ಕೊಹ್ಲಿ! ವಿರಾಟ್ ಹೇಗಿದ್ದಾರೆ ನೋಡಿ

ಇಂಡಿಯನ್ ಪ್ರೀಮಿಯರ್ ಲೀಗ್ (IPL) ಕಳೆದ ಋತುವಿನ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸತತ ಎರಡನೇ ಬಾರಿಗೆ ಐಪಿಎಲ್ ಕಿರೀಟಕ್ಕೆ ಮುತ್ತಿಕ್ಕುವತ್ತ ಚಿತ್ತ ನೆಟ್ಟಿದೆ. ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸಿದ್ಧತೆಗಾಗಿ ಮಾರ್ಚ್ 18 ರಂದು ತಂಡವನ್ನು ಸೇರಿಕೊಂಡಿದ್ದಾರೆ. ಆದರೆ ಈ ಸೀಸನ್​ಗೆ ಅವರು ಸ್ವಲ್ಪ ಭಿನ್ನ ಲುಕ್ನೊಂದಿಗೆ, ಹೊಸ ಹೇರ್​ಸ್ಟೈಲ್​ನಲ್ಲಿ ಆಗಮಿಸಿರುವುದು ಅಭಿಮಾನಿಗಳ ಗಮನ ಸೆಳೆದಿದೆ.

ಗಣಪತಿ ಶರ್ಮಾ
|

Updated on: Mar 19, 2026 | 10:39 AM

Share
ಅಭಿಮಾನಿಗಳು ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. ಹೊಸ ಸೀಸನ್‌ಗೆ ತಯಾರಿ ನಡೆಸಲು ಮಾರ್ಚ್ 18 ರಂದು ಆರ್​ಸಿಬಿ ತಂಡದ ಶಿಬಿರ ಆರಂಭವಾಗಿದೆ. ತಂಡದ ಆಟಗಾರರು ಶಿಬಿರಕ್ಕೆ ಮರಳಿರುವ ಚಿತ್ರವನ್ನು ಎಕ್ಸ್​ ಖಾತೆಯಲ್ಲಿ ಆರ್​​ಸಿಬಿ ಹಂಚಿಕೊಂಡಿದೆ.

1 / 6
ಮಾರ್ಚ್ 18, ಬುಧವಾರ ತಂಡವನ್ನು ಸೇರಿಕೊಂಡ ಕಿಂಗ್ ಕೊಹ್ಲಿ ಮೊದಲ ತರಬೇತಿ ಅವಧಿಯಲ್ಲಿ ಭಾಗವಹಿಸಿದರು. ವಿರಾಟ್ ಕೊಹ್ಲಿ ನೆಟ್ಸ್​​ನಲ್ಲಿ ಭಾಗವಹಿಸಿರುವುದು ಅವರ ಅಭಿಮಾನಿಗಳಿಗೆ ಖುಷಿಕೊಟ್ಟಿದ್ದು, ಐಪಿಎಲ್ ಮೊದಲ ಪಂದ್ಯದಲ್ಲಿ ಕೊಹ್ಲಿ ಬ್ಯಾಟಿಂಗ್ ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.

2 / 6
ಕೊಹ್ಲಿ ತಂಡ ಸೇರಿರುವ ಕೆಲವು ಫೋಟೋಗಳನ್ನು ಆರ್‌ಸಿಬಿಯು ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿದೆ. ಇವುಗಳಲ್ಲಿ ಕೊಹ್ಲಿ ಸಂಪೂರ್ಣವಾಗಿ ಬದಲಾದಂತೆ ಕಾಣುತ್ತಿರುವುದನ್ನು ನೋಡಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.

3 / 6
ಕೊಹ್ಲಿ ಅವರ ಕೇಶವಿನ್ಯಾಸದಲ್ಲಿನ ಬದಲಾವಣೆ ಅಭಿಮಾನಿಗಳನ್ನು ಅಚ್ಚರಿಗೊಳಿಸಿತು. ಅವರ ಹೇರ್​ಸ್ಟೈಲ್ ಮೊದಲಿಗಿಂತ ಸಂಪೂರ್ಣವಾಗಿ ಭಿನ್ನವಾಗಿ ಕಾಣಿಸಿದೆ. ಇದು ಅಭಿಮಾನಿಗಳನ್ನು ಅಚ್ಚರಿಗೊಳಿಸಿತು. ಕೊಹ್ಲಿ ಹೊಸ ಲುಕ್​​ನ ಫೋಟೊ ಇಲ್ಲಿದೆ ನೋಡಿ. ಸದ್ಯ ಈ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗುತ್ತಿವೆ.

4 / 6
ಕಳೆದ 2 ಐಪಿಎಲ್​ ಸೀಸನ್​ಗಳಲ್ಲಿ ಕೊಹ್ಲಿ ಅವರಿಂದ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮೂಡಿಬಂದಿತ್ತು. ತಂಡ ಐಪಿಎಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವುದಕ್ಕೂ ಕೊಹ್ಲಿ ಬ್ಯಾಟಿಂಗ್ ನೆರವಾಗಿತ್ತು. ಇದೀಗ, ಅವರ ಹೇರ್ಸ್ಟೈಲ್ ಏನೇ ಇರಲಿ, ಈ ಬಾರಿಯೂ ಅವರ ಬ್ಯಾಟ್​ನಿಂದ ರನ್​ ಹೊಳೆ ಹರಿಯಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

5 / 6
ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿ ಮಾರ್ಚ್ 28ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅದ್ಧೂರಿಯಾಗಿ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್​ಸಿಬಿ ಮತ್ತು ಸನ್‌ರೈಸರ್ಸ್ ಹೈದರಾಬಾದ್ (ಎಸ್​​ಆರ್​​ಎಚ್) ತಂಡಗಳು ಮುಖಾಮುಖಿಯಾಗಲಿವೆ. ಕೊಹ್ಲಿ ಬ್ಯಾಟಿಂಗ್ ಬಗ್ಗೆ ಅಭಿಮಾನಿಗಳ ನಿರೀಕ್ಷೆ ಗರಿಗೆದರಿದೆ.

6 / 6
Follow Us