Updated on: Jan 25, 2023 | 6:16 PM
ಗದಗ ನಗರದ ಎ.ಎಸ್.ಎಸ್ ಕಾಲೇಜ್ ಆವರಣದಲ್ಲಿ. ವಿದ್ಯಾರ್ಥಿಗಳಲ್ಲಿ ಉದ್ಯೋಗದ ಕೌಶಲ್ಯಾಭಿವೃದ್ಧಿಗಾಗಿ ಈ ಫುಡ್ ಫೆಸ್ಟಿವಲ್ ಆಯೋಜನೆ ಮಾಡಲಾಗಿತ್ತು. ಗ್ರಾಹಕರನ್ನು ಆಕರ್ಷಣೆ ಹೇಗೆ ಮಾಡೋದು. ಉದ್ಯಮದಲ್ಲಿ ಯಶಸ್ಸಿಯಾಗಲು ಏನೆಲ್ಲಾ ಮಾಡಬೇಕು ಅನ್ನೋ ಐಡಿಯಾಗಳನ್ನ ವಿದ್ಯಾರ್ಥಿಗಳು ಇವತ್ತು ಅನಾವರಣ ಮಾಡಿದ್ರು.
ಕಾಲೇಜ್ ಆವರಣದಲ್ಲಿ ಸುಮಾರು 20ಕ್ಕೂ ಅಧಿಕ ಸ್ಟಾಲ್ಗಳು ಹಾಕಲಾಗಿತ್ತು. ಒಂದೊಂದು ಸ್ಟಾಲ್ನಲ್ಲಿ ಒಂದೊಂದು ರೀತಿಯ ಫುಡ್ ವಿದ್ಯಾರ್ಥಿಗಳು ತಯ್ಯಾರಿ ಮಾಡಿದರು. ಇನ್ನೂ ಕೆಲವು ಯುವಕರು ಮನೆಯಲ್ಲೇ ಮಾಡಿಕೊಂಡು ಬಂದಿದ್ರು.
ಕಟ್ಲೆಟ್ ಕೇಕ್, ಮುಂಡರಗಿ ಗಿರಮಿಟ್, ಬನ್ಸ್, ಪಾನಿ ಪುರಿ, ಪಾವ್ ಬನ್, ಓರೇ ಕೇಕ್, ಗುಲಾಬ್ ಜಾಮೂನ್ ಸೇರಿದಂತೆ ವಿವಿಧ ತರಹದ ಪಾನಿಯಗಳನ್ನ ವಿದ್ಯಾರ್ಥಿಗಳು ಸ್ಥಳದಲ್ಲೇ ತಯ್ಯಾರಿಸಿ ಗ್ರಾಹಕರನ್ನು ಸೆಳೆಯಲು ನಾನಾ ಕಸರತ್ತು ಮಾಡುವ ಮೂಲಕ ಭರ್ಜರಿ ವ್ಯಾಪಾರ ಮಾಡಿದರು.
ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿಗಳ ಉದ್ಯೋಗ ಕೌಶಲ್ಯ ಪರೀಕ್ಷೆ ಮಾಡಲು ವಾಣಿಜ್ಯ ವಿಭಾಗದ ಮುಖ್ಯಸ್ಥರು ಈ ಫುಡ್ ಫೆಸ್ಟಿವಲ್ ಆಯೋಜನೆ ಮಾಡಿದ್ರು. ಕೆಲ ವಿದ್ಯಾರ್ಥಿಗಳು ಡಿಫರಂಟ್ ಡಿಫರಂಟ್ ಚಾಟ್ಸ್, ಸ್ನಾಕ್ಸ್, ಸಾಫ್ಟ್ ಡ್ರಿಂಕ್ಸ್ ಮಾಡಿ ಗಮನ ಸೆಳೆದ್ರು.
ಇನ್ನು ವಿದ್ಯಾರ್ಥಿಗಳು ತಯ್ಯಾರಿಸಿದ ಫುಡ್ನ್ನು ನಿರ್ಣಾಯಕರು ಪ್ರತಿಯೊಂದು ಸ್ಟಾಲ್ಗಳಿಗೆ ಹೋಗಿ ಫುಡ್ ಗುಣಮಟ್ಟ ಪರೀಕ್ಷೆ ಮಾಡಿದ್ರು. ವಿದ್ಯಾರ್ಥಿಗಳು ಡಿಫರಂಟ್ ಚಾಟ್ಸ್, ವಿವಿಧ ನಮೂನೆಯ ಫುಡ್ ನೋಡಿ ದಂಗಾದ್ರು.
ಕೊನೆಗೆ ಯಾರೂ ಉತ್ತಮ ಗುಣಮಟ್ಟದ ಫುಡ್ ತಯ್ಯಾರಿ ಮಾಡಿದ್ರು. ಯಾರು ಎಷ್ಟು ವ್ಯಾಪಾರ ಮಾಡಿದ್ರು, ಯಾರೂ ಗ್ರಾಹಕರನ್ನ ಸೆಳೆಯಲು ಆಕರ್ಷಣೆಯ ಪ್ಲಾನ್ ಮಾಡಿದ್ರು ಎನ್ನುವುದನ್ನ ಪರಿಶೀಲನೆ ಮಾಡಿ ಗೆದ್ದವರಿಗೆ ಯಶಸ್ವಿ ಉದ್ಯಮಿ ಎಂದು ಘೋಷಣೆ ಮಾಡುತ್ತಾರೆ.
ನಿತ್ಯವೂ ಸಿರಿಯಸ್ ಮೂಡನಲ್ಲಿರೋ ವಿದ್ಯಾರ್ಥಿಗಳು ಇವತ್ತು ಫುಲ್ ಜಾಲಿ ಮೂಡನಲ್ಲಿದ್ರು. ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳು ಫುಡ್ ತಯ್ಯಾರಿ ಮಾಡಿ ಬಿಸಿನೆಸ್ನಲ್ಲಿ ಎಂಗೇಜ್ ಆದ್ರೆ, ಜೂನಿಯರ್ ವಿದ್ಯಾರ್ಥಿಗಳು ಸಿನಿಯರ್ ಮಾಡಿದ ಫುಡ್ ಖರೀದಿ ಮಾಡಿ ರುಚಿ ಸವಿದ್ರು. ಒಟ್ಟಾರೆಯಾಗಿ ನಿತ್ಯವೂ ಪಾಠದ ಜಂಜಾಟದಲ್ಲಿದ್ದ ವಿದ್ಯಾರ್ಥಿಗಳು ಫುಲ್ ಎಂಜಾಯ್ ಮಾಡಿದ್ರು.