- TV9 Kannada Photo gallery Happy Teddy Day 2023: The World's Most Expensive Teddy Bears,You will be shocked if you hear its price
Happy Teddy Day 2023: ಅಬ್ಬಬ್ಬಾ! ಕೋಟಿಗೆ ಬೆಲೆ ಬಾಳುವ ವಿಶ್ವದ ಅತ್ಯಂತ ದುಬಾರಿ ಟೆಡ್ಡಿ ಬೇರ್ಗಳು ಇಲ್ಲಿವೆ
7ಲಕ್ಷದಿಂದ ಪ್ರಾರಂಭವಾಗಿ 13 ಕೋಟಿ ವರೆಗಿನ ವಿಶ್ವದ ಅತ್ಯಂತ ದುಬಾರಿ ಟೆಡ್ಡಿ ಬೇರ್ಗಳನ್ನು ನೀವಿಲ್ಲಿ ಕಾಣಬಹುದು. ಏನಪ್ಪಾ ಈ ಕರಡಿ ಗೊಂಬೆಗಳಿಗೆ ಇಷ್ಟೊಂದು ಬೆಲೆನಾ ಅಂತಾ ಅನ್ಕೊತ್ತಿದ್ದೀರಾ? ದುಬಾರಿ ಟೆಡ್ಡಿ ಬೇರ್ಗಳ ಪೋಟೋಗಳು ಇಲ್ಲಿವೆ.
Updated on:Feb 10, 2023 | 11:17 AM

ಸ್ಟೀಫ್ ಆಂಡ್ ಲೂಯಿ ವಿಟಾನ್ ಟೆಡ್ಡಿ: ಈ ದುಬಾರಿ ಟೆಡ್ಡಿಯನ್ನು ಐಷಾರಾಮಿ ಬ್ರಾಂಡ್ ಆಗಿರುವ ಸ್ಟೀಫ್ ಆಂಡ್ ಲೂಯಿ ವಿಟಾನ್ ವಿನ್ಯಾಸಗೊಳಿಸಿದೆ. ಇದರ ಬೆಲೆ ರೂ 13,51,25,550 (2.1 ಮಿಲಿಯನ್ ಡಾಲರ್).

ಸ್ಟೀಫ್ ಟೈಟಾನಿಕ್ ಟೆಡ್ಡಿ ಬೇರ್: 1912 ರಲ್ಲಿ ಟೈಟಾನಿಕ್ ಹಡಗು ಮುಳುಗಿದಾಗ, ಟೆಡ್ಡಿ ಬೇರ್ ಬ್ರ್ಯಾಂಡ್ ಸ್ಟೀಫ್ ದುರಂತ ಘಟನೆಯ ಸ್ಮರಣಾರ್ಥ 600 ಕಪ್ಪು ಟೆಡ್ಡಿಗಳನ್ನು ತಯಾರಿಸಿತು. ಇದರ ಬೆಲೆ 79,81,096 ರೂ (1,24,036 ಡಾಲರ್)

ಸ್ಟೀಫ್ ಡೈಮಂಡ್ ಐಸ್ ಟೆಡ್ಡಿ ಬೇರ್: ಈ ಟೆಡ್ಡಿ ಬೇರ್ ಸಂಪೂರ್ಣವಾಗಿ ಚಿನ್ನದಿಂದಲೇ ಮಾಡಿದಂತೆ ಕಾಣುತ್ತದೆ. ಆದರೆ ಇದರ ವಿಶೇಷತೆ ಎಂದರೆ ಅದರ ಬಾಯಿಯನ್ನು ಚಿನ್ನದಿಂದ ಮಾಡಲಾಗಿದೆ ಮತ್ತು ಅದರ ಕಣ್ಣುಗಳನ್ನು ನೀಲಮಣಿಗಳು ಮತ್ತು ವಜ್ರಗಳಿಂದ ಮಾಡಲಾಗಿದೆ. ಇದರ ಬೆಲೆ 54,05,022ರೂ (84,000ಡಾಲರ್).

ಲೂಯಿ ವಿಟಾನ್ ಮೊನೊಗ್ರಾಮ್ ಬೇರ್: ಪ್ರಸಿದ್ಧ ಬ್ರಾಂಡ್ ಆಗಿರುವ ಲೂಯಿ ವಿಟಾನ್ ಈ ಟೆಡ್ಡಿಯನ್ನು ವಿನ್ಯಾಸಗೊಳಿಸಿದ್ದಾರೆ. ಇದರ ಬೆಲೆ 1,17,15,340 ರೂ (1,82,000 ಡಾಲರ್).

ಸ್ಟೀಫ್ ರಾಡ್ ಕರಡಿ ಪಿ ಬಿ28: ಆಲ್ಬರ್ಟ್ ಎಂದು ಕರೆಯಲ್ಪಡುವ ಈ ಟೆಡ್ಡಿಯನ್ನು 1904 ರಲ್ಲಿ ತಯಾರಿಸಲಾಯಿತು. ಇದರ ಬೆಲೆ 71,37,211 ರೂ. (1,10,921ಡಾಲರ್).

ಹಾರ್ಲೆಕ್ವಿನ್ ಟೆಡ್ಡಿ ಬೇರ್: ಈ ವರ್ಣರಂಜಿತವಾದ ಟೆಡ್ಡಿ ಬೇರ್ನ್ನು 1925 ರಲ್ಲಿ ಸ್ಟೀಫ್ ಬ್ರಾಂಡ್ ತಯಾರಿಸಿತು. ಇದು ಆ ಸಮಯದಲ್ಲಿ ತಯಾರಿಸಿದ ಅತ್ಯಂತ ದುಬಾರಿ ಆಟಿಕೆಗಳಲ್ಲಿ ಒಂದಾಗಿದೆ. ಇದರ ಬೆಲೆ ರೂ 48,80,161 (75,826 ಡಾಲರ್).

ಸ್ಟೀಫ್ ಬ್ಲೂ ಎಲಿಯಟ್ ಟೆಡ್ಡಿ ಬೇರ್: 1908 ರಲ್ಲಿ ಆರು ವಿಭಿನ್ನ ಬಣ್ಣಗಳಲ್ಲಿ ಈ ಟೆಡ್ಡಿ ಬೇರ್ಗಳನ್ನು ಸ್ಟೀಫ್ ಬ್ರಾಂಡ್ ಕಂಪೆನಿಯು ತಯಾರಿಸಿತು ಮತ್ತು ಮಾರಾಟಕ್ಕಾಗಿ ಲಂಡನ್‌ಗೆ ಕಳುಹಿಸಲಾಯಿತು. 1993 ರಲ್ಲಿ ಇದನ್ನು ಹರಾಜಿಗೆ ಇಡಲಾಯಿತು. ಇದರ ಬೆಲೆ 42,98,246 ರೂ (66,800 ಡಾಲರ್).
Published On - 11:16 am, Fri, 10 February 23

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.
Read More



