KCC Final: ಕೆಸಿಸಿ ಫಿನಾಲೆಯ ಮಧುರ ಕ್ಷಣಗಳು; ಇಲ್ಲಿವೆ ಫೋಟೋಗಳು
ಶಿವಣ್ಣ ತಂಡ ರನ್ನರ್ ಅಪ್ ಆಗಿ ಹೊರ ಹೊಮ್ಮಿದೆ. ಶಿವರಾಜ್ಕುಮಾರ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಗಣೇಶ್ ತಂಡ ಕೊಟ್ಟ 112 ರನ್ಗಳ ಟಾರ್ಗೆಟ್ ಚೇಸ್ ಮಾಡಲು ಶಿವಣ್ಣನ ತಂಡ ವಿಫಲವಾಗಿದೆ.
Updated on:Dec 26, 2023 | 9:53 AM

‘ಕೆಸಿಸಿ’ ಫಿನಾಲೆ ಡಿಸೆಂಬರ್ 25ರಂದು ನಡೆದಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ‘ಗಂಗ ವಾರಿಯರ್ಸ್’ ತಂಡ ನಾಲ್ಕು ರನ್ಗಳ ಗೆಲುವು ಕಂಡಿದೆ. ಈ ಮೂಲಕ ನಾಲ್ಕನೇ ಸೀಸನ್ ವಿನ್ನರ್ ಪಟ್ಟವನ್ನು ಗಣೇಶ್ ತಂಡ ಪಡೆದಿದೆ.

ಶಿವಣ್ಣ ತಂಡ ರನ್ನರ್ ಅಪ್ ಆಗಿ ಹೊರ ಹೊಮ್ಮಿದೆ. ಶಿವರಾಜ್ಕುಮಾರ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಗಣೇಶ್ ತಂಡ ಕೊಟ್ಟ 112 ರನ್ಗಳ ಟಾರ್ಗೆಟ್ ಚೇಸ್ ಮಾಡಲು ಶಿವಣ್ಣನ ತಂಡ ವಿಫಲವಾಗಿದೆ.

ಗಣೇಶ್ ಟೀಂ ರೋಚಕ ಗೆಲುವು ಕಂಡ ಬಳಿಕ ‘ಕೆಸಿಸಿ’ ನಾಲ್ಕನೇ ಸೀಸನ್ನ ಕಪ್ನ ಎತ್ತಿ ಸಂಭ್ರಮಿಸಿದೆ. ಕಪ್ ಗೆದ್ದ ಖುಷಿಯನ್ನು ತಂಡ ಸೆಲೆಬ್ರೇಟ್ ಮಾಡಿದ್ದು ಹೀಗೆ.

ಸೋಲು ಗೆಲುವನ್ನು ಶಿವಣ್ಣ ಟೀಂ ಸರಿಯಾಗಿ ಸ್ವೀಕರಿಸಿದೆ. ಸೋತ ಬಳಿಕ ಎದುರಾಳಿ ತಂಡದವರಿಗೆ ಶೇಕ್ ಹ್ಯಾಂಡ್ ಮಾಡಿದರು ಶಿವರಾಜ್ಕುಮಾರ್.

ಗಣೇಶ್ ಹಾಗೂ ಶಿವರಾಜ್ಕುಮಾರ್ ಪರಸ್ಪರ ಹಗ್ ಮಾಡಿಕೊಂಡಿದ್ದಾರೆ. ಶಿವಣ್ಣ ಅವರ ಎನರ್ಜಿ ನೋಡಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.

ಗಣೇಶ್ ತಂಡಕ್ಕೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ‘ಗಂಗ ವಾರಿಯರ್ಸ್’ ಲೀಗ್ ಮ್ಯಾಚ್ನಲ್ಲಿ ಐದು ಪಂದ್ಯಗಳ ಪೈಕಿ ನಾಲ್ಕು ಮ್ಯಾಚ್ನ ಗೆದ್ದಿತ್ತು.

ಉಪಮುಖ್ಯಮಂತ್ರಿ ಶಿವಕುಮಾರ್ ಜೊತೆ ಶಿವಣ್ಣ, ಸುದೀಪ್, ದುನಿಯಾ ವಿಜಯ್ ಮೊದಲಾದವರು ಪೋಸ್ ಕೊಟ್ಟರು.
Published On - 9:53 am, Tue, 26 December 23

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.
Read More




