Updated on:Mar 15, 2023 | 3:58 PM
ಬೇಸಿಗೆಗಾಲ ಆರಂಭವಾಗಿದೆ. ಇನ್ನೇನು ಸ್ವಲ್ಪ ದಿನಗಳಲ್ಲಿ ಶಾಲಾ ಕಾಲೇಜು ಮಕ್ಕಳಿಗೆ ಬೇಸಿಗೆ ರಜೆ ಸಿಗಲಿದೆ. ಈ ವರ್ಷದ ಬೇಸಿಗೆ ರಜೆಯಲ್ಲಿ ಕುಟುಂಬದವರು ಸ್ನೇಹಿತರ ಜೊತೆಗೆ ಪ್ರವಾಸ ಹೋಗಬೇಕೆಂದು ನಿಶ್ಚಯಿಸಿದ್ದೀರಾ?. ಎಷ್ಟೊಂದು ಪ್ರವಾಸಿ ತಾಣಗಳಿಗೆ ಯಾವ ಸ್ಥಳಕ್ಕೆ ಪ್ರವಾಸ ಕೈಗೊಳ್ಳಬೇಕು, ಎಂತಹ ಜಾಗ ನಮ್ಮ ಪ್ರವಾಸಕ್ಕೆ ಸೂಕ್ತ ಎಂಬ ಗೊಂದಲದಲ್ಲಿ ಇದ್ದೀರಾ. ನಿಮಗೆ ಕುಟುಂಬಸಮೆತರಾಗಿ ಪ್ರವಾಸ ಕೈಗೊಳ್ಳಲು ಯಾವ ಸ್ಥಳ ಸೂಕ್ತ ಎಂಬುದರ ಬಗ್ಗೆ ತಿಳಿಸಿಕೊಡುತ್ತೇವೆ.
ಥೀಮ್ ಪಾರ್ಕ್ಗಳು: ರೋಲರ್ ಕೋಸ್ಟರ್‌ಗಳು, ವಾಟರ್ ಸ್ಲೆಡ್‌ಗಳು ಈ ರೀತಿಯ ಥೀಮ್ ಪಾರ್ಕ್ಗಳು ಬೇಸಿಗೆ ರಜೆಯಲ್ಲಿ ಪ್ರವಾಸ ಕೈಗೊಳ್ಳಲು ಉತ್ತಮ ಸ್ಥಳವಾಗಿದೆ. ಇದು ಎಲ್ಲಾ ವಯಸ್ಸಿನ ಮಕ್ಕಳಿಗೂ ಇಷ್ಟವಾಗುತ್ತದೆ. ಬೇರೆ ಬೇರೆ ರೀತಿಯ ಚಟುವಟಿಕೆಗಳು ಇರುವುದರಿಂದ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಥೀಮ್ ಪಾರ್ಕ್ಗೆ ಒಂದು ದಿನದ ಪ್ರವಾಸ ಕೈಗೊಳ್ಳಬಹುದು.
ರಾಷ್ಟ್ರೀಯ ಉದ್ಯಾನವನಗಳು: ಪ್ರಕೃತಿಯ ಮಡಿಲಲ್ಲಿ ಸಮಯವನ್ನು ಕಳೆಯಲು ಇಷ್ಟಪಡುವವರಿಗೆ ಈ ಸ್ಥಳ ಪ್ರವಾಸ ಕೈಗೊಳ್ಳಲು ಸೂಕ್ತವಾಗಿದೆ. ಪ್ರಕೃತಿಯ ಜೊತೆಗೆ ಸಮಯ ಕಳೆಯುವುದರ ಜೊತೆಗೆ ಉದ್ಯಾನವನಗಳಲ್ಲಿ ವಿವಿಧ ರೀತಿಯ ಪ್ರಾಣಿ ಪಕ್ಷಿಗಳನ್ನು ಕೂಡಾ ನೋಡಬಹುದು. ನಿಮ್ಮ ಪ್ರವಾಸಕ್ಕೆ ಸೂಕ್ತವಾದ ಅನೇಕ ರಾಷ್ಟ್ರೀಯ ಉದ್ಯಾನವನಗಳಿವೆ.
ಬೀಚ್: ಹೆಚ್ಚಿನವರು ಬೀಚ್‌ಗೆ ಹೋಗಲು ಇಷ್ಟಪಡುತ್ತಾರೆ. ನೀರಿನಲ್ಲಿ ಆಟವಾಡುವುದರ ಜೊತೆಗೆ ಬೀಚ್‌ಗಲ್ಲಿ ಹೆಚ್ಚಿನ ಚಟುವಟಿಕೆಗಳನ್ನು ಕೂಡಾ ಮಾಡಬಹುದು. ನೀವು ಏನಾದರೂ ಬೀಚ್ ಪ್ರದೇಶಗಳಿಗೆ ಪ್ರವಾಸ ಹೋಗಬೇಕೆಂದು ಬಯಸಿದ್ದರೆ ಭಾರತದಲ್ಲಿಯೇ ಅನೇಕ ಸುಂದರ ಬೀಚ್‌ಗಳಿವೆ. ಅಲ್ಲಿಗೆ ನೀವು ಭೇಟಿ ನೀಡಬಹುದು.
ಸಿಟಿ ಬ್ರೇಕ್: ಕೆಲವು ದೊಡ್ಡ ದೊಡ್ಡ ನಗರಗಳನ್ನು ಅನ್ವೇಷಣೆ ಮಾಡಲು ಇಷ್ಟಪಡುತ್ತಾರೆ. ವಿದೇಶಗಳಿಗೆ ಹೋಗಿ ಅಲ್ಲಿನ ನಗರ ಸೌಂದರ್ಯವನ್ನು ಸವಿಯಲು ಬಯಸುವವರಿಗೆ ನ್ಯೂಯರ್ಕ್ ಸಿಟಿ, ಸ್ಯಾನ್ ಫ್ರಾನ್ಸಿಸ್ಕೋ, ಚಿಕಾಗೋ ಹಾಗೂ ಇನ್ನಿತರ ಸ್ಥಳಗಳಿಗೆ ಪ್ರವಾಸ ಕೈಗೊಳ್ಳಬಹುದು.
ಕ್ಯಾಂಪಿಂಗ್ ಟ್ರಿಪ್: ನಿಸರ್ಗದ ಮಡಿಲಲ್ಲಿ ಸಮಯವನ್ನು ಕಳೆಯಲು ಬಯಸುವರು ಕ್ಯಾಂಪಿಂಗ್ ಟ್ರಿಪ್ ಮಾಡಬಹುದು. ಅದ್ಭುತ ದೃಶ್ಯಾವಳಿಗಳಿರುವ ಅನೇಕ ಕ್ಯಾಂಪಿಂಗ್ ಜಾಗಗಳಿವೆ. ಅಲ್ಲಿ ಟೆಂಟ್ ಹಾಕಿ ಕಾಲಕಳೆಯುವ ಮೂಲಕ ಪ್ರಕೃತಿಯ ಸೌಂದರ್ಯವನ್ನು ಸವಿಯಬಹುದು.
Published On - 3:57 pm, Wed, 15 March 23