Yamaha: ಹೊಸ ವರ್ಷದಲ್ಲಿ 2 ನೂತನ ಸ್ಕೂಟರ್ ಬಿಡುಗಡೆ ಮಾಡಲಿದೆ ಯಮಹಾ

Yamaha E01 ಮತ್ತು Yamaha E02 ಎಲೆಕ್ಟ್ರಿಕ್ ಸ್ಕೂಟರ್ ನಡುವಿನ ಪ್ರಮುಖ ವ್ಯತ್ಯಾಸ ಎಂದರೆ, E02 ತೆಗೆಯಬಹುದಾದ ಬ್ಯಾಟರಿಯನ್ನು ಹೊಂದಿರಲಿದೆ.

1/5
ಜಪಾನಿನ ಆಟೋಮೊಬೈಲ್  ದೈತ್ಯ ಯಮಹಾ ಶೀಘ್ರದಲ್ಲೇ ಎರಡು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪರಿಚಯಿಸಲಿದೆ. ಈ ಸ್ಕೂಟರ್ 2022 ರಲ್ಲಿ ಯುರೋಪಿಯನ್ ಮತ್ತು ಏಷ್ಯನ್ ಮಾರುಕಟ್ಟೆಗಳಲ್ಲಿ ಬಿಡುಗಡೆ ಆಗಲಿದೆ. ನೂತನ ಎಲೆಕ್ಟ್ರಿಕ್ ಸ್ಕೂಟರ್​ಗೆ Yamaha E01 ಮತ್ತು Yamaha E02 ಎಂದು ಹೆಸರಿಡಲಾಗಿದೆ.

2/5
ಯಮಹಾ ಮೊದಲ ಬಾರಿಗೆ ಯಮಹಾ E01 ಮತ್ತು ಯಮಹಾ E02 ಎಲೆಕ್ಟ್ರಿಕ್ ಸ್ಕೂಟರ್ ಪರಿಕಲ್ಪನೆಗಳನ್ನು 2019 ಟೋಕಿಯೊ ಮೋಟಾರ್ ಶೋನಲ್ಲಿ ಅನಾವರಣಗೊಳಿಸಿತು. ಇದೀಗ ಈ ಸ್ಕೂಟರ್​ ಬಿಡುಗಡೆಯ ಹಂತದಲ್ಲಿದ್ದು, ಅದರಂತೆ ಮುಂದಿನ ವರ್ಷದಲ್ಲಿ ರಸ್ತೆಗಿಳಿಯಲಿದೆ.

3/5
ಯಮಹಾ ಕಂಪನಿಯು ನಿಧಾನವಾಗಿ ಎಲೆಕ್ಟ್ರಿಕ್ ವಿಭಾಗದತ್ತ ವಾಲುತ್ತಿದ್ದು, ಈಗಾಗಲೇ ಗೊಗೊರೊ ಕಂಪೆನಿ ಜೊತೆ ಪಾಲುದಾರಿಕೆ ಹೊಂದಿದೆ.

4/5
ಎರಡು ವರ್ಷಗಳ ಹಿಂದೆ ಯಮಹಾ ಎಲೆಕ್ಟ್ರಿಕ್ ಸ್ಕೂಟರ್​ನ ಪ್ರದರ್ಶಿಸಿದ್ದರೂ,  E01 ಮತ್ತು E02 ಸರಣಿಯ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಪ್ರಸ್ತುತ ಮಾಹಿತಿ ಪ್ರಕಾರ, ಕಂಪನಿಯು ಸಂಶೋಧನೆ ಮತ್ತು ಅಭಿವೃದ್ಧಿಯತ್ತ ಹೆಚ್ಚಿನ ಸಮಯ ವ್ಯಯಿಸಿದ್ದು, ಹೀಗಾಗಿ ಸ್ಕೂಟರ್​ನ ಮಾಹಿತಿಗಳನ್ನು ಗೌಪ್ಯವಾಗಿಟ್ಟುಕೊಂಡಿದೆ.

5/5
Yamaha E01 ಮತ್ತು Yamaha E02 ಎಲೆಕ್ಟ್ರಿಕ್ ಸ್ಕೂಟರ್ ನಡುವಿನ ಪ್ರಮುಖ ವ್ಯತ್ಯಾಸ ಎಂದರೆ, E02 ತೆಗೆಯಬಹುದಾದ ಬ್ಯಾಟರಿಯನ್ನು ಹೊಂದಿರಲಿದೆ ಎಂದು ತಿಳಿದು ಬಂದಿದೆ. ಅಂದರೆ ಬಳಕೆದಾರರ ಡಿಮ್ಯಾಂಡ್​ಗೆ ಅನುಗುಣವಾಗಿ ಹೆಚ್ಚುವರಿ ಬ್ಯಾಟರಿಯನ್ನು ಬಳಸಬಹುದು. ಇನ್ನು ಈ ಸ್ಕೂಟರ್​ನಲ್ಲಿ ಎರಡು ಸೀಟ್​ಗಳನ್ನು ನೀಡಿದ್ದು, ಅದರಂತೆ ಏಷ್ಯನ್ ಮಾರುಕಟ್ಟೆಯನ್ನು ಕೇಂದ್ರೀಕರಿಸಿ ಯಮಹಾ ಹೊಸ ಎಲೆಕ್ಟ್ರಿಕ್ ಸ್ಕೂಟರ್​ ಅನ್ನು ವಿನ್ಯಾಸಗೊಳಿಸಿದೆ ಎಂದು ವರದಿಯಾಗಿದೆ.

Click on your DTH Provider to Add TV9 Kannada