AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kamakhya Temple : ಕಾಮಾಖ್ಯಾದ ಮಾತೃಯೋನಿ ಪೂಜೆ

Trip To Assam : ‘ನೇಪಾಳದಲ್ಲಿ ಕಂಡಂತೆ ಇಲ್ಲೂ ಸಹ ಎಂಟು ವರ್ಷದ ಹೆಣ್ಣು ಮಗುವನ್ನೇ ದೇವಿಯೆಂದು ಅಲಂಕರಿಸಿ ಕೂರಿಸಿದ್ದರು. ನೇಪಾಳದ ಜೀವಂತ ದೇವಿಯ ದರ್ಶನ ಮಾಡಿದ್ದ ನನಗೆ ಇಲ್ಲಿಯೂ ದೇವಿರೂಪದ ಹೆಣ್ಣು ಮಗುವಿನಲ್ಲಿ ದರ್ಶನ ಮಾಡುವ ಭಾಗ್ಯ ಸಿಕ್ಕಿತು. ಬಹಳಷ್ಟು ಜನ ಆ ಮಗುವಿನ ಪಾದ ಪೂಜೆಗಾಗಿ ಕಾದು ಕುಳಿತಿದ್ದರು.’ ಶಾಂತಾ ಜಯಾನಂದ

Kamakhya Temple : ಕಾಮಾಖ್ಯಾದ ಮಾತೃಯೋನಿ ಪೂಜೆ
ಕಾಮಾಖ್ಯಾ ದರ್ಶನ
TV9 Web
| Edited By: |

Updated on:Feb 19, 2022 | 5:46 PM

Share

ಕಾಮಾಖ್ಯ ಶಕ್ತಿಪೀಠ | Kamakhya Shaktipita : ಆಚೆ ಬಂದರೆ ಅಲ್ಲಿ ಒಂದು ಮರಕ್ಕೆ ಹರಕೆ ಕಟ್ಟಿ ಕೆಂಪು ಹಾರವನ್ನು ಸುತ್ತುಹಾಕಿದ್ದರು. ಅದರ ಸುತ್ತ ಎಲ್ಲೆಲ್ಲೂ ಕುರಿಗಳೂ ಓಡಾಡುತ್ತಿದ್ದವು. ಅಷ್ಟೇ ಅಲ್ಲದೇ ಅವುಗಳೊಂದಿಗೆ ಪಾರಿವಾಳಗಳೂ ಸಹ. ಈ ದೇವಸ್ಥಾನದ ಶೈಲಿಯೂ ಸಹ ಬೇರೆ ರೀತಿಯಲ್ಲೇ ಇದೆ. ನನಗೆ ನೇಪಾಳಕ್ಕೆ ತೆರಳಿದಾಗ ನೋಡಿದ ಮಾನಸಾ ದೇವಿಯ ದೇವಸ್ಥಾನದ ನೆನಪನ್ನೇ ಇದು ತಂದಿತು. ಅಲ್ಲಿಯೂ ಸಹ ಕುರಿ, ಕೋಳಿಗಳನ್ನೇ ಹರಕೆಯ ರೂಪದಲ್ಲಿ ದೇವಿಗೆ ಒಪ್ಪಿಸಲಾಗುತ್ತದೆ. ಕಾಮಾಖ್ಯಾ ದೇವಿಯ ದೇವಸ್ಥಾನದ ಮುಖ್ಯವಾದ ಅಂಶವೇ ಮಾತೃಯೋನಿಯ ಪೂಜೆ. ಇಲ್ಲಿ ದೇವಿ, ‘ರಜಸ್ವಲೆ’ ಯಾಗುತ್ತಾಳೆ ಎಂಬ ನಂಬಿಕೆಯಿದೆ. ವರ್ಷಕ್ಕೊಮ್ಮೆ ಜೂನ್ ಅಥವಾ ಜುಲೈ ತಿಂಗಳಲ್ಲಿ ದೇವಿ ರಜಸ್ವಲೆಯಾಗುತ್ತಾಳೆ. ಆ ಸಮಯದಲ್ಲಿ ದೇವಸ್ಥಾನವನ್ನು ಮೂರು ದಿನಗಳ ಕಾಲ ಮುಚ್ಚಲಾಗುತ್ತದೆ. ಆದರೆ ಆ ಸಮಯದಲ್ಲಿ ಬಾಬಾಗಳು ತಂತ್ರ ವಿದ್ಯೆ ಮಂತ್ರ ವಿದ್ಯೆಯಲ್ಲಿ ಪರಿಣಿತಿ ಪಡೆಯಲು ದೇವಿಯ ಶಕ್ತಿಯನ್ನು ಪಡೆಯಲು ದೇವಸ್ಥಾನದ ಸುತ್ತ ಬೀಡು ಬಿಟ್ಟ ಬಾಬಾಗಳು ಎಡಬಿಡದೆ ಮಂತ್ರ-ತಂತ್ರ, ಜಪ-ತಪ, ವಿದ್ಯೆಗಳಲ್ಲಿ ತೊಡಗಿರುತ್ತಾರೆ. ಶಾಂತಾ ಜಯಾನಂದ, ಲೇಖಕಿ

*

(ಭಾಗ 2)

ದೇವಿ ರಜಸ್ವಲೆಯಾಗಿದ್ದರಿಂದ ಈ ರೀತಿ ವಸ್ತ್ರವು ಕೆಂಪಾಗಿರುತ್ತದೆ ಎಂಬ ನಂಬಿಕೆ ಅಷ್ಟೇ ಅಲ್ಲ, ಅಲ್ಲೇ ಹತ್ತಿರದಲ್ಲೇ ಹರಿಯುವ ಬ್ರಹ್ಮಪುತ್ರ ನದಿ, ಆ ದಿನಗಳಲ್ಲಿ ಕೆಂಪಾಗಿಯೂ ಹರಿಯುತ್ತದೆಯಂತೆ, ಆ ಸಮಯದಲ್ಲಿ ದೇವಿಯ ಪೂಜೆಯಿಂದ ತಂತ್ರ ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ. ನಾವೂ ಸಹ ದೇವಿಯನ್ನು ಮುಟ್ಟಿ ಪೂಜಿಸುವಾಗ ಅಲ್ಲಿ ನೀರಿನ ಪಸೆ ಇತ್ತು. ಅಲ್ಲಿ ಹಾಕಿದ ವಸ್ತ್ರ ಸಹ ಒದ್ದೆಯಾಗಿತ್ತು. ಬಹುಶಃ ಬ್ರಹ್ಮಪುತ್ರ ನದಿಯ ಒರತೆ ಅಲ್ಲಿರಬಹುದು. ನಂತರ ನಡೆಯುವ ಉತ್ಸವ ಅಥವಾ ಜಾತ್ರೆಯಲ್ಲಿ 25 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುತ್ತದೆ ಎಂದು ಹೇಳಲಾಗುತ್ತದೆ. ಪುರೋಹಿತ ವರ್ಗ ದುಡ್ಡಿಗಾಗಿ ಹಾಹಾಕಾರ ಮಾಡುವುದನ್ನು ಸಹ ಇಲ್ಲಿ ಕಾಣಬಹುದು. ಆಚೆ ಬಂದರೆ ದೇವಿಗಾಗಿ ಅಲ್ಲೇ ಮಾರಾಟವಾಗುವ ತುಪ್ಪದ ದೀಪವನ್ನು ಹಚ್ಚಿಡುತ್ತಾರೆ.

ನಮಗೆ ಸಹ ನಮ್ಮೊಡನೆ ಬಂದ ಪುರೋಹಿತರು ಅಲ್ಲಿ ದೇವಿಯ ಪೂಜೆಯಾದ ನಂತರ ವಿಶೇಷ ಪೂಜೆ ಪ್ರಸಾದಕ್ಕಾಗಿ ಒಳಗೆ ಕರೆದುಕೊಂಡು ಹೋದರು ನೇಪಾಳದಲ್ಲಿ ಕಂಡಂತೆ ಇಲ್ಲೂ ಸಹ ಎಂಟು ವರ್ಷದ ಹೆಣ್ಣು ಮಗುವನ್ನೇ ದೇವಿಯೆಂದು ಅಲಂಕರಿಸಿ ಕೂರಿಸಿದ್ದರು. ನೇಪಾಳದ ಜೀವಂತ ದೇವಿಯ ದರ್ಶನ ಮಾಡಿದ್ದ ನನಗೆ ಇಲ್ಲಿಯೂ ದೇವಿರೂಪದ ಹೆಣ್ಣು ಮಗುವಿನಲ್ಲಿ ದರ್ಶನ ಮಾಡುವ ಭಾಗ್ಯ ಸಿಕ್ಕಿತು. ಬಹಳಷ್ಟು ಜನ ಆ ಮಗುವಿನ ಪಾದ ಪೂಜೆಗಾಗಿ ಕಾದು ಕುಳಿತಿದ್ದರು. ನನಗಂತೂ ಆ ಮುದ್ದು ಮುಖದ ಮುಗ್ಧತೆಯೇ ಮೈವೆತ್ತಿದಂತೆ ಕುಳಿತಿದ್ದ ಆ ಮಗುವಿನ ಮುಗ್ಧ ಮುಖ ನೋಡಿದಾಗ ಅದರ ಬಾಲ್ಯವನ್ನು ಕಸಿದುಕೊಂಡು ಪೂಜಿಸುತ್ತಿದ್ದಾರಲ್ಲಾ ಎನಿಸಿತು.

ಇದನ್ನೂ ಓದಿ : ಋತುವಿಲಾಸಿನಿ; ‘ಇನ್ನಷ್ಟು ನೋವು, ಕಾವು ಹೊಳೆಯಿಸಬೇಕಿದೆ’ ಇಂದಿನಿಂದ ಕವಿ ನಂದಿನಿ ಹೆದ್ದುರ್ಗ ಅಂಕಣ ಆರಂಭ

ಕಡೆಗೆ, ಪುರೋಹಿತರು ನೀವು ಬಹಳ ಅದೃಷ್ಟಶಾಲಿ. ಆ ಜೀವಂತ ದೇವಿಯ ದರ್ಶನವಾಯ್ತು ಎಂದು ಪಾದ ಪೂಜೆ ಮಾಡಲು ಕಳಿಸಿದರು ನನ್ನ ಗೆಳತಿಯರೆಲ್ಲಾ ಒಳಗೆ ಬಂದಿರಲಿಲ್ಲ. ನಾನು ಪಾದ ನಮಸ್ಕಾರವನ್ನು ಮನಸ್ಸಿಲ್ಲದ ಮನಸ್ಸಿನಿಂದಲೇ ಮಾಡಿದೆ. ಎಲ್ಲಾ ಪುರೋಹಿತರು ಕೆಲವು ಜುಬ್ಬಾ, ಕೆಂಪು ಪಂಚೆಯೇ ಧರಿಸಿರುತ್ತಾರೆ. ಒಟ್ಟಿನಲ್ಲಿ ಇಡೀ ವಾತಾವರಣವೇ ಕೆಂಬಣ್ಣದಿಂದ ತುಂಬಿರುತ್ತೆ ಎನ್ನುವುದರಲ್ಲಿ ಎರಡು ಮಾತಿಲ್ಲ. ನಾವು ಕೆಂಪು ವಸ್ತ್ರವನ್ನು  ಧರಿಸಿ, ದೇವಿಯ ದರ್ಶನ ಮಾಡುವುದರಿಂದ ದೇವಿ ನಮಗೆ ಒಲಿಯುತ್ತಾಳೆ, ಆಶೀರ್ವದಿಸುತ್ತಾಳೆ ಎಂಬ ನಂಬಿಕೆ ಅಲ್ಲಿಯವರದು. ಹಾಗಾಗಿ ಅಲ್ಲಿ ಜನ ದೇವಿ ದರ್ಶನಕ್ಕೆ ಕೆಂಪು ವಸ್ತ್ರ ಧರಿಸಿಯೇ  ಬರುತ್ತಿದ್ದರು. ಈ ಮಂದಿರವನ್ನು ವಿಶ್ವಸಿಂಗ್ ಮಹಾರಾಜನು ಕಟ್ಟಿಸಿದನೆಂದು ಹೇಳುತ್ತಾರೆ. ಹಾಗೇ ಮುಸ್ಲಿಮರ ದಾಳಿಯಿಂದ ಹಾಳಾದ ಮಂದಿರವನ್ನು ನಾರಾಯಣನು ಕಟ್ಟಿಸಿದನೆಂದು ಹೇಳಲಾಗುತ್ತದೆ.

ನಂತರ ನಮ್ಮ ಪುರೋಹಿತರು ನಮ್ಮನ್ನು ಒಳಗೆ ಕರೆದುಕೊಂಡು ಹೋಗಿ ಒಂದು ಚಿಕ್ಕ ಒಂದು ಇಂಚು ತುಂಡಿನ ಬಟ್ಟೆಯನ್ನು ದೇವಿಗೆ ಮುಟ್ಟಿಸಿ, ಪೇಪರ್‌ನಲ್ಲಿ ಇರಿಸಿಕೊಟ್ಟರು. ಅದು ದೇವಿಯು ರಜಸ್ವಲೆಯಾದಾಗ ದೇವಿಗೆ ಹೊದ್ದಿಸಿದ್ದ ವಸ್ತ್ರ ಎಂದು ತಿಳಿಸಿದರು. ಅದನ್ನು ಮನೆಯಲ್ಲಿ ಇರಿಸಿ ಪೂಜಿಸಿ ಎಂದು ತಿಳಿಸಿದರು. ಇಲ್ಲಿ ಹತ್ತು ದೇವಿಗಳನ್ನು ಪೂಜಿಸಲಾಗುತ್ತದೆ. ಇದೇ ದೇವಸ್ಥಾನದ ಆವರಣದಲ್ಲಿ ಎಂದು ಹೇಳಿದರು. ಒಟ್ಟಿನಲ್ಲಿ ನೀಲಾದ್ರಿ ಪರ್ವತದ ಮೇಲಿನಿಂದ ಸುಂದರವಾದ ಪ್ರಕೃತಿ ಸೌಂದರ್ಯವೂ ಸಹ ಇದೆ ಎಂಬುದು ಹಲವರ ನಂಬಿಕೆಗಳು. ಹಲವು ಅನುಮಾನಗಳ ಪ್ರಶ್ನೆಗಳ ಸರಮಾಲೆಯೂ ಇಲ್ಲಿಗೆ ಬಂದ ಮೇಲೆ ಸುತ್ತಿಕೊಂಡಿತು. ಇನ್ನೊಂದೆಡೆ ಸಂತಸವೂ.

(ಮುಗಿಯಿತು)

ಭಾಗ 1 : Kamakhya Temple : ಕಾಮಾಖ್ಯಾ ದರ್ಶನದಿಂದ ಹೊಸ ಉಲ್ಲಾಸ

Published On - 5:46 pm, Sat, 19 February 22

ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
Video: ಕೇರಳದ ಚೆಂಡೆ ಬಾರಿಸಿದ ಪ್ರಧಾನಿ ಮೋದಿ
Video: ಕೇರಳದ ಚೆಂಡೆ ಬಾರಿಸಿದ ಪ್ರಧಾನಿ ಮೋದಿ
ನಿಧಿ ಸಿಕ್ಕ ಜಾಗದಲ್ಲಿ ಮತ್ತೆ ಉತ್ಖನನ? ಕುಟುಂಬಕ್ಕೆ ಮತ್ತಷ್ಟು ಸಂಕಷ್ಟ!
ನಿಧಿ ಸಿಕ್ಕ ಜಾಗದಲ್ಲಿ ಮತ್ತೆ ಉತ್ಖನನ? ಕುಟುಂಬಕ್ಕೆ ಮತ್ತಷ್ಟು ಸಂಕಷ್ಟ!