ನಾವು ಸೇವಿಸುವ ಆಹಾರ ನಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದಯೇ? ಅದು ಹೇಗೆ? ಆಹಾರ ಸೇವಿಸುವ ಕ್ರಮವೇನು?
ಮನುಷ್ಯ ತನ್ನ ತಾಯಿಯ ಗರ್ಭದಿಂದ ಜನಿಸುವಾಗ ಖಾಲಿಯಾಗಿ ಬರುವುದಿಲ್ಲ. ಆತ ಯಾವುದೋ ಒಂದು ರೀತಿಯ ಶ್ರದ್ಧೆಯಿಂದ ಕೂಡಿಕೊಂಡೇ ಜನನವಾಗುವನು. ಈ ಶ್ರದ್ಧೆಯೆಂದರೆ ಭಗವದ್ಗೀತೆಯ ಪ್ರಕಾರ ಗುಣಗಳು. ಅವು ಸತ್ವ ರಜ ತಮ ಎಂಬುದಾಗಿ. ಇವುಗಳು ಅವನ ಜನ್ಮಾಂತರ ಕರ್ಮಗಳಿನುಗುಣವಾಗಿ ಸಂಭವಿಸುತ್ತದೆ.
ಮನುಷ್ಯ ತನ್ನ ತಾಯಿಯ ಗರ್ಭದಿಂದ ಜನಿಸುವಾಗ ಖಾಲಿಯಾಗಿ ಬರುವುದಿಲ್ಲ. ಆತ ಯಾವುದೋ ಒಂದು ರೀತಿಯ ಶ್ರದ್ಧೆಯಿಂದ ಕೂಡಿಕೊಂಡೇ ಜನನವಾಗುವನು. ಈ ಶ್ರದ್ಧೆಯೆಂದರೆ ಭಗವದ್ಗೀತೆಯ ಪ್ರಕಾರ ಗುಣಗಳು. ಅವು ಸತ್ವ ರಜ ತಮ ಎಂಬುದಾಗಿ. ಇವುಗಳು ಅವನ ಜನ್ಮಾಂತರ ಕರ್ಮಗಳಿನುಗುಣವಾಗಿ ಸಂಭವಿಸುತ್ತದೆ. ಬೀಜ ಹೇಗೆ ತಾನು ಏನೋ ಆಗಬೇಕೆಂದು ಬರುವುದೋ ಹಾಗೆಯೇ ಜೀವಿಯೂ ತಾನು ಏನಾಗಬೇಕಿದೆಯೋ ಅದೇ ಸಂಸ್ಕಾರಗಳಿಂದ ಕೂಡಿ ಬರುವನು. ಇದು ಜನ್ಮಾಂತರೀಯ ಫಲವಾದರೆ… ಇನ್ನು ಕೆಲವು ನಮ್ಮ ಆಹಾರ ವಿಹಾರಗಳಿಂದ ಬದಲಾಗುವ ಸಾಧ್ಯತೆಗಳು ಇವೆ.
ಈ ಉದಾಹರಣೆ ಗಮನಿಸಿ –ಒಂದು ಹೊಸತಾದ ಬಾವಿಕಟ್ಟೆಯನ್ನು ಕಲ್ಪಿಸಿಕೊಳ್ಳಿ. ಆ ಬಾವಿಕಟ್ಟೆ ಶಿಲೆಯಿಂದ ನಿರ್ಮಿತವಾಗಿರುತ್ತದೆ. ಪ್ರತೀ ದಿನ ಆ ಬಾವಿಯಿಂದ ನೀರು ಸೇದುತ್ತಾರೆ. ಹಗ್ಗ ಮೇಲೆಳೆದು ಕಟ್ಟೆಯ ಮೆಲೆ ಕೊಡವನ್ನಿಟ್ಟು ನಂತರ ನೀರು ಒಯ್ಯುತ್ತಾರೆ. ಕೆಲವು ಸಮಯದ ನಂತರ ಆ ಕೊಡ ಇಡುವ ಜಾಗವನ್ನು ಗಮನಿಸಿ ಅಲ್ಲಿ ಒಂದು ಆಕೃತಿ ಮೂಡಿರುವುದನ್ನು ಗಮನಿಸಿ. ಈ ಆಕೃತಿಯನ್ನು ಯಾವ ಕೆಲಸಗಾರನಿಂದಲೂ ಅಷ್ಟು ಉತ್ತಮವಾಗಿ ಮಾಡಲು ಸಾಧ್ಯವಿಲ್ಲ ಅಲ್ಲವೇ? ಅದು ಕೇವಲ ನಿರ್ಜೀವವಾದ ಕೊಡ ಮತ್ತು ಕಟ್ಟೆಯ ಸಹಯೋಗದಿಂದ ಉಂಟಾಗಿರುತ್ತದೆ. ಅದೇ ರೀತಿ ಪ್ರತೀ ಕ್ಷಣದಲ್ಲೂ ನಾವು ಮಾಡುವ ಕೆಲಸಗಳಿಂದ ನಮ್ಮ ಅಂತರಂಗದಲ್ಲಿ ಚಿತ್ತಾರ ಮೂಡುತ್ತಲೇ ಇರುತ್ತದೆ. ಈ ಕಾರಣಗಳಿಂದಲೇ ಹಿರಿಯರು ಹೇಳುವುದು ಅಶುಭ ನುಡಿಯ ಬಾರದು, ಅಪಚಾರವೆಸಗಬಾರದು ಎಂದು.
ಇದೇ ರೀತಿ ಆಹಾರವೂ ಮನುಷ್ಯನ ಮನಸ್ಸಿನ ಮೇಲೆ ಗಾಢವಾದ ಪ್ರಭಾವ ಬೀರುತ್ತದೆ. ಆದ ಕಾರಣದಿಂದಲೇ ಸಾಧಕರು ಆಹಾರ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವರು. ಭಗವದ್ಗೀತೆಯಲ್ಲೂ ಈ ಕುರಿತಾಗಿ ತುಂಬಾ ಚಿಂತನೆ ಮಾಡಲ್ಪಟ್ಟಿದೆ. ಅದೇ ರೀತಿ ಆರೋಗ್ಯದ ದೃಷ್ಟಿಯಿಂದ ಮಾಸಕ್ಕನುಗುಣವಾಗಿ ( ತಿಂಗಳಿಗೆ ತಕ್ಕಂತೆ) ಆಹಾರಕ್ಕೆ ನಿಷೇಧ ಹೇಳಲಾಗಿದೆ.
ಇದನ್ನೂ ಓದಿ: Spiritual: ಸಫಲತೆ ಎನ್ನುವುದು ಸಮಯಪ್ರಜ್ಞೆ ಮತ್ತು ಭಗವತ್ಸಂಕಲ್ಪ ಆಧಾರದ ಮೇಲೆ ಇರುತ್ತದೆ
ಇಷ್ಟೇ ಅಲ್ಲದೇ ಆಹಾರ ಉದಿಸುವ ಭೂಮಿಯಿಂದ ಆರಂಭಿಸಿ ಬಡಿಸುವ ಕೈಯ ತನಕವೂ ಇರುವ ಮನಸ್ಸುಗಳ ಪ್ರಭಾವ ಉಣ್ಣುವವನ ಮೇಲಾಗುತ್ತದೆ ಎಂಬುದು ಆಶ್ಚರ್ಯವೆನಿಸಿದರೂ ಸತ್ಯ. ಭಾಗವತ ಮಹಾಪುರಾಣದ ಒಂದು ನೈಜ ಕಥೆ ಹೀಗಿದೆ – ಕೃಷ್ಣ ಬಲರಾಮರು ಮಥುರೆಯ ರಾಜ್ಯಭಾರ ಮಾಡುತ್ತಿದ್ದ ಸಮಯ. ಕೃಷ್ಣನನ್ನು ಒಬ್ಬಳು ಸ್ತ್ರೀ ತಮ್ಮ ಮನೆಗೆ ಭೋಜನಕ್ಕಾಗಿ ಆಹ್ವಾನಿಸುತ್ತಾಳೆ. ಭೋಜನದ ನಂತರ ಕೃಷ್ಣನಿಗೆ ಅವಳು ಒಂದು ನವರತ್ನ ಖಚಿತವಾದ ಅತ್ಯಂತ ಸುಂದರ ಲೋಟದಲ್ಲಿ ಹಾಲನ್ನು ಕುಡಿಯಲು ಕೊಡುತ್ತಾಳೆ. ಹಾಲು ಕುಡಿದ ನಂತರ ಅವನಿಗೆ ಈ ಲೋಟ ತನ್ನದಾಗಿದ್ದರೆ ಹೇಗೆ ಎಂಬ ಮನಸ್ಸಾಯಿತು ಅಲ್ಲದೇ ಅದನು ಕದ್ದು ಬಿಡೋಣವೇ ಎಂಬ ಭಾವ ಉದಯವಾಯಿತಂತೆ. ಇದನ್ನು ಬಲರಾಮನೊಂದಿಗೆ ಹಂಚಿಕೊಂಡಾಗ ಬಂದ ಉತ್ತರವೇನೆಂದರೆ ಅವಳು ವಾಸ್ತವವಾಗಿ ಜಾರಿಣಿ. ಅಲ್ಲದೇ ಅವಳ ವಂಶಜರು ಕುಕೃತ್ಯದಿಂದಲೇ ಬೆಳೆದವರು. ಅಲ್ಲಿಯ ಆ ವಾತಾವರಣದ ಆಹಾರ ಸೇವೆನೆಯಿಂದಾಗಿ ಒಂದು ಕ್ಷಣ ಅವನ ಮನಸ್ಸು ಜಾರಿತು ಎಂಬುದಾಗಿ ತಿಳಿಯುತ್ತದೆ. .
ನಮಗೇ ಅದೆಷ್ಟೋ ಬಾರಿ ಒಂಟಿತನವೋ, ದುಃಖವೋ, ಕೋಪವೋ ಬರುತ್ತದೆ. ಆದರೆ ಏಕೋ ಕಾರಣ ಗೊತ್ತಿಲ್ಲ ಎಂದು ಗೊಣಗುತ್ತಿರುತ್ತೇವೆ. ಇಂತಹ ಕೆಲವು ಘಟನೆಗಳಿಗೆ ಕಾರಣ ನಮ್ಮ ಆಹಾರವ್ಯವಸ್ಥೆ. ಭಗವಂತನಿಗೇ ಹಾಗಾಗಿದೆ ಎಂದ ಮೇಲೆ ನಮ್ಮ ಸ್ಥಿತಿ ಹೇಗಿರಬೇಡ. ಈ ಬಗ್ಗೆ ನೀವು ಪರೀಕ್ಷಿಸಿಯೂ ನೋಡಬಹುದು. ಈ ಎಲ್ಲಾ ಕಾರಣಕ್ಕಾಗಿ ನಾವು ಉಣ್ಣುವ ಆಹಾರವನ್ನು ದೇವರಿಗೆ ನೈವೇದ್ಯ ಮಾಡಿ ಪ್ರಸಾದ ರೂಪದಲ್ಲಿ ಸೇವಿಸಬೇಕು ಎನ್ನುವ ಪರಿಪಾಠ ನಮ್ಮಲ್ಲಿ ಬಂದಿರುವುದು. ಗಾಯತ್ರೀ ಮಂತ್ರವನ್ನು ನೀರಿಗೆ ಅಭಿಮಂತ್ರಿಸಿ ಭಕ್ತಿಯಿಂದ ಉಣ್ಣುವ ಆಹಾರದ ಮೇಲೆ ಪ್ರೋಕ್ಷಿಸಿ ಪ್ರಸಾದ ಭಾವದಿಂದ ಉಂಡರೆ ಯಾವ ಭಾವವಿಕಾರವೂ ಆಗುವುದಿಲ್ಲ. ಅದಕ್ಕೇ ಎಂಜಲು ಆಹಾರಕ್ಕೆ ನಮ್ಮ ಸನಾತನ ಪದ್ಧತಿಯಲ್ಲಿ ಬದ್ಧ ವಿರೋಧವಿರುವುದು.
ಡಾ.ಕೇಶವ ಕಿರಣ ಬಿ
ಧಾರ್ಮಿಕ ಚಿಂತಕರು ಮತ್ತು ಸಲಹೆಗಾರರು
ಅಧ್ಯಾತ್ಮಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ