Surya Grahan 2021: ಜೂನ್ 10ರ ಸೂರ್ಯಗ್ರಹಣ ವೀಕ್ಷಣೆ ಸಮಯ, ಮುಂಜಾಗ್ರತೆ ಕ್ರಮಗಳು ಇತ್ಯಾದಿ ವಿವರ ಇಲ್ಲಿದೆ

Solar Eclipse 2021: ಜೂನ್ 10, 2021ರಂದು ವರ್ಷದ ಮೊದಲ ಸೂರ್ಯ ಗ್ರಹಣ ಸಂಭವಿಸಲಿದೆ. ಇದನ್ನು ಎಲ್ಲಿ ನೋಡಬಹುದು, ತೆಗದುಕೊಳ್ಳಬೇಕಾದ ಮುಂಜಾಗ್ರತೆಗಳೇನು ಮುಂತಾದ ವಿವರಗಳು ಇಲ್ಲಿವೆ.

Surya Grahan 2021: ಜೂನ್ 10ರ ಸೂರ್ಯಗ್ರಹಣ ವೀಕ್ಷಣೆ ಸಮಯ, ಮುಂಜಾಗ್ರತೆ ಕ್ರಮಗಳು ಇತ್ಯಾದಿ ವಿವರ ಇಲ್ಲಿದೆ
ಪ್ರಾತಿನಿಧಿಕ ಚಿತ್ರ

ಸೂರ್ಯ ಗ್ರಹಣ 2021: ಈ ವರ್ಷದ ಮೊದಲ ಸೂರ್ಯ ಗ್ರಹಣ ಜೂನ್ 10, 2021ರಂದು ಕಾಣಿಸಲಿದೆ. ಇದನ್ನು ಎಲ್ಲರೂ ನೋಡುವುದಿಕ್ಕೆ ಸಾಧ್ಯವಿಲ್ಲ ಎಂದು ಅಮೆರಿಕದ ನಾಸಾ ಹೇಳಿದೆ. ಜಗತ್ತಿನ ಕೆಲವೇ ಭಾಗದಲ್ಲಿ ಮಾತ್ರ ಈ ಗ್ರಹಣ ಗೋಚರ ಆಗಲಿದೆ. ಭೂಮಿ ಹಾಗೂ ಸೂರ್ಯನ ಮಧ್ಯೆ ಚಂದ್ರ ಹಾದು ಹೋಗುವಾಗ ಈ ಸೂರ್ಯ ಗ್ರಹಣ ಸಂಭವಿಸುತ್ತದೆ. ಅಂದಹಾಗೆ ಸೂರ್ಯನನ್ನು ಚಂದ್ರ ಸಂಪೂರ್ಣವಾಗಿ ಮರೆ ಮಾಡುವುದಿಲ್ಲ. ಈ ಸೂರ್ಯ ಗ್ರಹಣದ ದೃಶ್ಯವು ಬೆಂಕಿಯ ಉಂಗುರದಂತೆ ಕಾಣುತ್ತದೆ. ನಾಸಾದಿಂದ ಇಂಟರ್​ ಆ್ಯಕ್ಟಿವ್ ಮ್ಯಾಪ್ ಆರಂಭಿಸಲಾಗಿದೆ. ಇದು 2021ರ ಸೂರ್ಯ ಗ್ರಹಣವು ಭೂಮಿಯ ಮೇಲ್ಮೈಯಲ್ಲಿ ಹೇಗೆ ಸಾಗುತ್ತದೆ ಎಂಬ ಹಾದಿಯನ್ನು ತೋರುತ್ತದೆ. ಇದರಲ್ಲಿ ಇರುವಂತೆ, ಭಾರತದಲ್ಲಿ ಸೂರ್ಯ ಗ್ರಹಣ ಕಾಣಿಸಿಕೊಳ್ಳುವುದು ಹೌದು. ಆದರೆ ಅದು ಲಡಾಕ್ ಮತ್ತು ಅರುಣಾಚಲ ಪ್ರದೇಶದಲ್ಲಿ ಮಾತ್ರ. ಮಧ್ಯಾಹ್ನ 12.25ಕ್ಕೆ ಕಾಣಲು ಆರಂಭವಾಗುತ್ತದೆ. ಭಾಗಶಃ ಸೂರ್ಯಗ್ರಹಣ ಮಾತ್ರ ನೋಡಲು ಆಗುತ್ತದೆ. ಮಧ್ಯಾಹ್ನ 12.51ಕ್ಕೆ ಕೊನೆಯಾಗುತ್ತದೆ.

ನಾಸಾ ತಿಳಿಸಿರುವಂತೆ, ಪೂರ್ವ ಅಮೆರಿಕ, ಉತ್ತರ ಅಲಾಸ್ಕಾ, ಕೆನಡಾ ಮತ್ತು ಕೆರಬಿಯನ್​ನ ಕೆಲ ಭಾಗ, ಯುರೋಪ್, ಏಷ್ಯಾ ಮತ್ತು ಆಫ್ರಿಕಾದ ಉತ್ತರ ಭಾಗದಲ್ಲಿ ಕೂಡ ಜೂನ್​ 10ನೇ ತಾರೀಕಿನಂದು ಭಾಗಶಃ ಸೂರ್ಯ ಗ್ರಹಣ ಕಾಣುತ್ತದೆ. ಸೂರ್ಯ ಹುಟ್ಟುವ ಮುಂಚೆ, ಸಂದರ್ಭದಲ್ಲಿ ಹಾಗೂ ಆ ನಂತರದ ಕೆಲ ಸಮಯ ಗ್ರಹಣ ಸಂಭವಿಸುತ್ತದೆ. ಹಲವು ಪ್ರದೇಶಗಳಲ್ಲಿ ಈ ವಾರ್ಷಿಕ ಗ್ರಹಣವು ಮಧ್ಯಾಹ್ನ 1.42ಕ್ಕೆ ಆರಂಭವಾಗಿ ಸಂಜೆ 6.41ರ ತನಕ ಇರುತ್ತದೆ.

ಸೂರ್ಯ ಗ್ರಹಣವನ್ನು ಆನ್​ಲೈನ್​ನಲ್ಲಿ ನೋಡುವುದು ಹೇಗೆ?
ಭಾರತದಲ್ಲಿ ಎಲ್ಲರಿಗೂ ಈ ಗ್ರಹಣ ಕಾಣುವುದಿಲ್ಲವಾದ್ದರಿಂದ ಆನ್​ಲೈನ್​ನಲ್ಲಿ ನೋಡಬಹುದು. Timeanddate.com ಈಗಾಗಲೇ ಸೂರ್ಯ ಗ್ರಹಣ ನೇರ ಪ್ರಸಾರದ ಲಿಂಕ್ ಅನ್ನು ಪಬ್ಲಿಷ್ ಮಾಡಿದೆ. ಆ ಮೂಲಕ ಜೂನ್ 10ನೇ ತಾರೀಕಿನಂದು ನೋಡಬಹುದು.

ಸೂರ್ಯ ಗ್ರಹಣದ ವೇಳೆ ಹೀಗೆ ಮಾಡಿ ಮತ್ತು ಇವುಗಳನ್ನು ಮಾಡದಿರಿ
ಸೂರ್ಯನನ್ನು ನೇರವಾಗಿ ನೋಡಬೇಡಿ ಎಂದು ವಿಷಯ ತಜ್ಞರು ಸಲಹೆ ನೀಡುತ್ತಾರೆ. ಸುರಕ್ಷಿತ, ಮಾನ್ಯತೆ ಪಡೆದ, ಪ್ರೊಟೆಕ್ಟಿವ್ ಸೂರ್ಯ ಗ್ರಹಣದ ಗ್ಲಾಸ್​ಗಳನ್ನು ಬಳಸುವಂತೆ ತಿಳಿಸುತ್ತಾರೆ.

ಪಿನ್​ಹೋಲ್ ಕ್ಯಾಮೆರಾ ಅಥವಾ ಬಾಕ್ಸ್ ಪ್ರೊಜೆಕ್ಟರ್ ಸೃಷ್ಟಿಸಿ ಸೂರ್ಯ ಗ್ರಹಣ ನೋಡಬಹುದು.

ಬೈನಾಕ್ಯುಲರ್ಸ್, ಟೆಲಿಸ್ಕೋಪ್ ಅಥವಾ ಕ್ಯಾಮೆರಾ ಮೂಲಕವಾಗಿ ಸೂರ್ಯ ಗ್ರಹಣವನ್ನು ಸೆರೆ ಹಿಡಿಯಲು ಬಯಸಿದರೆ ಸುರಕ್ಷಿತ- ಮಾನ್ಯತೆ ಪಡೆದ, ಪ್ರೊಟೆಕ್ಟಿವ್ ಸೋಲಾರ್ ಫಿಲ್ಟರ್ ಅನ್ನು ನಿಮ್ಮ ಲೆನ್ಸ್​ಗೆ ಬಳಸಬೇಕು.

ಇದನ್ನೂ ಓದಿ: Solar Eclipse 2021: ವರ್ಷದ ಮೊದಲ ಸೂರ್ಯಗ್ರಹಣಕ್ಕೆ ದಿನಗಣನೆ; ಬೆಂಕಿಯ ಉಂಗುರದಂತೆ ಕಾಣುವ ಗ್ರಹಣ ಎಲ್ಲೆಲ್ಲಿ ಗೋಚರ?

(Solar eclipse 2021 on June 10th. Here is the complete information about this eclipse)