AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಮ್ ಇಂಡಿಯಾ ಆಟಗಾರನ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ!

ಒಂದು ಕಡೆ ಮುಂಬರುವ ಏಷ್ಯನ್ ಗೇಮ್ಸ್ ಟೂರ್ನಿಗಾಗಿ ಜಪಾನ್‌ನಲ್ಲಿ ಟೀಮ್ ಇಂಡಿಯಾ ಪರ ಕಣಕ್ಕಿಳಿಯಲು ಯುವ ಆಟಗಾರ ಸಜ್ಜಾಗುತ್ತಿದ್ದರೆ, ಇನ್ನೊಂದೆಡೆ ಆತನ ನೋಯ್ಡಾ ನಿವಾಸದ ಮುಂದೆ ತೀವ್ರ ಹೈಡ್ರಾಮಾ ಸೃಷ್ಟಿಯಾಗಿದೆ! ಭಾರತ ತಂಡದ ಆಟಗಾರ ವಿಪ್ರಾಜ್ ನಿಗಮ್ ವಿರುದ್ಧ ಯುವತಿಯೊಬ್ಬರು ಲೈಂಗಿಕ ಹಾಗೂ ದೈಹಿಕ ದೌರ್ಜನ್ಯದ ಗಂಭೀರ ಆರೋಪ ಮಾಡಿದ್ದಾರೆ.

ಟೀಮ್ ಇಂಡಿಯಾ ಆಟಗಾರನ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ!
ವಿಪ್ರಾಜ್ ನಿಗಮ್Image Credit source: BCCI
ಝಾಹಿರ್ ಯೂಸುಫ್
|

Updated on: Sep 22, 2026 | 11:02 AM

Share

ಮುಂಬರುವ 2026ರ ಏಷ್ಯನ್ ಗೇಮ್ಸ್‌ನ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವ ಯುವ ಕ್ರಿಕೆಟಿಗ ವಿಪ್ರಾಜ್ ನಿಗಮ್ ವಿರುದ್ಧ ಲೈಂಗಿಕ ಹಾಗೂ ದೈಹಿಕ ದೌರ್ಜನ್ಯದ ಗಂಭೀರ ಆರೋಪಗಳು ಕೇಳಿಬಂದಿವೆ. ಮದುವೆಯಾಗುವುದಾಗಿ ನಂಬಿಸಿ ವಂಚಿಸಲಾಗಿದೆ ಎಂದು ಆರೋಪಿಸಿರುವ ಯುವತಿಯೊಬ್ಬರು, ನ್ಯಾಯಕ್ಕಾಗಿ ಆತನ ನೋಯ್ಡಾ ನಿವಾಸದ ಹೊರಗೆ ಭೇಟಿಗಾಗಿ ಕಾಯುತ್ತಿದ್ದಾರೆ.

ಘಟನೆಯ ಹಿನ್ನೆಲೆ:

ದೂರುದಾರೆ ಯುವತಿಯ ಪ್ರಕಾರ, ಜುಲೈ 29, 2025 ರಂದು ನೋಯ್ಡಾದ ಹೋಟೆಲ್ ಒಂದರಲ್ಲಿ ವಿಪ್ರಾಜ್ ನಿಗಮ್ ತನ್ನನ್ನು ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ಲೈಂಗಿಕವಾಗಿ ಮತ್ತು ದೈಹಿಕವಾಗಿ ದೌರ್ಜನ್ಯ ಎಸಗಿದ್ದರು. ಈ ಕುರಿತು ಈಗಾಗಲೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೆಪ್ಟೆಂಬರ್ 20, 2026 ರಂದು ಪ್ರಕರಣವು ಮತ್ತೊಂದು ತಿರುವು ಪಡೆದುಕೊಂಡಿದ್ದು, ಸಂತ್ರಸ್ತ ಯುವತಿ ಕ್ರಿಕೆಟಿಗನ ನೋಯ್ಡಾ ನಿವಾಸಕ್ಕೆ ಧಾವಿಸಿ, ಆತನನ್ನು ಭೇಟಿಯಾಗಲು ವಾಹನದಲ್ಲೇ ಸುಮಾರು ಎರಡರಿಂದ ಮೂರು ಗಂಟೆಗಳ ಕಾಲ ಕಾಯ್ದಿದ್ದಾರೆ.

ಜಪಾನ್‌ನಲ್ಲಿರುವ ವಿಪ್ರಾಜ್:

ಯುವತಿ ಮನೆಗೆ ಬಂದ ಸಮಯದಲ್ಲಿ ವಿಪ್ರಾಜ್ ನಿಗಮ್ ಮನೆಯಲ್ಲಿ ಇರಲಿಲ್ಲ. ಗಾಯಾಳು ಲೆಗ್ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರ ಸ್ಥಾನಕ್ಕೆ ಬದಲಿಯಾಗಿ ಭಾರತೀಯ ತಂಡವನ್ನು ಸೇರಿಕೊಂಡಿರುವ ವಿಪ್ರಾಜ್, ಸದ್ಯ ಏಷ್ಯನ್ ಗೇಮ್ಸ್ ಟೂರ್ನಿಗಾಗಿ ಜಪಾನ್‌ನಲ್ಲಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಸಾರ್ವಜನಿಕವಾಗಿ ಮಾತನಾಡದಂತೆ ರಿಝ್ವಾನ್​ಗೆ ನಿರ್ಬಂಧ!

ಪೊಲೀಸ್ ತನಿಖೆ ಮತ್ತು ಕಾನೂನು ಪ್ರಕ್ರಿಯೆ:

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಇದೊಂದು ಪರಸ್ಪರ ಕಾನೂನು ಹೋರಾಟದ ಸ್ವರೂಪ ಪಡೆದುಕೊಂಡಿದೆ. ಯುವತಿಯ ದೂರಿಗೂ ಮುನ್ನವೇ ವಿಪ್ರಾಜ್ ನಿಗಮ್ ಅವರು ಆಕೆ ತನಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಎಫ್‌ಐಆರ್ ದಾಖಲಿಸಿದ್ದರು. ಅಲ್ಲದೆ, ಯುವತಿಯು ಈ ಹಿಂದೆ ಕೋರ್ಟ್‌ಗೆ ನೀಡಿದ್ದ ಹೇಳಿಕೆಯಲ್ಲಿ, ತಾನು ಕೋಪದಲ್ಲಿ ಈ ದೂರು ನೀಡಿದ್ದಾಗಿ ತಿಳಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಆದರೆ ಸದ್ಯ ಯುವತಿ ಮತ್ತೆ ನ್ಯಾಯಕ್ಕಾಗಿ ಪಟ್ಟು ಹಿಡಿದಿರುವುದರಿಂದ ಪ್ರಕರಣದ ತನಿಖೆ ತೀವ್ರಗೊಂಡಿದೆ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳೊಂದಿಗೆ ಸಂವಾದ: ತೊಟ್ಟಿಲು ಖರೀದಿಸಿದ ಡಿಕೆಶಿ
ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳೊಂದಿಗೆ ಸಂವಾದ: ತೊಟ್ಟಿಲು ಖರೀದಿಸಿದ ಡಿಕೆಶಿ
ಹಾಸನಾಂಬೆ ದರ್ಶನ: ಸಿದ್ದರಾಮಯ್ಯ ಆಗಮನದ ವೇಳೆ ಗೊಂದಲ
ಹಾಸನಾಂಬೆ ದರ್ಶನ: ಸಿದ್ದರಾಮಯ್ಯ ಆಗಮನದ ವೇಳೆ ಗೊಂದಲ
ಪೀಣ್ಯ ಫ್ಲೈ ಓವರ್ ಮೇಲೆ ಚೆಲ್ಲಾಪಿಲ್ಲಿಯಾದ ಲಗ್ನ ಪತ್ರಿಕೆಗಳು
ಪೀಣ್ಯ ಫ್ಲೈ ಓವರ್ ಮೇಲೆ ಚೆಲ್ಲಾಪಿಲ್ಲಿಯಾದ ಲಗ್ನ ಪತ್ರಿಕೆಗಳು
ಅಪ್ಪ-ಅಮ್ಮನ ಪ್ರಭಾವ ಬಳಸಿ ಅವಕಾಶ ಪಡೆಯಲ್ಲ: ಖುಷಿ ಚಂದ್ರಶೇಖರ್ ದಿಟ್ಟ ಮಾತು
ಅಪ್ಪ-ಅಮ್ಮನ ಪ್ರಭಾವ ಬಳಸಿ ಅವಕಾಶ ಪಡೆಯಲ್ಲ: ಖುಷಿ ಚಂದ್ರಶೇಖರ್ ದಿಟ್ಟ ಮಾತು
ಉಗ್ರ ದಾವೂದ್ ಇಬ್ರಾಹಿಂ ವೈಭವೀಕರಣ: ಚಿಕ್ಕಮಗಳೂರಲ್ಲಿ ಬಸ್ ಸೀಜ್​​
ಉಗ್ರ ದಾವೂದ್ ಇಬ್ರಾಹಿಂ ವೈಭವೀಕರಣ: ಚಿಕ್ಕಮಗಳೂರಲ್ಲಿ ಬಸ್ ಸೀಜ್​​
ಕೆಟ್ಟದಾಗಿ ಬೈದ ಜಗ್ಗಮಮ್ಮಿಗೆ ಝಾಡಿಸಿದ ಸೌಂದರ್ಯಾ: ವಿಡಿಯೋ ನೋಡಿ
ಕೆಟ್ಟದಾಗಿ ಬೈದ ಜಗ್ಗಮಮ್ಮಿಗೆ ಝಾಡಿಸಿದ ಸೌಂದರ್ಯಾ: ವಿಡಿಯೋ ನೋಡಿ
7 ಜನರ ಕೊಲೆ: ಆರೊಪಿಯ ಮನಸ್ಥಿತಿ ಬಗ್ಗೆ ಮನೋವೈದ್ಯರ ಶಾಕಿಂಗ್ ಮಾತು
7 ಜನರ ಕೊಲೆ: ಆರೊಪಿಯ ಮನಸ್ಥಿತಿ ಬಗ್ಗೆ ಮನೋವೈದ್ಯರ ಶಾಕಿಂಗ್ ಮಾತು
ಒಂದೇ ಕುಟುಂಬ 7 ಜನರ ಹತ್ಯೆ: ಶವಗಳನ್ನ ಸಾಗಿದ ಸಿಸಿಟಿವಿ ದೃಶ್ಯ ಇಲ್ಲಿದೆ
ಒಂದೇ ಕುಟುಂಬ 7 ಜನರ ಹತ್ಯೆ: ಶವಗಳನ್ನ ಸಾಗಿದ ಸಿಸಿಟಿವಿ ದೃಶ್ಯ ಇಲ್ಲಿದೆ
70 ಕೋಟಿ ರೂ. ವೆಚ್ಚದ ಸೋಲಾರ್ ಪ್ಲಾಂಟ್‌ಗೆ ಭಾರಿ ಯಶಸ್ಸು
70 ಕೋಟಿ ರೂ. ವೆಚ್ಚದ ಸೋಲಾರ್ ಪ್ಲಾಂಟ್‌ಗೆ ಭಾರಿ ಯಶಸ್ಸು
ಪಂಜಾಬ್‌ನಲ್ಲಿ ಕರ್ಮಭೂಮಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ ಅವಘಡ
ಪಂಜಾಬ್‌ನಲ್ಲಿ ಕರ್ಮಭೂಮಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ ಅವಘಡ