AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಕ್ಲೇರ್… ಶುಭ್​ಮನ್ ಗಿಲ್ ‘ಆಕ್ರಮಣಕಾರಿ’ ನಾಯಕ!

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಭಾರತದ ಪರ ಅತಿ ಹೆಚ್ಚು ಬಾರಿ ಇನಿಂಗ್ಸ್ ಡಿಕ್ಲೇರ್ ಘೋಷಿಸಿದ ನಾಯಕ ವಿರಾಟ್ ಕೊಹ್ಲಿ. 'ಕಿಂಗ್ ಕೊಹ್ಲಿ' ಒಟ್ಟು 29 ಬಾರಿ ಇನಿಂಗ್ಸ್ ಡಿಕ್ಲೇರ್ ಮಾಡಿ ಪಂದ್ಯದ ಫಲಿತಾಂಶವನ್ನು ಎದುರು ನೋಡಿದ್ದರು. ಇದೀಗ ಅದೇ ಯಶಸ್ವಿ ಹಾದಿಯಲ್ಲಿ ಹೆಜ್ಜೆ ಇಟ್ಟಿರುವ ಶುಭ್‌ಮನ್ ಗಿಲ್, ತಮ್ಮ ಕೇವಲ 11ನೇ ಪಂದ್ಯದಲ್ಲೇ 4ನೇ ಬಾರಿ ಡಿಕ್ಲೇರ್ ಘೋಷಿಸುವ ಮೂಲಕ ಆಕ್ರಮಣಕಾರಿ ನಾಯಕತ್ವದ ಹೊಸ ಅಧ್ಯಾಯ ಆರಂಭಿಸಿದ್ದಾರೆ.

ಡಿಕ್ಲೇರ್... ಶುಭ್​ಮನ್ ಗಿಲ್ 'ಆಕ್ರಮಣಕಾರಿ' ನಾಯಕ!
Shubman Gill Image Credit source: BCCI
ಝಾಹಿರ್ ಯೂಸುಫ್
|

Updated on: Aug 25, 2026 | 8:14 AM

Share

ಭಾರತ ಟೆಸ್ಟ್ ತಂಡದ ಯುವ ನಾಯಕ ಶುಭ್‌ಮನ್ ಗಿಲ್ ತಮ್ಮ ಚಾಣಾಕ್ಷ ಹಾಗೂ ಆಕ್ರಮಣಕಾರಿ ನಾಯಕತ್ವದ ನಿರ್ಧಾರಗಳಿಂದ ಕ್ರಿಕೆಟ್ ಜಗತ್ತಿನ ಗಮನ ಸೆಳೆಯುತ್ತಿದ್ದಾರೆ. ಶ್ರೀಲಂಕಾ ವಿರುದ್ಧ ಕೊಲೊಂಬೊದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಗಿಲ್ ತಮ್ಮ ನಾಯಕತ್ವದ ವೃತ್ತಿಜೀವನದ ಮತ್ತೊಂದು ದಿಟ್ಟ ನಿರ್ಧಾರವನ್ನು ಕೈಗೊಂಡಿದ್ದಾರೆ. ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ 503/9 ರನ್ ಗಳಿಸಿದ್ದಾಗ ಅವರು ಇನಿಂಗ್ಸ್ ಡಿಕ್ಲೇರ್ ಘೋಷಣೆ ಮಾಡಿದರು.

ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ನಾಯಕನಾಗಿ ಗಿಲ್ ಅವರ ಕೇವಲ 11 ಪಂದ್ಯಗಳ ಅವಧಿಯಲ್ಲಿ ಹೊರಬಿದ್ದ 4ನೇ ಇನಿಂಗ್ಸ್ ಡಿಕ್ಲರೇಶನ್ ಎಂಬುದು ವಿಶೇಷ. ಅಂದರೆ ಗಿಲ್ ತಮ್ಮ ನಾಯಕತ್ವದ ಆರಂಭಿಕ ಹಂತದಲ್ಲೇ ಡಿಕ್ಲೆರೇಷನ್ ಮೂಲಕ ಪಂದ್ಯದ ಫಲಿತಾಂಶವನ್ನು ಎದುರು ನೋಡುತ್ತಿದ್ದಾರೆ.

ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ಪ್ರವಾಸದಲ್ಲೇ ಮುನ್ನುಡಿ:

ಶುಭ್‌ಮನ್ ಗಿಲ್ ಕೇವಲ ರನ್ ಗಳಿಸುವುದಷ್ಟೇ ಅಲ್ಲದೆ, ಪಂದ್ಯವನ್ನು ಗೆಲ್ಲುವ ತಂತ್ರಗಾರಿಕೆಯಲ್ಲೂ ಎಂ.ಎಸ್. ಧೋನಿ ಮತ್ತು ವಿರಾಟ್ ಕೊಹ್ಲಿ ಅವರ ಹಾದಿಯನ್ನು ಹಿಡಿದಿದ್ದಾರೆ. ಇದಕ್ಕೂ ಮುನ್ನ ನಡೆದ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ಪ್ರವಾಸಗಳ ಪ್ರಮುಖ ಟೆಸ್ಟ್ ಸರಣಿಗಳಲ್ಲಿ ಗಿಲ್ ತಮ್ಮ ಆಕ್ರಮಣಕಾರಿ ನಾಯಕತ್ವದ ಮೂಲಕ 3 ಬಾರಿ ಇನಿಂಗ್ಸ್ ಡಿಕ್ಲೇರ್ ಘೋಷಿಸಿ ಎದುರಾಳಿಗಳಿಗೆ ಆಘಾತ ನೀಡಿದ್ದರು. ಕೊಲೊಂಬೊ ಟೆಸ್ಟ್‌ನ ನಿರ್ಧಾರವು ಅವರ 4ನೇ ಡಿಕ್ಲರೇಶನ್ ಆಗಿದೆ.

ಫಲ ನೀಡಿದ ತಂತ್ರಗಾರಿಕೆ:

ಕೊಲಂಬೊ ಟೆಸ್ಟ್​ನ ಎರಡನೇ ದಿನದ ಸಂಜೆ ಮಂದಬೆಳಕಿನ ವಾತಾವರಣವಿದ್ದಾಗ ಶ್ರೀಲಂಕಾ ಬ್ಯಾಟರ್‌ಗಳನ್ನು ಕಷ್ಟಕರ ಪರಿಸ್ಥಿತಿಗೆ ತಳ್ಳಲು ಗಿಲ್ ತಕ್ಷಣವೇ ಇನಿಂಗ್ಸ್ ಡಿಕ್ಲೇರ್ ಮಾಡಿದರು. ಭಾರತೀಯ ಬೌಲರ್‌ಗಳು ಈ ಅವಕಾಶವನ್ನು ಅಚ್ಚುಕಟ್ಟಾಗಿ ಬಳಸಿಕೊಂಡರು. ಪರಿಣಾಮ ದಿನದಾಟದ ಮುಕ್ತಾಯಕ್ಕೆ ಶ್ರೀಲಂಕಾ ಕೇವಲ 3 ಓವರ್‌ಗಳಲ್ಲಿ 8 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಹೀಗಾಗಿ, ದಿನದಾಟದ ಅಂತ್ಯದ ವೇಳೆಗೆ ಶುಭ್‌ಮನ್ ಗಿಲ್ ಕೈಗೊಂಡ ಇನಿಂಗ್ಸ್ ಡಿಕ್ಲರೇಶನ್ ನಿರ್ಧಾರವು ಟೀಮ್ ಇಂಡಿಯಾ ಪಾಲಿಗೆ ವರದಾನವಾಗಿ ಪರಿಣಮಿಸಿದೆ. ಈ ಕಾರಣಕ್ಕಾಗಿಯೇ ಕ್ರಿಕೆಟ್ ವಲಯದಲ್ಲಿ ಇದೀಗ ಗಿಲ್ ಅವರ ಚಾಣಾಕ್ಷ ರಣತಂತ್ರಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

ಗಿಲ್ ನಾಯಕತ್ವದ ಟೆಸ್ಟ್ ಅಂಕಿ-ಅಂಶಗಳು:

  • ಒಟ್ಟು ಪಂದ್ಯಗಳು: 11* (ಪ್ರಸ್ತುತ ಪಂದ್ಯ ಪ್ರಗತಿಯಲ್ಲಿದೆ)
  • ಒಟ್ಟು ಇನಿಂಗ್ಸ್ ಡಿಕ್ಲರೇಶನ್: 4 ಬಾರಿ

ಶುಭ್‌ಮನ್ ಗಿಲ್ ಅವರ ನಾಯಕತ್ವದಲ್ಲಿ ಭಾರತ ತಂಡ ಇನಿಂಗ್ಸ್ ಡಿಕ್ಲೇರ್ ಮಾಡಿದ ಒಟ್ಟು 4 ಪಂದ್ಯಗಳ ಪೈಕಿ ಟೀಮ್ ಇಂಡಿಯಾ 3 ಪಂದ್ಯಗಳಲ್ಲಿ ಜಯಗಳಿಸಿದೆ, ಯಾವುದೇ ಪಂದ್ಯ ಸೋತಿಲ್ಲ ಅಥವಾ ಡ್ರಾ ಆಗಿಲ್ಲ. ಪ್ರಸ್ತುತ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಪಂದ್ಯದ ಫಲಿತಾಂಶ ಇನ್ನೂ ಬಾಕಿ ಇದೆ. 

ಎದುರಾಳಿ ತಂಡ ಡಿಕ್ಲೇರ್  ಸ್ಕೋರ್ ಪಂದ್ಯದ ಫಲಿತಾಂಶ
ಇಂಗ್ಲೆಂಡ್ (2025) 427/6 ಭಾರತಕ್ಕೆ 336 ರನ್‌ಗಳ ಭರ್ಜರಿ ಗೆಲುವು
ಇಂಗ್ಲೆಂಡ್ (2025) 485/5 ಭಾರತಕ್ಕೆ ರೋಮಾಂಚಕ ಗೆಲುವು (ಸರಣಿ 2-2 ಸಮಬಲ)
ವೆಸ್ಟ್ ಇಂಡೀಸ್ (2025) 448/7 ಭಾರತಕ್ಕೆ ಇನ್ನಿಂಗ್ಸ್ ಮತ್ತು 140 ರನ್‌ಗಳ ಜಯ
ಶ್ರೀಲಂಕಾ (ಪ್ರಸ್ತುತ ಪಂದ್ಯ) 503/9d ಪಂದ್ಯ ಪ್ರಗತಿಯಲ್ಲಿದೆ

ಇದನ್ನೂ ಓದಿ: 500 ರನ್​ಗಳ ಇತಿಹಾಸ: ಟೀಮ್ ಇಂಡಿಯಾಗೆ ಸೋಲಿನ ಭಯವೇ ಇಲ್ಲ!

ಅಂದರೆ, ಶುಭ್‌ಮನ್ ಗಿಲ್ ಡಿಕ್ಲೇರ್ ಘೋಷಿಸಿದ ಕಳೆದ ಮೂರೂ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಜಯಭೇರಿ ಬಾರಿಸಿದೆ. ಪ್ರಸ್ತುತ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲೂ ಭಾರತ ತಂಡ ಬಲಿಷ್ಠ ಸ್ಥಿತಿಯಲ್ಲಿದ್ದು, ಈ ಪಂದ್ಯದಲ್ಲೂ ಗೆಲುವಿನ ನಗೆ ಬೀರುವ ಸಂಪೂರ್ಣ ನಿರೀಕ್ಷೆಯಿದೆ.

Follow Us