AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದೇ ದಿನ ಕಣಕ್ಕಿಳಿಯಲಿವೆ ಭಾರತ 2 ತಂಡಗಳು; ಒಂದು ತಂಡಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ

Oct 19 India Cricket Double Header: ಅಕ್ಟೋಬರ್ 19ರಂದು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ದ್ವಿಗುಣ ಮನರಂಜನೆ ಲಭ್ಯ. ಭಾರತ ಪುರುಷರ ತಂಡ ಆಸ್ಟ್ರೇಲಿಯಾ ವಿರುದ್ಧ ಪರ್ತ್‌ನಲ್ಲಿ ಏಕದಿನ ಸರಣಿ ಆರಂಭಿಸಿದರೆ, ಮಹಿಳಾ ತಂಡ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ 'ಮಾಡು ಇಲ್ಲವೇ ಮಡಿ' ಪಂದ್ಯವಾಡಲಿದೆ. ಸೆಮಿಫೈನಲ್ ಸ್ಥಾನಕ್ಕೆ ಭಾರತ ವನಿತೆಯರಿಗೆ ಗೆಲುವು ಅನಿವಾರ್ಯ. ರೋಹಿತ್-ಕೊಹ್ಲಿ ತಂಡವೂ ಆಸೀಸ್ ನೆಲದಲ್ಲಿ ಸವಾಲು ಎದುರಿಸಲಿದೆ. ಕ್ರಿಕೆಟ್ ಪ್ರೇಮಿಗಳಿಗೆ ರೋಮಾಂಚನಕಾರಿ ಭಾನುವಾರ ನಿಶ್ಚಿತ.

ಒಂದೇ ದಿನ ಕಣಕ್ಕಿಳಿಯಲಿವೆ ಭಾರತ 2 ತಂಡಗಳು; ಒಂದು ತಂಡಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ
Team India
ಪೃಥ್ವಿಶಂಕರ
|

Updated on: Oct 18, 2025 | 4:50 PM

Share

ಅಕ್ಟೋಬರ್ 19 ರ ಭಾನುವಾರದಂದು ಭಾರತದ ಕ್ರಿಕೆಟ್ ಪ್ರಿಯರಿಗೆ ಮನರಂಜನೆಯ ರಸದೌತಣ ಸಿಗಲಿದೆ. ಏಕೆಂದರೆ ಈ ದಿನದಂದು ಭಾರತದ ಎರಡು ತಂಡಗಳು ಎರಡು ಬಲಿಷ್ಠ ತಂಡಳೆದುರು ಪಂದ್ಯಗಳನ್ನಾಡಲಿವೆ. ಒಂದೆಡೆ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸ ಮಾಡಿರುವ ಭಾರತದ (India vs Australia) ಪುರುಷರ ತಂಡ ತನ್ನ ಮೊದಲ ಪಂದ್ಯವನ್ನು ಪರ್ತ್​ ಮೈದಾನದಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಮತ್ತೊಂದೆಡೆ ಭಾರತದಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವಕಪ್​ನಲ್ಲಿ ಭಾರತ ಮಹಿಳಾ ತಂಡ ತನ್ನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ (India vs England) ತಂಡವನ್ನು ಎದುರಿಸಲಿದೆ. ಸೆಮಿಫೈನಲ್ ದೃಷ್ಟಿಯಿಂದ ಹರ್ಮನ್​ಪ್ರೀತ್ ಕೌರ್ ಪಡೆಗೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡ ಎದುರಾಗಿದೆ.

ಭಾರತ- ಇಂಗ್ಲೆಂಡ್ ಮುಖಾಮುಖಿ

ವಾಸ್ತವವಾಗಿ ಮಹಿಳಾ ವಿಶ್ವಕಪ್​ನಲ್ಲಿ ಸತತ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದ ಭಾರತ ಮಹಿಳಾ ತಂಡ, ಆ ಬಳಿಕ ನಡೆದ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದೆ. ಹೀಗಾಗಿ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಭಾರತ ತಂಡ ಸೆಮಿಫೈನಲ್​ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಬೇಕಾದರೆ, ಇಂಗ್ಲೆಂಡ್ ವಿರುದ್ಧದ ಈ ಪಂದ್ಯವನ್ನು ಗೆಲ್ಲಲೇಬೇಕಾಗಿದೆ. ವಿಶ್ವಕಪ್ ಗೆಲ್ಲುವ ಪ್ರಬಲ ಸ್ಪರ್ಧಿಯಾಗಿ ಅಖಾಡಕ್ಕಿಳಿದಿದ್ದ ಟೀಂ ಇಂಡಿಯಾಕ್ಕೆ ಸತತ ಎರಡು ಸೋಲುಗಳು ಆಘಾತ ತಂದೊಡ್ಡಿದೆ.

ಹರ್ಮನ್ ಪಡೆಗೆ ಗೆಲ್ಲಲೇಬೇಕಾದ ಒತ್ತಡ

ತನ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾವನ್ನು 59 ರನ್​ಗಳಿಂದ ಮಣಿಸಿದ ಭಾರತ ವನಿತಾ ತಂಡ, ತನ್ನ ಎರಡನೇ ಪಂದ್ಯದಲ್ಲಿ ಪಾಕಿಸ್ತಾನವನ್ನು ಏಕಪಕ್ಷೀಯ ರೀತಿಯಲ್ಲಿ ಸೋಲಿಸಿತ್ತು. ಈ ಎರಡು ಪಂದ್ಯಗಳಲ್ಲಿ ಭಾರತದ ಬ್ಯಾಟಿಂಗ್ ವಿಭಾಗ ಕೈಕೊಟ್ಟಿತ್ತಾದರೂ, ಬೌಲಿಂಗ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ಮೂಡಿಬಂದಿತ್ತು. ಆದರೆ ಆ ಬಳಿಕ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲೂ ಬ್ಯಾಟಿಂಗ್ ವಿಭಾಗ ಕೈಕೊಟ್ಟಿತು. ಆದಾಗ್ಯೂ ಕೊನೆಯವರೆಗೂ ಗೆಲುವಿಗಾಗಿ ಹೋರಾಟ ನೀಡಿದ ಬೌಲಿಂಗ್ ವಿಭಾಗ ಪಂದ್ಯವನ್ನು ಗೆಲ್ಲಿಸುವುದರಲ್ಲಿ ವಿಫಲವಾಗಿತ್ತು. ತನ್ನ ನಾಲ್ಕನೇ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಎದುರಿಸಿದ್ದ ಭಾರತ ತಂಡಕ್ಕೆ ಬ್ಯಾಟಿಂಗ್ ವಿಭಾಗ ಕೈಹಿಡಿಯಿತ್ತಾದರೂ, ಆಸ್ಟ್ರೇಲಿಯಾದ ಬ್ಯಾಟಿಂಗ್ ವಿಭಾಗವನ್ನು ಕಟ್ಟಿಹಾಕುವಲ್ಲಿ ಬೌಲರ್​ಗಳು ಎಡವಿದ್ದರು. ಹೀಗಾಗಿ ಇಂಗ್ಲೆಂಡ್ ವಿರುದ್ಧದ ತನ್ನ ಐದನೇ ಪಂದ್ಯದಲ್ಲಿ ಭಾರತ ತಂಡ ಸಾಂಘಿಕ ಪ್ರದರ್ಶನ ನೀಡಿ ಗೆಲುವು ಧಕ್ಕಿಸಿಕೊಳ್ಳಬೇಕಾಗಿದೆ. ಈ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ.

IND vs AUS: ಆಸ್ಟ್ರೇಲಿಯಾ ನೆಲದಲ್ಲಿ ಭಯಾನಕವಾಗಿದೆ ಭಾರತದ ಏಕದಿನ ದಾಖಲೆ

ಭಾರತ- ಆಸೀಸ್ ಏಕದಿನ ಪಂದ್ಯ

ಇತ್ತ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾವನ್ನು ಎದುರಿಸುತ್ತಿರುವ ಭಾರತ ಪುರುಷರ ತಂಡ, ಕಾಂಗರೂ ತಂಡವನ್ನು ಅವರ ನೆಲದಲ್ಲಿ ಮಣಿಸುವ ಕಠಿಣ ಸವಾಲು ಎದುರಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಆಸೀಸ್ ತಂಡದ ವಿರುದ್ಧ ಪ್ರಬಲ ಪ್ರದರ್ಶನ ನೀಡುತ್ತಿರುವ ಭಾರತ ತಂಡಕ್ಕೆ, ಏಕದಿನ ವಿಶ್ವಕಪ್ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಇದೊಂದು ಉತ್ತಮ ಅವಕಾಶವಾಗಿದೆ. ಹಾಗೆಯೇ 7 ತಿಂಗಳ ನಂತರ ಕ್ರಿಕೆಟ್​ಗೆ ಮರಳಿರುವ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ತಮ್ಮ ಅನುಭವವನ್ನು ಧಾರೆ ಎರೆದು ಯುವ ತಂಡವನ್ನು ಗೆಲುವಿನತ್ತ ಕೊಂಡೊಯ್ಯಬೇಕಾಗಿದೆ. ಈ ಪಂದ್ಯ ಭಾರತೀಯ ಕಾಲಮಾನ ಬೆಳಿಗ್ಗೆ 9 ಗಂಟೆಗೆ ಆರಂಭವಾಗಲಿದೆ. ಹೀಗಾಗಿ ಟೀಂ ಇಂಡಿಯಾ ಅಭಿಮಾನಿಗಳು ಭಾನುವಾರ ಬೆಳಿಗ್ಗೆ ಪುರುಷರ ಕ್ರಿಕೆಟ್​ ಅನ್ನು ಆನಂದಿಸಿದರೆ, ಮಧ್ಯಾಹ್ನದ ಬಳಿಕ ಮಹಿಳಾ ತಂಡದ ಆಟವನ್ನು ಕಣ್ತುಂಬಿಕೊಳ್ಳಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಕಳೆದ ಒಂದು ದಶಕದಿಂದ ಕನ್ನಡದ ನಂ.1 ಸುದ್ದಿ ವಾಹಿನಿ ಟಿವಿ9 ಕನ್ನಡದೊಂದಿಗೆ ಪತ್ರಿಕೋದ್ಯಮದ ಪಯಣ ಮುಂದುವರಿಸಿದ್ದೇನೆ. ಕ್ರೀಡಾ ಜಗತ್ತಿನ ಆಗುಹೋಗುಗಳು, ಆಟಗಾರರ ಸಾಧನೆಗಳು, ಮೈದಾನದ ರೋಚಕ ಕ್ಷಣಗಳು ಹಾಗೂ ಕ್ರೀಡೆಯ ಹಿಂದಿನ ಆಸಕ್ತಿದಾಯಕ ಕಥನಗಳನ್ನು ಅಕ್ಷರಗಳ ಮೂಲಕ ಓದುಗರಿಗೆ ತಲುಪಿಸುವುದು ನನ್ನ ವೃತ್ತಿ ಮತ್ತು ಪ್ರವೃತ್ತಿ. ಕ್ರೀಡೆಯನ್ನು ಕೇವಲ ಆಟವಾಗಿ ನೋಡದೆ, ಅದರೊಳಗಿನ ಪರಿಶ್ರಮ, ಹೋರಾಟ, ಸಾಧನೆ ಮತ್ತು ಭಾವನೆಗಳನ್ನು ಗುರುತಿಸಿ ಬರವಣಿಗೆಯಲ್ಲಿ ಕಟ್ಟಿಕೊಡುವುದು ನನ್ನ ಪ್ರಯತ್ನ. ಮೂಲತಃ ಹಾಸನ ಜಿಲ್ಲೆಯವನು. ಹಾಸನದ ನೆಲದ ಸೊಗಡು ಮತ್ತು ಕನ್ನಡದ ಮೇಲಿನ ಅಭಿಮಾನ ನನ್ನ ಹೆಮ್ಮೆ. ವೃತ್ತಿಪರತೆಯೊಂದಿಗೆ ಹೊಸ ವಿಷಯಗಳನ್ನು ಕಲಿಯುತ್ತಾ, ಕ್ರೀಡಾ ಪತ್ರಿಕೋದ್ಯಮದಲ್ಲಿ ಹೊಸ ಮೈಲಿಗಲ್ಲುಗಳನ್ನು ಸಾಧಿಸುವ ಹಂಬಲ ನನ್ನದು.

Read More
ನಾನು ಕೆಪಿಸಿಸಿ ಅಧ್ಯಕ್ಷನಾಗುವವನು, ಸಿಎಂ ಆಗುವ ಕ್ಯಾಂಡಿಡೇಟ್: ಮಹದೇವಪ್ಪ
ನಾನು ಕೆಪಿಸಿಸಿ ಅಧ್ಯಕ್ಷನಾಗುವವನು, ಸಿಎಂ ಆಗುವ ಕ್ಯಾಂಡಿಡೇಟ್: ಮಹದೇವಪ್ಪ
ದೇವರ ಹಳೆಯ ಫೋಟೋಗಳನ್ನು ಕಸಕ್ಕೆ ಎಸೆಯುವ ಮುನ್ನ ಈ ವಿಡಿಯೋ ನೋಡಿ
ದೇವರ ಹಳೆಯ ಫೋಟೋಗಳನ್ನು ಕಸಕ್ಕೆ ಎಸೆಯುವ ಮುನ್ನ ಈ ವಿಡಿಯೋ ನೋಡಿ
2 ಹಸು ವಿತರಣೆ ಭರವಸೆಯ ಹಿಂದಿನ ಅಸಲಿ ಗೇಮ್‌ಪ್ಲಾನ್ ಏನು ಗೊತ್ತಾ?
2 ಹಸು ವಿತರಣೆ ಭರವಸೆಯ ಹಿಂದಿನ ಅಸಲಿ ಗೇಮ್‌ಪ್ಲಾನ್ ಏನು ಗೊತ್ತಾ?
ಗರ್ಭಿಣಿ ಮಹಿಳೆಯರಂತೆಯೇ ಎರಡು ಹಸುಗಳಿಗೆ ಸೀಮಂತ ಸಂಭ್ರಮ
ಗರ್ಭಿಣಿ ಮಹಿಳೆಯರಂತೆಯೇ ಎರಡು ಹಸುಗಳಿಗೆ ಸೀಮಂತ ಸಂಭ್ರಮ
ಬೆಂಗಳೂರಲ್ಲಿ 191 ಮಸಾಜ್, ಸ್ಪಾಗಳ ಮೇಲೆ ಪೊಲೀಸರ ದಿಢೀರ್​ ದಾಳಿ
ಬೆಂಗಳೂರಲ್ಲಿ 191 ಮಸಾಜ್, ಸ್ಪಾಗಳ ಮೇಲೆ ಪೊಲೀಸರ ದಿಢೀರ್​ ದಾಳಿ
ನನ್ನ ಹೆಣವೂ 7.59 ಲಕ್ಷ ಹಣ ಪಾವತಿಸುವುದಿಲ್ಲ; ಅಡ್ಡಂಡ ಕಾರ್ಯಪ್ಪ ಆಕ್ರೋಶ
ನನ್ನ ಹೆಣವೂ 7.59 ಲಕ್ಷ ಹಣ ಪಾವತಿಸುವುದಿಲ್ಲ; ಅಡ್ಡಂಡ ಕಾರ್ಯಪ್ಪ ಆಕ್ರೋಶ
ಗಗನ್ ಮಾತಿನಿಂದ ಬೇಸರ; ಸುದೀಪ್ ಎದುರು ಕಣ್ಣೀರು ಹಾಕಿದ ತಾಂಡವ್ ರಾಮ್
ಗಗನ್ ಮಾತಿನಿಂದ ಬೇಸರ; ಸುದೀಪ್ ಎದುರು ಕಣ್ಣೀರು ಹಾಕಿದ ತಾಂಡವ್ ರಾಮ್
ಮಲೆನಾಡಿಗೆ ಬಂದಿಳಿದ ನಟಿ ತ್ರಿಷಾ ಕೃಷ್ಣನ್: ತೀರ್ಥಹಳ್ಳಿ ಶೂಟಿಂಗ್
ಮಲೆನಾಡಿಗೆ ಬಂದಿಳಿದ ನಟಿ ತ್ರಿಷಾ ಕೃಷ್ಣನ್: ತೀರ್ಥಹಳ್ಳಿ ಶೂಟಿಂಗ್
ಡಿಲಿಮಿಟೇಶನ್ ಬಿಲ್ ಫ್ರಾಡ್ ಎಂದ ರಾಹುಲ್ ಗಾಂಧಿಗೆ ಶೋಭಾ ಕರಂದ್ಲಾಜೆ ಕೌಂಟರ್
ಡಿಲಿಮಿಟೇಶನ್ ಬಿಲ್ ಫ್ರಾಡ್ ಎಂದ ರಾಹುಲ್ ಗಾಂಧಿಗೆ ಶೋಭಾ ಕರಂದ್ಲಾಜೆ ಕೌಂಟರ್
13ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ
13ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ