AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

9 ಸಿಕ್ಸರ್, 32 ಎಸೆತಗಳಲ್ಲಿ 93 ರನ್..! ರಜತ್ ರೌದ್ರಾವತಾರಕ್ಕೆ ಗುಜರಾತ್ ವಿಲವಿಲ

Rajat Patidar Blasts 93 off 32 in IPL 2026 Qualifier 1: ಐಪಿಎಲ್ 2026 ಕ್ವಾಲಿಫೈಯರ್ 1 ರಲ್ಲಿ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಗುಜರಾತ್ ಟೈಟಾನ್ಸ್ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 32 ಎಸೆತಗಳಲ್ಲಿ 93 ರನ್ ಸಿಡಿಸಿ, 21 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆರಂಭಿಕ ಆಘಾತದ ನಡುವೆಯೂ ತಂಡವನ್ನು ಮುನ್ನಡೆಸಿದ ಅವರ ನಾಯಕತ್ವದ ಆಟದಿಂದ ಆರ್‌ಸಿಬಿ 254 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.

9 ಸಿಕ್ಸರ್, 32 ಎಸೆತಗಳಲ್ಲಿ 93 ರನ್..! ರಜತ್ ರೌದ್ರಾವತಾರಕ್ಕೆ ಗುಜರಾತ್ ವಿಲವಿಲ
Rajat PatidarImage Credit source: IPL X
ಪೃಥ್ವಿಶಂಕರ
|

Updated on:May 26, 2026 | 10:03 PM

Share

ಗುಜರಾತ್ ಟೈಟಾನ್ಸ್ ವಿರುದ್ಧದ ಐಪಿಎಲ್ 2026 ಕ್ವಾಲಿಫೈಯರ್ 1 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB vs GT Qualifier 1) ತಂಡದ ನಾಯಕ ರಜತ್ ಪಾಟಿದರ್ (Rajat Patidar) ಸಿಡಿಲಬ್ಬರದ ಬ್ಯಾಟಿಂಗ್‌ ಪ್ರದರ್ಶಿಸಿದರು. ನಿರ್ಣಾಯಕ ಪಂದ್ಯದಲ್ಲಿ ನಾಯಕನ ಇನ್ನಿಂಗ್ಸ್ ಆಡಿದ ರಜತ್ ಬಲಿಷ್ಠ ಗುಜರಾತ್ ಬೌಲಿಂಗ್ ವಿಭಾಗವನ್ನು ಹೈರಾಣಾಗಿಸಿದರು. ತಂಡ ಆರಂಭಿಕ ಆಘಾತಕ್ಕೆ ಸಿಲುಕಿಕೊಂಡಿದ್ದರೂ ತಾಳ್ಮೆಯಿಂದ ಇನ್ನಿಂಗ್ಸ್ ಕಟ್ಟಿದ ರಜತ್ ಆ ಬಳಿಕ ರೌದ್ರಾವತಾರ ತಾಳಿದರು ಇದರ ಪರಿಣಾಮವಾಗಿ ರಜತ್ ಕೇವಲ 21 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆ ಬಳಿಕ ಮತ್ತಷ್ಟು ಉಗ್ರರೂಪ ತಾಳಿದ ರಜತ್ 20ನೇ ಓವರ್​ವರೆಗೂ ಅಜೇಯರಾಗಿ ಉಳಿದ ರಜತ್ ಕೇವಲ 32 ಎಸೆತಗಳಲ್ಲಿ 93 ರನ್ ಬಾರಿಸಿದರು. ರಜತ್ ಅವರ ಈ ಅಬ್ಬರದ ಬ್ಯಾಟಿಂಗ್​ನಿಂದಾಗಿ ಆರ್​ಸಿಬಿ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 254 ರನ್ ಕಲೆಹಾಕಿತು.

ಈ ಪಂದ್ಯದಲ್ಲಿ ಆರ್​ಸಿಬಿಗೆ ಸಾಧಾರಣ ಆರಂಭ ಸಿಕ್ಕಿತು. ವೆಂಕಟೇಶ್ ಅಯ್ಯರ್ 19 ರನ್​ಗಳ ಇನ್ನಿಂಗ್ಸ್ ಆಡಿ ಔಟಾದರು. ಆದರೆ ಆ ಬಳಿಕ ಜೊತೆಯಾದ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಅರ್ಧಶತಕದ ಜೊತೆಯಾಟವನ್ನಾಡುವ ಮೂಲಕ ತಂಡವನ್ನು ಪವರ್​ಪ್ಲೇನಲ್ಲಿಯೇ 70 ರನ್​ಗಳ ಗಡಿ ದಾಟಿಸಿದರು. ಜೊತೆಗೆ ಇವರಿಬ್ಬರು ಅರ್ಧಶತಕದತ್ತ ದಾಪುಗಾಲಿಟ್ಟಿದ್ದರು. ಆದರೆ ಈ ವೇಳೆ ದಾಳಿಗಿಳಿದ ಜೇಸನ್ ಹೊಲ್ಡರ್ ಒಂದೇ ಓವರ್​ನಲ್ಲಿ ಇವರಿಬ್ಬರನ್ನು ಔಟ್ ಮಾಡಿದರು.

ಒತ್ತಡದ ನಡುವೆ ಅಮೋಘ ಬ್ಯಾಟಿಂಗ್

ಹೀಗಾಗಿ ಬ್ಯಾಕ್ ಟು ಬ್ಯಾಕ್ ಆಘಾತದ ನಡುವೆ ಬ್ಯಾಟಿಂಗ್​ಗೆ ಬಂದ ನಾಯಕ ರಜತ್ ಪಾಟಿದರ್, ಆಲ್‌ರೌಂಡರ್ ಕೃನಾಲ್ ಪಾಂಡ್ಯ ಜೊತೆಗೆ ತಾಳ್ಮೆಯ ಇನ್ನಿಂಗ್ಸ್ ಕಟ್ಟಿದರು. ಆರಂಭದಲ್ಲಿ ಇವರಿಬ್ಬರಿಗೆ ಮುಕ್ತವಾಗಿ ಆಡಲು ಸಾಧ್ಯವಾಗಲಿಲ್ಲ. ಹೀಗಾಗಿ ರಜತ್ ಒಂದೇ ಓವರ್​ನಲ್ಲಿ ಎರಡು ಕ್ಯಾಚ್​ಗಳನ್ನು ನೀಡಿದರು. ಆದರೆ ಗುಜರಾತ್ ಫೀಲ್ಡರ್​ಗಳು ಆ ಕ್ಯಾಚ್​ಗಳನ್ನು ಕೈಬಿಟ್ಟರು. ಈ ಎರಡು ಜೀವದಾನಗಳ ಲಾಭ ಪಡೆದ ರಜತ್ ಬೌಂಡರಿಗಳ ಮಳೆ ಸುರಿಸಿದರು.

ಒಂದೇ ಓವರ್​ನಲ್ಲಿ 2 ಜೀವದಾನ

ವಾಸ್ತವವಾಗಿ 10 ಎಸೆತಗಳಲ್ಲಿ 14 ರನ್ ಗಳಿಸಿದ್ದಾಗ ಪ್ರಸಿದ್ಧ್ ಕೃಷ್ಣ ಬೌಲ್ ಮಾಡಿದ 14 ನೇ ಓವರ್​ನ ಮೊದಲ ಎಸೆತದಲ್ಲಿ ಕ್ಯಾಚ್ ನೀಡಿದ್ದರು. ಆದರೆ ಸ್ವಲ್ಪ ಕಷ್ಟಕರವಾದ ಕ್ಯಾಚ್ ಅನ್ನು ಹಿಡಿಯಲು ಸಾಧ್ಯವಾಗಲಿಲ್ಲ. ನಂತರ ಪಾಟಿದಾರ್ ಎರಡನೇ ಎಸೆತದಲ್ಲಿ ಬೌಂಡರಿ ಹೊಡೆದರು. ಮುಂದಿನ ಎಸೆತದಲ್ಲಿ ರಜತ್ ಕಗಿಸೊ ರಬಾಡಗೆ ಕ್ಯಾಚ್ ನೀಡಿದರು. ಆದರೆ ರಬಾಡ ಕೂಡ ಅ ಸುಲಭವಾದ ಕ್ಯಾಚ್ ಬಿಟ್ಟರು. ಇದಾದ ಬಳಿಕ ರಜತ್ ಯಾವುದೇ ಅವಕಾಶಗಳನ್ನು ನೀಡದೆ ಕೃನಾಲ್ ಅವರೊಂದಿಗೆ ಅರ್ಧಶತಕದ ಜೊತೆಯಾಟ ನಡೆಸಿದರು. ಇವರಿಬ್ಬರ ಜೊತೆಯಾಟದಿಂದಾಗಿ ತಂಡ 180 ರನ್​ಗಳ ಗಡಿ ದಾಟಿತು. ಇದೇ ಹಂತದಲ್ಲಿ ಕೃನಾಲ್ 43 ರನ್ ಬಾರಿಸಿ ಔಟಾದರು.

IPL 2026 Qualifier-1 RCB vs GT Live Score: ರಜತ್ ಅಬ್ಬರ; ಗುಜರಾತ್​ಗೆ 255 ರನ್ ಗುರಿ

ಅಜೇಯ 93 ರನ್

ಆ ಬಳಿಕವೂ ತಮ್ಮ ಆಟವನ್ನು ಮುಂದುವರೆಸಿದ ರಜತ್ 33 ಎಸೆತಗಳಲ್ಲಿ 283.82 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿ 9 ಸಿಕ್ಸರ್ ಮತ್ತು 5 ಬೌಂಡರಿಗಳೊಂದಿಗೆ ಅಜೇಯ 93 ರನ್ ಗಳಿಸಿದರು. ರಜತ್ ಶತಕ ಬಾರಿಸುವ ಅವಕಾಶದಿಂದ ವಂಚಿತರಾದರೂ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ದರು. ಇದು ರಜತ್ ಅವರ ಐಪಿಎಲ್ ವೃತ್ತಿಜೀವನದ ಐದನೇ ಅರ್ಧಶತಕವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:26 pm, Tue, 26 May 26

Follow Us
pruthvi Shankar
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ರಸ್ತೆಯಲ್ಲಿ ಸಿಕ್ಕ ಅನಾಥ ಭಿಕ್ಷುಕನ ಹೇರ್​​ಕಟ್ ಮಾಡಿ ಆರೈಕೆ ಮಾಡಿದ ನಟ
ರಸ್ತೆಯಲ್ಲಿ ಸಿಕ್ಕ ಅನಾಥ ಭಿಕ್ಷುಕನ ಹೇರ್​​ಕಟ್ ಮಾಡಿ ಆರೈಕೆ ಮಾಡಿದ ನಟ
ನಾಯಕತ್ವ ಬದಲಾವಣೆ: ಸಭೆಯ ರಹಸ್ಯ ಬಿಚ್ಚಿಟ್ಟ ಕೆ.ಸಿ. ವೇಣುಗೋಪಾಲ್
ನಾಯಕತ್ವ ಬದಲಾವಣೆ: ಸಭೆಯ ರಹಸ್ಯ ಬಿಚ್ಚಿಟ್ಟ ಕೆ.ಸಿ. ವೇಣುಗೋಪಾಲ್
ಹಾಸನ ಸೈಟ್ ವಿವಾದ: ಬೆಂಗಳೂರಲ್ಲಿ ಡಿಜಿಪಿ ಭೇಟಿಯಾದ ಯಶ್ ತಾಯಿ ಪುಷ್ಪಾ
ಹಾಸನ ಸೈಟ್ ವಿವಾದ: ಬೆಂಗಳೂರಲ್ಲಿ ಡಿಜಿಪಿ ಭೇಟಿಯಾದ ಯಶ್ ತಾಯಿ ಪುಷ್ಪಾ
ಪುನೀತ್ ಅಂಗಾಂಗ ದಾನ: ಸಂಬಂಧಿಕರ ನೋವಿನ ಮಾತು
ಪುನೀತ್ ಅಂಗಾಂಗ ದಾನ: ಸಂಬಂಧಿಕರ ನೋವಿನ ಮಾತು
ಮೇಕೆದಾಟು ಯೋಜನೆಗೆ ಕ್ಯಾತೆ: ಪ್ರಧಾನಿಗೆ ಪತ್ರ ಬರೆದ ತಮಿಳುನಾಡು ಸಿಎಂ ವಿಜಯ್
ಮೇಕೆದಾಟು ಯೋಜನೆಗೆ ಕ್ಯಾತೆ: ಪ್ರಧಾನಿಗೆ ಪತ್ರ ಬರೆದ ತಮಿಳುನಾಡು ಸಿಎಂ ವಿಜಯ್
ರಾಜ್ಯಸಭೆ ಆಫರ್​​ ಬಂದರೆ ಸಿದ್ದರಾಮಯ್ಯ ನಿಲುವೇನು? ಇಲ್ಲಿದೆ ಮಾಹಿತಿ
ರಾಜ್ಯಸಭೆ ಆಫರ್​​ ಬಂದರೆ ಸಿದ್ದರಾಮಯ್ಯ ನಿಲುವೇನು? ಇಲ್ಲಿದೆ ಮಾಹಿತಿ
ಚಾಮುಂಡಿ ಬೆಟ್ಟಕ್ಕೆ ರಣ್ವೀರ್ ಸಿಂಗ್: ಪೂಜಾರಿ ಹೇಳಿದ್ದು ಹೀಗೆ?
ಚಾಮುಂಡಿ ಬೆಟ್ಟಕ್ಕೆ ರಣ್ವೀರ್ ಸಿಂಗ್: ಪೂಜಾರಿ ಹೇಳಿದ್ದು ಹೀಗೆ?
ತಾಜ್ ಮಹಲ್​ ಮುಂದೆ ಪತ್ನಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ರೂಬಿಯೋ
ತಾಜ್ ಮಹಲ್​ ಮುಂದೆ ಪತ್ನಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ರೂಬಿಯೋ
ಗಲಾಟೆ ವೇಳೆ ಯುವಕನ ಕಾಲಿಗೆ ಗುಂಡು ಹಾರಿಸಿದ ಉದ್ಯಮಿಯ ಅಂಗರಕ್ಷಕ
ಗಲಾಟೆ ವೇಳೆ ಯುವಕನ ಕಾಲಿಗೆ ಗುಂಡು ಹಾರಿಸಿದ ಉದ್ಯಮಿಯ ಅಂಗರಕ್ಷಕ
ಸಿದ್ದರಾಮಯ್ಯ-ರಾಹುಲ್ ಗಾಂಧಿ ಹೈವೋಲ್ಟೇಜ್ ಸಭೆಯ ಇನ್ಸ್​​​ಸೈಡ್ ಮಾಹಿತಿ
ಸಿದ್ದರಾಮಯ್ಯ-ರಾಹುಲ್ ಗಾಂಧಿ ಹೈವೋಲ್ಟೇಜ್ ಸಭೆಯ ಇನ್ಸ್​​​ಸೈಡ್ ಮಾಹಿತಿ