IPL 2025 Retention Live: ಧಾರಣ ಪಟ್ಟಿ ಬಿಡುಗಡೆ
IPL Retention 2025 Live Updates in Kannada: 18ನೇ ಆವೃತ್ತಿಯ ಐಪಿಎಲ್ ಮೆಗಾ ಹರಾಜು ನವೆಂಬರ್‌ನಲ್ಲಿ ನಡೆಯಬಹುದು. ಆದರೆ ಇದಕ್ಕೂ ಮೊದಲು, ಆಟಗಾರರ ಧಾರಣ ಪಟ್ಟಿಯ ಬಗ್ಗೆ ಚರ್ಚೆಗಳು ಶುರುವಾಗಿದ್ದು, ಫ್ರಾಂಚೈಸಿಗಳಿಗೆ ನೀಡಿದ್ದ ಗಡುವು ಇಂದು ಕೊನೆಗೊಳ್ಳುತ್ತಿದೆ. ಹೀಗಾಗಿ ಎಲ್ಲಾ 10 ತಂಡಗಳ ಉಳಿಸಿಕೊಂಡಿರುವ ಆಟಗಾರರ ಹೆಸರನ್ನು ಸಂಜೆಯೊಳಗೆ ಅಧಿಕೃತವಾಗಿ ಪ್ರಕಟಿಸಲಿವೆ.
LIVE NEWS & UPDATES
-
IPL Retention 2025 Live: 5 ಗಂಟೆಗೆ ಗಡುವು ಅಂತ್ಯ
ಐಪಿಎಲ್ 2025 ರ ಧಾರಣ ಪಟ್ಟಿಯನ್ನು ಸಲ್ಲಿಸಲು ಗಡುವು ಅಕ್ಟೋಬರ್ 31 ಸಂಜೆ 5 ಗಂಟೆಗೆ ನಿಗದಿ ಮಾಡಲಾಗಿದೆ. ಇದರ ನಂತರ ಉಳಿಸಿಕೊಂಡಿರುವ ಆಟಗಾರರ ಹೆಸರುಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.
-
IPL Retention 2025 Live: ಲೈವ್ ವೀಕ್ಷಿಸುವುದು ಹೇಗೆ?
ನೀವು ಮೊಬೈಲ್‌ನಲ್ಲಿ ಐಪಿಎಲ್ ಧಾರಣವನ್ನು ಲೈವ್ ಆಗಿ ಜಿಯೋ ಸಿನಿಮಾ ಅಪ್ಲಿಕೇಶನ್ನಲ್ಲಿ ನೋಡಬಹುದು. ಇದರ ಲೈವ್ ಸ್ಟ್ರೀಮಿಂಗ್ ಜಿಯೋ ಸಿನಿಮಾದಲ್ಲಿ ಸಂಜೆ 4:30 ರಿಂದ ಪ್ರಾರಂಭವಾಗುತ್ತದೆ. ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರವಾಗಲಿದೆ.
-
IPL Retention 2025 Live: ಸಂಜೆ 4.30ಕ್ಕೆ ಪ್ರಕಟ
ಐಪಿಎಲ್ 2025 ರ ಧಾರಣ ಪಟ್ಟಿಯನ್ನು ಯಾವುದೇ ತಂಡ ಇನ್ನೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಇಂದು ಸಂಜೆ 4.30ರಿಂದ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಲಿವೆ.
18ನೇ ಆವೃತ್ತಿಯ ಐಪಿಎಲ್ ಮೆಗಾ ಹರಾಜು ನವೆಂಬರ್‌ನಲ್ಲಿ ನಡೆಯಬಹುದು. ಆದರೆ ಇದಕ್ಕೂ ಮೊದಲು, ಆಟಗಾರರ ಧಾರಣ ಪಟ್ಟಿಯ ಬಗ್ಗೆ ಚರ್ಚೆಗಳು ಶುರುವಾಗಿದ್ದು, ಫ್ರಾಂಚೈಸಿಗಳಿಗೆ ನೀಡಿದ್ದ ಗಡುವು ಇಂದು ಕೊನೆಗೊಳ್ಳುತ್ತಿದೆ. ಹೀಗಾಗಿ ಎಲ್ಲಾ 10 ತಂಡಗಳ ಉಳಿಸಿಕೊಂಡಿರುವ ಆಟಗಾರರ ಹೆಸರನ್ನು ಸಂಜೆಯೊಳಗೆ ಅಧಿಕೃತವಾಗಿ ಪ್ರಕಟಿಸಲಿವೆ. ಇದಾದ ನಂತರ ಚಿತ್ರಣ ಸ್ಪಷ್ಟವಾಗಲಿದ್ದು, ಯಾವ ಆಟಗಾರ ಈ ಬಾರಿ ಮೆಗಾ ಹರಾಜಿಗೆ ಬರಲಿದ್ದಾರೆ ಎಂಬುದು ತಿಳಿಯಲಿದೆ. ವರದಿಯ ಪ್ರಕಾರ, ಕೆಎಲ್ ರಾಹುಲ್, ರಿಷಬ್ ಪಂತ್, ಶ್ರೇಯಸ್ ಅಯ್ಯರ್ ಅವರಂತಹ ಅನೇಕ ದೊಡ್ಡ ಆಟಗಾರರು ತಂಡದಿಂದ ಬಿಡುಗಡೆಯಾಗಿ ಮೆಗಾ ಹರಾಜಿಗೆ ಪ್ರವೇಶಿಸಲಿದ್ದಾರೆ.
Published On - Oct 31,2024 2:49 PM