AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2026: 4 ಪಂದ್ಯಗಳ ಬಳಿಕ ಪಾಯಿಂಟ್ ಪಟ್ಟಿಯಲ್ಲಿ ಯಾರಿಗೆ ಅಗ್ರಸ್ಥಾನ? ಆರ್​ಸಿಬಿಗೆ ಯಾವ ಸ್ಥಾನ?

IPL 2026 Points Table: ಐಪಿಎಲ್ 2026 ರಲ್ಲಿ ನಾಲ್ಕು ಪಂದ್ಯಗಳು ಮುಗಿದಿದ್ದು, ರಾಜಸ್ಥಾನ್, ಆರ್​​ಸಿಬಿ, ಮುಂಬೈ ಮತ್ತು ಪಂಜಾಬ್ ತಂಡಗಳು ಗೆಲುವು ಸಾಧಿಸಿವೆ. ಉತ್ತಮ ನೆಟ್ ರನ್ ರೇಟ್‌ನಿಂದ ರಾಜಸ್ಥಾನ್ ರಾಯಲ್ಸ್ 2 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇಂದು LSG-ಡೆಲ್ಲಿ ಪಂದ್ಯದ ನಂತರ ಎಲ್ಲಾ ತಂಡಗಳು ತಮ್ಮ ಮೊದಲ ಪಂದ್ಯವನ್ನು ಆಡಿ ಮುಗಿಸುತ್ತವೆ, ನಂತರ ಅಂಕಪಟ್ಟಿಯ ಸ್ಪಷ್ಟ ಚಿತ್ರಣ ಸಿಗುತ್ತದೆ.

IPL 2026: 4 ಪಂದ್ಯಗಳ ಬಳಿಕ ಪಾಯಿಂಟ್ ಪಟ್ಟಿಯಲ್ಲಿ ಯಾರಿಗೆ ಅಗ್ರಸ್ಥಾನ? ಆರ್​ಸಿಬಿಗೆ ಯಾವ ಸ್ಥಾನ?
Ipl 2026
ಪೃಥ್ವಿಶಂಕರ
|

Updated on:Apr 01, 2026 | 3:37 PM

Share

ಮಾರ್ಚ್ 28 ರಿಂದ ಆರಂಭವಾದ ಐಪಿಎಲ್ 2026 ರಲ್ಲಿ (IPL 2026) ಇದುವರೆಗೆ ನಾಲ್ಕು ಪಂದ್ಯಗಳು ನಡೆದಿವೆ. ಅಂದರೆ 10 ತಂಡಗಳ ಪೈಕಿ 8 ತಂಡಗಳು ತಲಾ ಒಂದೊಂದು ಪಂದ್ಯವನ್ನು ಆಡಿವೆ. ಇಂದು ನಡೆಯುವ ಲಕ್ನೋ ಸೂಪರ್​ಜೈಂಟ್ಸ್ ಹಾಗೂ ಡೆಲ್ಲಿ ನಡುವಿನ ಪಂದ್ಯದ ಬಳಿಕ ಎಲ್ಲಾ ತಂಡಗಳು ಒಂದೊಂದು ಪಂದ್ಯವನ್ನು ಆಡಿದಂತಾಗುತ್ತದೆ. ಈಗ ಆಡಿರುವ 8 ತಂಡಗಳ ಪೈಕಿ, 4 ತಂಡಗಳು ಗೆಲುವಿನ ಖಾತೆ ತೆರೆದಿದ್ದರೆ, ಇನ್ನ 4 ತಂಡಗಳು ಸೋಲಿಗೆ ಶರಣಾಗಿವೆ. ಹೀಗಾಗಿ ಗೆದ್ದ 4 ತಂಡಗಳಿಗೆ 2 ಅಂಕಗಳು ಸಿಕ್ಕಿದ್ದರೆ, ಸೋತ ತಂಡಗಳು ಅಂಕಗಳ ಖಾತೆ ತೆರೆದಿಲ್ಲ. ಆದಾಗ್ಯೂ ಗೆದ್ದಿರುವ 4 ತಂಡಗಳ ಪೈಕಿ ಯಾವ ತಂಡ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ? ಸೋತ ತಂಡಗಳ ಪೈಕಿ ಯಾವ ತಂಡ ಕೊನೆಯ ಸ್ಥಾನದಲ್ಲಿದೆ ಎಂಬುದನ್ನು ನೋಡುವುದಾದರೆ..

ಈಗ ಮುಗಿದಿರುವ 4 ಪಂದ್ಯಗಳ ಪೈಕಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್, ರಾಜಸ್ಥಾನ್ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಗೆಲುವಿನ ಖಾತೆ ತೆರೆದಿವೆ. ಹೀಗಾಗಿ ಈ 4 ತಂಡಗಳಿಗೆ ತಲಾ 2 ಅಂಕಗಳು ಸಿಕ್ಕಿವೆ. ಇತ್ತ ಸನ್‌ರೈಸರ್ಸ್ ಹೈದರಾಬಾದ್, ಕೋಲ್ಕತ್ತಾ ನೈಟ್ ರೈಡರ್ಸ್​, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ತಮ್ಮ ಮೊದಲ ಪಂದ್ಯಗಳಲ್ಲಿ ಸೋತಿವೆ. ಹೀಗಾಗಿ ಈ 4 ತಂಡಗಳಿಗೆ ಯಾವುದೇ ಅಂಕ ಸಿಕ್ಕಿಲ್ಲ. ಇನ್ನು ಗೆದ್ದ ತಂಡಗಳ ಪೈಕಿ ಯಾವ ತಂಡ ಯಾವ ಸ್ಥಾನದಲ್ಲಿದೆ? ಯಾವ ತಂಡದ ನೆಟ್ ರನ್ ರೇಟ್ ಚೆನ್ನಾಗಿದೆ ಎಂಬುದನ್ನು ನೋಡುವುದಾದರೆ..

ಅಗ್ರಸ್ಥಾನದಲ್ಲಿ ರಾಜಸ್ಥಾನ್ ರಾಯಲ್ಸ್

ಗೆಲುವು ಸಾಧಿಸಿರುವ 4 ತಂಡಗಳ ಪೈಕಿ ರಾಜಸ್ಥಾನ್ ರಾಯಲ್ಸ್ ತಂಡವು ಅಗ್ರಸ್ಥಾನದಲ್ಲಿದೆ. ಇದಕ್ಕೆ ಕಾರಣ ತಂಡದ ನೆಟ್ ರನ್ ರೇಟ್ ಇತರ ತಂಡಗಳಿಗೆ ಹೊಲಿಸಿದರೆ ಅಧಿಕವಾಗಿರುವುದು. ಐಪಿಎಲ್‌ನಂತಹ 10 ತಂಡಗಳ ಲೀಗ್‌ನಲ್ಲಿ, ಕೇವಲ ಗೆಲುವು ಮುಖ್ಯವಲ್ಲ. ಬದಲಿಗೆ ನೀವು ಯಾವ ಅಂತರದಲ್ಲಿ ಗೆಲ್ಲುತ್ತೀರಿ ಎಂಬುದು ಸಹ ನಿರ್ಣಾಯಕವಾಗಿದೆ. ಗೆಲುವಿನ ಅಂತರವು ನೆಟ್ ರನ್ ರೇಟ್ ಅನ್ನು ನಿರ್ಧರಿಸುತ್ತದೆ, ಇದು ಪಾಯಿಂಟ್ ಪಟ್ಟಿಯಲ್ಲಿ ತಂಡದ ಸ್ಥಾನದ ಮೇಲೆ ಪರಿಣಾಮ ಬೀರುತ್ತದೆ.

RCB vs SRH: ತವರಿನಲ್ಲಿ ಶುಭಾರಂಭ; ಆರ್​ಸಿಬಿ ಅಬ್ಬರಕ್ಕೆ ಸುಸ್ತಾದ ಸನ್​ರೈಸರ್ಸ್

ಪಾಯಿಂಟ್ಸ್ ಟೇಬಲ್‌ ಹೀಗಿದೆ

ಐಪಿಎಲ್ 2026 ರಲ್ಲಿ ತಲಾ ಒಂದು ಪಂದ್ಯವನ್ನು ಆಡಿ ಗೆದ್ದ ನಂತರ, ರಾಜಸ್ಥಾನ್ ರಾಯಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ತಲಾ ಎರಡು ಅಂಕಗಳನ್ನು ಹೊಂದಿವೆ. ಆದಾಗ್ಯೂ, ರಾಜಸ್ಥಾನ್ ರಾಯಲ್ಸ್ ಇತರ ತಂಡಗಳಿಗಿಂತ ಉತ್ತಮ ನೆಟ್ ರನ್ ರೇಟ್ ಹೊಂದಿರುವುದರಿಂದ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ರಾಜಸ್ಥಾನ ತಂಡದ ನೆಟ್ ರನ್ ರೇಟ್ 4.171 ಆಗಿದ್ದರೆ, ಎರಡನೇ ಸ್ಥಾನದಲ್ಲಿರುವ ಆರ್‌ಸಿಬಿ ನೆಟ್ ರನ್ ರೇಟ್ 2.907 ಆಗಿದೆ. ಇನ್ನ ಮೂರನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ನೆಟ್ ರನ್ ರೇಟ್ 0.687 ಮತ್ತು ಪಂಜಾಬ್ ಕಿಂಗ್ಸ್ ನೆಟ್ ರನ್ ರೇಟ್ 0.509 ಆಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:31 pm, Wed, 1 April 26

Follow Us